ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ(ಎಸ್ಐಟಿ) ಶುಕ್ರವಾರ ಪ್ರಕರಣದ ಕುರಿತು ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ.ಬೆಂಗಳುರು 1ನೇ ಸೆಷನ್ಸ್ ಕೋರ್ಟ್ಗೆ 9235 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು ಚಾರ್ಜ್ ಶೀಟ್ ನಲ್ಲಿ ಹೆಸರಿಸಲಾದ ಕೆಲವರು “ಸನಾತನ ಸಂಸ್ಥೆ” ಜತೆ ನಂಟು ಹೊಂದಿದ್ದಾರೆ ಎಂದು ಹೇಳಿದೆ.ಶುಕ್ರವಾರ ಸಂಜೆ ತನಿಕಾಧಿಕಾರಿಗಳ ತಂಡ ಟ್ರಂಕ್ ನಲ್ಲಿ ಚಾರ್ಜ್ ಶೀಟ್ ಗಳನ್ನು ಹೊತ್ತು ತಂದು ನ್ಯಾಯಾಲಯಕ್ಕೆ …
Read More »ನೆಗಲೆಕ್ಟ್ ಮಾಡೋ ಮಜ್ಜಿಗೆ ಆರೋಗ್ಯಕ್ಕೆ ಎಷ್ಟು ಲಾಭದಾಯಕ ಗೊತ್ತಾ
ಮಜ್ಜಿಗೆ ಆರೋಗ್ಯಕ್ಕೆ ಒಳ್ಳೆಯದು ಅಂತಾ ಎಲ್ಲಾರಿಗೂ ಗೊತ್ತು. ಆದ್ರೂ ನಾವು ಮಜ್ಜಿಗೆಯನ್ನ ಬಳಸಲು ಮೂಗುಮುರಿಯುತ್ತೇವೆ. ಹಿಂದಿನ ಕಾಲದಲ್ಲಿ ಮನೆಗೆ ಯಾರಾದ್ರೂ ಬಂದರೆ ಅವರಿಗೆ ತಪ್ಪದೇ ಮಜ್ಜಿಗೆ ಕೊಡುತ್ತಿದ್ರು. ಆದರೆ ಈಗ ಮಜ್ಜಿಗೆ ಬದಲು ಕೂಲ್ ಡ್ರಿಂಕ್ಸ್ ಕೊಡುವುದು ಸಾಮಾನ್ಯವಾಗಿದೆ.ಮಜ್ಜಿಗೆಯಲ್ಲಿ ನಮಗೆ ತಿಳಿದಿರುವದಕ್ಕಿಂತ ಹೆಚ್ಚಿನ ಪೌಷ್ಟಿಕಾಂಶವಿದೆ. ಅದರಲ್ಲಿ ಕ್ಯಾಲ್ಸಿಯಂ, ಜೀವಸತ್ವಗಳು ಖನಿಜಾಂಶ ಹೆಚ್ಚಾಗಿದೆ. ಅದಲ್ಲದೇ ಮಜ್ಜಿಗೆಯನ್ನ ಸೇರಿಸಿ ಮಾಡುವ, ಎಲ್ಲಾ ಆಹಾರವು ರುಚಿಕರವಾಗಿರುತ್ತದೆ. ಮಜ್ಜಿಗೆ ಆಮ್ಲೀಯ ಗುಣಗಳನ್ನು ಹೊಂದಿರುವುದರಿಂದ ಅದು ಆಹಾರಕ್ಕೆ …
Read More »ವೇದ ಮಂತ್ರ ಪಠಣ ಮಾಡಿದ್ರೆ ನಿಮಗೆ ಬಂಪರ್ ಬೆಳೆ..!
ನವದೆಹಲಿ: ನಿಮಗೆ ಬಂಪರ್ ಬೆಳೆ ದೊರೆಯಬೇಕೆಂದರೆ ನೀವು ವೇದ ಮಂತ್ರ ಪಠಣ ಮಾಡಬೇಕು ಎನ್ನುವ ವಿಚಿತ್ರ ಸಲಹೆಯನ್ನು ಗೋವಾ ಸರ್ಕಾರ ರೈತರಿಗೆ ನೀಡಿದೆ.ಅಚ್ಚರಿಯೆಂದರೆ ಸರ್ಕಾರದ ಕೃಷಿ ಇಲಾಖೆಯು ರೈತರಿಗೆ ಕಾಸ್ಮಿಕ್ ಫಾರ್ಮಿಂಗ್ ವಿಧಾನವನ್ನು ಅನುಸರಿಸಲು ಹೇಳಿದೆ. ಇದರ ಪ್ರಕಾರ ಗದ್ದೆಯಲ್ಲಿ ಮಂತ್ರವನ್ನು ಪಠಣ ಮಾಡಬೇಕು ಆಗ ಉತ್ತಮ ಇಳುವರಿ ಬರುತ್ತದೆ ಎನ್ನುವ ಸಲಹೆಯನ್ನು ಇಲಾಖೆ ಹೇಳಿದೆ.ಸರ್ಕಾರದ ಅಧಿಕಾರಿಗಳು ಹೇಳುವಂತೆ ಈಗಾಗಲೇ ಈ ಕ್ಷೇತ್ರದಲ್ಲಿ ಪರಿಣಿತಿ ಹೊಂದಿರುವ ಶಿವ ಯೋಗ್ ಫೌಂಡೇಶನ್ …
Read More »ಅಲೋಕ್ ಕುಮಾರ್ ಎಂಟ್ರಿಗೆ ಬಿಲ ಸೇರಿದ ಸೈಲೆಂಟ್ ಸುನೀಲ್ ಗ್ಯಾಂಗ್..!
ಬೆಂಗಳೂರು: ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಅಲೋಕ್ ಕುಮಾರ್ ಬೆಂಗಳೂರಿಗೆ ಎಂಟ್ರಿ ಕೊಟ್ಟೆದ್ದೇ ಕೊಟ್ಟಿದ್ದು, ಅಳಕ್ಪುಳಕ್ ರೌಡಿಗಳೆಲ್ಲಾ ಬಿಲ ಸೇರಿದ್ದಾರೆ. ಆದರೆ ಸೈಲೆಂಟ್ ಸುನೀಲ & ಗ್ಯಾಂಗ್ ಮಾತ್ರ, ಯಾರೇ ಬರ್ಲಿ ಯಾರೇ ಹೋಗ್ಲಿ, ನಾವಾಡಿದ್ದೇ ಆಟ ಅಂದುಕೊಂಡು ಮೆರೆದಾಡ್ತಿದ್ರು. ಆದ್ರೀಗ ಆ ಗ್ಯಾಂಗ್ನ ಲೀಡರ್ಗೆ ಖಾಕಿ ಸಿಂಗಂ ಬೆಂಡೆತುತ್ತಿದ್ದಂತೆ ಹಿಂದೆ ಮುಂದೆ ಓಡಾಡ್ತಿದ್ದ ಸಹಚರರು ಬಾಲ ಮುದುರಿಕೊಂಡಿದ್ದಾರೆ.ಸಿಸಿಬಿಗೆ ಹೆಚ್ಚುವರಿ ಆಯುಕ್ತರಾಗಿ ಅಲೋಕ್ ಕುಮಾರ್ ಅಧಿಕಾರ ವಹಿಸಿಕೊಂಡ ಮೇಲೆ ಕ್ರೈಂ …
Read More »ಚಿತ್ರರಂಗ, ರಾಜಕಾರಣವನ್ನೂ ಮೀರಿದ ಸ್ನೇಹ ನಮ್ಮದಾಗಿತ್ತು: ಸಿಎಂ ಕುಮಾರಸ್ವಾಮಿ
ಬೆಂಗಳೂರು: ಹಿರಿಯ ನರ, ಮಾಜಿ ಸಚಿವ ಅಂಬರೀಶ್ ಅವರ ಅಕಾಲಿಕ ಮರಣ ದೊಡ್ಡ ಶೂನ್ಯವನ್ನು ಸೃಷ್ಟಿಸಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.ಅಂಬರೀಶ್ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಕನ್ನಡ ಚಿತ್ರರಂಗ ಕಂಡ ಮಹತ್ವದ ಕಲಾವಿದ ಹಾಗೂ ಅಪರೂಪದ ವ್ಯಕ್ತಿತ್ವದ ರಾಜಕಾರಣಿ ಇನ್ನಿಲ್ಲ ಎನ್ನುವುದು ಅಪಾರ ದುಃಖವನ್ನುಂಟುಮಾಡಿದೆ. ನನ್ನ ಮತ್ತು ಅವರ ಸ್ನೇಹ ಅನುಗಾಲದ್ದು. ಚಿತ್ರರಂಗ ಹಾಗೂ ರಾಜಕಾರಣವನ್ನು ಮೀರಿದ ಸ್ನೇಹ ನಮ್ಮದಾಗಿತ್ತು ಎಂದು ಟ್ವೀಟ್ …
Read More »ಹಿರಿಯ ನಟ ಅಂಬರೀಶ್ ಇನ್ನಿಲ್ಲ.
ಬೆಂಗಳೂರು: ಹಿರಿಯ ನಟ, ಮಾಜಿ ಸಚಿವ ಅಂಬರೀಶ್ ಇಂದು ರಾತ್ರಿ 10.20ಕ್ಕೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಉಸಿರಾಟ ಹಾಗೂ ಶ್ವಾಸಕೋಶ ಸಮಸ್ಯೆಯಿಂದ ಇಂದು ಸಂಜೆ ಅವರ ಆರೋಗ್ಯದಲ್ಲಿ ಇದ್ದಕ್ಕಿದ್ದಂತೆ ಏರುಪೇರಾಗಿತ್ತು. ಕೂಡಲೇ ಅವರನ್ನ ನಗರದ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಟ ಅಂಬರೀಶ್ ಅವರಿಗೆ 66 ವರ್ಷ ವಯಸ್ಸಾಗಿತ್ತು. ಪತ್ನಿ ಸುಮಲತಾ ಮತ್ತು ಪುತ್ರ ಅಭಿಷೇಕ್ ಸೇರಿದಂತೆ ಅನೇಕ ಅಭಿಮಾನಿಗಳನ್ನು ಅಗಲಿದ್ದಾರೆ.ಕನ್ನಡ ಚಿತ್ರರಂಗ ಹಾಗೂ ದಕ್ಷಿಣ ಭಾರತದ ಮೇರು ನಟ ರೆಬೆಲ್ ಸ್ಟಾರ್ …
Read More »ಜೈಶ್-ಇ-ಮೊಹಮ್ಮದ್ ಸಂಘಟನೆಯ ಇಬ್ಬರು ಉಗ್ರರು ಬೆಂಗಳೂರಿಗೆ ಎಂಟ್ರಿ..!?
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಗೆ ಜೈಶ್-ಎ-ಮೊಹಮ್ಮದ್ ಸಂಘಟನೆಯ ಇಬ್ಬರು ಉಗ್ರರು ಎಂಟ್ರಿ ಕೊಟ್ಟಿರುವ ಬಗ್ಗೆ ಇಂಟಲಿಜೆನ್ಸ್ ಬ್ಯೂರೋ ಮಾಹಿತಿ ನೀಡಿದೆ. ಆರು ಉಗ್ರರನ್ನೊಳಗೊಂಡ ತಂಡ ದೆಹಲಿಗೆ ಎಂಟ್ರಿ ಕೊಟ್ಟಿದ್ದು, ಅದರಲ್ಲಿ ಇಬ್ಬರು ಬೆಂಗಳುರಿಗೆ ಆಗಮಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶದ ಎಟಿಎಸ್ ಹಾಗೂ ದೆಹಲಿ ಪೊಲೀಸರು ಬೆಂಗಳೂರಿಗೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಬೆಂಗಳೂರು ಪೊಲೀಸರ ಸಹಕಾರ ಪಡೆದು ಉಗ್ರರ ಪತ್ತೆ ಕಾರ್ಯ ನಡೆಸುತ್ತಿದ್ದಾರೆ. …
Read More »ಹೈಕಮಾಂಡ್ ಒಪ್ಪಿಗೆ ಕೊಟ್ಟರೆ ಸಂಪುಟ ವಿಸ್ತರಣೆ ಅರ್ಧ ಗಂಟೆಯ ಕೆಲಸ
ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಹೈಕಮಾಂಡ್ಗೆ ಬಿಟ್ಟ ವಿಚಾರ. ಹೈಕಮಾಂಡ್ ಒಪ್ಪಿಗೆ ಕೊಟ್ಟರೆ ಅರ್ಧ ಗಂಟೆಯಲ್ಲಿ ಸಂಪುಟ ವಿಸ್ತರಣೆಯಾಗಲಿದೆ ಅಂತಾ ಡಿಸಿಎಂ ಡಾ,ಜಿ.ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಅಧಿವೇಶನಕ್ಕೆ ಮುಂಚೆಯೇ ಸಂಪುಟ ವಿಸ್ತರಣೆ ಮಾಡಲು ಅವಕಾಶ ಕೇಳಿದ್ದೇವೆ. ಅನುಮತಿ ಸಿಕ್ಕರೆ ಮಾಡುತ್ತೇವೆ ಎಂದರು. ಇನ್ನು ಸತೀಶ್ ಜಾರಕಿಹೊಳಿ ಅಸಮಾಧಾನಗೊಂಡಿರೋದು ನನಗೆ ಗೊತ್ತಿಲ್ಲ. ಈ ಬಗ್ಗೆ ಅವರಿಂದಲೇ ಕೇಳಿ ತಿಳಿದುಕೊಳ್ಳುತ್ತೇನೆ. ವೈಯಕ್ತಿಕ ಇಲ್ಲವೇ, ಕ್ಷೇತ್ರದ ಕೆಲಸವಿದ್ದರೆ ಅವರ ಜೊತೆ ಮಾತನಾಡುತ್ತೇನೆ. …
Read More »ಜಮ್ಮು & ಕಾಶ್ಮೀರದಲ್ಲಿ ಮೊನ್ನೆ ರಾಜ್ಯಪಾಲರಿಗೆ ಊಟ ಸಿಗಲಿಲ್ವಾ?
ಶ್ರೀನಗರ: ನಿನ್ನೆ ಈದ್ ಇತ್ತು, ಹಾಗಾಗೀ ಆಲ್ಮೋಸ್ಟ್ ಎಲ್ಲಾ ಸಿಬ್ಬಂದಿ ರಜೆಯಲ್ಲಿದ್ರು. ಇಲ್ಲಿ ನನಗೆ ಊಟ ಕೊಡೋಕೆ ಯಾರು ಇರ್ಲಿಲ್ಲ, ಇನ್ನು ಫ್ಯಾಕ್ಸ್ ಬೇರೆಯದ್ದೇ ಮಾತು. ಹೀಗಂತ ಹೇಳಿದ್ದು ಜಮ್ಮು-ಕಾಶ್ಮೀರ ರಾಜ್ಯಪಾಲರಾದ ಸತ್ಯಪಾಲ್ ಮಲ್ಲಿಕ್. ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ತನ್ನ ಬಳಿ 55 ಶಾಸಕರ ಬೆಂಬಲವಿದೆ ಸರ್ಕಾರ ರಚಿಸಲು ಅವಕಾಶ ಕೊಡಿ ಅಂತ ರಾಜಭವನಕ್ಕೆ ಫ್ಯಾಕ್ಸ್ ಕಳುಹಿಸಿದ್ದರು, ಅದಕ್ಕೆ ಗವರ್ನರ್ರಿಂದ ಯಾವುದೇ ಉತ್ತರ ಬಂದಿರಲಿಲ್ಲ ಬಹುಶಃ ಅಲ್ಲಿನ ಫ್ಯಾಕ್ಸ್ …
Read More »ರಾಜ್ಯದ ಪಿಯುಸಿ ವಿದ್ಯಾರ್ಥಿಗಳಿಗೆ ಶಾಕ್..
ಬೆಂಗಳೂರು: ಇನ್ಮುಂದೆ ಕಾಲೇಜು ಅವಧಿಯಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕಾಲೇಜುಗಳಲ್ಲಿ ಮೊಬೈಲ್ ಮತ್ತು ಲ್ಯಾಪ್ಟಾಪ್ ಬಳಸುವಂತಿಲ್ಲ ಎಂದು ಪದವಿ ಪೂರ್ವ ಕಾಲೇಜು ಶಿಕ್ಷಣ ಮಂಡಳಿ ಸುತ್ತೋಲೆ ಹೊರಡಿಸಿದೆ.ಈ ಹೊಸ ನಿಯಮ ಸರ್ಕಾರಿ, ಅನುದಾನಿತ ಕಾಲೇಜುಗಳಿಗೆ ಮಾತ್ರವಲ್ಲದೆ ಖಾಸಗಿ ಶಾಲೆಗಳಿಗೂ ಅನ್ವಯವಾಗಲಿದೆ.ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಸೂಚನೆಯ ಮೇರೆಗೆ ಈ ಆದೇಶ ಹೋರಾಡಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ಪಿಯು ಕಾಲೇಜುಗಳಲ್ಲಿ ಇನ್ಮುಂದೆ ಮೊಬೈಲ್ ಮತ್ತು ಲ್ಯಾಪ್ಟಾಪ್ ನಿಷೇಧಿಸುವಂತೆ ಪಿಯು ಬೋರ್ಡ್ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





