Breaking News

Shaikh BIG TV NEWS, Hubballi

ಹುಬ್ಬಳ್ಳಿಯ ರಣದಮ್ಮ ಕಾಲೋನಿ ಮಹಿಳೆಯರಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

ಹುಬ್ಬಳ್ಳಿ: ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಇಂದು ಹುಬ್ಬಳ್ಳಿಯ ನೇಕಾರನಗರದ ರಣದಮ್ಮ ಕಾಲೋನಿಯ ಮಹಿಳೆಯರು ಮೆಣದ ಭತ್ತಿ ಬೆಳಗಿಸುವ ಮೂಲಕ ಹುತಾತ್ಮ ವೀರಯೋಧರಿಗೆ ಶ್ರದ್ದಾಂಜಲಿ ಸಮರ್ಪಿಸಿದರು.ಜಮ್ಮು ಕಾಶ್ಮೀರದಲ್ಲಿ ಸಿಆರ್‌ಫಿ‌ಎಫ್ ಯೋಧರ ಮೇಲಿನ ಉಗ್ರರ ದಾಳಿ ಖಂಡಿಸಿ ಉಗ್ರಗಾಮಿಗಳು ಹಾಗೂ ಪಾಕಿಸ್ತಾನ ವಿರುದ್ಧ ಧಿಕ್ಕಾರ ಕೂಗಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.ಕಾಶ್ಮೀರದಲ್ಲಿ ಇರುವ ದೇಶದ್ರೋಹಿಗಳನ್ನು ಮಟ್ಟಾ ಹಾಕಬೇಕು. ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಬೇಕೆಂದು ನೀಡಬೇಕು ಎಂದು ಅಗ್ರಹಿಸಿದರು. ಈ ಸಂದರ್ಭದಲ್ಲಿ ಮಹಿಳಾ ಮುಖಂಡರಾದ …

Read More »

ಸಾಧನೆಗೆ ಗುರುವಿನ ಆಶೀರ್ವಾದವೇ ಶ್ರೀರಕ್ಷೆ: ಚನ್ನಣ್ಣವರ

ಮಣಕವಾಡ: ಸಾಧನೆಗೆ ಪೂರಕ ಶಕ್ತಿಯಾಗಿ ಗುರು ಯಾವಾಗಲೂ ಜೊತೆಯಿರುತ್ತಾನೆ ಪ್ರತಿಯೊಂದು ಸಾಧನೆಯ ಹಿಂದೆ ಗುರು ಇರುವುದು ಸತ್ಯ ಸಂಗತಿ ಜಗತ್ತಿನಲ್ಲಿ ದುಡ್ಡು ಒಂದು ದಿನ ಬರಬಹುದು ಒಂದು ದಿನ ಹೋಗಬಹುದು ಆದರೆ ಗಳಿಸಿಕೊಂಡ ಜ್ಞಾನ ಎಂದಿಗೂ ಅದು ಬಾಳಿನ ಬುತ್ತಿಯಾಗಿರುತ್ತದೆ ಎಂದು ಬೆಂಗಳೂರು ಪಶ್ಚಿಮ ಪೊಲೀಸ್ ಅಧೀಕ್ಷಕರಾದ ರವಿ ಚನ್ನಣ್ಣವರ ತಿಳಿಸಿದರು.ಧಾರವಾಡ ಜಿಲ್ಲೆ ಅಣ್ಣಿಗೇರಿ ತಾಲೂಕಿನ ಮಣಕವಾಡ ಗ್ರಾಮದಲ್ಲಿ ಅಯೋಜಿಸಲಾಗಿರುವ ನಿರಂಜನ ಪಟ್ಟಾಧಿಕಾರ ಪ್ರಯುಕ್ತವಾಗಿ ಹಮ್ಮಿಕೊಂಡಿದ್ದ ಯುವ ಸಮಾವೇಶದಲ್ಲಿ ಯುವ …

Read More »

ವಿರಶೈವ, ಲಿಂಗಾಯತ ಮಠಗಳು ಬೇರೆ ಬೇರೆ ಅಲ್ಲ: ಖಂಡ್ರೆ

ಮಣಕವಾಡ: ನಮ್ಮದೇಶದಲ್ಲಿ ಅನೇಕ ಮಠ ಮಾನ್ಯಗಳು ಹುಟ್ಟಿಕೊಂಡಿವೆ ಅಲ್ಲದೇ ಸಮಾಜದ ಅಭಿವೃದ್ಧಿಗೆ ಮಠ ಮಾನ್ಯಗಳು ಶ್ರಮಿಸುತ್ತಿವೆ. ಇಲ್ಲಿ ಯಾವುದೇ ಲಿಂಗಾಯತ, ವಿರಶೈವ ಮಠ ಎಂಬುವಂತ ಭಿನ್ನತೆಗಳಿಲ್ಲ ಇಲ್ಲಿ ಎಲ್ಲವೂ ಒಂದೆಯಾಗಿದೆ ಎಂದು ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತಿಳಿಸಿದರು.ಸಿದ್ಧರಾಮದೇವರ ಚರಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಭಾವೈಕ್ಯ ಸಮಾವೇಶದಲ್ಲಿ ಮಾತನಾಡಿದ ಅವರು, ಸಮಾಜಕ್ಕಾಗಿ ಕ್ರಾಂತಿಯಾಗಿರುವುದು ಕಲ್ಯಾಣ ಕ್ರಾಂತಿ ಬಸವಣ್ಣನವರ ನೇತೃತ್ವದಲ್ಲಿ ಆಗಿರುವ ಕ್ರಾಂತಿ ಧಾರ್ಮಿಕ ಕ್ರಾಂತಿ ಅಸ್ಪೃಶ್ಯತೆ ಮೆಟ್ಟಿ ನಿಂತು ಸಮಾಜದ …

Read More »

ಮಣಕವಾಡದಲ್ಲಿ ವಿಜೃಂಭಣೆಯ ರೈತ ಸಮಾವೇಶ

ಧಾರವಾಡ: ಜಿಲ್ಲೆಯ ಮಣಕವಾಡ ಗ್ರಾಮದಲ್ಲಿ ಆಯೋಜಿಸಲಾಗಿರುವ ದೇವಮಂದಿರದ ಸಿದ್ಧರಾಮದೇವರ ಚರಪಟ್ಟಾಧಿಕಾರ ಕಾರ್ಯಕ್ರಮದ ಅಂಗವಾಗಿ ಶನಿವಾರ ಆಯೋಜಿಸಲಾಗಿದ್ದ ಬೃಹತ್ ರೈತ ಸಮಾವೇಶ ಉದ್ಘಾಟನೆಯನ್ನು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ನೆರವೇರಿಸಿದರು.ಬಳಿಕ ಮಾತನಾಡಿದ ಅವರು, ಮಣಕವಾಡ ಗ್ರಾಮದಲ್ಲಿ ಸಿದ್ಧರಾಮದೇವರ ಚರಪಟ್ಟಾಧಿಕಾರ ನೆರವೇರುತ್ತಿರುವುದು ಸಂತೋಷದ ಸಂಗತಿಯಾಗಿದೆ. ಅಲ್ಲದೇ ಬೃಹತ್ ಮಟ್ಟದಲ್ಲಿ ರೈತ ಸಮಾವೇಶ ಕೈಗೊಂಡಿರುವುದು ಶ್ಲಾಘನೀಯ ಸಂಗತಿಯಾಗಿದೆ. ಇಂದಿನ ದಿನಮಾನಗಳಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಜನರ ಸಹಭಾಗಿತ್ವ ನೋಡಿದರೇ ನಿಜವಾಗಿಯೂ ಅಚ್ಚರಿಯಾಗುತ್ತದೆ ಎಂದರು.ನಂತರ ಮಾತನಾಡಿದ ಕೂಡಲಸಂಗಮ …

Read More »

ಮಣಕವಾಡ ಶ್ರೀಗಳು ಸಾಮಾಜಿಕ ಕಾರ್ಯಗಳಿಂದ ಜನಜನಿತರಾಗಿದ್ದಾರೆ: ನಿರಂಜನನಂದಾಪುರಿ ಶ್ರೀಗಳು

ಮಣಕವಾಡ: ಸಿದ್ಧರಾಮದೇವರು ಈ ಭಾಗದಲ್ಲಿ ಜನಜಾಗೃತಿ ಮೂಡಿಸುವ ಮೂಲಕ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿ ತಮ್ಮ ಪ್ರವಚನದ ಶಕ್ತಿಯಿಂದ ಜನಜನಿತರಾಗಿದ್ದಾರೆ ಎಂದು ಕನಕಗುರು ಪೀಠದ ನಿರಂಜನನಂದಾಪುರಿ ಸ್ವಾಮೀಜಿ ತಿಳಿಸಿದರು.ಸಿದ್ಧರಾಮದೇವರ ಚರಪಟ್ಟಾಧಿಕಾರ ಪ್ರಯುಕ್ತ ಆಯೋಜಿಸಲಾಗಿರುವ ಭಾವೈಕ್ಯ ಸಮಾವೇಶದಲ್ಲಿ ಮಾತನಾಡಿದ ಅವರು, ಯಾವುದೇ ತಂದೆ ತಾಯಿ ತಮ್ಮ ಮಕ್ಕಳನ್ನು ದೇಶ ಕಾಯುವ ಸೈನಿಕ ಕೆಲಸಕ್ಕೆ ಹಾಗೂ ಸನ್ಯಾಸತ್ವ ಸ್ವೀಕಾರಕ್ಕೆ ಕಳಿಸುವುದಿಲ್ಲ ಧರ್ಮದ ಸಂಸ್ಕೃತಿ ಉಳಿಯಬೇಕು ಎನ್ನುವಂತ ಸದುದ್ದೇಶದಿಂದ ಅವರನ್ನು ಸಮಾಜಕ್ಕೆ ನೀಡಿದ ಅವರ …

Read More »

ದಾಖಲೆ ಬೇಡ ಎಂದು ಯೋಧನ ವಿಮೆ ಹಣ ನೀಡಿ ಮಾನವೀಯತೆ ಮೆರೆದ ಎಲ್‌ಐಸಿ

ಮಂಡ್ಯ, ಫೆಬ್ರವರಿ 16: ಪುಲ್ವಾಮಾದಲ್ಲಿ ಯೋಧರ ಮೇಲೆ ನಡೆದ ಆತ್ಮಾಹುತಿ ದಾಳಿಯಲ್ಲಿ 42 ಯೋಧರು ಹುತಾತ್ಮರಾಗಿದ್ದಾರೆ. ದೇಶವೇ ಸೂತಕದಲ್ಲಿ ಮುಳುಗಿದೆ.ಪುಲ್ವಾಮಾ ದಾಳಿ LIVE : 12.30ಕ್ಕೆ ಎಚ್‌ಎಎಲ್‌ಗೆ ಪಾರ್ಥಿವ ಶರೀರವೀರಮರಣವಪ್ಪಿದ ಮಂಡ್ಯದ ಯೋಧ ಗುರು ಅವರ ಕುಟುಂಬಕ್ಕೆ ಭಾರತೀಯ ಜೀವ ವಿಮಾ ನಿಗಮ ತಕ್ಷಣ ವಿಮಾ ಮೊತ್ತವನ್ನು ತಲುಪಿಸಿದೆ. ಯಾವುದೇ ದಾಖಲೆ, ಮರಣ ಪ್ರಮಾಣ ಪತ್ರವನ್ನೂ ಕೇಳದೆ LIC ಮಂಡ್ಯ ಬ್ರಾಂಚ್ ನಿಂದ ನಾಮಿನಿ ಖಾತೆಗೆ 3,82,199 ರೂ ವಿಮೆ …

Read More »

ಯೋಧರ ಮೇಲೆ ಉಗ್ರರ ದಾಳಿ ಖಂಡಿಸಿ ಫೆ.19 ರಂದು ಕರ್ನಾಟಕ ಬಂದ್!

ಬೆಂಗಳೂರು, ಫೆಬ್ರವರಿ 16: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಯೋಧರ ಮೇಲೆ ನಡೆದ ಅಮಾನುಷ, ಆತ್ಮಾಹುತಿ ಬಾಂಬ್ ದಾಳಿ ಖಂಡಿಸಿ ಫೆ.19ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಈ ಕುರಿತು ಮಾಹಿತಿ ನೀಡಿದ್ದು, ಯೋಧರ ಮೇಲೆ ಉಗ್ರರು ನಡೆಸಿದ ದಾಳಿ ಖಂಡಿಸಿ ಫೆ.19ರಂದು ಕರ್ನಾಟಕ ಬಂದ್ ಮಾಡಲಾಗುತ್ತಿದೆ. ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬಂದ್‌ಗೆ ಕರೆನೀಡಲಾಗಿದೆ ಎಂದು ತಿಳಿಸಿದರು. ಪುಲ್ವಾಮಾದಲ್ಲಿ 60 ಕೆಜಿ ಆರ್‌ಡಿಎಕ್ಸ್ …

Read More »

ಸರ್ಕಾರಕ್ಕೆ ಉಗ್ರರ ಬಗ್ಗೆ ಮೃದು ಧೋರಣೆ ಬೇಡ, ಉಗ್ರವಾದ ಕ್ರಮ ಕೈಗೊಳ್ಳಿ: ಸಿದ್ದರಾಮಯ್ಯ…

ಮೈಸೂರು, ಫೆಬ್ರವರಿ 16: ಉಗ್ರರು ಮಾಡಿರುವ ಹೇಯ ಕೃತ್ಯಕ್ಕೆ ಅವರಿಗೆ ಉಗ್ರವಾದ ಶಿಕ್ಷೆಯೇ ದೊರೆಯಬೇಕು, ಸರ್ಕಾರದಿಂದ ಮೃದು ಧೋರಣೆ ಬೇಡ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಆತ್ಮಾಹುತಿ ದಾಳಿಗೆ 42 ಮಂದಿ ಯೋಧರು ಹುತಾತ್ಮರಾಗಿದ್ದಾರೆ, ಈ ಕೃತ್ಯಕ್ಕೆ ಸೇಡು ತೀರಿಸಿಕೊಳ್ಳಲೇ ಬೇಕು, ಇದೊಂದು ಅಮಾನುಷ ಕೃತ್ಯ ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದರು.ನರೇಂದ್ರ ಮೋದಿಯವರು ಹೇಳಿದರು, ನಕಲಿ ನೋಟುಗಳು ಉಗ್ರರಿಗೆ ಹೋಗ್ತಿದ್ದವು. ಅದಕ್ಕೇ ನೋಟು ಅಮಾನ್ಯೀಕರಣ …

Read More »

ಚಾಲನೆ ನೀಡಿದ ಮರುದಿನವೇ ಕೈಕೊಟ್ಟ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು!

ನವದೆಹಲಿ, ಫೆಬ್ರವರಿ 16: ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ ಮರುದಿನವೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಕೈಕೊಟ್ಟಿದೆ. ಪ್ರಧಾನಿ ಮೋದಿಯಿಂದ ವಂದೇ ಭಾರತ್ ಎಕ್ಸ್ ಪ್ರೆಸ್ ಗೆ ಹಸಿರು ನಿಶಾನೆಮೊದಲ ಸಂಚಾರ ನಡೆಸಿದ್ದ ರೈಲು, ಶನಿವಾರ ಬೆಳಿಗ್ಗೆ ವಾರಣಾಸಿಯಿಂದ ದೆಹಲಿಗೆ ಮರಳುವ ವೇಳೆ ಕೆಟ್ಟುನಿಂತಿದೆ.ವಂದೇ ಭಾರತ್ ಎಕ್ಸ್ ಪ್ರೆಸ್ ಗೆ ಫೆ.15ರಂದು ಮೋದಿಯಿಂದ ಹಸಿರು ನಿಶಾನೆಉತ್ತರ ಪ್ರದೇಶದ ವಾರಣಾಸಿಯಿಂದ 18 ಕಿ.ಮೀ. ದೂರದಲ್ಲಿರುವ ತುಡ್ಲಾ ಜಂಕ್ಷನ್ …

Read More »

ಪುಲ್ವಾಮಾ ದಾಳಿ :ಯೋಧರ ಪಾರ್ಥಿವ ಶರೀರ ಹೊತ್ತ ರಾಜನಾಥ್ ಸಿಂಗ್…

ನವದೆಹಲಿ, ಫೆಬ್ರವರಿ 15: “ದೊಡ್ಡ ತಪ್ಪು ಮಾಡಿದ್ದೀರಿ, ಅದಕ್ಕೆ ಅದಕ್ಕಿಂತ ಹೆಚ್ಚು ಬೆಲೆ ತೆರುತ್ತೀರಿ” ಎಂದು ಉಗ್ರರಿಗೆ ಪ್ರಧಾನಿ ನರೇಂದ್ರ ಮೋದಿ ಖಡಕ್ ಎಚ್ಚರಿಕೆ ನೀಡಿದ್ದಾರೆ.ಗುರುವಾರ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದ ಅವಂತಿಪೊರದಲ್ಲಿ ನಡೆದ ರಣಹೇಡಿಗಳ ಹೇಯಕೃತ್ಯದಿಂದ 44 ಸೈನಿಕರು ಹುತಾತ್ಮರಾಗಿದ್ದರು. ಸದ್ಯಕ್ಕೆ ಐವರು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆಯಾದರೂ, ಈ ಕೃತ್ಯ ಭಾರತದ ಇತಿಹಾಸದಲ್ಲೇ ಅತ್ಯಂತ ಹೇಯ ಎನ್ನಿಸಿದೆ.19 ವರ್ಷಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ದೊಡ್ಡ ದಾಳಿಇಡೀ ದೇಶವೂ …

Read More »