Breaking News

Shaikh BIG TV NEWS, Hubballi

ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೈಸೂರಿಗೆ ಆಗಮಿಸಿದ ಉಪರಾಷ್ಟ್ರಪತಿ

ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಹೂಗುಚ್ಛವನ್ನು ನೀಡಿ ಸ್ವಾಗತಿಸಿದರು. ಮೈಸೂರು: ಶ್ರೀ ಕ್ಷೇತ್ರ ಸುತ್ತೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಸೋಮವಾರ ಸಂಜೆ ಮೈಸೂರಿಗೆ ಆಗಮಿಸಿದರು. ಮೈಸೂರಿನ ನಂಜನಗೂಡು ತಾಲೂಕಿನಲ್ಲಿರುವ ಸುತ್ತೂರು ಮಠದಲ್ಲಿ ಇಂದು ನಡೆಯಲಿರುವ ಪರಮಪೂಜ್ಯ ಶ್ರೀ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ‘103 ನೇ ಜಯಂತಿ ಮಹೋತ್ಸವ’ ಮತ್ತು ಶ್ರೀ …

Read More »

ಆಕರ್ಷಕ ಮಹಿಳೆಯರ ಸೆಲ್ಫಿ ಆರ್ಥಿಕ ಅಸಮಾನತೆಗೆ ಸಂಬಂಧಿಸಿದೆ- ವರದಿ.

ನವದೆಹಲಿ: ಮಹಿಳೆಯರು ಆಕರ್ಷಕ ಸೇಲ್ಪಿಗಳನ್ನು ಆನ್ ಲೈನ್ ನಲ್ಲಿ ಪೋಸ್ಟ್ ಮಾಡುವುದು ಸಂಗತಿ ಈಗ ಆರ್ಥಿಕ ಅಸಮಾನತೆಗೆ ಸಂಬಂಧಿಸಿದೆ ಎಂದು ಸಂಶೋಧನಾ ಅಧ್ಯಯನವೊಂದು ತಿಳಿಸಿದೆ. ಈ ಕುರಿತಾದ ಸಂಶೋಧನಾ ಲೇಖನವೊಂದು ಈಗ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ನಲ್ಲಿ ಪ್ರಕಟವಾಗಿದೆ.ಈ ಅಧ್ಯಯನ ಹೇಳುವಂತೆ  ಮಹಿಳೆಯರು ಆಕರ್ಷಕ ಸೇಲ್ಪಿಗಳನ್ನು ತೆಗೆದುಕೊಳ್ಳುವುದು ಸಮಾಜದ ಏಣಿ ಶ್ರೇಣಿಯಲ್ಲಿ ಸ್ಪರ್ಧಿಸಲು ಎಂದು ತಿಳಿಸಿದೆ. ಈ ವಿಷಯದ ಕುರಿತಾಗಿ ಅಧ್ಯಯನ ಮಾಡಿರುವ ಸಿಡ್ನಿ ಮೂಲದ ವಿವಿಯ ಖಾಂಡಿಸ್ …

Read More »

ಸಮ್ಮಿಶ್ರ ಸರ್ಕಾರ ಉರುಳಿಸಲು ಬಿಜೆಪಿ ಷಡ್ಯಂತ್ರ: ದಿನೇಶ್ ಗುಂಡೂರಾವ್..

ರಾಜ್ಯದಲ್ಲಿರುವ ಸಮ್ಮಿಶ್ರ ಸರಕಾರ ಬೀಳಿಸಲು ಬಿಜೆಪಿ ಷಡ್ಯಂತ್ರ ನಡೆಸುತ್ತಿದೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ. ಹುಬ್ಬಳ್ಳಿ: ರಾಜ್ಯದಲ್ಲಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಷಡ್ಯಂತ್ರ ನಡೆಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ. ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊರತು ಪಡಿಸಿ ಬೇರೆ ಯಾವ ನಾಯಕರಿಗೂ ಅಧಿಕಾರವೇ ಇಲ್ಲ. ರಾಜ್ಯದಲ್ಲಿರುವ ಸಮ್ಮಿಶ್ರ ಸರಕಾರ ಬೀಳಿಸಲು ಬಿಜೆಪಿ ಷಡ್ಯಂತ್ರ ನಡೆಸುತ್ತಿದೆ. ಈ …

Read More »

ದೆಹಲಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನಕ್ಕಾಗಿ 10 ಲಕ್ಷ ಪತ್ರ ಪ್ರಧಾನಿಗೆ ರವಾನಿಸಲು ಮುಂದಾದ ಆಪ್ ಪಕ್ಷ..

ಗೋಪಾಲ್ ರಾಯ್ ನೇತೃತ್ವದ ಎಎಪಿ ಶಾಸಕರು ಸೋಮವಾರ ಪ್ರಧಾನಿ ನರೇಂದ್ರ ಮೋದಿಗೆ ದೆಹಲಿಗೆ ರಾಜ್ಯದ ಸ್ಥಾನಮಾನ ನೀಡುವಂತೆ ಒತ್ತಾಯಿಸಿ 10 ಲಕ್ಷಕ್ಕೂ ಹೆಚ್ಚಿನ ಮನವಿ ಪತ್ರಗಳನ್ನು ಸಲ್ಲಿಸಲಿದ್ದಾರೆ. ನವದೆಹಲಿ: ಗೋಪಾಲ್ ರಾಯ್ ನೇತೃತ್ವದ ಎಎಪಿ ಶಾಸಕರು ಸೋಮವಾರ ಪ್ರಧಾನಿ ನರೇಂದ್ರ ಮೋದಿಗೆ ದೆಹಲಿಗೆ ರಾಜ್ಯದ ಸ್ಥಾನಮಾನ ನೀಡುವಂತೆ ಒತ್ತಾಯಿಸಿ 10 ಲಕ್ಷಕ್ಕೂ ಹೆಚ್ಚಿನ ಮನವಿ ಪತ್ರಗಳನ್ನು ಸಲ್ಲಿಸಲಿದ್ದಾರೆ. ದೆಹಲಿಗೆ ರಾಜ್ಯದ ಸ್ಥಾನಮಾನವನ್ನು ನೀಡಬೇಕೆಂದು ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ ಜುಲೈನಲ್ಲಿ …

Read More »

ರಾಜಕೀಯ ಜ್ಞಾನವಿಲ್ಲ ಎಂದ ಶಾರುಖ್ ಗೆ ಚುನಾವಣೆ ಚಿನ್ಹೆ ಯಾವುದು ಗೊತ್ತೇ?

ಶಾರುಖ್ ಖಾನ್ ಬೆಳ್ಳಿ ತೆರೆಯ ಮೇಲೆ ಕೋಟ್ಯಾಂತರ  ಅಭಿಮಾನಿಗಳಿಗೆ  ತಮ್ಮ ಅಭಿನಯದಿಂದಲೇ ಮೋಡಿ ಮಾಡಿದ್ದಾರೆ.ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ರಾಜಕೀಯಕ್ಕೆ ಪ್ರವೇಶಿಸುವ ಬಗ್ಗೆ ಕೇಳಿದಾಗ ತಮಗೆ ಅಷ್ಟು ರಾಜಕೀಯ ಜ್ಞಾನವಿಲ್ಲ ಅದಕ್ಕೆ ವಿಶೇಷ ಜ್ಞಾನದ ಅವಶ್ಯಕತೆ ಇದೆ ಎಂದು ತಿಳಿಸಿದರು. ಮುಂಬೈ: ಶಾರುಖ್ ಖಾನ್ ಬೆಳ್ಳಿ ತೆರೆಯ ಮೇಲೆ ಕೋಟ್ಯಾಂತರ  ಅಭಿಮಾನಿಗಳಿಗೆ  ತಮ್ಮ ಅಭಿನಯದಿಂದಲೇ ಮೋಡಿ ಮಾಡಿದ್ದಾರೆ.ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ರಾಜಕೀಯಕ್ಕೆ ಪ್ರವೇಶಿಸುವ ಬಗ್ಗೆ ಕೇಳಿದಾಗ ತಮಗೆ ಅಷ್ಟು ರಾಜಕೀಯ ಜ್ಞಾನವಿಲ್ಲ …

Read More »

2002ರ ಗೋದ್ರಾ ಹತ್ಯಾಕಾಂಡ ತೀರ್ಪು ಪ್ರಕಟ: ಇಬ್ಬರಿಗೆ ಜೀವಾವಧಿ ಶಿಕ್ಷೆ, ಮೂವರು ಖುಲಾಸೆ

ಅಹಮದಾಬಾದ್: 2002ರ ಗೋಧ್ರಾ ರೈಲು ಹತ್ಯಾಕಾಂಡ ಪ್ರಕರಣದಲ್ಲಿ ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ವಿಶೇಷ ಎಸ್ಐಟಿ ನ್ಯಾಯಾಲಯ, ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.  ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಹೆಚ್.ಸಿ. ವೋರಾ ಅವರು, ಫಾರೂಕ್ ಭಾನಾ ಮತ್ತು ಇಮ್ರಾನ್ ಶೆರು ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ, ಇತರೆ ಮೂವರು ಆರೋಪಿಗಳಾಗಿದ್ದ ಹುಸೇನ್ ಸುಲೇಮಾನ್ ಮೋಹನ್, ಕಸಮ್ ಭಮೇದಿ ಹಾಗೂ ಫರೂಕ್ ಧಾಂಟಿಯಾ ಅವರುಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದ್ದಾರೆ.  2002ರಲ್ಲಿ …

Read More »

ಶ್ರೀಗುರು ಸಿದ್ಧಾರೂಢರ ಅಂಗಾರ, ದೇಶಕ್ಕೆಲ್ಲ ಬಂಗಾರ.. ತೆಪ್ಪದ ತೇರನೆಳೆದು ಪುನೀತರಾದ ಭಕ್ತಸಾಗರ..

ಉತ್ತರಕರ್ನಾಟಕ ಶ್ರದ್ಧಾ ಭಕ್ತಿ ಕೇಂದ್ರ ಶ್ರೀಗುರುಸಿದ್ಧಾರೂಢರ ಮಠ. ಅದ್ವೈತದ ಕಾಶಿ ಅಂತಾನೇ ದೇಶದೆಲ್ಲೆಡೆ ಖ್ಯಾತಿ ಹೊಂದಿದೆ. ಇಷ್ಟಾರ್ಥ ಈಡೇರಿಸುವ ಶ್ರೀಗುರುವಿನ ನೆನೆದು ಇಲ್ಲಿಗೆ ಬರೋ ಭಕ್ತರ ಸಂಖ್ಯೆ ಕಡಿಮೆಯೇನಿಲ್ಲ. ಸಿದ್ಧಾರೂಢರ ಅಂಗಾರ ದೇಶಕ್ಕೆಲ್ಲ ಬಂಗಾರ ಅಂತ ಭಕ್ತರೇ ಅತ್ಯಂತ ಭಕ್ತಿಪೂರ್ವಕವಾಗಿ ಹೇಳುವ ಶ್ರೀಮಠದಲ್ಲಿ ನಡೆದ ತೆಪ್ಪದ ತೇರಿಗೆ ಸಾವಿರಾರು ಭಕ್ತರು ಬಂದಿದ್ರು.  ಸುತ್ತಲೂ ಭಕ್ತ ಸಾಗರ. ಓಂನಮಃ ಶಿವಾಯ ಎಂಬ ಮಂತ್ರಸಾರ. ಎಲ್ಲರ ಬಾಯಲ್ಲೂ ಶ್ರೀಗುರು ಸಿದ್ಧಾರೂಢರ ಜೈಕಾರ.ಸಿದ್ಧಾರೂಢ ಸದ್ಗುರು …

Read More »

ಶ್! ಇಲ್ಕೇಳಿ.. ಅದು ನನ್ ಪರ್ಸನಲ್, ನಿಮಗೆ ಅಧಿಕಾರ ಇಲ್ಲ..

ಶ್.. ಇಲ್ಕೇಳಿ. ಶ್.. ನಾಳೆ ನಾನು ಮಡಿಕೇರಿಗೆ ಹೋಗ್ತೇನೆ. ಅದನ್ನ ಬಿಟ್ಟು ಪರ್ಸನಲ್ ಕೇಳೋದಕ್ಕೆ ನಿಮಗೆ ಅಧಿಕಾರವೇ ಇಲ್ಲ. ಇದಕ್ಕೆ ನಾನ್ ಉತ್ತರವನ್ನೂ ಕೊಡೊದಿಲ್ಲ ಅಂತ ಕಂದಾಯ ಸಚಿವ ಆರ್.ವಿ ದೇಶಪಾಂಡೆ ಕಡ್ಡಿ ತುಂಡ್ ಮಾಡಿದಂತೆ ಹೇಳಿದಾರೆ. ಹುಬ್ಬಳ್ಳಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಕುರಿತಂತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಒಂದ್ರೀತಿ ಉದಾಸೀನತೆಯಿಂದಲೇ ಮಾತನಾಡಿದ್ರು. ಮತ್ತೆ ಸಿಎಂ ಆಗ್ತೇನೆ ಅಂತ ಸಿಎಲ್ಪಿ ನಾಯಕ ಸಿದ್ದರಾಮಯ್ಯ …

Read More »

ಮೆಹುಲ್ ಚೋಕ್ಸಿ ಹಸ್ತಾಂತರಕ್ಕೆ ರೆಡ್ ಕಾರ್ನರ್ ನೋಟೀಸ್ ಅಗತ್ಯವಿಲ್ಲ: ಸಿಬಿಐ

ನವದೆಹಲಿ: ಬಹುಕೋಟಿ ವಂಚನೆ ಪ್ರಕರಣದ ಆರೋಪಿ ವಜ್ರದ ವ್ಯಾಪಾರಿ ದೇಶಭ್ರಷ್ಟ ಬಿಲಿಯನೇರ್ ಮೆಹುಲ್ ಚೋಕ್ಸಿಯನ್ನು ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಇಲ್ಲದೆಯೂ ಭಾರತಕ್ಕೆ ಕರೆತರಬಹುದು. ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಕೋರಲು ರೆಡ್ ಕಾರ್ನರ್ ನೋಟೀಸು ಅತ್ಯಗತ್ಯವಾಗಿಲ್ಲ ಎಂದು ಕೇಂದ್ರೀಯ ತನಿಖಾ ದಳ (ಸಿಬಿಐ) ವಿದೇಶಾಂಗ ಸಚಿವಾಲಯಕ್ಕೆ ತಿಳಿಸಿದೆ. ಈ ತಿಂಗಳು ಪ್ರಾರಂಬದಲ್ಲಿ ಸಚಿವಾಲಯದೊಡನೆ ನಡೆಸಿದ ಸಂವಹನದಲ್ಲಿ ಸಿಬಿಐ ಈ ಮಾಹಿತಿ ನೀಡಿದೆ.ಇದಾಗಲೇ ಆಂಟಿಗುವಾ ಇದಾಗಲೇ ಚೋಕ್ಸಿ ತನ್ನ ನಾಗರಿಕ  ಎಂದು …

Read More »

ನಲಪಾಡ್ ಫಾರಿನ್ ಕನಸಿಗೆ ಹೈಕೋರ್ಟ್ ತಡೆ

ಲಂಡನ್​ಗೆ ಹೋಗಬೇಕು ಎನ್ನುವುದಾದರೆ ಸೆಷನ್ಸ್ ನ್ಯಾಯಾಲಯದಲ್ಲೇ ಅನುಮತಿ ಕೇಳುವಂತೆ ಹೈಕೋರ್ಟ್​ನ ಏಕಸದಸ್ಯ ಪೀಠ ನಲಪಾಡ್’ಗೆ ಸೂಚನೆ ನೀಡಿದೆ. ಬೆಂಗಳೂರು: ಶಾಸಕ ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ವಿದೇಶಕ್ಕೆ ತೆರಳಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.  ಉದ್ಯಮಿ ಪುತ್ರ ವಿದ್ವತ್ ಮೇಲಿನ ಹಲ್ಲೆ ಪ್ರಕರಣದ ಆರೋಪಿಯಾಗಿರುವ ಮೊಹಮದ್ ನಲಪಾಡ್​ ಲಂಡನ್ನಿನಲ್ಲಿರುವ ತನ್ನ ಸಹೋದರರನ್ನು ಭೇಟಿ ಮಾಡಲು ಅವಕಾಶ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇಂದು ಆ ಅರ್ಜಿ ವಿಚಾರಣೆ …

Read More »