ಉಡುಪಿ : ನನ್ನ ಸಾವಿಗೆ ಸಚಿವ ಕೆ.ಎಸ್. ಈಶ್ವರಪ್ಪ ಕಾರಣ, ಅವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಡೆತ್ ನೋಟ್ ಬರೆದಿಟ್ಟು ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ ಪಾಟೀಲ ನಗರದ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಕೆ.ಎಸ್. ಈಶ್ವರಪ್ಪನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಸಂತೋಷ 4 ಕೋಟಿ ರೂಪಾಯಿ ವೆಚ್ಚದಲ್ಲಿ 108 ಕಾಮಗಾರಿ ನೆರವೇರಿಸಿದ್ದರು. ಇದರ ಬಿಲ್ ಪಡೆಯಲು ಈಶ್ವರಪ್ಪ ಶೇ.40 ಕಮಿಷನ್ ಕೇಳುತ್ತಿರುವ …
Read More »ನಲಪಾಡ ಒಬ್ಬದೊಡ್ಡ ಗೂಂಡಾ : ಮುತಾಲಿಕ್ ಆರೋಪ
ಧಾರವಾಡ: ನುಗ್ಗಿಕೇರಿಯಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಯಾರದ್ದೂ ತಲೆ ಒಡೆದಿಲ್ಲ ಕಲ್ಲಂಗಡಿ ಹಣ್ಣನ್ನು ಒಡೆದಿದ್ದಾರೆ . ಇದರಲ್ಲಿ ನಲಪಾಡ ಹಾಗೂ ಶ್ರೀನಿವಾಸ ಬಂದು ಮೂಗು ತುರಿಸುವ ಅವಶ್ಯಕತೆ ಇಲ್ಲ . ನಲಪಾಡ ಒಬ್ಬದೊಡ್ಡ ಗೂಂಡಾ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಆರೋಪಿಸಿದರು ನಗರದಲ್ಲಿ ಮಾತಾನಾಡಿ ಅವರು , ಚಂದ್ರು ಹತ್ಯೆಯಾದಾಗ ಅಲ್ಲಿಗೆ ನಲಪಾಡ್ ಏಕೆ ಹೋಗಲಿಲ್ಲ ? ಅಲ್ಲಿ ತಲೆ ಒಡೆದಿದ್ದಾರೆ . ಇಲ್ಲಿ ಯಾರ ಮೇಲೂ …
Read More »ಶ್ರೀ ದುರ್ಗಮ್ಮದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ ಶಾಸಕ
ಹುಬ್ಬಳ್ಳಿ: 25 ವರ್ಷಗಳ ನಂತರ ವಿಜೃಂಭಣೆಯಿಂದ ನಡೆಯುತ್ತಿರುವ ಇಲ್ಲಿನ ಅರಳಿಕಟ್ಟಿ ಓಣಿಯ ಸುಪ್ರಸಿದ್ದ ಶ್ರೀ ದ್ಯಾಮವ್ವದೇವಿ ಹಾಗೂ ಶ್ರೀ ದುರ್ಗಮ್ಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಶಾಸಕ ಪ್ರಸಾದ್ ಅಬ್ಬಯ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು. ಬಳಿಕ ವಿಶೇಷ ಪೂಜೆ ಸಲ್ಲಿಸಿದರು ನಂತರ ಬಡಾವಣೆಯ ಹಿರಿಯರೂ , ಆತ್ಮೀಯರೂ ಆದ ಮುತ್ತಣ್ಣ ಮೀಶಿ ಅವರ ಮನೆಗೆ ತೆರಳಿದ ಶಾಸಕರು ಸರ್ವ ಸದಸ್ಯರೊಂದಿಗೆ ಚರ್ಚಿಸಿ ಕುಶಲೋಪಹರಿ ವಿಚಾರಿಸಿ , ಲಘು ಉಪಹಾರ ಸ್ವೀಕರಿಸಿದರು .
Read More »ಕಾನೂನು ವಿಶ್ವವಿದ್ಯಾಲಯದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಅರವಿಂದ್ ಬೆಲ್ಲದ್ ಚಾಲನೆ
ಹುಬ್ಬಳ್ಳಿ: ಅವಳಿ ನಗರದ ವಾರ್ಡ್ ಸಂಖ್ಯೆ 26 ರ ರಾಯಪುರದಲ್ಲಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಅರವಿಂದ್ ಬೆಲ್ಲದ್ ಚಾಲನೆ ನೀಡಿದರು . ಈ ಸಂದರ್ಭದಲ್ಲಿ , ಕೆ.ಸಿ.ಸಿ.ಬ್ಯಾಂಕ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಹೊರಕೇರಿ , ಪಾಲಿಕೆ ಸದಸ್ಯರಾದ ಶ್ರೀಮತಿ ನೀಲವ್ವ ಅರವಳದ , ಶ್ರೀಮತಿ ಸುನೀತಾ ಮಾಳವದಕರ್ , ಮುಖಂಡರಾದ ರಮೇಶ್ ನಂದ್ಯಾಳ , ಶ್ರೀಮತಿ ರೂಪಾ ಬೊಂಗಾಳೆ , ಬಸವರಾಜ್ ಅರವಳದ ಸೇರಿದಂತೆ …
Read More »ಗರಗದ ಶ್ರೀ ಮಡಿವಾಳೇಶ್ವ ಮಠದ ಭೂಮಿ ಪೂಜೆ ಸಲ್ಲಿಸಿದ ಶಾಸಕ
ಧಾರವಾಡ: ಜಿಲ್ಲೆಯ ಗರಗದ ಗುರುಮಠ ಶ್ರೀ ಮಡಿವಾಳೇಶ್ವರರ ಮಠದ ಜೀರ್ಣೋದ್ಧಾರದ ಕಾಮಗಾರಿಗೆ ಶಾಸಕ ಅಮೃತ ದೇಸಾಯಿ ಭೂಮಿ ಪೂಜೆ ನೆರವೇರಿಸಿದರು . ಈ ಸಂದರ್ಭದಲ್ಲಿ ಅಶೋಕ ದೇಸಾಯಿ ಹಾಗೂ ಗರಗ – ಹಂಗರಕಿ ಗ್ರಾಮದ ಗುರುಹಿರಿಯರು ಮತ್ತು ಯುವಕರು ಪಾಲ್ಗೊಂಡಿದ್ದರು .
Read More »ಬೆಳಂಬೆಳ್ಳಗ್ಗೆ ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಕ್ಕೆ ಶಾಕ್ ಕೊಟ್ಟ ಎಸಿಬಿ
ಹುಬ್ಬಳ್ಳಿ: ಅವಳಿ ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ವಿಭಾಗದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಸಿಬಿ ಎಸಿಪಿ ಮಾಹಾಂತೇಶ್ ಜಿದ್ದಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ವಿವೇಕ ಕಾರೇಕರ್ ಅವರ ಮೇಲೆ ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿರುವ ಎಸಿಬಿ ಅಧಿಕಾರಿಗಳು ಕಡತಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಎಸಿಬಿ ದಾಳಿ ವೇಳೆ 5.80 ಲಕ್ಷ ನಗದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಒಬ್ಬರು ಡಿಎಸ್ಪಿ, ಮೂವರು ಇನ್ಸ್ಪೆಕ್ಟರ್ …
Read More »ಈಶ್ವರಪ್ಪರನ್ನು ಸಚಿವಸ್ಥಾನದಿಂದ ವಜಾಗೊಳಿಸುವಂತೆ ಪ್ರತಿಭಟನೆ
ಉಡುಪಿ: ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಕಾರಣರಾದ ಸಚಿವ ಈಶ್ವರಪ್ಪರನ್ನು ಸಚಿವಸ್ಥಾನದಿಂದ ವಜಾಗೊಳಿಸಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಶಾಂಭವಿ ಲಾಡ್ಜ್ ಎದುರು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ಈಶ್ವರಪ್ಪ ಅವರ ಹರಕು ನಾಲಿಗೆಯ 40 ಪರ್ಸೆಂಟ್ ಕಮಿಷನ್ ದಂಧೆಯ ರಾಜಕಾರಣಕ್ಕೆ ಬೆದರಿ ಬೆಳಗಾವಿಯ ಹಿಂಡಲಗಾ ಗ್ರಾಮದ ಜನಪರ ಚಿಂತನೆಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. …
Read More »ಈ ಸಲ ಮುಂಗಾರು ಮಳೆ ಸಹಜವಾಗಿ ಸುರಿಯಲಿದೆ
ಹೊಸದಿಲ್ಲಿ: ಈ ಬಾರಿಯ ಮುಂಗಾರು ಮಳೆ ಸಹಜವಾಗಿ ಸುರಿಯಲಿದ್ದು, ಶೇ. 98ರಷ್ಟು ದೀರ್ಘಕಾಲಿಕ ಸರಾಸರಿ (ಎಲ್ಪಿಎ) ಮಳೆ ತರಲಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನ ಸಂಸ್ಥೆ ಸ್ಕೈಮೆಟ್ ಹೇಳಿದೆ. ಮುಂಗಾರಿನ ಮೊದಲ ಅರ್ಧ ಭಾಗ ಅಂದರೆ ಜೂನ್-ಜುಲೈ ಅವಧಿಯಲ್ಲಿ ಉತ್ತರಾರ್ಧದ ಆಗಸ್ಟ್ ಮತ್ತು ಸಪ್ಟೆಂಬರ್ಗಿಂತ ಉತ್ತಮ ಮಳೆಯಾಗಲಿದೆ ಎಂದು ಸ್ಕೈಮೆಟ್ ತಿಳಿಸಿದೆ.
Read More »ಬಿಜೆಪಿ ಮಧ್ಯೆ ಭಿನ್ನಮತ ಇರುವುದು ನಿಜ : ಮಾಜಿ ಸಿಎಂ
ಬೆಳಗಾವಿ: ಬಿಜೆಪಿ ಜಿಲ್ಲಾ ನಾಯಕರ ಮಧ್ಯೆ ಭಿನ್ನಮತ ಇರುವುದು ನಿಜ .ಎಲ್ಲರೂ ಒಂದೇ ತಾಯಿ ಮಕ್ಕಳಂತೆ ಇಲ್ಲಿ ಕೆಲಸ ಮಾಡಬೇಕು. ಭಿನ್ನಾಭಿಪ್ರಾಯಕ್ಕೆ ಅವಕಾಶ ನೀಡದೆ ಪಕ್ಷದ ಒಳಿತಿಗಾಗಿ ಕೆಲಸ ಮಾಡುವಂತೆ ಎಲ್ಲರಿಗೂ ಮನವರಿಕೆ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲ ನಾಯಕರ ಜೊತೆಗೆ ಒನ್ ಟು ಒನ್ ಮಾತನಾಡಿದ್ದೇನೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 18 ಕ್ಷೇತ್ರಗಳಲ್ಲಿ ನಾವು ಗೆಲ್ಲಬೇಕಿದೆ. ಈ …
Read More »ಪಿಎಸ್ ಐ ಹುದ್ದೆಗೆ ನಿರೀಕ್ಷಿಸುವವರಿಗೆ ಗುಡ್ ನ್ಯೂಸ್
ಬೆರಾಜ್ಯದಲ್ಲಿ ಶೀಘ್ರವೇ ಖಾಲಿಯಿರುವ 950 ಸಬ್ ಇನ್ಸ್ ಪೆಕ್ಟರ್ ಹುದ್ದೆಗಳ ಭರ್ತಿಗೆ ನೇಮಕ ಪ್ರಕ್ರಿಯೆ ನಡೆಸಲಾಗುವುದು ಎಂದು ಗೃಹ ಸಚಿವ ಅರಗಜ್ಞಾನೇಂದ್ರ ಹೇಳಿದ್ದಾರೆ. ಕವಾಯತು ಮೈದಾನದಲ್ಲಿ ಮಂಗಳವಾರ ಕೆಎಸ್ಆರ್ ಪಿ ಪೊಲೀಸ್ ಕಾನ್ಸ್ ಟೇಬಲ್ ಪ್ರಶಿಕ್ಷಣಾರ್ಥಿಗಳ 4 ನೇ ತಂಡದ ನಿರ್ಗಮನದ ಪಥಸಂಚಲನದಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ 950 ಸಬ್ ಇನ್ಸ್ ಪೆಕ್ಟರ್ ಹುದ್ದೆಗಳ ಭರ್ತಿಗೆ ನೇಮಕ ಪ್ರಕ್ರಿಯೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





