ಹುಬ್ಬಳ್ಳಿ: ನಗರದ ಜನತಾ ಬಜಾರ ಸೂಪರ ಮಾರ್ಕೆಟ್ ನಲ್ಲಿರುವ ಜಾಂಗದೇವ ಮಹಾರಾಜರ ಜಾತ್ರೆಯ ಅಂಗವಾಗಿ ಎಸ್ ಎಸ್ ಕೆ ಸಮಾಜದ ಮುಖ್ಯ ಧರ್ಮದರ್ಶಿ ನೀಲಕಂಠಸಾ ಜಡಿ ಅವರು ಪೂಜೆಯನ್ನು ನೆರವೇರಿಸಿ , ಭಕ್ತರಿಗೆ ಪ್ರಸಾದ ವಿತರಣೆ ಮಾಡಿದರು ಈ ಸಂದರ್ಭದಲ್ಲಿ ಹುಡಾ ಅಧ್ಯಕ್ಷರಾದ ನಾಗೇಶ ಕಲಬುರ್ಗಿ , ಎನ್ ಎನ್ ಖೋಡೆ , ಡಿ ಕೆ ಚವ್ಹಾಣ , ವಿಠಲ ಲದವಾ , ವಸಂತ ಲದವಾ , ಪ್ರಕಾಶ ಬುರಬುರೆ …
Read More »ಬಣವಿ ಬೆಂಕಿಗೆ ಆಹುತಿ : ಅಮೃತ ದೇಸಾಯಿ ವೈಯಕ್ತಿಕ ಧನ ಸಹಾಯ
ಅಮ್ಮಿನ ಬಾವಿ : ಕಡಲೆ ಬಣವಿ ಬೆಂಕಿಗೆ ಆಹುತಿಯಾಗಿದ್ದು ಬಸಪ್ಪ ಸುಣಗಾರ ಅವರ ಮನೆಗೆ ಶಾಸಕ ಅಮೃತ ದೇಸಾಯಿ ಭೇಟಿ ನೀಡಿದರು. ಧಾರವಾಡ ಮತಕ್ಷೇತ್ರದ ಆಮ್ಮಿನಭಾವಿ ಗ್ರಾಮಕ್ಕೆ ಅವರು ವಾಸವಾಗಿದ್ದರು. ಬಸಪ್ಪ ಸುಣಗಾರ ಅವರವೈಯಕ್ತಿಕ ಧನ ಸಹಾಯ ಮಾಡಿದರು . ಈ ವೇಳೆಯಲ್ಲಿ ಅಮ್ಮಿನ ಬಾವಿ ಗ್ರಾಮಸ್ಥರು ಇದ್ದರು .
Read More »ಧಾರವಾಡದಲ್ಲಿ ಡಾ. ಪುನೀತ ರಾಜಕುಮಾರ ಚಲನಚಿತ್ರ ಗೀತೆ ಸ್ಪರ್ಧೆ
ಧಾರವಾಡ : ನಗರದ ಸುದಿಶಾ ಇವೆಂಟ್ಸ್ ವತಿಯಿಂದ ಯುಗಾದಿ ಹಬ್ಬದ ನಿಮಿತ್ತ ಡಾ. ಪುನೀತ ರಾಜಕುಮಾರ ಚಲನಚಿತ್ರ ಗೀತೆ ಸ್ಪರ್ಧೆ ಕರೋಕೆ ಕಾರ್ಯಕ್ರಮವನ್ನು ಏ .3 ರಂದು ಬೆಳಿಗ್ಗೆ 10 ಗಂಟೆಗೆ ಇಲ್ಲಿನ ಜೆಎಸ್ಎಸ್ ಆವರಣದ ಉತ್ಸವ ಹಾಲ್ನಲ್ಲಿ ಹಮ್ಮಿಕೊಳ್ಳಲಾಗಿದೆ . 18 ರಿಂದ 25 ವರ್ಷದ ಯುವಕ ಯುವತಿಯರು ಸ್ಪರ್ಧೆಯಲ್ಲಿ ಬಹುದಾಗಿದೆ.ಭಾಗವಹಿಸ ನಿಗದಿಪಡಿಸಲಾಗಿದೆ.ಒಬ್ಬರಿಗೆ ಒಂದೇ ಹಾಡು ಟಾಪ್ ಪ್ರಥಮ , ದ್ವಿತೀಯ ಹಾಗೂ ತೃತೀಯ ಸ್ಥಾನದ ಪಡೆದವರಿಗೆ ಟ್ರೋಫಿ …
Read More »ಮಹದೇಶ್ವರ ಬೆಟ್ಟದಲ್ಲಿ ಮಾ. 28ರಿಂದ ಏ.2ವರೆಗೆ ಜಾತ್ರಾ ಮಹೋತ್ಸವ
ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಮಹದೇಶ್ವರ ಬೆಟ್ಟದಲ್ಲಿ ಇದೇ 28ರಿಂದ ಏ.2ರವವರೆಗೆ ನಡೆಯಲಿರುವ ಯುಗಾದಿ ಜಾತ್ರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ಮಂಗಳವಾರ ಬೆಟ್ಟದಲ್ಲಿ ಪೂರ್ವ ಸಿದ್ಧತಾ ಸಭೆ ನಡೆಯಿತು. ಬೆಟ್ಟದ ನಾಗಮಲೆ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು, ‘ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಹಾಗೂ ಶಾಸಕರ ಸಮ್ಮುಖದಲ್ಲಿ ಈ ಹಿಂದೆಯೇ ಮಹಾಶಿವರಾತ್ರಿ ಹಾಗೂ ಯುಗಾದಿ ಜಾತ್ರೆ ಸಂಬಂಧ ಪೂರ್ವಬಾವಿ ಸಭೆ …
Read More »ಬಾಲಕಿಯ ಮೇಲೆ ಅತ್ಯಾಚಾರ : ಆರೋಪಿಗೆ 10 ವರ್ಷ ಜೈಲು ಶಿಕ್ಷೆಮಂ
ಮಂಗಳೂರು: ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಸತತವಾಗಿ ಸುಮಾರು ಒಂದು ವರ್ಷ ಕಾಲ ಅತ್ಯಾಚಾರ ಎಸಗಿದವನ ಮೇಲಿನ ಆರೋಪ ಮಂಗಳೂರಿನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಹಾಗೂ 2ನೇ ತ್ವರಿತಗತಿ ವಿಶೇಷ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಆರೋಪಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 25,000 ರೂ. ದಂಡ ವಿಧಿಸಲಾಗಿದೆ. ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಬೊಳ್ಳರ ಮಜಲು ಮನೆಯ ಪ್ರಸಾದ್ (31) ಶಿಕ್ಷೆಗೊಳಗಾದ ಆರೋಪಿ.
Read More »ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತ ವಿರೋಧಿ ತಿದ್ದುಪಡಿ ಕ್ಯಾನ್ಸಲ್ : ಸಿದ್ದರಾಮಯ್ಯ
ಬೆಂಗಳೂರು: ‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತ ವಿರೋಧಿ ತಿದ್ದುಪಡಿಗಳನ್ನು ರದ್ದುಪಡಿಸಲಾಗುವುದು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು. ಸಂಯುಕ್ತ ಹೋರಾಟ -ಕರ್ನಾಟಕ ನಗರದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ಜನ ಪರ್ಯಾಯ ಬಜೆಟ್ ಅಧಿವೇಶನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಉಳುವವನೇ ನೆಲದ ಒಡೆಯನಾಗಬೇಕು ಎಂಬ ಉದ್ದೇಶದಿಂದ ಭೂಸುಧಾರಣಾ ಕಾಯ್ದೆ ಜಾರಿಗೆ ತರಲಾಗಿತ್ತು. ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ‘ಉಳ್ಳವನೇ ನೆಲದೊಡೆಯ’ ಎಂಬಂತಾಗಿದೆ. ಸುಪ್ರೀಂ ಕೋರ್ಟ್ನ ಆದೇಶವನ್ನೇ ನೆಪ …
Read More »ಭ್ರಷ್ಟಾಚಾರದಲ್ಲಿ ರಾಜ್ಯ ಸರ್ಕಾರ ನಂಬರ್ ಒನ್ : ಡಿಕೆಶಿ ಆರೋಪ
ಕಲಬುರಗಿ: ಭ್ರಷ್ಟಾಚಾರದಲ್ಲಿ ನಂಬರ್ ಒನ್ ಆಗಿರುವ ರಾಜ್ಯ ಸರ್ಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬಹುಮಾನ ನೀಡಬೇಕು’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕುಟುಕಿದರು. ‘ಬಡ ರೈತರ ಹೊಲಗಳಿಗೆ ಬೋರ್ವೆಲ್ ಕೊರೆಸುವ ಗಂಗಾ ಕಲ್ಯಾಣ ಯೋಜನೆಯಲ್ಲಿಯೂ ಭಾರಿ ಭ್ರಷ್ಟಾಚಾರ ನಡೆದಿದೆ. ರಾಜ್ಯ ಸರ್ಕಾರದ ಭ್ರಷ್ಟಾಚಾರದ ದಾಖಲೆಗಳನ್ನು ಶೀಘ್ರ ಬಿಡುಗಡೆ ಮಾಡುತ್ತೇವೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
Read More »ರಾಜ್ಯದಲ್ಲಿ ಇಂದು ಭಾರಿ ಮಳೆಯಾಗುವ ಸಾಧ್ಯತೆ
ಬೆಂಗಳೂರು :ಅಂಡಮಾನ್ ನಿಕೋಬಾರ್ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದೂ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಕೆಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರ ಮುಂತಾದ ಹಲವು ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆ ಇದೆ.
Read More »ಒಂದೊಂದು ತರಕಾರಿಗೂ ಒಂದೊಂದು ವಿವಿಗಳು ಬರಬಹುದು : ರಮೇಶ್ ಕುಮಾರ್ ವ್ಯಂಗ್ಯ
ಬೆಂಗಳೂರು: ಜಿಲ್ಲೆಗೊಂದು ವಿಶ್ವ ವಿದ್ಯಾನಿಲಯವು ತಾಲೂಕಿಗೂ ವಿಸ್ತರಿಸುತ್ತದೆ. ಬಳಿಕ ಸೌತೆಕಾಯಿ, ಬದನೆಕಾಯಿ, ಮೆಣಸಿನಕಾಯಿ ಎಲ್ಲದಕ್ಕೂ ಒಂದೊಂದು ವಿವಿಗಳು ಬರಬಹುದು ಎಂದು ಮಾಜಿ ಸಚಿವ ಕೆ. ಆರ್. ರಮೇಶ್ಕುಮಾರ್ ವ್ಯಂಗ್ಯವಾಡಿದ್ದಾರೆ. ಮಾತನಾಡಿದ ಅವರು, ಜಿಲ್ಲೆಗೊಂದು ವಿಶ್ವ ವಿದ್ಯಾನಿಲಯ ಮಾಡುವ ಅಗತ್ಯ ಏನಿದೆ? ಎಂದು ಪ್ರಶ್ನಿಸಿದರು. ಜಿಲ್ಲೆಗೊಂದು ವಿವಿ ಬೇಡಿಕೆ ಬರುವುದನ್ನು ಪೂರೈಸಲು ಸರಕಾರ ಮುಂದಾಗುತ್ತಿದೆ. ಇದು ತಾಲೂಕುಗೂ ವಿಸ್ತರಿಸಬಹುದು. ಮುಂದೆ ಸೌತೆಕಾಯಿ, ಬದನೆಕಾಯಿ, ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು …
Read More »ಯುಗಾದಿ ಹಬ್ಬ ಕುರಿತು ಹೊಸ ಮಾರ್ಗ ಸೂಚಿ ಪ್ರಕಟ
ಬೆಂಗಳೂರು : ಯುಗಾದಿ ಹಬ್ಬವನ್ನು ವಿಶೇಷ ದಿನವಾಗಿ ಆಚರಿಸಲು ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಇನ್ಮುಂದೆ ಯುಗಾದಿಯನ್ನು ‘ಧಾರ್ಮಿಕ ದಿನ’ವನ್ನಾಗಿ ಆಚರಣೆ ಮಾಡಲು ರಾಜ್ಯ ಸರ್ಕಾರದಿಂದ ಆದೇಶವನ್ನು ಹೊರಡಿಸಲಾಗಿದೆ. ಯುಗಾದಿ ಹಬ್ಬದ ದಿನವನ್ನು ಧಾರ್ಮಿಕ ದಿನವನ್ನಾಗಿ ಆಚರಿಸಲು ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳಿಗೆ ಸುತ್ತೋಲೆ ಹೊರಡಿಸುವಂತೆ ಸಚಿವೆ ಶಶಿಕಲಾ ಜೊಲ್ಲೆ ಅವರು ಸೂಚಿಸಿದ್ದಾರೆ ಅಂಥ ತಿಳಿದು ಬಂದಿದೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





