ನವದೆಹಲಿ: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ಹೆಸರನ್ನೂ ಚಾರ್ಜ್ ಶೀಟ್ನಲ್ಲಿ ಸೇರಿಸಲಾಗಿದೆ. ಕಾಂಗ್ರೆಸ್ ಸಾಮಾಜಿಕ ಜಾಲತಾಣ ನಿರ್ವಹಣಾ ವಿಭಾಗದಲ್ಲಿ ಈ ಹಿಂದೆ ನಡೆದಿದೆ ಎನ್ನಲಾಗಿದ್ದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 31ರಂದು ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಚಿರಾಗ್ ಪಟ್ನಾಯಕ್ ಎಂಬ ಆರೋಪಿಯನ್ನು ಬಂಧಿಸಿದ್ದರು. ತನಿಖೆಯ ನಂತರ ಇದೀಗ ಪೊಲೀಸರು ಪಟಿಯಾಲಾ ಕೋರ್ಟ್ನಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಗಮನಾರ್ಹವೆಂದರೆ, ಪ್ರಕರಣ …
Read More »ಅರ್ಜಿದಾರರ ವಾದ ಅಸಮರ್ಪಕವಾಗಿವೆ, ರಫೇಲ್ ನಿರ್ಧಾರ ಹೇಗಾಯ್ತು? ಅಷ್ಟೇ ಹೇಳಿ..
ನವದೆಹಲಿ: ರಫೇಲ್ ಫೈಟರ್ ಜೆಟ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ದಾಳಿ ನಡೆಸುತ್ತಿರುವ ಹೊತ್ತಲ್ಲೇ, ಇದೀಗ ಸುಪ್ರೀಂ ಕೋರ್ಟ್ ರಫೇಲ್ ಒಪ್ಪಂದದ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕೇಳಿದೆ. ಅಕ್ಟೋಬರ್ 29ರೊಳಗೆ ಸೀಲ್ ಮಾಡಿದ ಕವರ್ನಲ್ಲಿ ರಫೇಲ್ ಒಪ್ಪಂದದ ಮಾಹಿತಿ ನೀಡಬೇಕು ಎಂದು ಕೋರ್ಟ್ ಹೇಳಿದೆ. ಆದ್ರೆ ಜೆಟ್ಗಳ ಬೆಲೆ ಅಥವಾ ಸೂಕ್ತತೆ ಬಗ್ಗೆ ವಿವರಣೆಗೆ ಹೋಗಬೇಡಿ ಎಂದು ಸ್ಪಷ್ಟಪಡಿದಿದೆ. ನಾವು ಸರ್ಕಾರಕ್ಕೆ ನೋಟಿಸ್ ನೀಡುತ್ತಿಲ್ಲ. …
Read More »ಎಚ್ಎಎಲ್ ಗೆ ಭೇಟಿ ನೀಡಲಿರುವ ರಾಹುಲ್, ವರ್ಕ್ ಔಟ್ ಆಗುತ್ತಾ ಹೊಸ ರಫೇಲ್ ಅಸ್ತ್ರ!
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಕ್ಟೋಬರ್ 13 ರಂದು ಬೆಂಗಳೂರಿನ ಎಚ್ಎಎಲ್ ಗೆ ಭೇಟಿ ನೀಡಲಿದ್ದಾರೆ.ಆ ಮೂಲಕ ಈಗ ರಫೇಲ್ ಒಪ್ಪಂದಲ್ಲಿ ಎಚ್ಎಎಲ್ ನ್ನು ಯಾಕೆ ತಿರಸ್ಕರಿಸಲಾಯಿತು ಎನ್ನುವುದರ ಬಗ್ಗೆ ಗ್ರೌಂಡ್ ರಿಪೋರ್ಟ್ ಮೂಲಕ ತಿಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ರಾಫೆಲ್ ಒಪ್ಪಂದದ ವಿಚಾರವಾಗಿ ಸರ್ಕಾರವನ್ನು ತರಾಟೆಗೆ ತಗೆದುಕೊಂಡಿರುವ ರಾಹುಲ್ ಗಾಂಧಿ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಅನಿಲ್ ಅಂಬಾನಿಯವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ …
Read More »ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ; ಉಪಮುಖ್ಯಮಂತ್ರಿ ಭರವಸೆ..
ತುಮಕೂರು: ವಸಂತನರಸಾಪುರದಲ್ಲಿ ಕೈಗಾರಿಕಾ ವಲಯ ನಿರ್ಮಾಣವಾಗುತ್ತಿದ್ದು, ಇಲ್ಲಿನ ಕೈಗಾರಿಕೆಗಳಿಗೆ ಕೆಲಸಕ್ಕೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಸ್ಥಳೀರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಭರವಸೆ ನೀಡಿದ್ದಾರೆ. ಕೋರಾ ಗ್ರಾಮ ಪಂಚಾಯತಿಯಲ್ಲಿ ಜನಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನರಿಂದ ಅಹವಾಲು ಸ್ವೀಕರಿಸಿ ಬಳಿಕ ಮಾತನಾಡಿದ ಅವರು, ಎಲ್ಲ ಗ್ರಾಮಗಳಲ್ಲಿ ರಸ್ತೆ, ದೇವಸ್ಥಾನ ಅಭಿವೃದ್ಧಿ, ಕುಡಿಯುವ ನೀರಿನ ಸಮಸ್ಯೆ, ಶಿಥಿಲಗೊಂಡ ಶಾಲಾ ಕಟ್ಟಡ ಮರು ನಿರ್ಮಾಣ ಬಗ್ಗೆ ಪಟ್ಟಿ ಮಾಡಲು ಆಯಾ ಗ್ರಾಮ …
Read More »ರಾಯ್ಬರೇಲಿ ಬಳಿ ಹಳಿ ತಪ್ಪಿದ ರೈಲು; 7 ಮಂದಿ ಸಾವು..
ನವದೆಹಲಿ: ಮಾಲ್ಡಾ ಟೌನ್ ನಿಂದ ದೆಹಲಿಗೆ ಬರುವ ಮಾರ್ಗದಲ್ಲಿ ನ್ಯೂ ಫರಕ್ಕಾ ಎಕ್ಸ್ಪ್ರೆಸ್ ರಾಯ್ಬರೇಲಿಯ ಹರ್ಚಂದ್ಪುರ್ ರೈಲ್ವೆ ನಿಲ್ದಾಣದ ಬಳಿ ಬೆಳಿಗ್ಗೆ 6.05 ಕ್ಕೆ ಅಪಘಾತಕ್ಕೀಡಾಗಿದೆ. ಹರ್ಚಂದ್ ರೈಲು ನಿಲ್ದಾಣ 50 ಮೀಟರ್ ದೂರವಿರುವಾಗ ರೈಲಿನ ಇಂಜಿನ್ ಹಾಗೂ ರೈಲಿನ ಆರು ಬೋಗಿಗಳು ಹಳಿತಪ್ಪಿವೆ. ಈ ಅವಘಡದಿಂದ ಏಳು ಮಂದಿ ಸಾವನ್ನಪ್ಪಿದ್ದು, 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಪ್ರಸ್ತುತ, ಅಪಘಾತದ ಕಾರಣಗಳನ್ನು ತನಿಖೆ ಮಾಡಲಾಗುತ್ತಿದೆ. ಲಕ್ನೋ ಮತ್ತು ವಾರಣಾಸಿಯ ರಕ್ಷಣಾ …
Read More »ನನ್ ಹೋರಾಟ ಸರ್ಕಾರದ ವಿರುದ್ಧ ಅಲ್ಲ ಅನ್ಯಾಯದ ವಿರುದ್ಧ- ಗೌಡರ ಫ್ಯಾಮಿಲಿ ಮೇಲೆ ಎ.ಮಂಜು ಗುಡುಗು
ಹಾಸನ ಬ್ರೇಕಿಂಗ್ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಕುಟುಂಬದ ವಿರುದ್ಧ ಭೂ ಕಬಳಿಕೆ ಆರೋಪ ಅವರು ಸರ್ಕಾರಿ ಬೀಳು ಒತ್ತುವರಿ ಮಾಡಿರೋದು 54 ಎಕರೆಯಲ್ಲ, 69.19 ಎಕರೆ ಹಾಸನ ತಾಲೂಕಿನ ಸೋಮನಹಳ್ಳಿ ಕಾವಲು ಬಳಿ ಅಕ್ರಮವಾಗಿ ಕಬಳಿಸಿದ್ದಾರೆ ಪತ್ರಿಕಾಗೋಷ್ಠಿಯಲ್ಲಿ ಮತ್ತೆ ಮಾಜಿ ಪ್ರಧಾನಿ ಹೆಚ್ಡಿಡಿ ಕುಟುಂಬದ ವಿರುದ್ಧ ದೂರಿದ ಮಾಜಿ ಸಚಿವ ಎ.ಮಂಜು ಇಷ್ಟು ಜಮೀನನ್ನು ಪ್ರಜ್ವಲ್ ರೇವಣ್ಣ ಮತ್ತು ದೇವೇಗೌಡರ ಅತ್ತೆ ಹೆಸರಿಗೆ ಮಾಡಿಸಿ ಕೊಂಡಿದ್ದಾರೆ ಈ ಸಂಬಂಧ ಸರಕಾರ …
Read More »ಅ. ೧೨ ರಿಂದ ಮೂರು ದಿನ ಭಾರತೀಯ ಆಭರಣ ಉತ್ಸವ, ಮಾರಾಟ ಮೇಳ.
ಹುಬ್ಬಳ್ಳಿಯಲ್ಲಿ ಅ.12ರಿಂದ ದ ಜ್ಯುವೆಲರಿ ಷೋ ಪ್ರದರ್ಶನ ಮತ್ತು ಮಾರಾಟ ಹುಬ್ಬಳ್ಳಿ: ಮುಂಬರಲಿರುವ ದಸರಾ ಮತ್ತು ದೀಪಾವಳಿ ಹಬ್ಬಗಳಿಗೆ ಮೆರಗು ನೀಡುವ ಹಿನ್ನೆಲೆಯಲ್ಲಿ ನಗರದಲ್ಲಿಯೇ ಮೊದಲ ಭಾರಿಗೆ ಭಾರತೀಯ ಒಡವೆಗಳ ಉತ್ಸವವನ್ನು ಇದೇ. ಅ.12ರಿಂದ 14ರ ವರಗೆ ಡೆನಿಸನ್ಸ್ ಹೋಟೆಲನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಗದೀಶ ಬಿ.ಎನ್. ತಿಳಿಸಿದರು. ನಗರದ ಡೆನಿಸನ್ಸ್ ಹೋಟೆಲನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಭರಣ ಎಂದರೆ ಮಹಿಳೆಯರಿಗೆ ಅಚ್ಚುಮೆಚ್ಚಿನದ್ದಾಗಿದ್ದು, ನಂಬಿಕಸ್ತ ಹೂಡಿಕೆಯೂ ಆಗಿದೆ. ಮೇಳದಲ್ಲಿ 25ಕ್ಕಿಂತಲೂ …
Read More »ಬೈ ಎಲೆಕ್ಷನ್ ನಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಗೆಲುವು ಖಂಡಿತಾ- ಸಚಿವ ಆರ್. ವಿ ದೇಶಪಾಂಡೆ ವಿಶ್ವಾಸ
ಸಚಿವ ಸಂಪುಟ ವಿಸ್ತರಣೆ ಆದಷ್ಟು ಬೇಗನೇ ಆಗುತ್ತದೆ.ಅರ್ಹತೆ ಇದ್ದವರಿಗೆ ಸಚಿವ ಸ್ಥಾನ ಸಿಗಬೇಕೆಂಬುದು ನಮ್ಮ ಆಶಯವೂ ಕೂಡ ಆಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್ ವಿ ದೇಶಪಾಂಡೆ ಹೇಳಿದರು.ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು,ಅರ್ಹತೆ ಇದ್ದಾಗ್ಯೂ ಸಚಿವ ಸ್ಥಾನ ಸಿಗದ್ದೆ ಇದಲ್ಲಿ ಅಸಮಾಧಾನಗಳು ಸಹಜ.ಆದ್ರೆ ಶಾಕರುಗಳು ಯಾವುದೇ ಅಸಮಾಧಾನ ಉಂಟಾಗದಂತೆ ಸಂಪುಟ ವಿಸ್ತರಣೆ ಆಗಲಿದೆ.ಹೈಕಮಾಂಡ್ ನಿರ್ಧಾರದಂತೆ ಸಚಿವ ಸಂಪುಟ ನಡೆಯುತ್ತದೆ ಎಂದರು.ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ 130 ಕೋಟಿಗೂ …
Read More »ಊಟಕ್ಕೆ ಹೋಗಿ ಬಡಿದಾಡಿಕೊಂಡರು, ವಿಕೋಪಕ್ಕೆ ತೆರಳಿ ತಲ್ವಾರನಿಂದಲೇ ವ್ಯಕ್ತಿಯ ಭೀಕರ ಹತ್ಯೆ..
ಹುಬ್ಬಳ್ಳಿಯ ಕ್ಷುಲ್ಲಕ ಕಾರಣಕ್ಕೆ ತಲ್ವಾರ್ ನಿಂದ ಹೊಡೆದು ಯುವಕನನ್ನು ಬರ್ಭರವಾಗಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ತಬಿಬ್ ಲ್ಯಾಂಡ್ ಬಳಿ ನಡೆದಿದೆ. ಇಮ್ತೀಯಾಜ್ ಕಣವಿ (35) ಅಲಿಯಾಸ್ ಕಾಡತೂಸ್ ಕೊಲೆಯಾದ ವ್ಯಕ್ತಿ. ದಾವೂದ್ ನದಾಫ್ ಹಾಗೂ ಸಹಚರರು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಊಟಕ್ಕೆಂದು ಹೊರಗಡೆ ಬಂದಾಗ ಕ್ಷುಲಕ ಕಾರಣಕ್ಕಾಗಿ ಇಬ್ಬರ ನಡುವೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ದಾವೂಧ್ ನದಾಫ ಹಾಗೂ ಸಹಚರರು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಶಹರ …
Read More »ರಾಜಸ್ತಾನದಲ್ಲಿ ಭಯ ಹುಟ್ಟಿಸಿದ 29 ಜಿಕಾ ವೈರಸ್ ಪ್ರಕರಣ..
ನವದೆಹಲಿ: ರಾಜಸ್ಥಾನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಆರೋಗ್ಯ) ವೀಣಾ ಗುಪ್ತಾ ಮಂಗಳವಾರ ಒಟ್ಟು 29 ಜೀಕಾ ವೈರಸ್ ಪ್ರಕರಣಗಳನ್ನು ದೃಢಪಡಿಸಿದ್ದಾರೆ.ಜೀಕಾ ವೈರಸ್ ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಈಗಾಗಾಗಲೇ 150ರಿಂದ 200 ತಂಡಗಳು ಜೈಪುರದಲ್ಲಿ ಸಮೀಕ್ಷೆ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು ಗುಪ್ತಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ “ಒಟ್ಟು 29 ಪೊಸಿಟಿವ್ ಪ್ರಕರಣಗಳು ಇಲ್ಲಿವೆ, 150-200 ತಂಡಗಳು ಜಂಟಿ ಕಾರ್ಯಾಚರಣೆಯನ್ನು ನಡೆಸುತ್ತಿವೆ. ಈಗಾಗಲೇ ಒಟ್ಟು 26,000 ಮನೆಗಳನ್ನು ಸಮೀಕ್ಷೆ ಮಾಡಲಾಗಿದೆ ಮತ್ತು ಎಲ್ಲಾ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





