ಬೆಂಗಳೂರು: ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮನೆಯಲ್ಲಿ ಇಂದು ಐಟಿ ರೇಡ್ ಮುಂದುವರೆದಿದೆ. ಇಂದು ನಾಲ್ವರು ಅಧಿಕಾರಿಗಳು ರಾಕ್ಲೈನ್ ಮನೆಗೆ ಎಂಟ್ರಿ ಕೊಟ್ಟಿದ್ದು, ಪರಿಶೀಲನೆ ಮುಂದುವರೆಸಿದ್ದಾರೆ. ನಿನ್ನೆ ಬೆಳಗ್ಗೆ 6 ಗಂಟೆಗೆ ದಾಳಿ ನಡೆಸಿದ್ದ ಅಧಿಕಾರಿಗಳು ತಡರಾತ್ರಿ 11 ಗಂಟೆವರೆಗೂ ಪರಿಶೀಲನೆ ನಡೆಸಿದ್ದರು. ನಿನ್ನೆ ಶೇ 70% ದಾಖಲೆಗಳನ್ನ ಪರಿಶೀಲಿಸಿರುವ ಅಧಿಕಾರಿಗಳು, ಇಂದು ಇನ್ನುಳಿದ 30% ದಾಖಲೆಗಳನ್ನ ಪರಿಶೀಲಿಸಲಿದ್ದಾರೆ. ನಿನ್ನೆಯ ಪರಿಶೀಲನೆ ನಂತರ ಭದ್ರತೆಗಾಗಿ ಇಬ್ಬರು ಸಿಎಆರ್ ಪೇದೆಗಳನ್ನ ರಾಕ್ಲೈನ್ ಮನೆ …
Read More »ಸ್ಯಾಂಡಲ್ವುಡ್ ಐಟಿ ರೇಡ್: ಇಂದು ಪರಿಶೀಲನೆ ಮುಂದುವರೆಸಲಿರೋ ಅಧಿಕಾರಿಗಳು
ಬೆಂಗಳೂರು: ಸ್ಯಾಂಡಲ್ವುಡ್ ಸ್ಟಾರ್ಸ್ ಹಾಗೂ ನಿರ್ಮಾಪಕರ ಮನೆ ಮೇಲೆ ನಿನ್ನೆ ರೇಡ್ ನಡೆಸಿದ ಐಟಿ ಅಧಿಕಾರಿಗಳು ತಡರಾತ್ರಿ 11ರವರೆಗೂ ಪರಿಶೀಲನೆ ನಡೆಸಿದ್ದು, ಇಂದು ಕೂಡ ಪರಿಶೀಲನೆ ಮುಂದುವರೆಸಲಿದ್ದಾರೆ. ನಿನ್ನೆ ಸತತ 16 ಗಂಟೆ ಕಾಲ ಪರಿಶೀಲಿಸಿ ತೆರಳಿದ ಐಟಿ ಅಧಿಕಾರಿಗಳು, ಇಂದು ಬೆಳಗ್ಗೆ 9ರ ನಂತರ ಮತ್ತೆ ಪರಿಶೀಲನೆ ನಡೆಸಲಿದ್ದಾರೆ. ಸ್ಯಾಂಡಲ್ವುಡ್ ಸ್ಟಾರ್ಗಳಾದ ಪುನೀತ್ ರಾಜ್ಕುಮಾರ್, ಸುದೀಪ್, ಯಶ್, ಶಿವರಾಜ್ಕುಮಾರ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ವಿಜಯ್ ಕಿರಗಂದೂರು, ಸಿ.ಆರ್ ಮನೋಹರ್ …
Read More »ಹನಿಟ್ರ್ಯಾಪ್ ಆರೋಪ, ಯುವತಿ ಸೇರಿದಂತೆ ಐವರ ಅರೆಸ್ಟ್
ಅರಸೀಕೆರೆ : ಫೇಸ್ಬುಕ್ನಲ್ಲಿ ಪರಿಚಯಿಸಿಕೊಂಡು ಹನಿಟ್ರ್ಯಾಪ್ ಮಾಡುತ್ತಿದ್ದ ಒಂದು ತಂಡವನ್ನ ಅರಸೀಕೆರೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ ಎಂದು ಹಾಸನ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಪ್ರಕಾಶ್ ಗೌಡ ತಿಳಿಸಿದ್ದಾರೆ.ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಂಧಿತರಲ್ಲಿ ಒರ್ವ ಮಹಿಳೆ ಸೇರಿ ಐವರನ್ನ ಬಂಧಿಸಲಾಗಿದೆ. ಅರ್ಪಿತಾ, ಪವನ, ಕಿರಣ, ದೊರೆ, ಮತ್ತು ಹೇಮೇಶ್ ಬಂಧಿತ ಆರೋಪಿಗಳು. ಇವರು ತುಮಕೂರು, ಬೆಂಗಳೂರು ಮತ್ತು ಹಾಸನ ಮೂಲದವರು ಎಂದು ತಿಳಿದು ಬಂದಿದೆ. ಆರೋಪಿಗಳು ಫೇಸ್ಬುಕ್ನಲ್ಲಿ …
Read More »ಪಶ್ಚಿಮ ಯುಪಿಯಲ್ಲಿ 10ಕ್ಕಿಂತ ಹೆಚ್ಚು ಉಗ್ರಗಾಮಿ ಸಂಘಟನೆ ಸಕ್ರಿಯ!
ಲಕ್ನೋ: ಉತ್ತರ ಪ್ರದೇಶದಲ್ಲಿ ಭಯೋತ್ಪಾದಕರ ಬಲ ಹೆಚ್ಚಾಗುತ್ತಿರುವ ಭೀತಿ ಉಂಟಾಗಿದೆ. ಅದರಲ್ಲೂ ಪಶ್ಚಿಮ ಯುಪಿಯಲ್ಲಿ ಭಯೋತ್ಪಾದಕರು ಬೀಡುಬಿಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಆ ಭಾಗದಲ್ಲಿ ಭಯೋತ್ಪಾದಕರು ಸಕ್ರಿಯರಾಗಿರುವ ಬಗ್ಗೆ ತನಿಖಾ ಸಂಸ್ಥೆಗೆ ಮೂಲಗಳಿಂದ ಮಾಹಿತಿ ಲಭಿಸಿದೆ ಎಂದು ತಿಳಿದುಬಂದಿದೆ.ಪಶ್ಚಿಮ ಉತ್ತರಪ್ರದೇಶದ 10 ಕ್ಕಿಂತ ಹೆಚ್ಚು ಭಯೋತ್ಪಾದಕ ಸಂಘಟನೆಗಳು ಸಕ್ರಿಯವಾಗಿವೆ. ಸಹರಾನ್ಪುರ್, ಶಾಮ್ಲಿ, ಅಮ್ರೋಹಾ, ಆಗ್ರಾ, ಮೀರತ್, ಮಥುರಾ, ಮುಜಫರ್ನಗರ, ಮೊರಾದಾಬಾದ್ ಮತ್ತು ಹಾಪುದ್ ಜಿಲ್ಲೆಗಳಲ್ಲಿ ಭಯೋತ್ಪಾದಕ ಸಂಘಟನೆಗಳು ಸಕ್ರಿಯವಾಗಿವೆ ಎನ್ನಲಾಗಿದೆ.ತನಿಖಾ ಸಂಸ್ಥೆಗಳು …
Read More »ಪುರಿ ಲೋಕಸಭಾ ಕ್ಷೇತ್ರದಿಂದ ಮೋದಿ ಕಣಕ್ಕೆ..?
ದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಹಾಗೂ ಬಿಜೆಪಿಯನ್ನ ಸೋಲಿಸಲು ವಿರೋಧ ಪಕ್ಷಗಳು ಒಂದಾಗ್ತಿವೆ. ಅಲ್ಲದೇ ಬಿಜೆಪಿಯನ್ನ ಕಟ್ಟಿ ಹಾಕಲು ನಾನಾ ರೀತಿಯ ತಂತ್ರಗಳನ್ನು ಹೆಣೆಯುತ್ತಿವೆ. ಇತ್ತ ಕೇಸರಿ ನಾಯಕರು ಲೋಕಸಭಾ ಚುನಾವಣೆಯನ್ನ ಎದುರಿಸಲು ಸಜ್ಜಾಗ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಒಡಿಶಾದ ಪುರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಹಿರಿಯ ನಾಯಕ ಪ್ರದೀಪ್, ಪ್ರಧಾನಿ ಮೋದಿ ಪುರಿಯಿಂದ ಸ್ಪರ್ಧಿಸೋದು 90ರಷ್ಟು …
Read More »ಯೋಗಿ ನಾಡಲ್ಲಿ, ಮೋದಿ ಱಲಿ ಮುಗಿಸಿ ಬರುತ್ತಿದ್ದ ಮತ್ತೊಬ್ಬ ಪೊಲೀಸ್ ಕಲ್ಲೇಟಿಗೆ ಬಲಿ..!
ಲಖೌನ್: ಬುಲಂದರ್ಶಹರ್ನಲ್ಲಿ ನಡೆದ ಪೊಲೀಸ್ ಇನ್ಸ್ಪೆಕ್ಟರ್ ಸುಭೋದ್ ಕುಮಾರ್ ಸಿಂಗ್ರ ಹತ್ಯೆಯ ಕಹಿ ಘಟನೆ ಇನ್ನೂ ಹಸಿ ಹಸಿಯಾಗಿದೆ. ಇದರ ಬೆನ್ನಲ್ಲೇ, ನಿನ್ನೆ ಗಾಜೀಪುರ ಜಿಲ್ಲೆಯಲ್ಲಿ ನಡೆದ ಕಲ್ಲು ತೂರಾಟದಲ್ಲಿ ಪೊಲೀಸ್ ಪೇದೆಯೊಬ್ಬ ಮೃತಪಟ್ಟಿದ್ದಾರೆ.ಗಾಜೀಪುರ್ನಿಂದ 350ಕಿ.ಮೀ. ದೂರವಿರುವ ಕಥವಾದಲ್ಲಿ ಹತ್ಯೆ ನಡೆದಿದ್ದು, ಮೃತ ಪೇದೆಯನ್ನು ನಾನೆರಾ ಪೊಲೀಸ್ ಠಾಣೆಯ ಸುರೇಶ್ ವತ್ಸ್ ಎಂದು ಗುರುತಿಸಲಾಗಿದೆ. ನಿಶಾದ್ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ನಿಷಾದ್ ಪಾರ್ಟಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ಇದಕ್ಕಾಗಿ, ಜಿಲ್ಲಾ …
Read More »ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ: ವಾಹನ ಸವಾರರಿಗೆ ಗುಡ್ನ್ಯೂಸ್ ಕೊಟ್ಟು ಹೋಗ್ತಿದೆ 2018
2018ಕ್ಕೆ ಗುಡ್ ಬೈ ಹೇಳೋ ಹೊತ್ತಲ್ಲೇ ವಾಹನ ಸವಾರರಿಗೆ ಗುಡ್ ನ್ಯೂಸ್ ಕೊಟ್ಟು ಹೋಗ್ತಿದೆ. ವರ್ಷದ ಕೊನೆಯ ದಿನವಾದ ಇಂದು ಕೂಡ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಯಾಗಿದೆ. ಪೆಟ್ರೋಲ್ ಬೆಲೆಯಲ್ಲಿ 20 ಪೈಸೆ ಇಳಿಕೆಯಾಗಿದ್ದರೆ, ಡೀಸೆಲ್ ಬೆಲೆಯಲ್ಲಿ 23 ಪೈಸೆ ಕಡಿಮೆಯಾಗಿದೆ. ಇಂದು ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ₹68.84 ಇದ್ದರೆ, ಡೀಸೆಲ್ ಬೆಲೆ ಪ್ರತಿ ಲೀಟರ್ಗೆ ₹62.86 ಇದೆ. ಇನ್ನು ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್ಗೆ ₹69.39 ಇದ್ದರೆ, …
Read More »ಹಿರಿಯ ನಟ ಲೋಕನಾಥ್ ಇನ್ನಿಲ್ಲ..
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, ರಂಗಭೂಮಿ ಮತ್ತು ಚಲನಚಿತ್ರ ರಂಗದ ಮೇರು ನಟ ಸಿ.ಎಚ್.ಲೋಕನಾಥ್ ಭಾನುವಾರ ರಾತ್ರಿ 12:15ಕ್ಕೆ ಇಹಲೋಕ ತ್ಯಜಿಸಿದ್ದಾರೆ.ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕಳೆದ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಇಂದು ಬೆಳಿಗ್ಗೆ 11 ಗಂಟೆಯಿಂದ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಮೃತರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು.ಆಗಸ್ಟ್ 14, 1927 ರಲ್ಲಿ ಬೆಂಗಳೂರಿನಲ್ಲಿ ಹನುಮಂತಪ್ಪ ಮತ್ತು ಗೌರಮ್ಮ ದಂಪತಿಗಳಿಗೆ ಜನಿಸಿದ ಲೋಕನಾಥ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಅವರು ಕುಟುಂಬದ …
Read More »ಮೇಕೆದಾಟು ಯೋಜನೆಗೆ ಡಿಪಿಆರ್ ಸಿದ್ಧಪಡಿಸಲು ಕರ್ನಾಟಕಕ್ಕೆ ಅನುಮತಿ; ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್…
ಮೇಕೆದಾಟು ಯೋಜನೆಗೆ ಡಿಪಿಆರ್ ಸಿದ್ಧಪಡಿಸಲು ಕರ್ನಾಟಕಕ್ಕೆ ಅನುಮತಿ; ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ರಾಜ್ಯದ ಸಂಸದರಾದ ಡಿ.ಕೆ. ಸುರೇಶ್ ಹಾಗೂ ನಳಿನ್ ಕುಮಾರ್ ಕಟೀಲ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಕೇಂದ್ರ ಜಲಸಂಪನ್ಮೂಲ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ನವದೆಹಲಿ: ಮೇಕೆದಾಟು ಯೋಜನೆ ಸಂಬಂಧ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಕೇಂದ್ರ ಜಲ ಆಯೋಗವು ಕರ್ನಾಟಕ ಸರ್ಕಾರಕ್ಕೆ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಕೇಂದ್ರ ಜಲಸಂಪನ್ಮೂಲ …
Read More »ವಿಷಪೂರಿತ ಆಹಾರ ಸೇವನೆ; ಒಂದೇ ಕುಟುಂಬದ ನಾಲ್ವರ ಬಲಿ, ಮೂವರು ಅಸ್ವಸ್ಥ,.,..
ವಿಷಪೂರಿತ ಆಹಾರ ಸೇವನೆ; ಒಂದೇ ಕುಟುಂಬದ ನಾಲ್ವರ ಬಲಿ, ಮೂವರು ಅಸ್ವಸ್ಥಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಹುಲಿತೊಟ್ಲು ಗ್ರಾಮದಲ್ಲಿ ನಡೆದಿರುವ ಘಟನೆ.ಚಿತ್ರದುರ್ಗ: ವಿಷಪೂರಿತ ಆಹಾರ ಸೇವಿಸಿ ನಾಲ್ವರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಹುಲಿತೊಟ್ಲು ಗ್ರಾಮದಲ್ಲಿ ನಡೆದಿದೆ. ಚಿತ್ರದುರ್ಗದ ಐಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಳೆದ ರಾತ್ರಿ ಹುಲಿತೊಟ್ಲು ಗ್ರಾಮದ ಏಳು ಮಂದಿ ವಿಷಾಹಾರ ಸೇವಿಸಿದ್ದು, ಅಸ್ವಸ್ಥಗೊಂಡ ಇವರುಗಳನ್ನು ದಾವಣಗೆರೆಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದೆ ಚಿತ್ತಪ್ಪ, ಶಶಿಧರ್ ,ಭಾಗ್ಯಮ್ಮ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





