Breaking News

Shaikh BIG TV NEWS, Hubballi

ಬೈಕ್​ ಕದಿಯುತ್ತಿದ್ದ ಸೈಕೋ ಪದವೀಧರನ ಬಂಧನ: ಕಂಟ್ರಿ ಪಿಸ್ತೂಲ್​ ವಶ

ಭಗ್ನ ಪ್ರೇಮಿಯಾಗಿ ಸೈಕೋ ಆಗಿದ್ದ ಇಂಜಿನಿಯರ್​ ವಿದ್ಯಾರ್ಥಿ ಬೈಕ್​ ಕಳವು ಮಾಡುತ್ತಿದ್ದಾಗ ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ. ನಾಗರಬಾವಿ ನಿವಾಸಿಯಾಗಿರುವ ಶರತ್ ಬಂಧಿತ. ಈತನನ್ನು ಬಂಧಿಸಿದ ಪೊಲೀಸರು ರಾಯಲ್ ಎನ್​ಫೀಲ್ಡ್​ ಸೇರಿ ಒಟ್ಟು 9 ಲಕ್ಷ ರೂ.ಮೌಲ್ಯದ 10 ಬೈಕ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಒಂದು ಕಂಟ್ರಿಮೇಡ್ ಪಿಸ್ತೂಲ್​ ಕೂಡ ಜಪ್ತಿ ಮಾಡಿದ್ದಾರೆ.

Read More »

ಜಿಲ್ಲೆಗೊಂದು ಷರಿಯತ್ ನ್ಯಾಯಾಲಯ ಆರಂಭ?

ನವದೆಹಲಿ: ಸಮಾನ ನಾಗರಿಕ ಸಂಹಿತೆ ಜಾರಿಗೆ ಸಂಬಂಧಿಸಿದಂತೆ ದೇಶಾದ್ಯಂತ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಪ್ರತಿ ಜಿಲ್ಲೆಯಲ್ಲೂ ಷರಿಯತ್ (ಮುಸ್ಲಿಂ ವೈಯಕ್ತಿಕ ಕಾನೂನು) ಕೋರ್ಟ್​ಗಳನ್ನು ಸ್ಥಾಪಿಸಲು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್​ಬಿ) ಚಿಂತನೆ ನಡೆಸಿದೆ. ‘ದರುಲ್-ಖ್ವಾಜಾ’ ಎಂದು ಕರೆಯಲಾಗುವ ಈ ಸಾಂಪ್ರದಾಯಿಕ ಕೋರ್ಟ್​ಗಳು ಮುಸ್ಲಿಂ ವೈಯಕ್ತಿಕ ಕಾನೂನಿನಡಿ ತಕರಾರುಗಳನ್ನು ಬಗೆಹರಿಸಲಿವೆ. ಜುಲೈ 15ರಂದು ದೆಹಲಿಯಲ್ಲಿ ನಡೆಯಲಿರುವ ಎಐಎಂಪಿಎಲ್​ಬಿ ಸಭೆಯಲ್ಲಿ ಪ್ರತಿ ಜಿಲ್ಲೆಯಲ್ಲೂ ಷರಿಯತ್ ಕೋರ್ಟ್ ತೆರೆಯುವ ಬಗ್ಗೆ …

Read More »

ಮಗಳಿಂದ ಬದಲಾದೆ ಎಂದ ಧೋನಿ

ಮುಂಬೈ: ವ್ಯಕ್ತಿಯಾಗಿ ಮಗಳಿಂದ ಸಾಕಷ್ಟು ಕಲಿತಿರುವೆ. ನನಗೆ ಗೊತ್ತಿಲ್ಲದಂತೆ ಬದಲಾಗುತ್ತಿದ್ದೇನೆ ಎನಿಸುತ್ತಿದೆ ಎಂದು ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ, ಮಗಳು ಝಿವಾ ಕುರಿತು ಹೇಳಿಕೊಂಡಿದ್ದಾರೆ. ಹೆಣ್ಣುಮಕ್ಕಳು ಸಹಜವಾಗಿ ತಂದೆಗೆ ತುಂಬ ಹತ್ತಿರವಾಗುತ್ತಾರೆ. ಮಗಳಿಂದ ನಾನಂತೂ ಬದಲಾಗುತ್ತಿದ್ದೇನೆ. ಅದು ವ್ಯಕ್ತಿಯಾಗಿಯೋ ಅಥವಾ ಕ್ರಿಕೆಟಿಗನಾಗಿಯೋ ಗೊತ್ತಿಲ್ಲ ಎಂದಿದ್ದಾರೆ. ‘ಮನೆಯಲ್ಲಿ ಊಟ ಮಾಡದೆ ಕುಳಿತು, ಪಪ್ಪಾ ಬಂದು ಊಟ ಮಾಡಿಸಲಿ’ ಎನ್ನುತ್ತಾಳೆ. ತಪು್ಪ ಮಾಡಿದಾಗ ಪಪ್ಪಾ ಬರುತ್ತಾರೆ, ಈ ರೀತಿ ಮಾಡಬೇಡ …

Read More »

ಮನ್ನಾ ಅಸ್ಪಷ್ಟ, ಸವಾಲಿನ ಸಂಕಷ್ಟ

ಬೆಂಗಳೂರು: ಚೊಚ್ಚಲ ಬಜೆಟ್​ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿರುವ ಸಾಲಮನ್ನಾ ಘೋಷಣೆಯ ಒಳಮರ್ಮಕ್ಕೆ ಆರ್ಥಿಕ ತಜ್ಞರೇ ತಬ್ಬಿಬ್ಬಾಗಿದ್ದಾರೆ! ಸಾಲಮನ್ನಾದ 34 ಸಾವಿರ ಕೋಟಿ ರೂ.ಗಳ ಹೊರೆ ಇಳಿಸಿಕೊಳ್ಳುವುದಕ್ಕೆ ಅಗತ್ಯವಾದ ಸಂಪನ್ಮೂಲ ಕ್ರೋಡೀಕರಣದ ಬಗ್ಗೆ ಸ್ಪಷ್ಟತೆ ಇಲ್ಲವೆಂಬುದು ಒಂದಾದರೆ, ಮನ್ನಾ ಜಾರಿಗೆ ಬ್ಯಾಂಕ್​ಗಳ ಸಮ್ಮತಿ ದೊರೆಯುವುದೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಹಾಗೂ ಹೀಗೂ ಘೋಷಣೆ ಅನುಷ್ಠಾನಗೊಂಡಿದ್ದೇ ಆದಲ್ಲಿ ರಾಜ್ಯ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಆತಂಕವೂ ಕಾಡಲಾರಂಭಿಸಿದೆ. ರಾಜ್ಯದ 40 ಲಕ್ಷ ರೈತರಿಗೆ …

Read More »

ಜಮ್ಮು-ಕಾಶ್ಮೀರದಲ್ಲಿ ಕಲ್ಲು ತೂರಾಟಗಾರರ ಮೇಲೆ ಫೈರಿಂಗ್‌: ಬಾಲಕಿ ಸೇರಿ ಮೂವರು ಸಾವು

ಶ್ರೀನಗರ: ಭದ್ರತಾ ಪಡೆ ನಡೆಸಿದ ಗುಂಡಿನ ದಾಳಿಗೆ 16 ವರ್ಷದ ಬಾಲಕಿ ಸೇರಿ ಮೂವರು ಮೃತಪಟ್ಟಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯಲ್ಲಿ ಶನಿವಾರ ನಡೆದಿದೆ. ದಕ್ಷಿಣ ಕಾಶ್ಮೀರದ ಕುಲ್ಗಾಮ್‌ನ ರೆಡ್ವಾನಿ ಪ್ರದೇಶದಲ್ಲಿ ಸೇನಾ ಗಸ್ತಿನ ಮೇಲೆ ಪ್ರತಿಭಟನಾಕಾರರು ದಾಳಿಗೆ ಮುಂದಾದಾಗ ಭದ್ರತಾ ಪಡೆಗಳು ಗುಂಡು ಹಾರಿಸಿವೆ ಎಂದು ವರದಿಗಳು ತಿಳಿಸಿವೆ. ಈ ವೇಳೆ ಕುಲ್ಗಾಮ್‌ನ ಹಾವೂರಾದ ನಿವಾಸಿಗಳಾದ ಶಕೀರ್‌ ಅಹ್ಮದ್‌(22), ಇರ್ಶಾದ್‌ ಮಜೀದ್‌(20) ಮತ್ತು 16 ವರ್ಷದ …

Read More »

ಕಾನ್​ಸ್ಟೆಬಲ್ ಅಪಹರಿಸಿ ಹತ್ಯೆಮಾಡಿದ ಉಗ್ರರು

ಶ್ರೀನಗರ: ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ವೆಹಿಲ್ ಚಟ್ವಾಟನ್​ನಲ್ಲಿ ಪೊಲೀಸ್ ಕಾನ್​ಸ್ಟೆಬಲ್ ಒಬ್ಬರನ್ನು ಅಪಹರಿಸಿ ಕೊಲೆ ಮಾಡಲಾಗಿದೆ. ಔಷಧ ತರಲು ಮಳಿಗೆಗೆ ಹೋಗಿದ್ದ ಜಾವೇದ್ ಅಹಮ್ಮದ್ ದರ್ (27) ಅವರನ್ನು ಕೆಲ ದಿನಗಳ ಹಿಂದೆ ಉಗ್ರರು ಅಪಹರಣ ಮಾಡಿದ್ದರು. ಅವರ ಮೃತ ದೇಹ ಶೋಪಿಯಾನ್ ಹೊರ ವಲಯ ಪರಿವಾನ್​ನಲ್ಲಿ ಪತ್ತೆಯಾಗಿದೆ. ತೀವ್ರ ಹಿಂಸೆ ನೀಡಿ, ಬಳಿಕ ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಜಾವೇದ್ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಾಲಿಂದರ್ ಮಿಶ್ರಾ ಅವರ ಭದ್ರತಾ …

Read More »

ಬಿಗ್ ಟಿವಿ ನ್ಯೂಸ್ ಗೆ ಸ್ವಾಗತ

ಸುದ್ದಿ ಪ್ರಸ್ತುತ ಘಟನೆಗಳ ಬಗ್ಗೆ ಮಾಹಿತಿಯಾಗಿದೆ. ಅನೇಕ ವಿವಿಧ ಮಾಧ್ಯಮಗಳ ಮೂಲಕ ಸುದ್ದಿಗಳನ್ನು ಒದಗಿಸಲಾಗುತ್ತದೆ: ಬಾಯಿ, ಮುದ್ರಣ, ಅಂಚೆ ವ್ಯವಸ್ಥೆಗಳು, ಪ್ರಸಾರ, ವಿದ್ಯುನ್ಮಾನ ಸಂವಹನ ಮತ್ತು ಘಟನೆಗಳಿಗೆ ವೀಕ್ಷಕರು ಮತ್ತು ಸಾಕ್ಷಿಗಳ ಸಾಕ್ಷ್ಯದ ಬಗ್ಗೆ. ಜನಸಂಖ್ಯೆಯ ಅಭಿಪ್ರಾಯವನ್ನು ತಯಾರಿಸಲು ಇದು ಒಂದು ವೇದಿಕೆಯಾಗಿಯೂ ಸಹ ಬಳಸಲಾಗುತ್ತದೆ.

Read More »

ಪಾಕ್​ ಮಾಜಿ ಪ್ರಧಾನಿ ನವಾಜ್​ ಷರೀಫ್​ಗೆ 10 ವರ್ಷ ಜೈಲು ಶಿಕ್ಷೆ

ಇಸ್ಲಾಮಾಬಾದ್​: ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗಿ ಪ್ರಧಾನಿ ಹುದ್ದೆ ಕಳೆದುಕೊಂಡಿರುವ ಪಾಕಿಸ್ತಾನದ ನವಾಜ್ ಷರೀಫ್​ಗೆ ಪಾಕಿಸ್ತಾನದ ಕೋರ್ಟ್​ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಪಾಕಿಸ್ತಾನದ ರಾಷ್ಟ್ರೀಯ ಹೊಣೆಗಾರಿಕೆ ಸಂಸ್ಥೆ (ಎನ್​ಎಬಿ) ನ್ಯಾಯಾಲಯ ಲಂಡನ್​ನ ಎವೆನ್​ಫೀಲ್ಡ್ ಪ್ರಾಪರ್ಟೀಸ್ ಭ್ರಷ್ಟಾಚಾರ ಪ್ರಕರಣದಲ್ಲಿ ತನ್ನ ತೀರ್ಪು ಪ್ರಕಟಿಸಿದೆ. ಪನಾಮ ಪೇಪರ್ಸ್​ ಹಗರಣ ಬೆಳಕಿಗೆ ಬಂದ ನಂತರ ನವಾಜ್​ ಷರೀಫ್​ ವಿರುದ್ಧ ಒಟ್ಟು ​ಮೂರು ಭ್ರಷ್ಟಾಚಾರ ಪ್ರಕರಣನ್ನು ದಾಖಲಿಸಲಾಗಿತ್ತು. ಅದರಲ್ಲಿ 1 ಪ್ರಕರಣದ …

Read More »

ಕಲಾಪಕ್ಕೇ ಸಚಿವರ ಚಕ್ಕರ್, ಸಿಟ್ಟಾದ ಸ್ಪೀಕರ್

ಬೆಂಗಳೂರು: ಸರ್ಕಾರಿ ಕಾರ್ಯಕಲಾಪದಲ್ಲಿ ಪಾಲ್ಗೊಳ್ಳದ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸ್ಪೀಕರ್ ರಮೇಶ್​ಕುಮಾರ್, ಮುಂದೆ ಈ ರೀತಿಯಾದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಪೂರ್ವನಿಗದಿಯಂತೆ ಕಲಾಪ ಆರಂಭದಲ್ಲಿ ಉಪಸಭಾಪತಿ ಆಯ್ಕೆ ಪ್ರಕ್ರಿಯೆ ನಡೆಯಿತು. ಬಳಿಕ ಸಚಿವರು ಕಾಗದ ಪತ್ರಗಳನ್ನು ಮಂಡಿಸಬೇಕಿತ್ತು. ಎಂದಿನಂತೆ ಸಚಿವರ ಗೈರು ಎದ್ದು ಕಂಡಿತಲ್ಲದೆ, ಕಾನೂನು-ಸಂಸದೀಯ ಸಚಿವ ಕೃಷ್ಣಬೈರೇಗೌಡ ಅವರು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಪರ ಕಾಗದ ಪತ್ರ ಮಂಡಿಸಲು ಅನುವಾದರು. ಇದರಿಂದ ಸಿಟ್ಟಾದ ಸ್ಪೀಕರ್ …

Read More »

ಉಚಿತ ಬಸ್‌ಗಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್‌

ತುಮಕೂರು: ಉಚಿತ ಬಸ್‌ ಪಾಸ್‌ಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಎಬಿವಿಪಿ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಟಿ ಚಾರ್ಜ್‌ ಮಾಡಿದ್ದಾರೆ.rnrnನಗರದ ಶಿವಕುಮಾರ ಸ್ವಾಮೀಜಿ ಸರ್ಕಲ್‌ನಲ್ಲಿ ರಸ್ತೆ ತಡೆ ನಡೆಸಲು ಮುಂದಾದ ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದ್ದಾರೆ.rnrnಈ ವೇಳೆ ರಸ್ತೆಯಲ್ಲಿ ಬಿದ್ದ ವಿದ್ಯಾರ್ಥಿನಿಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸಿಪಿಐ ಚಂದ್ರಶೇಖರ್ ವಿದ್ಯಾರ್ಥಿಗಳ ಮೇಲೆ ಮುಗಿಬಿದ್ದು ಲಾಠಿ ಚಾರ್ಜ್‌ ಮಾಡಿದ್ದಾರೆ.rnrnತಣ್ಣಗಿದ್ದ ಎಸ್‌ಎಸ್‌ ಸರ್ಕಲ್‌ ಕೆಲಹೊತ್ತಿನಲ್ಲೇ ರಣಾಂಗಣವಾಗಿ ಬದಲಾಯಿತು.

Read More »