Breaking News

Shaikh BIG TV NEWS, Hubballi

ಕಾಶ್ಮೀರ್ :ಎನ್ಕೌಂಟರ್ ದಾಳಿಯಲ್ಲಿ ಇಬ್ಬರು ಉಗ್ರರ ಹತ್ಯೆ

ನವದೆಹಲಿ: ದಕ್ಷಿಣ ಕಾಶ್ಮೀರದ ಅನಂತ್ ನಾಗ್ ನ ಕಾಜ್ವಾನ್ ಅರಣ್ಯ ಪ್ರದೇಶ ಖುಂಡ್ರು ಬಳಿ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಎನ್ಕೌಂಟರ್ ಮೂಲಕ ಹತ್ಯೆಗೈದಿದ್ದಾರೆ. ಆದರೆ ಇದುವರೆಗೂ ಉಗ್ರರ ಮೃತದೇಹಗಳನ್ನು ವಶಪಡಿಸಿಕೊಂಡಿಲ್ಲವೆನ್ನಲಾಗಿದೆ. ಈ ಪ್ರದೇಶದಲ್ಲಿ ಇನ್ನು ಅಧಿಕ ಉಗ್ರರು ಸೇರೆ ಸಿಕ್ಕಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.ಅನಂತ್ ನಾಗ್ ಜಿಲ್ಲೆಯ ಕೊಕರ್ನಾಗ್ ಕಚ್ವಾನ್ ಅರಣ್ಯ ಪ್ರದೇಶದಲ್ಲಿ ಉಗ್ರಗಾಮಿಗಳು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯಿತು “ಎಂದು ಪೊಲೀಸರು …

Read More »

ಲವ್ ಬಗ್ಗೆ ಕೊನೆಗೂ ಮೌನ ಮುರಿದ ಅರ್ಜುನ್ ಕಪೂರ್ -ಮಲೈಕಾ ಜೋಡಿ

ನವದೆಹಲಿ: ಬಾಲಿವುಡ್ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಊಹಾಪೋಹಕ್ಕೆ ಕಾರಣವಾದ ಜೋಡಿ ಎಂದರೆ ಅದು ಅರ್ಜುನ್ ಕಪೂರ್ -ಮಲೈಕಾ ಆರೋರಾ ಜೋಡಿ. ಆಗಾಗ ಪಾರ್ಟಿ, ವಿದೇಶಿ ಪ್ರವಾಸ, ಅವಾರ್ಡ್ ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ, ಈಗ ತಮ್ಮ ಪ್ರೀತಿಯ ವಿಚಾರವಾಗಿ ಮೌನ ಮುರಿದಿದೆ. ಅರ್ಜುನ್ ಕಪೂರ್ ಅವರ ಬಹುನಿರೀಕ್ಷಿತ ಚಿತ್ರ ಇಂಡಿಯಾಸ್ ಮೋಸ್ಟ್ ವಾಂಟೆಡ್’ ಚಿತ್ರದ ಸ್ಕ್ರೀನಿಂಗ್ ಗಳಲ್ಲಿ ನಿರಂತರವಾಗಿ ಭಾಗವಹಿಸಿ ಕೊನೆಗೂ ತಮ್ಮ ಲವ್ ಸಮಾಚಾರವನ್ನು ಅಧಿಕೃತವಾಗಿ …

Read More »

ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ಐವರ ದುರ್ಮರಣ

ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ಐವರ ದುರ್ಮರಣಯಲಹಂಕದ ಕೋಗಿಲು ಕ್ರಾಸ್ ಬಳಿ ತಡರಾತ್ರಿ 12:30ರ ಸುಮಾರಿಗೆ ಆ್ಯಂಬುಲೆನ್ಸ್ ಹಾಗೂ ವ್ಯಾಗನಾರ್ ಕಾರ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.ಬೆಂಗಳೂರು: ನಗರದಲ್ಲಿ ಭಾನುವಾರ ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.ಯಲಹಂಕದ ಕೋಗಿಲು ಕ್ರಾಸ್ ಬಳಿ ತಡರಾತ್ರಿ 12:30ರ ಸುಮಾರಿಗೆ ಆ್ಯಂಬುಲೆನ್ಸ್ ಹಾಗೂ ವ್ಯಾಗನಾರ್ ಕಾರ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಐವರೂ …

Read More »

ಮೋದಿ ಸರ್ಕಾರ ಪಾರ್ಟ್​-2 ಯಾರಿಗೆ ಒಲಿಯಲಿದೆ ಸಚಿವ ಸ್ಥಾನ…?

ಪ್ರಚಂಡ ಬಹುಮತ ಪಡೆದು ಮತ್ತೊಮ್ಮೆ ಕೇಂದ್ರದಲ್ಲಿ ಸರ್ಕಾರ ರಚಿಸೋಕೆ ಹೊರಟಿರುವ ಪ್ರಧಾನಿ ಮೋದಿ ಇದೇ ತಿಂಗಳ 30ರ ಸಂಜೆ 7 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ಎರಡನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮೋದಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಮೋದಿಯ ಪಾರ್ಟ್​-2 ಸರ್ಕಾರದಲ್ಲಿ ಯಾರಿಗೆ ಅವಕಾಶ ಸಿಗಲಿದೆ..? ಯಾರು ಮೋದಿ ಸರ್ಕಾರದಲ್ಲಿ ಕೆಲಸ ಮಾಡೋ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ ಅನ್ನೋ ಕುತೂಹಲ ಶುರುವಾಗಿದೆ. ಇದಲ್ಲದೇ ಮುಂದಿನ …

Read More »

ಬಂಗಾಳ ಸಿಎಂ ಆಪ್ತ, ಮಾಜಿ ಪೊಲೀಸ್​​ ಕಮಿಷನರ್​ ಇಂದು ಅರೆಸ್ಟ್​..?

ಕೋಲ್ಕತ್ತ: ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯ ಆಪ್ತ, ಮಾಜಿ ಪೊಲೀಸ್​ ಕಮಿಷನರ್​​ ರಾಜೀವ್ ಕುಮಾರ್​ ದೇಶ ಬಿಟ್ಟು ತೆರಳದಂತೆ ನಿನ್ನೆ ಸಿಬಿಐ ಏರ್​ಪೋರ್ಟ್​ ಅಧಿಕಾರಿಗಳಿಗೆ ನೋಟಿಸ್​ ನೀಡಿತ್ತು. ಈಗ ಇದರ ಬೆನ್ನಲ್ಲೆ ಇಂದು ರಾಜೀವ್​ ಕುಮಾರ್​ರನ್ನ ಸಿಬಿಐ ತಂಡ ಬಂಧಿಸಿ ಶಾರದಾ ಚಿಟ್​ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಿದೆ ಎನ್ನಲಾಗಿದೆ. ಅಲ್ಲದೇ ಈ ಹಿಂದೆ ರಾಜೀವ್​ರನ್ನ ತನಿಖೆ ಮಾಡಲು ಅವರ ಆಫೀಸ್​ ಮತ್ತು ಮನೆಗೆ ತೆರಳಿದ್ದಾಗ ಸಿಎಂ ಮಮತಾ …

Read More »

ಮತದಾನವನ್ನು ಫೇಸ್‍ಬುಕ್‍ನಲ್ಲಿ ಲೈವ್ ಮಾಡಿದ ಇಬ್ಬರ ಬಂಧನ

ನವದೆಹಲಿ: ಆತ್ಮಹತ್ಯೆ, ಶೂಟಿಂಗ್ ಸೇರಿದಂತೆ ಇತರ ಅಪರಾಧಗಳನ್ನು ಫೇಸ್ಬುಕ್ ಲೈವ್ ಮಾದಿರುವ ಬಗ್ಗೆ ಕೇಳಿದ್ದೇವೆ, ನೋಡಿದ್ದೇವೆ. ಆದರೀಗ ಮತ ಚಲಾಯಿಸುವುದನ್ನು ಫೇಸ್ಬುಕ್ ಲೈವ್ ಮಾಡಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.ಭಾನುವಾರ ನಡೆದ ಲೋಕಸಭೆ ಚುನಾವಣೆಯ ಏಳನೇ ಹಂತದ ಮತದಾನದಲ್ಲಿ ಪಂಜಾಬಿನ ಮೊಹಾಲಿಯಲ್ಲಿ ಈ ಘಟನೆ ನಡೆದಿದ್ದು, ತಾವು ಮತ ಚಲಾಯಿಸುವುದನ್ನು ಫೇಸ್ಬುಕ್ ಲೈವ್ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಕಾಳಿಯಾ, ಬಿಜೆಪಿ ನಾಯಕ ಭಾನು ಪ್ರತಾಪ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಭಾನು …

Read More »

ಡಿಜಿಟಲ್ ಇಂಡಿಯಾ ಸ್ಕೀಮ್​​ನಲ್ಲಿ ಪ್ರಾಜೆಕ್ಟ್ ಕೊಡಿಸೋದಾಗಿ ಲಕ್ಷ ಲಕ್ಷ ವಂಚನೆ..!

ಬೆಂಗಳೂರು: ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯಲ್ಲಿ ಪ್ರಾಜೆಕ್ಟ್ ಕೊಡಿಸೋದಾಗಿ ನಂಬಿಸಿ 15ಕ್ಕೂ ಹೆಚ್ಚು ಜನರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪೀಣ್ಯ ನಿವಾಸಿ ವಿನಯ್ ಎಂಬಾತ ಡಿಜಿಟಲ್ ಇಂಡಿಯಾ ಸ್ಕೀಮ್‌ನ ಪ್ರಾಜೆಕ್ಟ್​ನಲ್ಲಿ ಇನ್ವೆಸ್ಟ್ ಮಾಡಿಸೋದಾಗಿ ನಂಬಿಸಿ ಸುಮಾರು 15 ಜನರಿಂದ ₹10 ಕೋಟಿಗೂ ಅಧಿಕ ಹಣವನ್ನ ಪಡೆದು ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈತನ ವಂಚನೆಗೆ ಪತ್ನಿ ಕೂಡ ಸಾಥ್ ನೀಡಿದ್ದು, ದಂಪತಿ ವಿರುದ್ಧ ಕೊಡಿಗೇಹಳ್ಳಿ …

Read More »

ಪೊಲೀಸ್​​​ ಎನ್​​ಕೌಂಟರ್​​, ಓರ್ವ ಆರೋಪಿ ಸಾವು..

ಮೈಸೂರು: ಮನಿ ಡಬ್ಲಿಂಗ್​​ ದಂಧೆಯಲ್ಲಿ ತೊಡಗಿದ್ದ ಬಾಂಬೆ ಮೂಲದ ವ್ಯಕ್ತಿಗಳ ಮೇಲೆ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಸಾವನ್ನಪ್ಪಿದ ಘಟನೆ ಗುರುವಾರ ಮೈಸೂರಿನಲ್ಲಿ ನಡೆದಿದೆ.ಇಲ್ಲಿನ ಹೆಬ್ಬಾಳ್ ರಿಂಗ್ ರಸ್ತೆ ಬಳಿಯ ಅಪಾರ್ಟ್ಮೆಂಟ್ ಒಂದರಲ್ಲೂ ಹಣ ದ್ವಿಗುಣ ಮಾಡುವ ದಂಧೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಇಂದು ಬೆಳಿಗ್ಗೆ ಸುಮಾರು 10 ಗಂಟೆಗೆ ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಆರೋಪಿಗಳು ಇನ್ಸ್‌ಪೆಕ್ಟರ್​​ಗೆ ಗನ್ ತೋರಿಸಿ ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಈ …

Read More »

ಟ್ವಿಟರ್​ ಇಂಡಿಯಾಗೆ ಚುನಾವಣಾ ಆಯೋಗದ ಖಡಕ್ ಸೂಚನೆ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಇನ್ನೂ ಒಂದು ಹಂತದ ಮತದಾನ ಬಾಕಿಯಿರುವಾಗಲೇ ಯಾರು ದೆಹಲಿ ಗದ್ದುಗೆ ಏರ್ತಾರೆ ಅನ್ನೋ ಬಗ್ಗೆ ಬಿಸಿಬಿಸಿ ಚರ್ಚೆಗಳು ನಡೆಯುತ್ತಿವೆ. ಜೊತೆಗೆ ಟ್ವಿಟರ್​ನಲ್ಲೂ ಈ ಬಗ್ಗೆ ಸಾಕಷ್ಟು ಸಮೀಕ್ಷೆಗಳ ಟ್ವೀಟ್ಸ್​ ಹರಿದಾಡುತ್ತಿವೆ. ಹೀಗಾಗಿ ಕೇಂದ್ರ ಚುನಾವಣಾ ಆಯೋಗವು ಟ್ವಿಟರ್ ಇಂಡಿಯಾಗೆ ಖಡಕ್ ಸಂದೇಶ ರವಾನಿಸಿದೆ. ನೆಟ್ಟಿಗರು ಚುನಾವಣಾ ಸಮೀಕ್ಷೆ ಬಗ್ಗೆ ಪ್ರಕಟಿಸಿದ ಎಲ್ಲಾ ಟ್ವೀಟ್ಸ್​ಗಳನ್ನು ಡಿಲಿಟ್ ಮಾಡುವಂತೆ ಟ್ವಿಟರ್​ ಇಂಡಿಯಾಗೆ ಹೇಳಿದೆ. ಚುನಾವಣೆ ಮುಕ್ತಾಯಗೊಳ್ಳುವ ಮೊದಲು ಯಾವುದೇ …

Read More »

ದುಬೈನಿಂದ ಮಿಕ್ಸಿಯಲ್ಲಿ ಚಿನ್ನದ ಗಟ್ಟಿ ಅಡಗಿಸಿ ತಂದ ಪ್ರಯಾಣಿಕ.

ಮಂಗಳೂರು: ಚಿನ್ನದ ಗಟ್ಟಿಯೊಂದನ್ನು ಮಿಕ್ಸಿಯ ಮೋಟಾರ್​ನಲ್ಲಿ ಅಡಗಿಸಿಟ್ಟು ದುಬೈನಿಂದ ಮಂಗಳೂರಿಗೆ ಸಾಗಾಟ ಮಾಡುತ್ತಿದ್ದ ಪ್ರಯಾಣಿಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್​ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಆತನಿಂದ ₹34.75 ಲಕ್ಷ ವೌಲ್ಯದ 1052.90 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ದುಬೈಯಿಂದ ಸ್ಪೈಸ್ ಜೆಟ್ ವಿಮಾನದ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಪ್ರಯಾಣಿಕನನ್ನು ವಶಕ್ಕೆ ಪಡೆದುಕೊಂಡ ಕಸ್ಟಮ್ಸ್ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

Read More »

You cannot copy content of this page