Breaking News

Shaikh BIG TV NEWS, Hubballi

ಆಧಾರ್ ಸಿಂಧುತ್ವದ ಭವಿಷ್ಯ ಇಂದು ನಿರ್ಧಾರ!

ನವದೆಹಲಿ: ಆಧಾರ್‌ ಕಾರ್ಡ್‌ ಖಡ್ಡಾಯವಾಗೊಳಿಸಿದ್ದ ಆದೇಶದ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್‌ ಇಂದು ಮಹತ್ವದ ತೀರ್ಪನ್ನು ಪ್ರಕಟಿಸಲಿದ್ದು, ಆಧಾರ್ ಸಿಂಧುತ್ವದ ಭವಿಷ್ಯ ಇಂದು ನಿರ್ಧಾರವಾಗಲಿದೆ. ವಿವಿಧ ಸಮಾಜ ಕಲ್ಯಾಣ ಯೋಜನೆಗಳು, ಬ್ಯಾಂಕ್‌ ಖಾತೆಗಳು ಮತ್ತು ಮೊಬೈಲ್‌ ಫೋನ್ ಗೆ ಆಧಾರ್‌ ಸಂಖ್ಯೆ ಜೋಡಿಸುವುದು ಅಗತ್ಯ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಕೇಂದ್ರದ ಈ ಯೋಜನೆಯ ಭವಿಷ್ಯ ಸುಪ್ರೀಂ ಕೋರ್ಟ್‌ ತೀರ್ಪಿನ ಮೇಲೆ ನಿಂತಿದೆ.  ಆಧಾರ್‌ ಯೋಜನೆಯ ಸಿಂಧುತ್ವದ …

Read More »

ದುನಿಯಾ ವಿಜಿ ಮೇಲೆ ಸೀಕ್ರೆಟ್ಟಾಗಿ ರೆಡಿಯಾಗ್ತಿದೆಯಾ ರೌಡಿ ಶೀಟ್!?

ಜಿಮ್ ಟ್ರೈನರ್ ಮಾರುತಿ ಗೌಡ ಎಂಬ ಯುವಕನನ್ನು ಅಪಹರಿಸಿ, ಹಲ್ಲೆ ಮಾಡಿದ ಆರೋಪದಡಿ ಬಂಧಿತರಾಗಿರೋ ನಟ ದುನಿಯಾ ವಿಜಯ್ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇತ್ತ ದುನಿಯಾ ವಿಜಯ್ ವಿರುದ್ಧ ರೌಡಿ ಶೀಟ್ ಓಪನ್ ಮಾಡೋ ಬಗ್ಗೆಯೂ ಪೊಲೀಸ್ ಇಲಾಖೆ ಗಂಭೀರ ಚಿಂತನೆ ನಡೆಸಿದೆ. ರೌಡಿ ಶೀಟ್ ಓಪನ್ ಆಗಲು ಎಷ್ಟು ಕೇಸ್ ಮಾಡಿರಬೇಕು? ರೌಡಿ ಶೀಟ್ ಓಪನ್ ಆಗಲು ಸಾಮಾನ್ಯವಾಗಿ ಒಂದು ಹೀನಸ್ ಕೇಸ್ (Heinous case) ಹಾಗೂ …

Read More »

ಮಿತ್ರರ ಮುನಿಸಿಗೆ ಮಣಿದ ಹೆಚ್​​ಡಿಕೆ, 141 ಇನ್ಸ್​​ಪೆಕ್ಟರ್​​ ವರ್ಗಾವಣೆಗೆ ಬ್ರೇಕ್​..!

ಬೆಂಗಳೂರು: ಸರ್ಕಾರ ಇತ್ತೀಚೆಗೆ ತೆಗೆದುಕೊಳ್ಳುತ್ತಿರುವ ನಿರ್ಧಾರಗಳನ್ನ ನೋಡಿದ್ರೆ ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲವೇನೋ ಅನ್ನೋ ಅನುಮಾನ ಸಹಜವಾಗಿಯೇ ಹುಟ್ಟಿಕೊಳ್ಳುತ್ತಿದೆ. ಯಾಕಂದ್ರೆ ಮೊನ್ನೆ ಸಾರಿಗೆ ಇಲಾಖೆ ಬಸ್​ ದರಲ್ಲಿ ಶೇ.18 ರಷ್ಟು ಏರಿಸಿ ಆದೇಶ ಹೊರಡಿಸಿತ್ತು. ಆದೇಶ ಹೊರ ಬಿದ್ದ ನಿಮಿಷಾರ್ಧದಲ್ಲೇ ಸಿಎಂ ಕುಮಾರಸ್ವಾಮಿ ಆದೇಶಕ್ಕೆ ತಡೆ ನೀಡಿದ್ದರು. ಇದೀಗ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಆದೇಶದಲ್ಲೂ ಸಿಎಂ ಹೆಚ್​ಡಿಕೆ ಅದನ್ನೇ ಮಾಡಿದ್ದಾರೆ. ನಿನ್ನೆ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು, …

Read More »

ಹಾಸನ-ಸಕಲೇಶಪುರ ರೈಲು ಸಂಚಾರ ಪುನರಾರಂಭ

ಹಾಸನ: ಕಳೆದ ಆಗಸ್ಟ್​ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಜಿಲ್ಲೆಯ ರೈಲ್ವೆ ಹಳಿಗಳು ಹಾಳಾಗಿದ್ದವು. ಈ ಹಿನ್ನೆಲೆಯಲ್ಲಿ ರೈಲು ಸಂಚಾರ ಸ್ಥಗಿತಗೊಂಡಿತ್ತು. ಆದರೆ ಈಗ ರಿಪೇರಿ ಕಾಮಗಾರಿ ನಂತರ, ರೈಲು ಸಂಚಾರ ಪುನರಾರಂಭವಾಗಿದೆ. ಸದ್ಯ ಯಶವಂತಪುರದಿಂದ ಸಕಲೇಶಪುರವರೆಗೆ ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಸಕಲೇಶಪುರ-ಸುಬ್ರಹ್ಮಣ್ಯ ನಡುವಿನ ಮಾರ್ಗ ಇನ್ನೂ ದುರಸ್ತಿಯಾಗದ ಕಾರಣ ಸರಕು ಸಾಗಣೆ ರೈಲು ಓಡಾಟ ಮತ್ತಷ್ಟು ವಿಳಂಬವಾಗಲಿದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ರಿಪೇರಿ ಕಾರ್ಯ ಪೂರ್ಣವಾಗೋ ನಿರೀಕ್ಷೆಯಿದ್ದು, ಮೊದಲು …

Read More »

8 KAS ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು: 8 ಮಂದಿ ಕೆಎಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆಡಳಿತಾತ್ಮಕ ಹಿತದೃಷ್ಟಿಯನ್ನ ಇಟ್ಟುಕೊಂಡು ಹಿರಿಯ ಹಾಗೂ ಕಿರಿಯ ಎಂಟು ಅಧಿಕಾರಿಗಳನ್ನ ವರ್ಗಾವಣೆ ಮಾಡಲಾಗಿದೆ. ಕರ್ನಾಟಕ ಸರ್ಕಾರದ ಸಚಿವಾಲಯ ವರ್ಗಾವಣೆ ಮಾಡಿ, ತಕ್ಷಣದಿಂದಲೇ ಜಾರಿಯಾಗುವಂತೆ ಸೂಚನೆ ನೀಡಿದೆ. ವರ್ಗಾವಣೆಯಾದ ಅಧಿಕಾರಿಗಳ ವಿವರ ಇಲ್ಲಿದೆ. ಅನುರಾಧ ಜಿ. (ಅಪರ ಜಿಲ್ಲಾಧಿಕಾರಿ ಶಿವಮೊಗ್ಗ ಜಿಲ್ಲೆ) ಸುರೇಶ್ ಬಿ.ಇಟ್ನಾಳ್ (ಅಪರ ಜಿಲ್ಲಾಧಿಕಾರಿ ಉತ್ತರ ಕನ್ನಡ ಜಿಲ್ಲೆ) ಅನಿತಾ ಲಕ್ಷ್ಮಿ (ವಿಶೇಷ …

Read More »

ಆಧಾರ್ ಕಡ್ಡಾಯವಾಗಲಿದೆಯೇ? ನಾಳೆ ಸುಪ್ರೀಂ ಕೋರ್ಟ್ ನೀಡಲಿದೆ ಮಹತ್ವದ ತೀರ್ಪು

ನವದೆಹಲಿ: ಎಲ್ಲಾ ಸೇವೆಗಳಿಗೆ ಆಧಾರ್ ಕಡ್ಡಾಯವೇ ಎಂಬ ಕುರಿತು ಸುಪ್ರೀಂ ಕೋರ್ಟ್ ಬುಧವಾರ(ಸೆ.26) ಮಹತ್ವದ ತೀರ್ಪು ಪ್ರಕಟಿಸಲಿದೆ.  ಆಧಾರ್ ಯೋಜನೆ ಮತ್ತು ಅದಕ್ಕೆ ಸಂಬಂಧಿಸಿದ ಕಾನೂನುಗಳ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತರಕ್ಷಣಾ ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಇವರು ಸದಸ್ಯರ ಸಂವಿಧಾನಿಕ ಪೀಠ ತೀರ್ಪನ್ನು ಸೆಪ್ಟೆಂಬರ್ 26ಕ್ಕೆ ಕಾಯ್ದಿರಿಸಿತ್ತು. ದೇಶದ ಏಕೈಕ ಬಯೋಮೆಟ್ರಿಕ್‌ ರಾಷ್ಟ್ರೀಯ ಗುರುತಿನ …

Read More »

ನಾವು ಊಟ ತಿಂದಿಲ್ಲ.. ನಿದ್ರೆ ಮಾಡಿಲ್ಲ.. ದರ್ಶನ್‌ ನೋಡಲು ಬಿಡಿ..!

ಮೈಸೂರು: ನಟ ದರ್ಶನ್ ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಂದೆಡೆ ತಮ್ಮ ನೆಚ್ಚಿನ ನಟನನ್ನ ನೋಡುವ ತವಕ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಆಸ್ಪತ್ರೆ ಬಳಿ ಅಭಿಮಾನಿಗಳು ಬರದಂತೆ ದರ್ಶನ್​ ಮನವಿ ಮಾಡಿದರೂ ಕೂಡ ಪ್ರಯೋಜನವಾಗಿಲ್ಲ. ಇಂದು ಮಹಿಳಾ ಪೌರಕಾರ್ಮಿಕರು ದರ್ಶನ್​ ನೋಡಲು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಆಗಮಿಸಿದ್ದು, ಸೆಕ್ಯೂರಿಟಿಗೆ ಒಳ ಬಿಡುವಂತೆ ಮನವಿ ಮಾಡಿಕೊಂಡಿದ್ದಾರೆ. ನಿನ್ನೆ ನಮಗೆ ವಿಚಾರ ಗೊತ್ತಾಯಿತು. ವಿಚಾರ ತಿಳಿದ ಮೇಲಿಂದ ಊಟವೇ ಸೇರುತ್ತಿಲ್ಲ. ರಾತ್ರಿಯೆಲ್ಲಾ …

Read More »

ಮಾಜಿ ಡಿಸಿಎಂ ಆರ್​.ಅಶೋಕ್​ಗೆ ‘ಭೂ’ ಕಂಟಕ..!

ಬೆಂಗಳೂರು: ಮಾಜಿ ಡಿಸಿಎಂ ಆರ್.ಅಶೋಕ್​​ಗೆ ಮತ್ತೆ ಸಂಕಷ್ಟ ಎದುರಾಗಿದೆ. ಸೋಮನಹಳ್ಳಿಯ ಬಗರ್ ಹುಕ್ಕುಂ ಭೂ ಪ್ರದೇಶವನ್ನು ಅಕ್ರಮ ಮಾಡಿಕೊಂಡಿರುವ ಆರೋಪ ಸಂಬಂಧ ಆರ್.ಅಶೋಕ್ ವಿರುದ್ಧ ಎಸಿಬಿ ತನಿಖೆಗೆ ಹೈಕೋರ್ಟ್ ಅಸ್ತು ಎಂದಿದೆ. ಎಸಿಬಿ ದಾಖಲಿಸಿದ್ದ ಎಫ್​ಐಆರ್​ ರದ್ದು ಮಾಡುವಂತೆ ಕೋರಿ ಆರ್​.ಅಶೋಕ್ ಹೈಕೋರ್ಟ್​ ಮೆಟ್ಟಿಲೇರಿದ್ದರು. ಇಂದು ವಿಚಾರಣೆ ನಡೆಸಿದ ಹೈಕೋರ್ಟ್​, ಎಫ್ ಐಆರ್ ರದ್ದು ಮಾಡಲು ನಿರಾಕರಿಸಿದೆ. ಮೇಲ್ನೋಟಕ್ಕೆ ಅಕ್ರಮ ನಡೆದಿರುವುದು ಸಾಬೀತಾಗುವುಂತೆ ಕಾಣುತ್ತಿದೆ. ಭ್ರಷ್ಟಚಾರ ನಿಯಂತ್ರಣ ಕಾಯ್ದೆಯಡಿ ತನಿಖೆ …

Read More »

ರಾಷ್ಟ್ರ ರಾಜಧಾನಿಯಲ್ಲಿ ಶೀಘ್ರವೇ ಬಂದ್ ಆಗಲಿದೆ ಈ ಸೇವೆ

ನವದೆಹಲಿ: ದೆಹಲಿಯಲ್ಲಿ ಚಾಲನೆಯಲ್ಲಿರುವ ಅಪ್ಲಿಕೇಶನ್ ಬೇಸ್ ಟ್ಯಾಕ್ಸಿ ಸೇವೆಗಳಲ್ಲಿ ಪೂಲ್ ಸವಾರಿ ಅಥವಾ ಶೇರಿಂಗ್ ಕ್ಯಾಬ್ ಸೇವೆಗಳು ಶೀಘ್ರವೇ ಸ್ಥಗಿತವಾಗಬಹುದು. ದೆಹಲಿಯ ಸಾರಿಗೆ ಇಲಾಖೆಯೊಂದಿಗೆ ರಿಯಲ್ ಟೈಮ್ ಜಿಪಿಎಸ್ ಡೇಟಾವನ್ನು ಹಂಚಿಕೊಳ್ಳಲು ಅಪ್ಲಿಕೇಶನ್ ಬೇಸ್ ಟ್ಯಾಕ್ಸಿ ಆಪರೇಟರ್ಗಳನ್ನು ಕೇಳಬಹುದು. ಅಂತಹ ಕೆಲವು ಸಮಸ್ಯೆಗಳನ್ನು ಚರ್ಚಿಸಲು ದೆಹಲಿ ಸರ್ಕಾರ ಸೋಮವಾರ ಹೈವೋಲ್ಟೇಜ್ ಸಭೆ ನಡೆಸಿದೆ. ಅಪ್ಲಿಕೇಶನ್ ಬೇಸ್ ಟ್ಯಾಕ್ಸಿ ನಿಯಮಗಳ ಅಡಿಯಲ್ಲಿ ಅನೇಕ ಸ್ಥಳಗಳಲ್ಲಿ ಸವಾರಿ ಪಿಕ್ ಮಾಡುವುದು ಅಸಾಧ್ಯ: ಸಭೆಯಲ್ಲಿ …

Read More »

ಕಳಂಕಿತ ರಾಜಕಾರಣಿಗಳು ಆರೋಪ ಸಾಬೀತಾಗುವವರೆಗೂ ಚುನಾವಣೆಯಲ್ಲಿ ಸ್ಪರ್ಧಿಸಬಹುದು: ಸುಪ್ರೀಂ..

ನವದೆಹಲಿ: ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ರಾಜಕಾರಣಿಗಳು ಆರೋಪ ಸಾಬೀತಾಗುವವರೆಗೂ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಅವರನ್ನು ಯಾವುದೇ ಕಾರಣಕ್ಕೂ ಅನರ್ಹಗೊಳಿಸುವಂತಿಲ್ಲ ಎಂದು ಮಂಗಳವಾರ ಸುಪ್ರೀಂಕೋರ್ಟ್ ತೀರ್ಪು ನೀಡಿದೆ.  ಅಲ್ಲದೆ, ಆರೋಪ ಹೊತ್ತ ರಾಜಕಾರಣಿಗಳ ಸ್ಪರ್ಧೆ ಕುರಿತಂತೆ ಸಂಸತ್ ನಲ್ಲಿ ನಿರ್ಧಾರ ಕೈಗೊಳ್ಳಬೇಕು. ಈ ಕುರಿತು ಕಾನೂನು ರೂಪಿಸಬೇಕು. ಇನ್ನು ಜನರೇ ರಾಜಕಾರಣಿಗಳ ಹಣೆಬರಹ ನಿರ್ಧರಿಸಬೇಕು. ಕಳಂಕ ರಹಿತ ಅಭ್ಯರ್ಥಿಗಳನ್ನು ಚುನಾಯಿಸುವ ಅಧಿಕಾರ ಮತದಾರರಿಗಿರುವುದರಿಂದ ಅವರೇ ಉತ್ತಮ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಸುಪ್ರಿಂ ಕೋರ್ಟ್ …

Read More »