ಪ್ರೊ. ಕೆ. ಎಸ್ ಭಗವಾನ್ ಪದೇ ಪದೇ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುತ್ತಾರೆ. ರಾಜ್ಯದಲ್ಲಿ ಮಹಿಷ ದಸರಾ ವಿವಾದ ತಾರಕಕ್ಕೇರಿದೆ. ಇಂತಹ ಹೊತ್ತಲ್ಲೇ ಒಕ್ಕಲಿಗರ ಬಗ್ಗೆ ಪ್ರೊ. ಕೆ. ಎಸ್ ಭಗವಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ಖಂಡಿಸಿ ಕೆಲವೆಡೆ ಪ್ರತಿಭಟನೆ ನಡೆಸಲಾಗುತ್ತಿದೆ. ಭಗವಾನ್ ಹೇಳಿಕೆಯನ್ನು ನಟ, ಸಂಸದ ಜಗ್ಗೇಶ್ ಖಂಡಿಸಿದ್ದಾರೆ
ಇತ್ತೀಚೆಗೆ ಮಹಿಷ ದಸರಾ ಆಚರಣೆ ಸಮಿತಿಯಿಂದ ಮೈಸೂರಿನ ಪುರಭವನದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ. ಕೆ. ಎಸ್ ಭಗವಾನ್ ಮಾತನಾಡಿದ್ದರು. “ಒಕ್ಕಲಿಗರು ಸಂಸ್ಕೃತಿ ಹೀನ ಪಶುಗಳು ಎಂದು ಅವರು ಹೇಳಿದ್ದರು. ಅದರ ಬೆನ್ನಲ್ಲೇ “ಇದು ನನ್ನ ಮಾತಲ್ಲ ಕುವೆಂಪು ಅವರದ್ದು. ಇಲ್ಲದಿದ್ದರೆ ನನಗೆ ಹೊಡೆಯಲು ಬರ್ತಾರೆ. ನನ್ನನ್ನು ಕೊಂದು ಹಾಕಿ ಬಿಡುತ್ತಾರೆ. ಆದರೆ, ನಿಜ ಹೇಳಿಯೇ ಸಾಯಬೇಕು” ಎಂದಿದ್ದರು. “ಕುವೆಂಪು ಮಾತು ಅವರ ಶಿಷ್ಯರಿಗೆ ಈಗಲೂ ಅರ್ಥವಾಗಿಲ್ಲ” ಎಂದು ಹೇಳಿದ್ದರು
bigtvnews | Hubli Dharwad News | Kannada News | Karnataka News Hubli News | News In Hubli | Local news





