ಹುಬ್ಬಳ್ಳಿ : ಪ್ರತಿದಿನ ವಿಶೇಷ ಅಲಂಕಾರದಿಂದ ಕಂಗೊಳಿಸುತ್ತೀರುವ ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳು ಇಂದು ನೋಡಲು ಎರಡು ಕಣ್ಣುಸಾಲವುದಲ್ಲಾ. ಸದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳು ಹಾಗೂ ಸದ್ಗುರು ಶ್ರೀ ಗುರುನಾಥಾರೂಢ ಮಹಾಸ್ವಾಮಿಗಳ ದರ್ಶನ , ಮುಂಜಾನೆಯಿಂದಲೇ ವಿಶೇಷ ಹೂವಿನ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳು ಜರುಗಿದವು. ಭಕ್ತರು ಕಡ್ಡಾಯವಾಗಿ ಮಾಸ್ಕೆ ಬಳಸುವಂತೆ ಆಡಳಿತ ಮಂಡಳಿ ಮನವಿ ಮಾಡಿದೆ .
Read More »ಕಾಶ್ಮೀರ್ ಪ್ರತಿ ನಗರ ನಗರದಲ್ಲೂ ಹುಟ್ಟಿಕೊಳ್ಳುತ್ತಿವೆ: ಪ್ರಮೋದ್ ಮುತಾಲಿಕ್
ಧಾರವಾಡ: ದೇಶದಲ್ಲಿ ಒಂದೇ ಕಾಶ್ಮೀರ್ ಇಲ್ಲ . ಅಂತಹ ಕಾಶ್ಮೀರ್ ಪ್ರತಿ ನಗರ ನಗರದಲ್ಲೂ ಹುಟ್ಟಿಕೊಳ್ಳುತ್ತಿವೆ . ಹೀಗಾಗಿ ಹಿಂದೂಗಳು ಜಾಗೃತಗೊಳ್ಳಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ಹೇಳಿದರು. ಧಾರವಾಡದ ಸಂಗಮ ಚಿತ್ರಮಂದಿರದಲ್ಲಿ ದಿ ಕಾಶ್ಮೀರ್ ಫೈಲ್ಸ್ ಚಿತ್ರ ವೀಕ್ಷಣೆ ಮಾಡಿ ನಂತರ ಮಾತಾನಾಡಿ , ಕಾಶೀರ್ದಲ್ಲಿ ಮಾತ್ರ ಹಿಂದೂಗಳ ಮೇಲೆ ದೌರ್ಜನ್ಯ ನಡೆದಿಲ್ಲ . ಪ್ರತಿ ನಗರಗಳಲ್ಲೂ ಒಂದು ಕೋಮಿನ ಜನಸಂಖ್ಯೆ ಹೆಚ್ಚಾದಂತೆ ದೌರ್ಜನ್ಯ ನಡೆಯುತ್ತಿದೆ . …
Read More »ಚಾಂಗ್ದೇವ್ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ
ನವಲಗುಂದ: ನಿನ್ನೆ ಯಮನೂರಿನ ಚಾಂಗ್ದೇವ್ ಮಹಾರಾಜ ಉರ್ಫ್ ರಾಜ ಭಾಗಸವಾರ ಸಂದಲ (ಗಂಧ) ಉರುಸ್ ನಡೆಯಿತು.ಲಕ್ಷಾಂತರ ಭಕ್ತರು ಬೆಣ್ಣಿಹಳ್ಳದಲ್ಲಿ ಪುಣ್ಯಸ್ನಾನ ಮಾಡಿದರು. ನಂತರ ಸರದಿ ಸಾಲಿನಲ್ಲಿ ನಿಂತು ಚಾಂಗ್ದೇವರ ದರ್ಶನ ಪಡೆದರು. ಮುಕ್ತುಂ ಸಕ್ಕರೆ, ಮಕ್ಕಳ ಆಟಿಕೆ ಸಾಮಾನು, ಜೋಕಾಲಿ, ವಿವಿಧ ಮಿಠಾಯಿ ಅಂಗಡಿಗಳಲ್ಲಿ ವ್ಯಾಪಾರ ಬಲು ಜೋರಾಗಿ ನಡೆಯಿತು.
Read More »ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೆ ಮನವಿ ಸಲ್ಲಿಕೆ
ಚಾಮರಾಜನಗರ: ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ, ಕೆಲ್ಲಂಬಳ್ಳಿ ಬದನಗುಪ್ಪೆಯ ಕೈಗಾರಿಕಾ ಪ್ರದೇಶದಲ್ಲಿ ಉದ್ದಿಮೆಗಳ ಸ್ಥಾಪನೆಗೆ ಒತ್ತು ನೀಡುವುದರ ಜೊತೆಗೆ ವಿವಿಧ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಚಾಮರಾಜನಗರ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಪದಾಧಿಕಾರಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜಿಲ್ಲಾ ವಾಣಿಜ್ಯ ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ವಿ.ಪ್ರಭಾಕರ್, ಖಜಾಂಚಿ ಸಿ.ವಿ.ನಾರಾಯಣ, ಗೌರವ ಕಾರ್ಯದರ್ಶಿ ಎನ್.ಪ್ರಸಾದ್ ಹಾಗೂ ಗೌರವ ಸಲಹೆಗಾರರಾದ ಆರ್.ಶಿವಕುಮಾರ್ ಅವರು …
Read More »3000 ಪರವಾನಗಿ ಭೂಮಪಾಕರನ್ನು ನೇಮಕ : ಆರ್. ಅಶೋಕ್
ಬೆಂಗಳೂರು : 3000 ಪರವಾನಗಿ ಭೂಮಪಾಕರನ್ನು ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ವಿಧಾನಸಭೆ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಆರ್. ಅಶೋಕ್. ಪರವಾನಿಗೆ ಭೂಮಾಪಕರಿಗೆ ಕಂದಾಯ ಆಸ್ತಿ ಸರ್ವೆ ಅಧಿಕಾರ ನೀಡಲಾಗುವುದು. ಶೀಘ್ರದಲ್ಲೇ ಕಾನೂನು ತಿದ್ದುಪಡಿ ತರಲಾಗುವುದು. ರಾಜ್ಯದಲ್ಲಿ 4020 ಭೂಮಾಪಕರ ಮಂಜೂರಾದ ಹುದ್ದೆಗಳು ಇದ್ದು, 3379 ಭರ್ತಿಯಾಗಿವೆ. ಭೂಮಾಪಕರ ಕೊರತೆಯಿಂದಾಗಿ 2 …
Read More »ಮಗು ನಿರೀಕ್ಷೆಯಲ್ಲಿದ್ದ ಗರ್ಭಿಣಿ ಸಾವುನಲ್ಲಿ ಅಂತ್ಯ
ಮೈಸೂರು : ಮಗುವಿನ ನೀರಿಕ್ಷೆಯಲ್ಲಿದ್ದ 7 ತಿಂಗಳ ಗರ್ಭಿಣಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಈಕೆ ಗಂಡನ ಮೇಲೆ ಕೊಲೆ ಆರೋಪ ಕೇಳಿಬಂದಿದೆ.ವಿಜಯನಗರ ನಿವಾಸಿ ಅಶ್ವಿನಿ (23) ಮೃತ ಗರ್ಭಿಣಿ. ತಾಲೂಕಿನ ಮೈದನಹಳ್ಳಿಯ ಪ್ರಮೋದ್ ಮತ್ತು ಅಶ್ವಿನಿ ಪರಸ್ಪರ ಪ್ರೀತಿಸಿ 2021ರ ಜೂನ್ 13ರಂದು ಮದುವೆಯಾಗಿದ್ದರು. 7 ತಿಂಗಳ ಗರ್ಭಿಣಿಯಾಗಿದ್ದ ಅಶ್ವಿನಿ ತಂದೆ ಮನೆಯಲ್ಲಿದ್ದಳು. ಮಾ.18ರ ರಾತ್ರಿ ಮಾವನ ಮನೆಯಿಂದ ತನ್ನ ಪತ್ನಿಯನ್ನ ಪ್ರಮೋದ್ ಕರೆದೊಯ್ದಿದ್ದ. ಇದೀಗ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮಗಳನ್ನು …
Read More »ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಡಿಕೆಶಿ
ಮೈಸೂರು : ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ವಿಚಾರವಾಗಿ ಕಾಂಗ್ರೆಸ್ ಎನ್ನುವ ಮೂಲಕ ಬಿಜೆಪಿ ನಾಯಕರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ತಿರುಗೇಟು ನೀಡಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ನಾವೂ ಸಹ ಹಿಂದೂಗಳೇ ಆಗಿದ್ದೇವೆ.ರಾಜೀವ್ಗಾಂಧಿ ಪ್ರಧಾನಿಯಾಗಿದ್ದ ಕಾಲದಲ್ಲಿ ದೂರದರ್ಶನದಲ್ಲಿ ರಾಮಾಯಣ, ಮಹಾಭಾರತಗಳನ್ನು ಪ್ರಸಾರ ಮಾಡಿ ಜನರಿಗೆ ತಲುಪಿಸಿದ್ದನ್ನು ಯಾರೂ ಮರೆಯಬಾರದು ಎಂದರು. ಭಗವದ್ಗೀತೆ ಪ್ರಚಾರಕ್ಕೆ ಫೌಂಡೇಶನ್ ಹಾಕಿದ್ದೇ ರಾಜೀವ್ಗಾಂಧಿ. ದೂರದರ್ಶನದ ಮೂಲಕ ಮನೆ ಮನೆಗೆ ಮಹಾಭಾರತ, ರಾಮಾಯಣ ತೋರಿಸಿದ್ದರು. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ …
Read More »ಉಕ್ರೇನ್ ನಿಂದ ವಾಪಸಾದ ವೈದ್ಯ ವಿದ್ಯಾರ್ಥಿಗಳಿಗೆ ಸಿಹು ಸುದ್ದಿ
ಬೆಂಗಳೂರು: ಯುದ್ಧಪೀಡಿತ ಉಕ್ರೇನ್ ನಿಂದ ವಾಪಸಾದ ವೈದ್ಯ ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿ ಉಚಿತ ಶಿಕ್ಷಣ ನೀಡಲಾಗುವುದು. ರಾಜ್ಯದ 60 ವೈದ್ಯಕೀಯ ಕಾಲೇಜುಗಳಲ್ಲಿ 700 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುವುದು.ಶಿಕ್ಷಣದ ವಿಧಾನ, ಅಧಿಕೃತ ಮಾನ್ಯತೆ ನಿರ್ಧಾರಕ್ಕೆ ಉನ್ನತ ಸಮಿತಿ ರಚಿಸಲಾಗುತ್ತದೆ. ರಷ್ಯಾ -ಉಕ್ರೇನ್ ಯುದ್ಧದಿಂದ ಶೈಕ್ಷಣಿಕ ಭವಿಷ್ಯ ಅತಂತ್ರವಾಗಿರುವ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ.
Read More »ದರ್ಶನಕ್ಕೆ ಆಗಮಿಸಿ ಬಸ್ ಗಾಗಿ ಕಾಯ್ದು ಸುಸ್ತಾದ ಭಕ್ತರು
ಯಮನೂರ ಚಾಂಗದೇವನ ದರ್ಶನಕ್ಕೆ ಆಗಮಿಸಿದ ಧಾರವಾಡ ಭಕ್ತರು ರೋಸಿ ಹೋಗಿದ್ದಾರೆ . ಬಸ್ ಗೆ ಕಾಯ್ದು ಸುಸ್ತಾಗಿ ಹೋಗಿದ್ದಾರೆ. ಲಕ್ಷಾಂತರ ಭಕ್ತರು ಈಗ ಪಟ್ಟಣದ ಬಸ್ ನಿಲ್ದಾಣಕ್ಕೂ ಆಗಮಿಸುತ್ತಿದ್ದು , ತೆರಳಲು ಬಸ್ ಗಳ ಕೊರತೆ ಉಂಟಾಗುತ್ತಿದೆ. ಯಮನೂರ ಜಾತ್ರೆ ಹಿನ್ನೆಲೆ ಪಟ್ಟಣದ ಬಸ್ ನಿಲ್ದಾಣಕ್ಕೂ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ . ಇಂತಹ ಪರಿಸ್ಥಿತಿಯಲ್ಲಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಗಂಟೆಗಟ್ಟಲೆ ಉರಿ ಬಿಸಿಲಿನಲ್ಲೇ ಕಾಯುವ ದುಸ್ಥಿತಿ ಬಂದಿದೆ .
Read More »ಜಿಲ್ಲಾಧಿಕಾರಿಗಳ ನಡೆ ಗ್ರಾಮ ವಾಸ್ತವ್ಯದ ಕಡೆಗೆ ಕಾರ್ಯ ಕ್ರಮಕ್ಕೆ ಡಿಸಿ ಚಾಲನೆ
ಅಳ್ಳಾವರ : ತಾಲೂಕಿನ ಬೆನಚಿ ಗ್ರಾಮದಲ್ಲಿ ಇಂದು ಅಳ್ಳಾವರ ಜಿಲ್ಲಾಧಿಕಾರಿಗಳ ನಡೆ ಗ್ರಾಮ ವಾಸ್ತವ್ಯದ ಕಡೆಗೆ ಎಂಬ ಧೈಯ ವಾಕ್ಯದೊಂದಿಗೆ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು . ಅಕ್ಷಾವರ ತಾಲೂಕು ದಂಡಾಧಿಕಾರಿ ಹಾಗೂ ತಹಸೀಲ್ದಾರ್ ಅಮರೇಶ ಪಮ್ಮಾರ ಭಾಗಿಯಾಗಿ, ಮೊದಲು ಗ್ರಾಮದಲ್ಲಿರುವ ನ್ಯಾಯ ಬೆಲೆ ಅಂಗಡಿ ವೀಕ್ಷಣೆ ಮಾಡಿದರು .
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





