Breaking News

Shaikh BIG TV NEWS, Hubballi

ಐ ಸೇವರ್ ಸಂಸ್ಥೆಯ ಹ್ಯಾಟ್ರಿಕ್ ಸಾಧನೆ- ೩ನೇ ಬಾರಿ ಜೈಸಿ ಅಂಡ್ ಐ ಅವಾರ್ಡ್

ಹುಬ್ಬಳ್ಳಿ: ಐ ಸೆವರ್ ಸಂಸ್ಥೆಯೂ ಇತ್ತೀಚಿಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೈಸಿ “ಯು ಆ್ಯಂಡ್ ಐ ಅವಾರ್ಡ್-2018″ನ್ನು ತನ್ನ ಮುಡಿಗೇರಿಸಿಕೊಂಡಿದೆ ಎಂದು ಐ ಸೆವರ್ ಸಂಸ್ಥೆಯ ಮುಖಂಡರಾದ ಕುನಾಲ್ ಷಾ ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ 18 ರಂದು ಮುಂಬೈನಲ್ಲಿ ನಡೆದ ಎಕ್ಸಲೇನ್ಸ್ ಇನ್ ಕ್ಲಿನಿಕಲ್ ಸಪೋರ್ಟ್ ಇನ್ ಇಂಡಿಯಾ ಕಾರ್ಯಕ್ರಮದಲ್ಲಿ ಸುಮಾರು ಕಣ್ಣಿನ ತಜ್ಞರು ಪಾಲ್ಗೊಂಡಿದ್ದು, ಐ ಸೇವರ್ ಸಂಸ್ಥೆಯೂ ಈ ಒಂದು ಗೌರವವನ್ನು ತನ್ನು ಮುಡಿಗೇರಿಸಿಕೊಂಡಿದೆ …

Read More »

ಇಂದು ಬಿಜೆಪಿಯೇತರ ಪಕ್ಷಗಳ ಮಹತ್ವದ ಸಭೆ: ಮಹಾಘಟಬಂಧನಕ್ಕೆ ಮುಹೂರ್ತ

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕಾರ್ಯತಂತ್ರ ರೂಪಿಸಲು ಸಂಭಾವ್ಯ ಮಹಾಘಟಬಂಧನಕ್ಕೆ ಮುಹೂರ್ತ ಸಿದ್ಧವಾಗಿದೆ. ಮಹಾಘಟಬಂಧನದ ಮೊದಲ ಸಭೆ ಇಂದು ನಡೆಯಲಿದ್ದು, ತೆಲುಗು ದೇಶಂ ಪಕ್ಷ (ಟಿಡಿಪಿ) ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಸಭೆಯ ನೇತೃತ್ವ ವಹಿಸಿದ್ದಾರೆ.ಮಧ್ಯಪ್ರದೇಶ, ಛತ್ತೀಸ್ಗಢ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳನ್ನು ಘೋಷಿಸುವ ಮತ್ತು ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭದ ಒಂದು ದಿನ ಮುಂಚಿತವಾಗಿ ನಡೆಯುತ್ತಿರುವ ಈ ಸಭೆ …

Read More »

ಬ್ರಿಟನ್ ನ್ಯಾಯಾಲಯದಲ್ಲಿಂದು ಮಲ್ಯ ರವಾನೆ ಪ್ರಕರಣ, ಭಾರತಕ್ಕೆ ಜಯ ಸಿಗುವ ಸಾಧ್ಯತೆ

ಲಂಡನ್: ವಿಜಯ್ ಮಲ್ಯ ಬ್ಯಾಂಕುಗಳಿಗೆ ಸುಮಾರು 9 ಸಾವಿರ ಕೋಟಿ ರೂಪಾಯಿ ವಂಚಿಸಿ 2016 ಮಾರ್ಚ್ ತಿಂಗಳಿಂದ ಲಂಡನ್ ನಲ್ಲಿದ್ದಾರೆ. ಆತನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ತನಿಖಾ ಸಂಸ್ಥೆಗಳು ಲಂಡನ್ ಸರ್ಕಾರದಲ್ಲಿ ಮನವಿ ಮಾಡಿಕೊಂಡಿವೆ. ಈ ಸಂಬಂಧ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಇಂದು ವಿಚಾರಣೆ ನಡೆಯಲಿದೆ.ಸಿಬಿಐ ಮತ್ತು ಜಂಟಿ ನಿರ್ದೇಶಕ ಎ. ಸಾಯಿ ಮನೋಹರ್ ನೇತೃತ್ವದಲ್ಲಿ ಸಿಬಿಐ ಮತ್ತು ಇಡಿ ಜಂಟಿ ತಂಡ ಯುಕೆಗೆ ತೆರಳಿದೆ. ಮಲ್ಯ ರವಾನೆಗೆ ಸಂಬಂಧಿಸಿದಂತೆ …

Read More »

ಆ್ಯಂಬಿಡೆಂಟ್ ಕೇಸ್, ಜನರಿಗೆ ಟೋಪಿ ಹಾಕಿ ಸಂಪಾದಿಸಿದ ಕೋಟಿ ಕೋಟಿ ಎಲ್ಲಿ ಹೋಯ್ತು?

ಬೆಂಗಳೂರು: ಆ್ಯಂಬಿಡೆಂಟ್ ಕಂಪನಿ ಬಹುಕೋಟಿ ವಂಚನೆ ಪ್ರಕರಣದ ಜಾಡುಹಿಡಿದು ಹೊರಟಿರೋ ಸಿಸಿಬಿ ಪೊಲೀಸರು ಜನರ ಕೋಟಿ ಕೋಟಿ ಹಣಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಜನರಿಗೆ ಟೋಪಿ ಹಾಕಿ ಸಂಪಾದಿಸಿದ ಹಣವನ್ನ ಫರೀದ್ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಹೂಡಿಕೆ ಮಾಡಿದ್ದಾನೆ ಅನ್ನೋದು ತನಿಖೆಯಲ್ಲಿ ಬಹಿರಂಗವಾಗಿದೆ.ಟೋಕ್ಯೋ ಎನ್ನುವ ಪೆಟ್ರೋಲಿಯಂ ಪ್ರಾಡಕ್ಟ್​ನ ಬಹುರಾಷ್ಟ್ರೀಯ ಕಂಪನಿಯಲ್ಲಿ ಫರೀದ್​​ನಿಂದ ಕೋಟಿ ಕೋಟಿ ಹಣ ಹೂಡಿಕೆಯಾಗಿದೆ. ಆ್ಯಂಬಿಡೆಂಟ್​ ಪ್ರಕರಣದಲ್ಲಿ ಬಂಧಿತನಾಗಿರುವ ಏಳನೇ ಆರೋಪಿ ವಾಹಬ್ ಈ ಸ್ಫೋಟಕ ಮಾಹಿತಿ …

Read More »

ಚಳಿಗಾಲದ ಅಧಿವೇಶನಕ್ಕೆ ಸಿದ್ದರಾಮಯ್ಯ ಗೈರು, ವಿದೇಶ ಪ್ರವಾಸಕ್ಕೆ ಹೊರಟ ಮಾಜಿ ಸಿಎಂ

ಮೈಸೂರು: ಬೆಳಗಾವಿಯಲ್ಲಿ ಡಿಸೆಂಬರ್​ 10ರಿಂದ ನಡೆಯಲಿರುವ ಮಹತ್ವದ ಚಳಿಗಾಲದ ಅಧಿವೇಶನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಗೈರು ಹಾಜರಾಗಲಿದ್ದಾರೆ. ಆ ವೇಳೆ ಅವರು ವಿದೇಶ ಪ್ರವಾಸಕ್ಕೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.ಅಧಿವೇಶನಕ್ಕೆ ಗೈರು ಹಾಜರಾಗಿ, ವಿದೇಶ ಪ್ರವಾಸಕ್ಕೆ ತೆರಳುವ ಬಗ್ಗೆ ಸಿದ್ದರಾಮಯ್ಯ ಅವರನ್ನ ಮೈಸೂರಿನಲ್ಲಿ ಸುದ್ದಿಗಾರರು ಕೇಳಿದ್ದಕ್ಕೆ ಅವರು ಗರಂ ಆದರು. ವಿದೇಶಕ್ಕೆ ಹೋಗೋದು ಏನ್ ಅಫೆನ್ಸಾ..? ನಮಗೂ ವೈಯಕ್ತಿಕ ಜೀವನ ಇರುತ್ತಪ್ಪಾ ಎಂದು ಕಿಡಿಕಾರಿದರು. ಮದುವೆ ಇದೇ, ಸೋ ಹೋಗ್ತಾ ಇದ್ದೀನಿ …

Read More »

ಬುಲಂದಶಹರ್​ ಇನ್ಸ್​​ಪೆಕ್ಟರ್​ ಸುಭೋದ್ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್​, ಯೋಧ ಅರೆಸ್ಟ್​

ಜಮ್ಮು: ಬುಲಂದಶಹರದಲ್ಲಿ ಇತ್ತೀಚೆಗೆ ನಡೆದ ಪೊಲೀಸ್​ ಇನ್ಸ್​​ಪೆಕ್ಟರ್​ ಸುಭೋದ್ ಕುಮಾರ್​​​ ಸಿಂಗ್​ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದ್ದು, ಇನ್ಸ್​​ಪೆಕ್ಟರ್​ ಸುಭೋದ್​ ಅವರನ್ನು ಹತ್ಯೆ ಮಾಡಿದ ಆರೋಪದ ಮೇಲೆ ಜಮ್ಮುವಿನ ಸೊಪೋರ್​​​ನಲ್ಲಿ ಯೋಧರೊಬ್ಬರನ್ನು ಬಂಧಿಸಲಾಗಿದೆ.ಸೊಪೋರ್​​​ನಲ್ಲಿರುವ 22 ರಾಷ್ಟ್ರೀಯ ರೈಫಲ್ಸ್​ ಸೇನಾ ಶಿಬಿರದಲ್ಲಿ ಕರ್ತವ್ಯದಲ್ಲಿದ್ದ ಜಿತೇಂದ್ರ ಮಲಿಕ್​ ಅಲಿಯಾಸ್​​ ಜೀತು ಫೌಜಿ ಬಂಧಿತ ಯೋಧ. ಜಿತೇಂದ್ರ ಮಲಿಕ್​ನನ್ನು ಶೀಘ್ರವೇ ಉತ್ತರ ಪ್ರದೇಶ ಪೊಲೀಸರಿಗೆ ಒಪ್ಪಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಇನ್ಸ್​​ಪೆಕ್ಟರ್​ ಸುಭೋದ್​ ಅವರನ್ನು …

Read More »

5 ದಿನಗಳ ಕಾಲ ಸಿಬಿಐ ಕಸ್ಟಡಿಗೆ ‘ಅಗಸ್ಟಾ’ ಏಜೆಂಟ್

ದೆಹಲಿ: ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣದ ಆರೋಪಿ ಕ್ರಿಶ್ಚಿಯನ್ ಮೈಕಲ್​ಗೆ ದೆಹಲಿ ನ್ಯಾಯಾಲಯ, 5 ದಿನಗಳ ಕಾಲ ಸಿಬಿಐ ಕಸ್ಟಡಿ ವಿಧಿಸಿದೆ. ಪ್ರಕರಣದ ತನಿಖೆಗೆ ಪುರಾವೆಗಳ ಸಹಿತ ವಿಚಾರಣೆ ನಡೆಸಬೇಕು ಆದ್ರಿಂದ ಸಿಬಿಐ ಕಸ್ಟಡಿ ವಿಧಿಸಬೇಕೆಂದು ಕೋರ್ಟ್​​ಗೆ ಸಿಬಿಐ ಮನವಿ ಮಾಡಿಕೊಂಡಿತ್ತು. ಮನವಿ ಪುರಸ್ಕರಿಸಿದ ನ್ಯಾಯಾಲಯ, ಆರೋಪಿ ಕ್ರಿಶ್ಚಿಯನ್ ಮೈಕಲ್​​​ನನ್ನ 5 ದಿನ ಸಿಬಿಐ ಕಸ್ಟಡಿಗೆ ದೆಹಅಒಪ್ಪಿಸಿದೆ.

Read More »

ಪ್ರಧಾನಿ ಕಚೇರಿ ವಿರುದ್ಧ ಚುನಾವಣಾ ಆಯೋಗಕ್ಕೆ ಕಂಪ್ಲೇಂಟ್

ಗುವಾಹಟಿ: ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷ ಕಾಂಗ್ರೆಸ್ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ ಮಾಡಿದೆ. ಅಸ್ಸಾಂ ರಾಜ್ಯಾದ್ಯಂತ ಪಂಚಾಯತ್ ಎಲೆಕ್ಷನ್ ನಡೆಯಲಿದ್ದು, ಅದೇ ವೇಳೆ ಬಿಜೆಪಿ ರಾಜ್ಯದಲ್ಲಿ ನಿರ್ಮಿಸಿರುವ ಬೋಗಿಬೀಲ್ ಬ್ರಿಡ್ಜ್‌ ಉದ್ಘಾಟನೆಯನ್ನು ಹಮ್ಮಿಕೊಂಡಿದೆ. ಹೀಗಾಗಿ ಕಾಂಗ್ರೆಸ್, ಪ್ರಧಾನ ಮಂತ್ರಿ ಕಚೇರಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಡಿಸೆಂಬರ್ 25 ಕ್ಕೆ ದೇಶದಲ್ಲೇ ಅತಿ ಉದ್ದವಾದ 4.94 ಕಿಲೋ ಮೀಟರ್ ಉದ್ದದ ಬೋಗಿಬೀಲ್ ಸೇತುವೆ ಉದ್ಘಾಟನೆಯನ್ನು …

Read More »

ಪ್ರಾಥಮಿಕ ಮತ್ತು ಪ್ರಾಢಶಾಲಾ ಶಿಕ್ಷಕರ ನೇಮಕಕ್ಕೆ ಆಗ್ರಹಿಸಿ ಎಬಿವಿಪಿ ಪ್ರತಭಟನೆ

ಹುಬ್ಬಳ್ಳಿಪ್ರಥಾಮಿಕ ಮತ್ತು ಪ್ರೌಢಶಾಲಾ ಸಚಿವರ ನೇಮಕಕ್ಕೆ ಹಾಗೂ ಪಿಯು ಬೋರ್ಡ್‌ಗೆ ನಿರ್ದೇಶಕ ನೇಮಕಕ್ಕೆ ಅಗ್ರಹಿಸಿ ಪ್ರತಿಭಟನೆಹುಬ್ಬಳ್ಳಿಯಲ್ಲಿ ವಿದ್ಯಾರ್ಥಿಗಳಿಂದ ಬೃಹತ್ ಪ್ರತಿಭಟನೆನಗರದ ತಹಶೀಲದಾರ ಕಚೇರಿ ಎದುರು ಪ್ರತಿಭಟಿಸಿ ಆಕ್ರೋಶಅಖಿಲ್ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಪ್ರತಿಭಟಿಸಿ ಆಕ್ರೋಶರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಹೆಚ್ ಡಿಕೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶಸಚಿವರಿಲ್ಲದೆ ಪ್ರಾಥಮಿಕ ಮತ್ತು ಪ್ರೌಡ ಶಾಲಾ ಶಿಕ್ಷಣ ಇಲಾಖೆಗೆ ತೊಂದರೆಯಾಗುತ್ತಿದ್ದೆಇದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಕೆಟ್ಟ ಪ್ರಭಾವ ಬೀರುತ್ತಿದೆಕೂಡಲೇ ರಾಜ್ಯ ಸರ್ಕಾರ …

Read More »

ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ರಾಜ್ಯಪಾಲ ವಜೂಬಾಯಿ ವಾಲಾ

ವಾಣಿಜ್ಯ ನಗರಿ ಹುಬ್ಬಳ್ಳಿಗೆ ಆಗಮಿಸಿದ ರಾಜ್ಯಪಾಲ ವಜೂಬಾಯಿ ವಾಲಾ ಅವರನ್ನು ಜಿಲ್ಲಾಧಿಕಾರಿ ದೀಪಾ ಚೋಳನ್ ಗೌರವ ವಂದನೆಗಳೊಂದಿಗೆ ಬರಮಾಡಿಕೊಂಡರು.ಹುಬ್ಬಳ್ಳಿಯ ಪ್ರವಾಸಿ ಮಂದಿರದಲ್ಲಿ ರಾಜ್ಯಪಾಲರನ್ನುಜಿಲ್ಲಾಧಿಕಾರಿ ದೀಪಾ ಚೋಳನ್, ಹು-ಧಾ ಪೊಲೀಸ್ ಆಯುಕ್ತ ಎಂ ಎನ್ ನಾಗರಾಜ್, ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ, ಡಿಸಿಪಿ ಬಿ ಎಸ್ ನೇಮಗೌಡ ಅವರು ಗೌರವ ವಂದನೆ ಸಲ್ಲಿಸಿ ಬರ ಮಾಡಿಕೊಂಡರು.ಖಾಸಗಿ ಕಾರ್ಯಕ್ರ.ದ ಹಿನ್ನೆಲೆಯಲ್ಲಿ ಕಾರವಾರಕ್ಕೆ ತೆರಳಿದ್ದ ಅವರು ಇಂದು ರಸ್ತೆ ಮೂಲಕ‌ ಹುಬ್ಬಳ್ಳಿಗೆ ಆಗಮಿಸಿದರು. …

Read More »