ಧಾರವಾಡ : ಬೇಸಿಗೆ ಕಾಲದಲ್ಲಿ ಇದೀಗ ಮಳೆ ಬರುತ್ತೀರುವುದು ರೈತರಿಗೆ ಆತಂಕ ಉಂಟುಮಾಡಿದೆ. ನಗರ ಸೇರಿದಂತೆ ಸುತ್ತಮುತ್ತಲ ಕೆಲ ಗ್ರಾಮಗಳಲ್ಲಿ ಗಾಳಿ ಸಮೇತ ಭಾರೀ ಮಳೆ ಸುರಿದಿದೆ ಇದರಿಂದ ಅನೇಕ ಕಡೆಗಳಲ್ಲಿ ಗಿಡಗಳು ಬಿದ್ದ ಬಗ್ಗೆಯೂ ವರದಿಯಾಗಿದೆ . ಇನ್ನೂ ಬೇಸಿಗೆ ಸಂದರ್ಭದಲ್ಲಿ ಮಳೆ ಅವಶ್ಯಕತೆ ಇಲ್ಲದಿದ್ರು ಸಹ ಮಳೆ ಆಗುತ್ತಿರುವುದು ನೋಡಿದ್ರೆ ಮುಂದಿನ ಮಳೆ ಬರುವ ಸಾದ್ಯತೆ ಕಡಿಮೆ ಎನ್ನುತ್ತಿದ್ದಾರೆ ರೈತರು .
Read More »ರಸ್ತೆಗಳ ಕಾಂಕ್ರೀಟ್ ಕಾಮಗಾರಿಗೆ ಅರವಿಂದ್ ಬೆಲ್ಲದ್ ಭೂಮಿ ಪೂಜೆ ಸಲ್ಲಿಕೆ
ಹುಬ್ಬಳ್ಳಿ : ಒಳ ರಸ್ತೆಗಳ ಕಾಂಕ್ರೀಟ್ ಕಾಮಗಾರಿಗೆ ಶಾಸಕ ಅರವಿಂದ್ ಬೆಲ್ಲದ್ ಭೂಮಿ ಪೂಜೆ ನೆರವೇರಿಸಿದರು . ವಾರ್ಡ್ ಸಂಖ್ಯೆ -34 ರ ಯಡಿಯೂರಪ್ಪ ನಗರದ ಇದಾಗಿದೆ. . ಈ ಸಂದರ್ಭದಲ್ಲಿ , ಸ್ಥಳೀಯ ಮುಖಂಡರಾದ ಹುಚ್ಚಪ್ಪ ರೂಗಿ , ಶಂಕರ್ ಭುಜಂಗನವರ್ , ಶ್ರೀಮತಿ ರೂಪಾ ಬೊಂಗಾಳೆ , ಗುರುಸಿದ್ಧ ಅಂಗಡಿ , ಪಾಲಿಕೆ ಸದಸ್ಯರಾದ ನಜೀರ್ ಹೊನ್ಯಾಳ್ , ವಾರ್ಡಿನ ನಾಗರಿಕರು ಹಾಗೂ ಗುರು ಹಿರಿಯರು ಉಪಸ್ಥಿತರಿದ್ದರು …
Read More »ತೆರೆದ ಚರಂಡಿ ನಿರ್ಮಾಣ ಕಾಮಗಾರಿಗೆ ಪ್ರಸಾದ ಅಬ್ಬಯ್ಯ ಭೂಮಿಪೂಜೆ ಸಲ್ಲಿಕೆ
ಧಾರವಾಡ : ತೆರೆದ ಚರಂಡಿ ನಿರ್ಮಾಣ ಕಾಮಗಾರಿಗೆ ಮಂಟೂರು ರಸ್ತೆ ಅರಳಿಕಟ್ಟಿ ಕಾಲನಿಯಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ಭೂಮಿಪೂಜೆ ನೆರವೇರಿಸಿದರು. ಲೋಕೋಪಯೋಗಿ ಇಲಾಖೆಯ 1 ಕೋ.ರೂ. ಅನುದಾನದಲ್ಲಿ ವಾರ್ಡ್ ನಂ .61 ರ ದಲ್ಲಿ ನೇರವೆರಿಯಿತ್ತು.ಇದೆ ವೇಳೆಯಲ್ಲಿ ಮಾತನಾಡಿದ ಶಾಸಕರು ಈ ಮೂಲಕ ಈ ಭಾಗದ ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದಂತಾಯಿತು ಎಂದರು .
Read More »ಸೇಪ್ಟಿ ಬ್ಯಾರಿಯರ್ ಗೆ ಡಿಕ್ಕಿ ಹೊಡೆದ ಪೊಲೀಸ್ ಪೆಟ್ರೋಲಿಂಗ್ ವಾಹನ
ತಾರಿಹಾಳ: ಕುಡಿದ ಅಮಲಿನಲ್ಲಿ ಪೊಲೀಸ್ ನೋರ್ವ ಪೆಟ್ರೋಲಿಂಗ್ ವಾಹನವನ್ನ ರಸ್ತೆಯ ಸೇಪ್ಟಿ ಬ್ಯಾರಿಯರ್ ಗೆ ಡಿಕ್ಕಿ ಹೊಡೆದ ಪರಿಣಾಮ ಪೋಲಿಸ್ ತೀವ್ರ ಗಾಯಗೊಂಡು ಕಿಮ್ಸ್ ಆಸ್ಪತ್ರೆ ಗೆ ದಾಖಲಾಗಿರುವಘಟನೆ ತಾರಿಹಾಳದ ಬಳಿ ನಿನ್ನೆ ತಡರಾತ್ರಿ ನಡೆದಿದೆ . ಪೊಲೀಸ್ ರನ್ನ ಸಶಸ್ತ್ರ ಮೀಸಲು ಪಡೆಯ ಮತ್ತು ಮಾಗಿ ಎಂದು ಗುರುತಿಸಲಾಗಿದೆ. ಜೊತೆಗಿದ್ದ ಉದಯ ದೊಡ್ಡಮನಿ ಎಂಬುವವರಿಗೆ ಯಾವುದೇ ಗಾಯಗಳಾಗಿಲ್ಲ . ವಾಹನದ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.
Read More »ಉರುಸ್ನಲ್ಲಿ ಊಟ ಸೇವಿಸಿ ಆಸ್ಪತ್ರೆ ಸೇರಿದ ಜನರು
ಬಾಗಲಕೋಟೆ: ಉರುಸ್ನಲ್ಲಿ ಊಟ ಸೇವಿಸಿದ್ದ ಜನರ ಆರೋಗ್ಯ ಸ್ಥತಿಯು ಹದಗೇಟ್ಟು ಹೋಗಿದೆ. 50ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವ ಘಟನೆ ಬಾಗಲಕೋಟೆ ತಾಲೂಕಿನ ಡೋಮನಾಳ ಗ್ರಾಮದಲ್ಲಿ ನಡೆದಿದೆ. ಉರುಸ್ನಲ್ಲಿ ಊಟ ಸೇವಿಸಿದ್ದ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, 22 ಮಕ್ಕಳು ಸೇರಿದಂತೆ 26 ಜನರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇವರೆಲ್ಲರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
Read More »ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ನೀಡಲು ತಕರಾರು ಇಲ್ಲ , ದುರುಪಯೋಗ ಆಗಬಾರದು : ಸಿಎಂ
ಬೆಂಗಳೂರು: ‘ಹತ್ತು ಎಚ್ಪಿ ಪಂಪ್ಸೆಟ್ವರೆಗೆ ಸೀಮಿತವಾಗಿ ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ನೀಡಲು ನಮಗೆ ತಕರಾರು ಇಲ್ಲ. ಇದರಿಂದ ದುರುಪಯೋಗ ಆಗಬಾರದು ಆದ್ದರಿಂದ ಕೆಲವು ನಿಬಂಧನೆಗಳನ್ನು ವಿಧಿಸಲಾಗುವುದು. ಅದನ್ನು ಒಪ್ಪಿಕೊಳ್ಳಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು. ವಿಧಾನಸಭೆಯಲ್ಲಿ ಮಂಗಳವಾರ ಶೂನ್ಯವೇಳೆಯಲ್ಲಿ ಬಿಜೆಪಿಯ ಅಪ್ಪಚ್ಚು ರಂಜನ್ ಈ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಅವರು ರೈತರಿಗೆ ಉಚಿತ ವಿದ್ಯುತ್ ನೀಡುತ್ತಿರುವುದರಿಂದ ಸರ್ಕಾರದ ಮೇಲೆ ₹14 ಸಾವಿರ ಕೋಟಿಯಷ್ಟು ಹೊರೆ …
Read More »ಹಿಜಾಬ್ ತೀರ್ಪು ನೀಡಿದ ನ್ಯಾಯಮೂರ್ತಿಗಳಿಗೆ ಜೀವ ಬೆದರಿಕೆ : ಗಂಭೀರವಾಗಿ ಪರಿಗಣಿಸಿದೆ ಸರ್ಕಾರ
ಬೆಂಗಳೂರು: ರಾಜ್ಯದಲ್ಲಿ ಭುಗಲೇದ್ದೀರುವ ಹಿಜಾಬ್ ತೀರ್ಪು ನೀಡಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ 9 ಜೀವ ಬೆದರಿಕೆ ಹಾಕಿರುವಪ್ರಕರಣವನ್ನು ಕರ್ನಾಟಕ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅವರ ಹಿಂದೆ ಯಾವ ಸಂಘಟನೆ ಇದೆ ಇದ್ರೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು NIA ಗೆ ವಹಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಹಿಜಾಬ್ ವಿಚಾರದಲ್ಲಿ ನೀಡಿದ ತೀರ್ಪುಗೆ ಕೊಲೆ ಬೆದರಿಕೆ ಹಾಕ್ತಾರೆ ಅಂದ್ರೆ ಇದು ಯಾವ ಸಂದೇಶ ನೀಡಲಿದೆ.ಇದನ್ನ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ …
Read More »ಎಸ್ಬಿಐ ಗ್ರಾಹಕರನ್ನು ಸೆಳೆಯಲು ಹೊಸ ಯೋಜನೆ ಜಾರಿಗೆ
ಎಸ್ಬಿಐ ಈಗ ಹೊಸದೊಂದು ಯೋಜನೆ ಜತೆ ಬಂದಿದ್ದು, ಗ್ರಾಹಕರನ್ನು ಸೆಳೆಯಲು ಮುಂದಾಗಿದೆ. ಎಸ್ಬಿಐ ಗ್ರಾಹಕರು ನೆಟ್ ಬ್ಯಾಂಕಿಂಗ್ ಮೂಲಕ ಎಫ್ಡಿ ಅಕೌಂಟ್ ತೆಗೆದು, ನಿಯಮಿತ ಮೊತ್ತವನ್ನು ಐದು ವರ್ಷದವರೆಗೆ ಬಿಟ್ಟರೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಡಿ ಪ್ರಕಾರ ತೆರಿಗೆ ಉಳಿತಾಯ ಮಾಡುವ ಅವಕಾಶವನ್ನು ಎಸ್ಬಿಐ ನೀಡುತ್ತಿದೆ. ಗ್ರಾಹಕರು ಕಡ್ಡಾಯವಾಗಿ ಎಫ್ಡಿ ಖಾತೆಯಲ್ಲಿಮೊತ್ತವನ್ನು ಐದು ವರ್ಷ ತುಂಬುವವರೆಗೆ ಇಡಲೇಬೇಕು. ಇಲ್ಲದಿದ್ದರೆ ಬಡ್ಡಿ ಸಿಗುವುದಿಲ್ಲ ಹಾಗೂ ತೆರಿಗೆ ವಿನಾಯಿತಿ ಸಿಗುವುದಿಲ್ಲಎಂದು …
Read More »ಮುಸ್ಲಿಂ ಮಹಿಳೆಯರ ಕುರಿತು ವ್ಯಂಗ್ಯ ಮಾಡಿದ ಕಣ್ಮನ್
ಮೈಸೂರು: ಈ ಬಾರಿಯ ರಂಗೋತ್ಸವದ ಎಲ್ಲ ಕಾರ್ಯಕ್ರಮಗಳು ‘ತಾಯಿ’ ಪರಿಕಲ್ಪನೆಯಡಿ ನಡೆದಿತ್ತು. ‘ತಾಯಿ ವಿಷಯವನ್ನಾಧರಿಸಿ ರೂಪಿಸಲಾದ ರಂಗೋತ್ಸವದಲ್ಲಿ ಹೆಣ್ಣಿನ ಬಗ್ಗೆ ಈ ರೀತಿಯ ಮಾತುಗಳನ್ನಾಡಿದ್ದು ಹೇಗೆ’ ಎಂದು ಹಲವರು ಪ್ರಶ್ನಿಸಿದ್ದಾರೆ. ತುಚ್ಛವಾಗಿ ಮಾತನಾಡುವ ಈ ನೀಚ ತಾನು ಪೂಜೆ ಮಾಡುವ ಕೋದಂಡರಾಮ ದೇವಾಲಯದಲ್ಲಿ ರಾಮನ ಜೊತೆ ನಿಂತಿರುವ ಸೀತೆಯನ್ನು ಯಾವ ದೃಷ್ಟಿಯಿಂದ ನೋಡುತ್ತಿರಬಹುದು?’ ಎಂದು ಶಶಿಧರ ಹೆಮ್ಮಾಡಿ ಪ್ರಶ್ನಿಸಿದ್ದಾರೆ. ‘ಕಣ್ಣನ್ ಅವರು, ಹಿಜಾಬ್ ಹಾಕಿಕೊಂಡು ಕಾಲೇಜಿಗೆ ಬರುವ ಹೆಣ್ಣು ಮಕ್ಕಳ …
Read More »ಜಿಲ್ಲಾ ಆಸ್ಪತ್ರೆ ರಸ್ತೆ ಅಗಲೀಕರಣ ಅಭಿವೃದ್ಧಿಗೆ ಆಗ್ರಹಿಸಿ ಸತ್ಯಾಗ್ರಹ
ಧಾರವಾಡ:ಜಿಲ್ಲಾ ಆಸ್ಪತ್ರೆ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿಗೆ ಆಗ್ರಹಿಸಿ ಕರ್ನಾಟಕ ಥಿಂಕಸ್ ೯ ಫೋರಂ ವತಿಯಿಂದ ಇಂದು ಬೆಳಗ್ಗೆ ಜಿಲ್ಲಾ ಆಸ್ಪತ್ರೆಯಿಂದ ಪಾದ ಯಾತ್ರೆ ಮೂಲಕ ಮಹಾನಗರ ಪಾಲಿಕೆಯ ಆಯುಕ್ತರ ಕಚೇರಿ ವರೆಗೆ ಪ್ರತಿಭಟನೆ ನಡೆಸಿ ಅಲ್ಲಿ ಸತ್ಯಾಗ್ರಹ ನಡೆಸಲಾಯಿತು.ಕರ್ನಾಟಕ ಥಿಂಕಸ್ ೯ ಫೋರಂ ಅಧ್ಯಕ್ಷ, ಹಿರಿಯ ನ್ಯಾಯವಾದಿ ಪಿ.ಎಚ್.ನೀರಲಕೇರಿ ಅವರ ನೇತೃತ್ವದಲ್ಲಿ ಸತ್ಯಾಗ್ರಹ ನಡೆಸಲಾಯಿತು.ಸಮಾನ ಮನಸ್ಕರು ಧರಣಿಯಲ್ಲಿ ಪಾಲ್ಗೊಂಡಿದ್ದರು.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





