Breaking News

Shaikh BIG TV NEWS, Hubballi

ಏರೋ ಇಂಡಿಯಾ: ವಾಹನ ಕಳೆದುಕೊಂಡವರಿಗೆ ಅಗತ್ಯ ನೆರವು ನೀಡಲು ನಿರ್ಧಾರ

ಬೆಂಗಳೂರು: ಭಾನುವಾರ ಮುಕ್ತಾಯಗೊಂಡ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಕುರಿತು ಪರಾಮರ್ಶೆ ನಡೆಸಲು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು.ಕೇಂದ್ರ ರಕ್ಷಣಾ ಸಚಿವರಾದ ನಿರ್ಮಲಾ ಸೀತಾರಾಮನ್, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಗೃಹ ಸಚಿವ ಎಂ. ಬಿ. ಪಾಟೀಲ್ ಈ ಕಾರ್ಯಕ್ರಮದ ಕುರಿತು ಕೂಲಂಕಷವಾಗಿ ಚರ್ಚಿಸಿದರು.ಬೆಂಗಳೂರಿನಿಂದ ಈ ಕಾರ್ಯಕ್ರಮ ಸ್ಥಳಾಂತರವಾಗುವ ಕುರಿತು ಪುಕಾರುಗಳು ಹಬ್ಬಿದ್ದರೂ ಬೆಂಗಳೂರಿನಲ್ಲಿಯೇ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ರಕ್ಷಣಾ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು. ಮುಂದಿನ …

Read More »

ಮಾತು ಮಾತಿಗೂ ಎಕ್ಕಡ ಅಂತಿದ್ದ ಹುಚ್ಚ ವೆಂಕಟ್​​, ಚೆನ್ನೈನ ಬೀದಿಯಲ್ಲಿ ಹೀಗೆ ಓಡಾಡ್ತಿರೋದು ಯಾಕೆ?

ಚೆನ್ನೈ, ತಮಿಳುನಾಡು: ನನ್‌ ಮಗಂದ್‌..ನನ್‌ ಎಕ್ಕಡ.. ಹೀಗೆ ಮಾತ್‌ ಮಾತಿಗೂ ಡೈಲಾಗ್‌ ಹೇಳಿ ಎಲ್ಲೆಡೆ ಜೋರು ಸುದ್ದಿಯಾಗಿದ್ದ ಹುಚ್ಚವೆಂಕಟ್‌ ಇದೀಗ ಚಪ್ಪಲಿಯೇ ಇಲ್ಲದೆ ​ ಚನ್ನೈ ನಲ್ಲಿ ಬರಿಗಾಲಿನಲ್ಲಿ ಅಲೆದಾಡುತ್ತಿರುವ ಪೋಟೊ ಒಂದು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ. ಆರ್ ಆರ್ ನಗರದ ಎಲೆಕ್ಷನ್ ನಲ್ಲಿ ಚಪ್ಪಲಿ ಗುರುತು ಪಡೆದಿದ್ದ ವೆಂಕಟ್, ಇತ್ತಿಚೇಗಷ್ಟೇ ದುರಹಂಕಾರಿ ಹುಚ್ವ ವೆಂಕಟ್ ಚಿತ್ರದ ಪ್ರೋಮೊ ರಿಲೀಸ್ ಮಾಡಿ ಸಿನಿಮಾ ಮಾಡ್ತಿರುವುದಾಗಿ ಕೂಡ ಹೇಳಿಕೊಂಡಿದ್ರು. ಆದ್ರೀಗ …

Read More »

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಬಿಎಸ್​ವೈ-ಸಿದ್ದರಾಮಯ್ಯ ಆಕಸ್ಮಿಕ ಭೇಟಿ

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಂದು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಬಿ.ಎಸ್. ಯಡಿಯೂರಪ್ಪ ಆಕಸ್ಮಿಕವಾಗಿ ಭೇಟಿಯಾದರು. ಈ ಸಂದರ್ಭದಲ್ಲಿ ಕೈಕುಲುಕಿ ಆತ್ಮೀಯವಾಗಿ ಪರಸ್ಪರ ಕುಶಲೋಪರಿ ವಿಚಾರಿಸಿದ್ದಾರೆ.ಬೆಳಗಾವಿ ಪ್ರವಾಸದಲ್ಲಿರುವ ಸಿದ್ದರಾಮಯ್ಯ ವಿಮಾನದ ಮೂಲಕ ಹುಬ್ಬಳ್ಳಿಗೆ ತೆರಳಿದ್ದಾರೆ. ಇನ್ನು ರಾಜ್ಯಾದ್ಯಂತ ವಿಜಯ ಸಂಕಲ್ಪ ಯಾತ್ರೆ ನಡೆಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕೂಡಾ ಅದೇ ವಿಮಾನದಲ್ಲಿ ಹುಬ್ಬಳ್ಳಿಗೆ ಬಂದಿಳಿದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಭೇಟಿಯಾದ ಉಭಯ ನಾಯಕರು ಪರಸ್ಪರ ಮಾತನಾಡಿ, ಕುಶಲೋಪರಿ ವಿಚಾರಿಸಿದರು.ರಾಜಕೀಯ ಜೀವನದ …

Read More »

ಉಗ್ರರಿಗೆ ಪಾಠ ಕಲಿಸುತ್ತೇವೆ: ನಮೋ ಮನ್​ ಕಿ ಬಾತ್​..

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಈ ಬಾರಿಯ ಕೊನೆಯ ಹಾಗೂ 53ನೇ ಆವೃತ್ತಿಯ ಮನ್​​ ಕೀ ಬಾತ್​​ನಲ್ಲಿ ಮಾತನಾಡಿದರು. ಈ ವೇಳೆ ಫೆಬ್ರವರಿ 14 ರಂದು ಪುಲ್ವಾಮಾದ ಉಗ್ರರ ದಾಳಿಯನ್ನ ಪ್ರಸ್ತಾಪಿಸಿದ ಪ್ರಧಾನಿ, ‘ಈ ಬಾರಿಯ ಮನ್​ ಕೀ ಬಾತ್​ ಅನ್ನ ಬಾರೀ ದುಃಖದಿಂದ ಆರಂಭಿಸುತ್ತಿದ್ದೇನೆ. ಉಗ್ರರ ಪೈಶಾಚಿಕ ಕೃತ್ಯದಿಂದಾಗಿ 40 ಯೋಧರನ್ನ ಕಳೆದುಕೊಂಡಿದ್ದೇವೆ. ದಾಳಿ ನಡೆಸಿದ 100 ಗಂಟೆಯೊಳಗೆ ಉಗ್ರರಿಗೆ ತಕ್ಕ ಉತ್ತರ ನೀಡಲಾಗಿದೆ. ನಮ್ಮ ಯೋಧರಿಗೆ ನಾನು …

Read More »

ಬಂಡೀಪುರದಲ್ಲಿ ಕಾಡ್ಗಿಚ್ಚು: ಸುಟ್ಟು ಕರಕಲಾದ ಸಾವಿರಾರು ಎಕರೆ ಅರಣ್ಯ!

ಗುಂಡ್ಲುಪೇಟೆ: ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಅಭಯಾರಣ್ಯದಲ್ಲಿ ಕಳೆದ ಎರಡು ದಿನಗಳ ಹಿಂದೆ ಸಾಮಾನ್ಯವಾಗಿ ಕಾಣಿಸಿಕೊಂಡಿದ್ದ ಕಾಡ್ಗಿಚ್ಚು, ಇದೀಗ ಸಾವಿರಾರು ಎಕರೆ ಅರಣ್ಯ ಪ್ರದೇಶವನ್ನು ಆಹುತಿಗೆ ತೆಗೆದುಕೊಂಡಿದೆ. ಹೀಗಾಗಿ ಇನ್ನೂ ಒಂದು ವಾರಗಳ ಕಾಲ ಸಫಾರಿ ಬಂದ್ ಮಾಡಲಾಗಿದೆ.ಶನಿವಾರ ರಾತ್ರಿ ಅತಿ ವೇಗವಾಗಿ ಗಾಳಿ ಬೀಸಿದ್ದರಿಂದ ಹುಲಿ ಸಂರಕ್ಷಿತ ಪ್ರದೇಶದವರೆಗೂ ಬೆಂಕಿ ವ್ಯಾಪಿಸಿದ್ದು, ಅರಣ್ಯ ಇಲಾಖೆ ಸಿಬ್ಬಂದಿ, ಸ್ವಯಂ ಸೇವಕರು ಹಾಗೂ ಅಗ್ನಿ ಶಾಮಕದಳದವರು ಬೆಂಕಿ ನಂದಿಸಲು ಎಷ್ಟೇ …

Read More »

ಒಟ್ಟು 300 ಕಾರು ಭಸ್ಮ, ಏರ್​ ಶೋ ಸ್ಥಳಕ್ಕೆ ಆಯುಕ್ತ ಸುನಿಲ್​ ಕುಮಾರ್ ಭೇಟಿ.

ಬೆಂಗಳೂರು: ಯಲಹಂಕ ವಾಯುನೆಲೆ ಏರ್​ ಶೋ ಗೇಟ್​ ನಂ. 5ರಲ್ಲಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ150ಕ್ಕೂ ಹೆಚ್ಚು ಕಾರುಗಳು ಬೆಂಕಿಗಾಹುತಿಯಾಗಿವೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್​ ಆಯುಕ್ತ ಟಿ. ಸುನಿಲ್​ ಕುಮಾರ್ ಹಾಗೂ ಹೆಚ್ಚುವರಿ ಪೊಲೀಸ್​​ ಆಯುಕ್ತ ಸೀಮಂತ್​ ಕುಮಾರ್​ ಸಿಂಗ್​​​ ಸ್ಥಳಕ್ಕೆ ಭೇಟಿ ನೀಡಿದರು.ಒಟ್ಟು 50×6 ಕಾರು ಭಸ್ಮಏರ್​ಶೋ ಗೇಟ್​ ನಂ. 5 ಕ್ಕೆ ಭೇಟಿ ನೀಡಿದ ಪೊಲೀಸ್​ ಅಧಿಕಾರಿಗಳು ಕಾರು ಮಾಲೀಕರ ಜೊತೆ ಮಾತುಕತೆ ನಡೆಸಿದರು. ಕಾರಿನಲ್ಲಿ …

Read More »

ಅಸ್ಸಾಂ ಕಳ್ಳಭಟ್ಟಿ ದುರಂತ: 80 ಸಾವು, 200ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು..

ಗುವಾಹಟಿ: ಗೋಲಾಘಾಟ್ ಮತ್ತು ಜೋರ್ಹತ್ ಜಿಲ್ಲೆಗಳಲ್ಲಿ ಚಹಾ ತೋಟದಲ್ಲಿ ಕೆಲಸ ಮಾಡುವ ಕೆಲಸಗಾರರು ಕಳ್ಳಭಟ್ಟಿ ಮದ್ಯವನ್ನು ಸೇವಿಸಿ ಈವರೆಗೂ 80 ಮಂದಿ ಮೃತಪಟ್ಟಿದ್ದಾರೆ. 200ಕ್ಕೂ ಹೆಚ್ಚು ಮಂದಿ ಇನ್ನೂ ನಿರ್ಣಾಯಕ ಸ್ಥಿತಿಯಲ್ಲಿದ್ದು ಅವರನ್ನು ಜೋರ್ಹತ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಸ್ಸಾಂ ಆರೋಗ್ಯ ಇಲಾಖೆ ಶನಿವಾರ ದೃಢಪಡಿಸಿದೆ.ಈ ದುರಂತದಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ ತೀವ್ರವಾಗಿ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಸುದ್ದಿ ಸಂಸ್ಥೆ ಪಿಟಿಐಗೆ …

Read More »

ಚುನಾವಣಾ ಆಯೋಗದ ಆದೇಶ: ರಾಜ್ಯದಲ್ಲಿ 354 ಇನ್ಸ್​ಪೆಕ್ಟರ್​​ಗಳ ವರ್ಗಾವಣೆ.

ಬೆಂಗಳೂರು,ಫೆ.23- ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಹಿಂದೆಂದೂಕ ಕಾಣದಂತೆ ಪೊಲೀಸ್ ಇನ್‍ಸ್ಪೆಕ್ಟರ್‍ಗಳ ಭಾರೀ ವರ್ಗಾವಣೆ ಪಟ್ಟಿ ಹೊರಬಿದ್ದಿದೆ.ರಾಜ್ಯಾದ್ಯಂತ 354 ಇನ್‍ಸ್ಪೆಕ್ಟರ್‍ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಇದಕ್ಕೆ ಕೇಂದ್ರ ಚುನಾವಣಾ ಆಯೋಗದ ಅನುಮತಿ ಪಡೆಯಲಾಗಿದೆ ಎಂದು ವರ್ಗಾವಣೆಯ ಆದೇಶದಲ್ಲಿ ತಿಳಿಸಲಾಗಿದೆ.ಪ್ರಮುಖವಾಗಿ ಬೆಂಗಳೂರಿನ ಬಹುತೇಕ ಪೊಲೀಸ್ ಠಾಣೆಗಳ ಇನ್‍ಸ್ಪೆಕ್ಟರ್‍ಗಳು ವರ್ಗಾವಣೆಯಾಗಿದ್ದು, ಕೆಲವರು ಸಿಐಡಿ, ಗುಪ್ತಚರ ಹಾಗೂ ಬೇರೆ ಜಿಲ್ಲೆಗಳಿಗೆ ವರ್ಗಾವಣೆಗೊಂಡಿದ್ದಾರೆ.ಸಂಚಾರಿ ಹಾಗೂ ಕಾನೂನು ಸುವ್ಯವಸ್ಥೆ ವಿಭಾಗಗಳಲ್ಲೂ ಇನ್‍ಸ್ಪೆಕ್ಟರ್‍ಗಳು ವರ್ಗಾವಣೆಯಾಗಿದ್ದು, ಕೂಡಲೇ …

Read More »

ಜ್ಯೂನಿಯರ್ ವಿಷ್ಣು ಹೃದಯ ಶಸ್ತ್ರಚಿಕಿತ್ಸೆಗೆ ಸಹಾಯ ಹಸ್ತ

ಹುಬ್ಬಳ್ಳಿ: ಖ್ಯಾತ ಡಾ.ವಿಷ್ಣುವರ್ಧನ್ ಅವರ ಜ್ಯೂನಿಯರ್ ವಿಷ್ಣುವರ್ಧನ್ ಎಂದೇ ಖ್ಯಾತ ರಾದ ಎಂ.ಡಿ.ಅಲಿ ಅವರ ಹೃದಯ ಶಸ್ತ್ರ ಚಿಕಿತ್ಸೆಯ ಸಹಾಯಕ್ಕಾಗಿ ರಾಜ್ ವಿಷ್ಣು ಸವಿನೆನಪು ಕಾರ್ಯಕ್ರಮವನ್ನು ಇಲ್ಲಿನ ನ್ಯೂ ಕಾಟನ್ ಮಾರ್ಕೆಟ್ ನ ಸಾಂಸ್ಕೃತಿಕ ಭವನದಲ್ಲಿ ಫೆ.೨೬ ರಂದು ಸಂಜೆ ೬:೩೦ ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಹಜರತಲಿ ದೊಡ್ಡಮನಿ ಹೇಳಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ್ಯೂನಿಯರ್ ವಿಷ್ಣುವರ್ಧನ್ ಎಂದೇ ಖ್ಯಾತರಾದ ಎಂ.ಡಿ.ಅಲಿ ಕಳೆದ ೩೫ ವರ್ಷಗಳಿಂದ ವಿಷ್ಣುವರ್ಧನ್ ಅವರ ವೇಷಭೂಷಣ …

Read More »

ನಾಳೆ ಚಾಂಪಿಯನ್ 11 ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಪ್ರಾರಂಭೋತ್ಸವ ..

ಹುಬ್ಬಳ್ಳಿ: ಚಾಂಪಿಯನ್ 11 ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ನ ಉದ್ಘಾಟನೆಯನ್ನು ನಗರದ ಗೋಕುಲ ರಸ್ತೆಯ ಡೆನಿಸನ್ ಹೋಟೆಲ್ ನ ಮಥುರಾ ಹಾಲ್‌ನಲ್ಲಿ ಇದೇ 24 ರಂದು ಸಂಜೆ. 5.30 ಕ್ಕೆ ಆಯೋಜಿಸಲಾಗಿದೆ ಎಂದು ಡಿ.ಬಿ.ಡಂಬಳ ಅವರು ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಉದ್ಯಮಿ ಸಿದ್ದಾರ್ಥ ಡಂಬಳ ಅವರು ಸ್ಟಾರ್ಟ್ ಅಪ್ ಮಾದರಿಯಲ್ಲಿ ಚಾಂಪಿಯನ್ಸ 11 ಎಂಟರ್ಟೈನ್ಮೆಂಟ್ ಪ್ರೈ. ಲಿಮಿಟೆಡ್‌ ಕಂಪನಿಯನ್ನು 2018 ರಲ್ಲಿ ಪ್ರಾರಂಭಿಸಿದ್ದು,ಉತ್ತರ ಕರ್ನಾಟಕ ಕ್ರಿಕೆಟ್ ಆಟಗಾರರು …

Read More »