ನವದೆಹಲಿ: ಭಾರತದಾದ್ಯಂತ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸಹಾಯ ಮಾಡುವ 40 ಕ್ಕೂ ಹೆಚ್ಚು ಆವಿಷ್ಕಾರಗಳಿಗೆ ವಿಶೇಷ ಮನ್ನಣೆ ನೀಡಿರುವಧಾರವಾಡದ ಕೃಷಿ ಸಂಶೋಧಕ ಅಬ್ದುಲ್ ಖಾದರ್ ನಡಕಟ್ಟಿನ್ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದರು. ಕೃಷಿ ಸಂಶೋಧಕ ಅಬ್ದುಲ್ ಖಾದರ್ ಅವರ ನುಡಿ : ನಾನೊಬ್ಬ ಸಾಮಾನ್ಯ ರೈತ. ಆದರೆ, ಕಳೆದ 35 ವರ್ಷಗಳಲ್ಲಿ ಕೃಷಿಯಲ್ಲಿ ಬಳಸುವ ಯಂತ್ರಗಳ ಕುರಿತು ನಾನು ನಡೆಸಿದ ಸಂಶೋಧನೆಗೆ ಭಾರತ …
Read More »ಸ್ವಚ್ಛತೆ ಕಾಪಾಡಲು ಅವಳಿನಗರದಲ್ಲಿ ಫಾಗಿಂಗ್ ಕಾರ್ಯ
ಹುಬ್ಬಳ್ಳಿ : ಇತ್ತೀಚೆಗೆ ಹೆಚ್ಚುತ್ತಿರುವ ಸೊಳ್ಳೆಗಳ ಸಮಸ್ಯೆಯನ್ನು ಹೋಗಲಾಡಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಹುಬ್ಬಳ್ಳಿಯ ವಿವಿಧ ಬಡಾವಣೆಗಳಲ್ಲಿ ಫಾಗಿಂಗ್ ಕಾರ್ಯ ಮಾಡಲಾಯಿತು. ರಸ್ತೆಯಲ್ಲಿ ಫಾಗಿಂಗ್ ಕಾರ್ಯ ಮಾಡುತ್ತಿರುವ ಯುವಕ ಬಡಾವಣೆಯಲ್ಲಿ ಸ್ವಚ್ಛತೆ ಕಾರ್ಯ ಸಾರ್ವಜನಿಕರು ಪಾಗಿಂಗ್ ಗೆ ಸಂಬಂಧಿಸಿದ ದೂರುಗಳಿಗಾಗಿ ಸಹಾಯವಾಣಿ ನಂಬರ್ 0836-2213888 ಹಾಗೂ 2213869 ಅಥವಾ ವಾಟ್ಸಪ್ ನಂಬರ್-8277803778 ಗೆ ಸಂಪರ್ಕಿಸಿ ದೂರು ದಾಖಲಿಸಬಹುದು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
Read More »ಕ್ಷುಲ್ಲಕ ಕಾರಣಕ್ಕೆ ಕೊಲೆ : ಜೀವಾವಧಿ ಶಿಕ್ಷೆ ವಿಧಿಸಿದ ಜಿಲ್ಲಾ ಸತ್ರ ನ್ಯಾಯಾಲಯ
ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಅಪರಾಧಿಗಳಿಗೆ ಹುಬ್ಬಳ್ಳಿಯ 5 ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 1.50.000 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಹುಬ್ಬಳ್ಳಿಯ ಕಸಬಾಪೇಟ ಪೋಲಿಸ್ ಠಾಣೆಯ ವ್ಯಾಪ್ತಿಯ ಪಠಾಣಗಲ್ಲಿಯ ಸರ್ಕಲ್ ಬಳಿ ಶಾಬುದ್ದಿನ ಎಂಬಾತನನ್ನು ಶಮಶುದ್ದಿನ ಸವಣೂರು, ಜುಬೇರ್ ಅಹ್ಮದ್ ಕಲಬುರ್ಗಿ ಎಂಬುವವರು ಚಾಕುವಿನಿಂದ ಹೊಟ್ಟೆ, ಬೆನ್ನಿಗೆ ಹಾಗೂ ಪಕ್ಕಡಿ ಭಾಗಕ್ಕೆ ಇರಿದು ಕೊಲೆ …
Read More »ಬಸ್ನಲ್ಲಿ ಕಿಟಕಿಯಿಂದ ಕೈಹೊರಚಾಚಿ ಪ್ರಯಾಣಿಸಿದ ವೃದ್ಧನ ಕೈ ಕಟ್
ಬೆಳಗಾವಿ : ಬಸ್ನಲ್ಲಿ ಕಿಟಕಿಯಿಂದ ಕೈಹೊರಚಾಚಿ ಪ್ರಯಾಣಿಸುತ್ತಿದ್ದ ವೃದ್ಧರೊಬ್ಬರ ಕೈಗೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ವೃದ್ಧರ ಕೈ ತುಂಡಾದ ಘಟನೆ ತಾಲೂಕಿನ ಕದ್ರಾ ಬಳಿ ಸಂಭವಿಸಿದೆ . ಅಂಕೋಲಾ ಬೆಳಗಾವಿ ಮಾರ್ಗದಲ್ಲಿ ಸಾರಿಗೆ ಸಂಸ್ಥೆಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಅಣಸಿ ಮೂಲದ ಲಕ್ಷಣ ಪಿ ರಾಜುಗಾರ ( 74 ) ಗಯಗೊಂಡ ವೃದ್ಧರಾಗಿದ್ದಾರೆ . ಕದ್ರಾ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ …
Read More »ಸಿಎಂ ಜೊತೆ ಚರ್ಚೆ: ಹಾವೇರಿ ಸಾಹಿತ್ಯ ಸಮ್ಮೇಳನದ ಅಧಿಕೃತ ದಿನಾಂಕ ಪ್ರಕಟ
ಹಾವೇರಿ : ಹಾವೇರಿ ಸಾಹಿತ್ಯ ಸಮ್ಮೇಳನ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆಗೆ ಚರ್ಚೆ ನಡೆಸಿ ಅಧಿಕೃತ ದಿನಾಂಕ ಪ್ರಕಟಿಸಲಾಗುವುದು. 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮೇ 20,21,22 ರಂದು ಹಾವೇರಿಯಲ್ಲಿ ಆಯೋಜಿಸಲು ತಾತ್ಕಾಲಿಕ ದಿನಾಂಕ ನಿಗದಿಪಡಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ್ ಜೋಶಿ ತಿಳಿಸಿದ್ದಾರೆ.
Read More »ನಿವೃತ್ತ ಎಎಸ್ಐ ಅಪಘಾತದಲ್ಲಿ ಸಾವು
ಯಾದಗಿರಿ: ಖಾಸಗಿ ಕಾರ್ಯಕ್ರಮ ಮುಗಿಸಿಕೊಂಡು ಕಣೇಕಲ್ನಿಂದ ಸಾಯಿಬಣ್ಣ ಯಾದಗಿರಿಗೆ ತೆರಳುವಾಗ ಲಿಂಗೇರಿ ತಾಂಡಾದ ಬಳಿ ಬೈಕ್ ಜಾರಿ ನಿವೃತ್ತ ಎಎಸ್ಐ ಸಾಯಿಬಣ್ಣ ಬೇನಿಗಿಡ (65) ಸ್ಥಳದಲ್ಲೇ ಸಾವನ್ನಪ್ಪಿದರು. ತಾಲ್ಲೂಕಿನ ಶೆಟಿಗೇರಾ ಗ್ರಾಮದ ನಿವಾಸಿಯಾಗಿದ್ದ ಸಾಯಿಬಣ್ಣ ಯಾದಗಿರಿ ನಗರದ ಹೊಸಳ್ಳಿ ಕ್ರಾಸ್ ಹತ್ತಿರ ಕುಟುಂಬ ಸದಸ್ಯರೊಂದಿಗೆ ವಾಸವಿದ್ದರು.ಐದು ವರ್ಷದ ಹಿಂದೆ ನಿವೃತ್ತರಾಗಿದ್ದರು.ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಸುಲೇಪೇಟ, ಜೇವರ್ಗಿ, ಶಹಾಪುರ, ಯಾದಗಿರಿ ನಗರದ ಸಂಚಾರ ಪೊಲೀಸ್ ಠಾಣೆ ಸೇರಿ ಹಲವು ಪೊಲೀಸ್ …
Read More »ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್ ವಿರುದ್ಧ ಸಿಬಿಐ ತನಿಖೆ
ಬೆಂಗಳೂರು : ಆದಾಯ ಮೀರಿ ಆಸ್ತಿ ಗಳಿಸಿದ ಆರೋಪ ಎದುರಿಸುತ್ತಿರುವ ರವಿ ಡಿ ಚೆನ್ನಣ್ಣ ಅವರ ವಿರುದ್ಧ ಕಾನೂನು ಹೋರಾಟಕ್ಕೆ ಇಳಿದಿರುವ ವಕೀಲ ಜಗದೀಶ್ ಈ ಅರ್ಜಿ ಸಲ್ಲಿಕೆ ಮಾಡಿದ್ದು, ಸಂಬಂಧಿಕರ ಹೆಸರಿನಲ್ಲಿ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ಆರೋಪಿಸಿ ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್ ವಿರುದ್ಧ ಸಿಬಿಐ ತನಿಖೆ ಕೋರಿ ವಕೀಲ ಕೆ.ಎನ್.ಜಗದೀಶ್ ಕುಮಾರ್ ರಿಟ್ ಅರ್ಜಿಯನ್ನು ಹೈಕೋರ್ಟ್ ಗೆ ಸಲ್ಲಿಕೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಬೇನಾಮಿ …
Read More »ಮುಂಜಾನೆ ವೇಳೆ ಮಂಡ್ಯದಲ್ಲಿ ಘೋರ ದುರಂತ : ಮಹಿಳೆ ಸಾವು , 40 ಜನ ಆಸ್ಪತ್ರೆಗೆ ದಾಖಲು
ಮಂಡ್ಯ : ಬೆಳ್ಳಂಬೆಳಗ್ಗೆ ಮನೆಯ ತಾರಸಿ ಕುಸಿದು ಬಿದ್ದು ಘೋರ ದುರಂತ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹುಲಿಗೆರೆಪುರ ಗ್ರಾಮದಲ್ಲಿ ಇಂದು ಮುಂಜಾನೆ ಮಾದೇಗೌಡ ನಿವಾಸದಲ್ಲಿ ನಡೆದಿದೆ. ಗ್ರಾಮದ ಪುಟ್ಟಲಿಂಗಮ್ಮ(50) ಸಾವನ್ನಪ್ಪಿದ್ದು,40 ಜನರು ಗಾಯಗೊಂಡಿದ್ದಾರೆ. ಗ್ರಾಮದಲ್ಲಿನ ಬಸವೇಶ್ವರ ದೇವಸ್ಥಾನ ಕೊಂಡೋತ್ಸವ ನೋಡಲು ಮಾದೇಗೌಡರ ತಾರಸಿಗೆ 100 ಕ್ಕೂ ಹೆಚ್ಚು ಜನರು ಏರಿದ್ದರು. ಈ ವೇಳೆ 90 ವರ್ಷದ ಹಳೆಯ ಕಟ್ಟಡ ಕುಸಿದಿದೆ. 10 ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ 40 …
Read More »ರಾಜ್ಯದಲ್ಲಿ ಶೇ.97.59ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ ಗಳು
ಬೆಂಗಳೂರು: ರಾಜ್ಯಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆ ಸೋಮವಾರ ಸುಸೂತ್ರವಾಗಿ ಆರಂಭವಾಗಿದ್ದು, ಮೊದಲ ದಿನ ಶೇ.97.59 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಚಿಕ್ಕೋಡಿಯಲ್ಲಿ ಅಭ್ಯರ್ಥಿಗಳ ಪರವಾಗಿ ಪರೀಕ್ಷೆ ಬರೆಯಲು ಬಂದಿದ್ದ ಆರು ಜನರು ಸಿಕ್ಕಿಬಿದ್ದಿದ್ದರೆ, ಬಾಗಲಕೋಟೆಯ ಇಳಕಲ್ನಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿ ಪರೀಕ್ಷೆ ಬರೆಯಲು ಅವಕಾಶ ಸಿಗದೆ ವಾಪಸ್ ಹೋಗಿದ್ದಾರೆ.
Read More »ಕಾಂಗ್ರೆಸ್ನ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಂ.ಬಿ. ಪಾಟೀಲ್ ಅಧಿಕಾರ ಸ್ವೀಕಾರ
ಬೆಂಗಳೂರು: ಪ್ರದೇಶ ಕಾಂಗ್ರೆಸ್ನ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮಾಜಿ ಸಚಿವ ಎಂ.ಬಿ. ಪಾಟೀಲ್ ಜವಾಬ್ದಾರಿ ಸ್ವೀಕರಿಸಿದ್ದಾರೆ. ಎಂ.ಬಿ.ಪಾಟೀಲ್ ಮಾತನಾಡಿ, ಸಾಮಾಜಿಕ ನ್ಯಾಯಕ್ಕಾಗಿ ಕರ್ನಾ ಟಕದಲ್ಲಿ ಕಾಂಗ್ರೆಸ್ ಸರಕಾರ ಅಧಿ ಕಾರಕ್ಕೆ ಬರಬೇಕಾಗಿದೆ. ಅನ್ನ, ಅಕ್ಷರ, ಆರೋಗ್ಯ, ಆಶ್ರಯ ಮತ್ತು ಅಭಿವೃದ್ದಿ ಎಂಬ ಪಂಚ ಸೂತ್ರಗಳೊಂದಿಗೆ ಜನಾ ಶೀರ್ವಾದ ಪಡೆಯಲು ತೆರಳು ವುದಾಗಿ ಘೋಷಿಸಿದ್ದಾರೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





