ಈ ಬಾರಿ ಪುರಸಭೆ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿಯ ಮಹಿಳೆಗೆ ನೀಡುವಂತೆ ವಿವಿಧ ದಲಿತ ಪರ ಸಂಘ ಗಳು ಮಂಗಳವಾರ ರಾತ್ರಿಯಿಂದ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ .
ಪರಿಶಿಷ್ಟ ಜಾತಿಯ ಅಭ್ಯರ್ಥಿಗೆ ಮೀಸಲಾತಿ ನೀಡುವ ಸಲುವಾಗಿ 20 ನೇ ವಾರ್ಡಿನ ಸದಸ್ಯೆ ವೀಣಾ ಸಾತಪ್ಪ ಭೋವಿ ಸಲ್ಲಿಸಿರುವ ನ್ಯಾಯಾಲಯ ಅರ್ಜಿ ವಿಚಾರಣೆಯಲ್ಲಿದೆ. ಇದೇ 20 ರಂದು ನ್ಯಾಯಾಲಯದ ತೀರ್ಪು ಬರಲಿದೆ ಅಲ್ಲಿಯವರೆಗೆ ನಿಮ್ಮಧರಣಿಯನ್ನು ನಿಲ್ಲಿಸಬೇಕು ಎಂದು ಉಪವಿಭಾಗಾಧಿಕಾರಿ ಡಾ.ಮಾದವಗಿತ್ತೆ ಅವರು ಧರಣಿನಿರತರಿಗೆ ತಿಳಿಸಿದರು .
ಇನ್ನು ಚುನಾವಣೆ ಆಯೋಗ ಸ್ಥಳೀಯ ರಸಭೆಯ ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆಗೆ ನಡೆಸುವಂತೆ ಆದೇಶ ನೀಡಿತ್ತು . ಅದರಂತೆ ಚುನಾವಣೆ ನಡೆದಿರುತ್ತದೆ ಎಂದು ತಿಳಿಸಿದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

