Breaking News

Shaikh BIG TV NEWS, Hubballi

ಧಾರವಾಡ ಜಿಲ್ಲಾ ಪಂಚಾಯತ ಅಧ್ಯಕ್ಷ ಪಟ್ಟ ಕಾಂಗ್ರೇಸ್ ಪಾಲು ಅಧ್ಯಕ್ಷರಾಗಿ ಶಿವಾನಂದ ಕರಿಗಾರ ನೇಮಕ

ಧಾರವಾಡ: ಧಾರವಾಡ ಜಿಲ್ಲಾ ಪಂಚಾಯತಿ ಅಧ್ಯಕ್ಷ ಪಟ್ಟ ಬಿಜೆಪಿ ಕೈತಪ್ಪಿ ಕಾಂಗ್ರೆಸ್ ಪಾಲಾಗಿದೆ. ಕಾಂಗ್ರೆಸನ ಶಿವಾನಂದ ಕರಿಗಾರ ಜಿ ಪಂ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಜಿಪಂ ಅಧ್ಯಕ್ಷ ಚೈತ್ರಾ ಶಿರೂರ ವಿರುದ್ಧ ನಡೆದ ಅವಿಶ್ವಾಸ ಸಭೆಯಲ್ಲಿ ಅವರ ವಿರುದ್ದ ಜಿಪಂ ಸದಸ್ಯರು ಅವಿಶ್ವಾಸ ಸಾಭೀತುಪಡಿಸಿದರು.ಜಿಲ್ಲಾ ಪಂಚಾಯತ ಅಧ್ಯಕ್ಷೆ ಚೈತ್ರಾ ಶಿರೂರ ಅವರ ವಿರುದ್ದ ಅವಿಶ್ವಾಸ ಗೊತ್ತುವಳಿ ಅಂಗೀಕಾರವಾಗಿದ್ದು, ಜಿಪಂ ವಿಶೇಷ ಸಭೆಯಲ್ಲಿ ಮಂಡಿಸಲಾದ ಗೊತ್ತುವಳಿ 16 ಮತಗಳಿಂದ ಗೊತ್ತುವಳಿ ಅಂಗೀಕಾರವಾಗಿದೆ.ಗೊತ್ತುವಳಿ ವಿರುದ್ದ 6 …

Read More »

ದೇವಸ್ಥಾನಕ್ಕೆ ಹಣಕೊಡದಿದ್ದಕ್ಕೆ ಮಗನಿಗೆ ಬಾಬನಿಂದ ನರಬಲಿಯ ಶಿಕ್ಷೆ

ಬಿಹಾರ್​​: ಬಾಬನೊಬ್ಬ ದೇವರಿಗೆ ತನ್ನ ಮಗನನ್ನೇ ನರಬಲಿ ಕೊಡೋದಿಕ್ಕೆ ಮುಂದಾಗಿದ್ದ ಘಟನೆ ಬಿಹಾರ್‌ನ ಮೋಹನ್‌ಪುರ್‌ನಲ್ಲಿ ನಡೆದಿದೆ. ಪುತ್ರನನ್ನು ನರಬಲಿ ನೀಡೋಕೆ ಅನುಮತಿ ನೀಡುವಂತೆ ಪೊಲೀಸರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾನೆ. ಸದ್ಯ ಪೊಲೀಸರಿಗೆ ಪತ್ರ ಬರೆದು ನಾಪತ್ತೆಯಾಗಿರೋ ಸುರೇಂದರ್ ಪ್ರಸಾದ್​ ಸಿಂಗ್​​ ಎಂಬ ಬಾಬಾನಿಗಾಗಿ ಖಾಕಿ ಶೋಧ ನಡೆಸುತ್ತಿದೆ. ಆತ ಮಾತನಾಡಿರುವ ವಿಡಿಯೋವೊಂದು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಮಗನನ್ನು ಬಲಿಕೊಡುವ ಬಗ್ಗೆ ಮಾತನಾಡಿರುವ ಸುರೆಂದರ್​, ನರಬಲಿ ಕೊಡುವುದು …

Read More »

ಸಿಬಿಐ ನಿರ್ದೇಶಕರಾಗಿ ರಿಷಿ ಕುಮಾರ್ ಶುಕ್ಲಾ ನೇಮಕ

ನವದೆಹಲಿ: ಐಪಿಎಸ್ ಅಧಿಕಾರಿ ರಿಷಿ ಕುಮಾರ್ ಶುಕ್ಲರನ್ನು ಹೊಸ ಕೇಂದ್ರ ತನಿಖಾಧಿಕಾರಿ (ಸಿಬಿಐ) ನಿರ್ದೇಶಕರಾಗಿ ನೇಮಕ ಮಾಡಲಾಗಿದೆ ಎಂದು ಕೇಂದ್ರ ಸರಕಾರ ಶನಿವಾರ ತಿಳಿಸಿದೆ.ರಿಷಿ ಕುಮಾರ್ ಶುಕ್ಲಾ ಅವರು 1983ರ ಮಧ್ಯಪ್ರದೇಶ ಕೆಡರ್​ನ ಐಪಿಎಸ್ ಅಧಿಕಾರಿಯಾಗಿದ್ದು, ಆ ರಾಜ್ಯ ಡಿಜಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಸಂಸತ್​ನ ನೇಮಕಾತಿ ಸಮಿತಿಯು ನೂತನ ನಿರ್ದೇಶಕರ ನೇಮಕಾತಿಗೆ ಅನುಮೋದನೆ ನೀಡಿದೆ. ಶುಕ್ಲಾ ಅವರು 2 ವರ್ಷಗಳವರೆಗೆ ಸಿಬಿಐನ ಚುಕ್ಕಾಣಿ ಹಿಡಿಯಲಿದ್ದಾರೆ.ಅಲೋಕ್ ವರ್ಮಾ, ರಾಕೇಶ್ ಆಸ್ತಾನಾ ವಿವಾವದ ಬಳಿಕ …

Read More »

ಆಲಿಯಾ ಜೊತೆಗಿನ ಬ್ರೇಕ್‌ಅಪ್‌ಗೆ ಸಿಕ್ತು ಕಾರಣ

ದೆಹಲಿ: ಆಲಿಯಾ ಭಟ್​ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಲವ್​ ಬರ್ಡ್ಸ್ ಆಗಿ ಸುತ್ತಾಡಿ ಬ್ರೇಕ್​ ಅಪ್​ ಆಗಿರೋದು ಎಲ್ಲರಿಗೂ ಗೊತ್ತಿರೋ ವಿಷಯ. ಇದೀಗ ಬ್ರೇಕ್​ ಅಪ್​ ಬಗ್ಗೆ ಸಿದ್ಧಾರ್ಥ ಮಲ್ಹೋತ್ರಾ ಬಾಯಿಬಿಟ್ಟಿದ್ದು, ಆಲಿಯಾ ಜೊತೆಗಿನ ಬ್ರೇಕ್​ ಅಪ್​ ಜೀವನದಲ್ಲಿ ಕಹಿಯ ಘಟನೆಯ ಎಂದಿದ್ದಾರೆ.ಕಾಫಿ ವಿತ್​ ಕರಣ್​ ಕಾರ್ಯಕ್ರಮದಲ್ಲಿ ಮಾತನಾಡಿರುವ ಸಿದ್ಧಾರ್ಥ್, ನಾವು ನಮ್ಮ ಸಂಬಂಧಕ್ಕೆ ಫುಲ್​ಸ್ಟಾಪ್​ ಇಟ್ಟ ಮೇಲೆ ಮತ್ತೆ ಎಂದೂ ಭೇಟಿ ಮಾಡಿಲ್ಲ. ಆದರೆ ನಾವಿಬ್ಬರು ದೂರವಾಗಿರೋದು ಕಹಿಯಾದ …

Read More »

ದೀದಿ ವಿರುದ್ಧ ಗುಡುಗಿದ ರಾಜ್‌ನಾಥ್‌ ಸಿಂಗ್‌

ಕೋಲ್ಕತಾ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್​ ಸರ್ಕಾರದ ವಿರುದ್ಧ ಗೃಹ ಸಚಿವ ರಾಜ್​ನಾಥ್​ ಸಿಂಗ್​ ವಾಗ್ದಾಳಿ ನಡೆಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯ ಮೇಲೆ ರಾಜ್​ನಾಥ್​ ಸಿಂಗ್​ ಗುಡುಗಿದ್ದಾರೆ. ಮಹಾಘಟ​ಬಂಧನ್​ ಬಾಚಾವೋ ಱಲಿ ಉದ್ದೇಶಿಸಿ ಹೂಗ್ಲೀ ಜಿಲ್ಲೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಹಾಘಟ​ಬಂಧನ್‌ ಗಟ್ಟಿಗೊಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಹೀಗಾಗಿ ಪಶ್ಚಿಮ ಬಂಗಾಳದಲ್ಲಿನ ಆಡಳಿತಕ್ಕೆ ಹೆಚ್ಚಿನ ಒತ್ತು ನೀಡುತ್ತಿಲ್ಲ ಎಂದು ಆರೋಪಿಸಿದ್ರು.ಮಹಾಘಟ​ಬಂಧನ್​ನಲ್ಲಿರುವ ಎಲ್ಲಾ ಪಕ್ಷಗಳದ್ದು ಒಂದೇ …

Read More »

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ, 3 ಪಾದ್ರಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ

ಮೈಸೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲಿ ಮಂಗಳೂರು ಮೂಲದ ಮೂವರು ಪಾದ್ರಿಗಳ ವಿರುದ್ಧ ಮೈಸೂರು ನರಸಿಂಹ ರಾಜ ಠಾಣೆ ಪೋಲೀಸರು ಪ್ರಥಮ ಮಾಹಿತಿ ವರದಿ (ಎಫ್ ಐಆರ್) ದಾಖಲಿಸಿಕೊಂಡಿದ್ದಾರೆ.ಎಸ್ಸಿ / ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಜಾತಿ ಹೆಸರಿನಲ್ಲಿ ನಿಂದನೆ ಹಾಗೂ ಅಪಹರಣ ಪ್ರಕರಣದೊಡನೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯಡಿ ಅವರ ವಿರುದ್ಧ ದೂರು ದಾಖಲಾಗಿದೆ.ಮೈಸೂರು ಮೂಲದ ಸಂತ್ರಸ್ಥ ಬಾಲಕಿಯ ತಾಯಿ ನೀಡಿದ ದೂರಿನ ಹಿನ್ನೆಲೆಯಲ್ಲಿ …

Read More »

ನಮ್ಮ ಶಾಸಕರಿಗೆ ಬಿಜೆಪಿಯವ್ರು 50 ಕೋಟಿ ಆಫರ್ ಕೊಟ್ಟಿದ್ದಾರೆ -ಸಿದ್ದರಾಮಯ್ಯ

ಬೆಂಗಳೂರು: ನಮ್ಮ ಒಬ್ಬೊಬ್ಬ ಶಾಸಕರಿಗೆ ಬಿಜೆಪಿಯವರು ₹50 ಕೋಟಿ ಆಫರ್ ಕೊಟ್ಟಿದ್ದಾರೆ ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಮ್ಮ ಶಾಸಕರಿಗೆ ಅಸಮಾಧಾನವೇ ಇಲ್ಲವಲ್ಲ.. ಎಲ್ಲಿಯಾದ್ರೂ ಪಕ್ಷ ಬಿಟ್ಟಿದ್ದೀವಿ ಅಂತ ಹೇಳಿದ್ದಾರಾ..? ಯಾರಾದ್ರೂ‌ ಬೇರೆ ಪಾರ್ಟಿಗೆ ಹೋಗಿದ್ದೇವೆ ಅಂತ ಹೇಳಿದ್ದಾರಾ..? ನಮ್ಮ ಯಾವ ಅತೃಪ್ತ ಶಾಸಕರೂ ಕೂಡಾ ರಾಜೀನಾಮೆ ಕೊಡುವುದಿಲ್ಲ ಅಂತಾ ಸ್ಪಷ್ಟಪಡಿಸಿದರು.ನನಗೂ ಮೈಸೂರಿನಿಂದ ಸ್ಪರ್ಧಿಸಿ ಅಂತಾ ಹೇಳ್ತಿದ್ದಾರೆ..!ಇದೇ ವೇಳೆ, ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಜೊತೆ …

Read More »

9 ಪೊಲೀಸ್ ಇನ್ಸ್​​​ಪೆಕ್ಟರ್​​​, ಇಬ್ಬರು ಡಿವೈಎಸ್​​​ಪಿಗಳ ವರ್ಗಾವಣೆ…?

ಬೆಂಗಳೂರು: ವಿವಿಧ ಠಾಣೆಗಳ ಒಂಬತ್ತು ಮಂದಿ ಪೊಲೀಸ್ ಇನ್ಸ್​​​ಪೆಕ್ಟರ್​​​, ಇಬ್ಬರು ಡಿವೈಎಸ್​​​ಪಿಗಳನ್ನ ವರ್ಗಾವಣೆಗೊಳಿಸಿ ರಾಜ್ಯ ಪೊಲೀಸ್ ಇಲಾಖೆಯ ಡಿಜಿ ಐಜಿಪಿ ನೀಲಮಣಿ ಎನ್. ರಾಜು ಆದೇಶಿಸಿದ್ದಾರೆ.ವರ್ಗಾವಣೆಯಾದ ಡಿವೈಎಸ್​​ಪಿಗಳು(2):1. ಡಿವೈಎಸ್​​ಪಿ ಚಂದ್ರಶೇಖರ್, ಕೊಪ್ಪಳದ ಗಂಗಾವತಿಗೆ ವರ್ಗಾವಣೆ.2. ಸುಧಾಮ ಬೊಮ್ಮಯ್ಯ ನಾಯಕ್, ಸಿಐಡಿ ಯಿಂದ ಎಸಿಬಿಗೆ ವರ್ಗಾವಣೆ.ವರ್ಗಾವಣೆಯಾದ ಸಿವಿಲ್ ಇನ್ಸ್​​​​ಪೆಕ್ಟರ್​​ಗಳು 9):1. ಸೌಮ್ಯ ಎಸ್, ಎಸಿಬಿ ಯಿಂದ ಮಾಗಡಿ ರಸ್ತೆ ಸಂಚಾರ ಠಾಣೆಗೆ ವರ್ಗಾವಣೆ.2. ಕೆಂಪೇಗೌಡ, ಸುಬ್ರಹ್ಮಣ್ಯಪುರ ಠಾಣೆಯಿಂದ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಗೆ …

Read More »

ಮಧ್ಯಂತರ ಬಜೆಟ್ 2019: ಕೃಷಿ, ರಿಯಲ್ ಎಸ್ಟೇಟ್, ಬ್ಯಾಂಕಿಂಗ್ ವಲಯಗಳಿಗೆ ದೊಡ್ಡ ಪ್ರಕಟಣೆ ನಿರೀಕ್ಷೆ.

ನವದೆಹಲಿ: ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟದ ಪ್ರಸ್ತುತ ಅಧಿಕಾರವಧಿಯ ಕೊನೆಯ ಬಜೆಟ್ ಅನ್ನು ಸಚಿವ ಪಿಯೂಷ್ ಗೋಯಲ್ ಮಂಡಿಸುತ್ತಿದ್ದು, ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಮಂಡಿಸಲಾಗುತ್ತಿರುವ ಮಧ್ಯಂತರ ಬಜೆಟ್ ನಲ್ಲಿ ವಿವಿಧ ವಲಯಗಳಿಗೆ ದೊಡ್ಡ ಘೋಷಣೆ ಮಾಡುವ ಸಾಧ್ಯತೆಯಿದೆ- ಇವುಗಳಲ್ಲಿ ಕೃಷಿ, ಬ್ಯಾಂಕಿಂಗ್, ರಿಯಲ್ ಎಸ್ಟೇಟ್ ಮತ್ತು ರೈಲ್ವೆ ವಲಯಗಳು ಮುಖ್ಯವಾಗಿವೆ.ಅರುಣ್ ಜೇಟ್ಲಿಯ ಅನುಪಸ್ಥಿತಿಯಲ್ಲಿ ಇತ್ತೀಚೆಗಷ್ಟೇ ಹಣಕಾಸು ಇಲಾಖೆಯ ಹೊಣೆಗಾರಿಕೆಯನ್ನು ಹೆಚ್ಚುವರಿಯಾಗಿ ವಹಿಸಿಕೊಂಡಿರುವ ರೈಲ್ವೆ ಸಚಿವ ಪಿಯೂಷ್ …

Read More »

ಹಿರಿಯ ನಾಗರಿಕರಿಗೆ ನಮೋ ಕೊಡುಗೆ..

ಅಸಂಘಟಿತ ವಲಯದಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರಿಗೆ ಮೋದಿ ಸರ್ಕಾರ ತನ್ನ ಕೊನೆಯ ಬಜೆಟ್​ನಲ್ಲಿ ಭರ್ಜರಿ ಗಿಫ್ಟ್​ ನೀಡಿದೆ. 60 ವರ್ಷದ ಅಸಂಘಟಿತ ವಲಯದ ಕಾರ್ಮಿಕರಿಗೆ 3 ಸಾವಿರ ರೂಪಾಯಿ ಪ್ರತಿ ತಿಂಗಳು ಪೆನ್ಶನ್ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರಧಾನಮಂತ್ರಿ ಶ್ರಮ ಯೋಗಿ ಮಂಧನ್ ಯೋಜನೆಯಲ್ಲಿ ಕೇಂದ್ರ ಸರ್ಕಾರ ಈ ಬಗ್ಗೆ ಘೋಷಿಸಿದ್ದು, ಅಸಂಘಟಿತ ಕಾರ್ಮಿಕರಿಗೆ ಭರ್ಜರಿ ಉಡುಗೊರೆ ಇದಾಗಿದೆ.

Read More »