ಕೊಲಂಬೊ (ಶ್ರೀಲಂಕಾ): ಶ್ರೀಲಂಕಾದ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ ಮತ್ತು ಪ್ರಧಾನಿ ಮಹಿಂದಾ ರಾಜಪಕ್ಸೆ ಅವರ ಪುತ್ರ ನಮಲ್ ರಾಜಪಕ್ಸೆ ಅವರು ತಮ್ಮ ಎಲ್ಲಾ ಖಾತೆಗಳಿಗೆ ರಾಜೀನಾಮೆ ನೀಡಿದ್ದಾರೆ. ಜನರಿಗೆ ಮತ್ತು ಸರ್ಕಾರಕ್ಕೆ ಸ್ಥಿರತೆಯನ್ನು ಸ್ಥಾಪಿಸಲು HE ಮತ್ತು PM ಗಳ ನಿರ್ಧಾರಕ್ಕೆ ಇದು ಸಹಾಯ ಮಾಡಬಹುದೆಂಬ ಭರವಸೆಯಲ್ಲಿ ನಾನು ತಕ್ಷಣವೇ ಜಾರಿಗೆ ಬರುವಂತೆ ಎಲ್ಲಾ ಪೋರ್ಟ್ಫೋಲಿಯೊಗಳಿಗೆ ನನ್ನ ರಾಜೀನಾಮೆಯನ್ನು ಅಧ್ಯಕ್ಷರಿಗೆ ತಿಳಿಸಿದ್ದೇನೆ.
Read More »ಸಮಾಜದ ಅಭಿವೃದ್ಧಿ ದಿಕ್ಸೂಚಿಯಂತೆ ಮಠಗಳು ಕೆಲಸ ಮಾಡಬೇಕು : ಯಡಿಯೂರಪ್ಪ
ಬೆಂಗಳೂರು: ಸಮಾಜದ ಅಭಿವೃದ್ಧಿಯಲ್ಲಿ ದಿಕ್ಸೂಚಿಯಂತೆ ಮಠಗಳು ಕಾರ್ಯ ನಿರ್ವಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ. ಅಕ್ಕಿಪೇಟೆಯ ಶ್ರೀದೊಡ್ಡ ಮಠ ರವಿವಾರ ಹಮ್ಮಿಕೊಂಡಿದ್ದ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಯ ನೂತನ ದೇವಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸುತ್ತೂರಿನ ಶ್ರೀ ಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಸಂಸದ ಪಿ.ಸಿ.ಮೋಹನ್, ಶಾಸಕ ದಿನೇಶ ಗುಂಡೂರಾವ್, ಶ್ರೀದೊಡ್ಡಮಠದ ಶ್ರೀ ಶಿವಬಸವ ಸ್ವಾಮೀಜಿ ಸಹಿತ ಹಲವು ಪ್ರಮುಖರು ಉಪಸ್ಥಿತರಿದ್ದರು.
Read More »ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ
ನವದೆಹಲಿ : ದೇಶದಲ್ಲಿ ಇಂದು ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಈ ಮೂಲಕ ಕಳೆದ 13 ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 8.40 ರೂ.ಹೆಚ್ಚಳವಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ದರಗಳು ಸೋಮವಾರ ಪ್ರತಿ ಲೀಟರ್ಗೆ 40 ಪೈಸೆಯಷ್ಟು ಏರಿಕೆಯಾಗಿದ್ದು, ಇಲ್ಲಿಯವರೆಗೆ 14 ದಿನಗಳಲ್ಲಿ ಹನ್ನೆರಡು ಪರಿಷ್ಕರಣೆಗಳಲ್ಲಿ ಪ್ರತಿ ಲೀಟರ್ಗೆ ಸುಮಾರು ₹ 8.40 ರಷ್ಟು ಏರಿಕೆಯಾಗಿದೆ.
Read More »ಬಡವರನ್ನು ಬಡವರಾಗಿಯೇ ಮಾಡುವುದು ಬಿಜೆಪಿ ಸಿದ್ಧಾಂತ
ಬೆಳಗಾವಿ : ಬಡವರನ್ನು ಬಡವರಾಗಿಯೇ ಮಾಡುವುದು ಬಿಜೆಪಿ ಸಿದ್ಧಾಂತವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಪೆಟ್ರೋಲ್, ಡೀಸೆಲ್ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದು, ಜನ ಸಾಮಾನ್ಯರಿಗೆ ತೊಂದರೆ ಆಗುತ್ತಿದೆ ಎಂದರು.
Read More »ಕ್ರಿಕೆಟ್ ಆಡುವಾಗ ಹಾರಿ ಹೋಯಿತು ಧಾರವಾಡ ಯುವಕನ ಪ್ರಾಣ ಪಕ್ಷಿ
ಧಾರವಾಡ: ಕ್ರಿಕೆಟ್ ಆಡುವ ವೇಳೆ ಹೃದಯಾಘಾತವಾಗಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ. ಮುನ್ನಾ ಇರ್ಕಲ್ ಎಂಬುವನೇ ಕ್ರಿಕೆಟ್ ಆಡುವ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಮೃತ ಮುನ್ನಾ ಇರ್ಕಲ್ ನಗರದ ಸಂಗೊಳ್ಳಿ ರಾಯಣ್ಣ ನಗರದ ನಿವಾಸಿಯಾಗಿದ್ದಾನೆ ಅಂತ ತಿಳಿದು ಬಂದಿದೆ. ನಗರದ ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ ಬೆಳಿಗ್ಗೆ ಕ್ರಿಕೆಟ್ ಆಡುವಾಗ ಮುನ್ನಾ ಇರ್ಕಲ್ಗೆ ಹೃದಯಾಘಾತ ಇಹಲೋಕ ತ್ಯಜಿಸಿದ್ದಾನೆ. ಯುವಕನನ್ನ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯದಲ್ಲಿಯೇ ಸಾವನ್ನಪ್ಪಿದ್ದಾನೆ ಅಂತ ತಿಳಿದು ಬಂದಿದೆ. ಉಪನಗರ …
Read More »ಸ್ವಗ್ರಾಮಕ್ಕೆ ಮರಳಿದ ಯೋಧರಿ ಅದ್ದೂರಿ ಸ್ವಾಗತ
ಅಥಣಿ(ಬೆಳಗಾವಿ): ಭಾರತೀಯ ಸೇನೆಯಲ್ಲಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿ ಇಂದು ಸ್ವಗ್ರಾಮಕ್ಕೆ ಮರಳಿದ ಯೋಧರಿಗೆ ವಿಶೇಷ ರೀತಿಯಲ್ಲಿ ಬರಮಾಡಿಕೊಳ್ಳಲಾಯಿತ್ತು. ಮೂವರು ಯೋಧರಾದ ಕಾಶಿನಾಥ ಗುರವ, ಬಸಪ್ಪ ಹಳ್ಳದಮಳ, ಮಹೇಶ ಹೊಸಟ್ಟಿ ಅವರನ್ನು ತಾಲೂಕಿನ ಮಾಜಿ ಸೈನಿಕರ ಸಂಘ ಹಾಗೂ ಅಥಣಿ ಜನತೆ ಅದ್ಧೂರಿ ಸ್ವಾಗತದ ಮೂಲಕ ಬರಮಾಡಿಕೊಂಡರು.
Read More »ಪ್ರಧಾನಿಗೆ ವಿಭಿನ್ನ ಪತ್ರ ಬರೆದ ಹುಬ್ಬಳ್ಳಿ ಅಭಿಮಾನಿ
ಹುಬ್ಬಳ್ಳಿ : ಹೀಗೆ ತನ್ನ ರಕ್ತದಲ್ಲಿ ಪತ್ರ ಬರೆಯುತ್ತಿರುವ ಈ ವ್ಯಕ್ತಿ ವಾಣಿಜ್ಯನಗರಿ ಹುಬ್ಬಳ್ಳಿಯವರು. ಭಗತಸಿಂಗ್ ಯುವಕ ಮಂಡಳದ ಅಧ್ಯಕ್ಷರಾದ ಶ್ರೀಧರ ಸಾಂಗ್ಲಿಕರ್ ಎಂಬುವವರೇ ತಮ್ಮ ಜನ್ಮದಿನದ ಪ್ರಯುಕ್ತವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಹೌದು.. ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಹೊಸೂರಿನ ಗಾಳಿ ದುರ್ಗಮ್ಮ ದೇವಿಯ ದೇವಸ್ಥಾನದ ಹತ್ತಿರದಲ್ಲಿ ದೊಡ್ಡ ಪ್ರಮಾಣ ಸ್ವಾತಂತ್ರ್ಯ ಹೋರಾಟಗಾರ ಭಗತಸಿಂಗ್ ಅವರ ಪುತ್ಥಳಿಯನ್ನು ನಿರ್ಮಾಣ ಮಾಡಬೇಕು ಎಂಬುವಂತ ಮಹದಾಸೆಯಿಂದ ಇಂತಹದೊಂದು ಅಭೂತಪೂರ್ವ …
Read More »ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ಬಿಜೆಪಿ ಸೇರ್ಪಡೆ ದಿನಾಂಕ ನಿಗದಿ : ಬಸವರಾಜ ಹೊರಟ್ಟಿ
ಹುಬ್ಬಳ್ಳಿ: ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲಾಗುವುದು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಘೋಷಿಸಿದರು. ಇಲ್ಲಿ ಭಾನುವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು ನಮ್ಮ ಪಕ್ಷದಿಂದಲೇ ಸ್ಪರ್ಧಿಸುವಂತೆ ಬಿಜೆಪಿ ನಾಯಕರು ಹೇಳಿದ್ದಾರೆ. ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಬಿ.ಎಸ್. ಯಡಿಯೂರಪ್ಪ ಅವರು ನನ್ನೊಂದಿಗೆ ಮಾತನಾಡಿದ್ದಾರೆ. ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ಬಿಜೆಪಿ ಸೇರ್ಪಡೆ ದಿನಾಂಕ ನಿಗದಿಪಡಿಸಲಾಗುವುದು …
Read More »ಗ್ರಾಮಕ್ಕೆ ಆಗಮಿಸಿದ ಸೈನಿಕನಿಗೆ ಅದ್ದೂರಿ ಸ್ವಾಗತ
ಹುಬ್ಬಳ್ಳಿ : ದೇಶ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ರವಿವಾರದಂದು ಆಗಮಿಸಿದ ಸೈನಿಕ ದ್ಯಾಮಣ್ಣ ಇಟ್ಟಣ್ಣವರನ್ನು ಬ್ಯಾಹಟ್ಟಿ ಗ್ರಾಮದ ಜನತೆ ಅದ್ದೂರಿ ಸ್ವಾಗತ ಮಾಡಿಕೊಂಡರು. ಗ್ರಾಮದ ಹೊರವಲಯದಲ್ಲಿರುವ ದೇವಸ್ಥಾನದ ಮುಂಭಾಗದಲ್ಲಿ ಆತನನ್ನು ಬೈಕ್ ರ್ಯಾಲಿ ಮತ್ತು ಕಾಲ್ನಡಿಗೆಯಿಂದ ಜನರು ಸೇರಿದ್ದರು. ನಿರ್ವತ್ತ ಸೈನಿಕನದನು ಅದ್ದೂರಿಯಾಗಿ ಟ್ರ್ಯಾಕ್ಟರ್ ನ ಮೂಲಕ ಮೆರವಣಿಗೆ ಊರೆಲ್ಲ ಮಾಡಿದರು ಟ್ಯಾಕ್ಟರ್ ನ್ನು ಅಲಂಕರಿಸಲಾಗಿತ್ತು ಇನ್ನು ಗ್ರಾಮದ ಮಹಿಳೆಯರು ಆರುತಿ ಮಾಡುವ ಮುಖಾಂತರ ವೀರ ಯೋಧನನ್ನು ಬರಮಾಡಿಕೊಂಡರು …
Read More »ಹುಬ್ಬಳ್ಳಿಯಲ್ಲಿ ನಾನ್ ವೆಜ್ ಮಾರ್ಕೆಟ್ನಲ್ಲಿ ಭರ್ಜರಿ ವ್ಯಾಪಾರ
ಹುಬ್ಬಳ್ಳಿ: ಇಂದು ಯುಗಾದಿ ಹೊಸತೊಡಕು ಹಿನ್ನೆಲೆ ಹುಬ್ಬಳ್ಳಿಯಲ್ಲಿ ನಾನ್ ವೆಜ್ ಮಾರ್ಕೆಟ್ನಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದೆ. ಹಳೇಹುಬ್ಬಳ್ಳಿ, ಗಣೇಶ ಪೇಟೆ, ಮ್ಯಾದಾರ ಓಣಿ, ಕಮರಿಪೇಟೆ ಮಟನ್ ಮಾರ್ಕೆಟ್ನಲ್ಲಿ ಮಟನ್, ಚಿಕನ್ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ನಮ್ಮ ಬಳಿ ಯಾರೂ ಕೂಡ ಹಲಾಲ್, ಜಟ್ಕಾ ಕಟ್ ಬಗ್ಗೆ ಕೇಳಿಲ್ಲ. ಗ್ರಾಹಕರು ಕೇಳಿದರೆ ಅವರಿಗೆ ಬೇಕಾದಂತೆ ಮಾಂಸ ಕೊಡುತ್ತೇವೆ ಅಂತ ನಸರೂಲ್ಲಾ ಖಾನ ಮಟನ್ ಸ್ಟಾಲ್ ಮಾಲೀಕ ಮಾಹಿತಿ ನೀಡಿದರು. ಹಲಾಲ್, ಜಟ್ಕಾ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





