ಬೆಂಗಳೂರು: ಇವತ್ತಿನ ರಾಜಕೀಯ ಬೆಳವಣಿಗೆಗಳನ್ನ ನೋಡಿದ್ರೆ ಬಹುಶಃ ಸಮ್ಮಿಶ್ರ ಸರ್ಕಾರದ ಬುಡ ಮತ್ತಷ್ಟು ಅಲುಗಾಡುತ್ತಿದ್ದಂತೆ ಕಾಣುತ್ತಿದೆ. ಇದಕ್ಕೆ ಮುಲಾಮು ಹಚ್ಚಿಸಲು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಮುಂದಾಗಿದ್ದು, ಅತೃಪ್ತ ಶಾಸಕರ ಜೊತೆ ಚರ್ಚೆ ನಡೆಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದು ಚೆನ್ನೈಗೆ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿರುವ ಮೂವರು ಶಾಸಕರ ಜೊತೆ ಸಿದ್ದರಾಮಯ್ಯ ಫೋನ್ ಮಾಡಿ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್ ಶಾಸಕರಾದ ಡಾ. ಸುಧಾಕರ್, …
Read More »ರಫೇಲ್ ವಿವಾದ:ಫ್ರಾನ್ಸ್ ಮಾಜಿ ಅಧ್ಯಕ್ಷರ ಹೇಳಿಕೆ ಸಂಪೂರ್ಣ ಆಧಾರ ರಹಿತ . ಸಿಂಗ್
ನವದೆಹಲಿ: ಗೃಹ ಸಚಿವ ರಾಜನಾಥ್ ಸಿಂಗ್ ಶನಿವಾರದಂದು ಭಾರತ-ಫ್ರಾನ್ಸ್ ರಫೆಲ್ ಜೆಟ್ ವಿಮಾನದ ಒಪ್ಪಂದದ ಸುತ್ತಲಿನ ವಿವಾದದ ಕುರಿತು ಮಾತನಾಡುತ್ತಾ ಫ್ರೆಂಚ್ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್ ಅವರ ಹೇಳಿಕೆಯನ್ನು ಆಧಾರರಹಿತ ಎಂದರು ರಾಜನಾಥ್ ಸಿಂಗ್ ಡಾಸಾಲ್ಟ್ ಮತ್ತು ರಿಲಯನ್ಸ್ ನಡುವಿನ ಒಪ್ಪಂದವು ಎರಡು ಖಾಸಗಿ ಪಕ್ಷಗಳ ನಡುವಿನ ವಾಣಿಜ್ಯ ಒಪ್ಪಂದವಾಗಿತ್ತು ಆದ್ದರಿಂದ ಇದರಲ್ಲಿ ಸರ್ಕಾರದ ಯಾವುದೇ ಎಂದು ತಿಳಿಸಿದರು. ಹೊಲಾಂಡ್ ಅವರ ಹೇಳಿಕೆ ವಿಚಾರವಾಗಿ ಗೃಹ ಸಚಿವ ಸಿಂಗ್ …
Read More »ಬಿಜೆಪಿ ವಿರುದ್ಧದ ‘ದಂಗೆ’ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಿಎಂ
ಚಿಕ್ಕಮಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಇತ್ತೀಚಿಗೆ ನೀಡಿದ ದಂಗೆ ಹೇಳಿಕೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ಶೃಂಗೇರಿಗೆ ತೆರೆಳುತ್ತಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ” ನಾನು ಯಾವುದೇ ರೀತಿಯ ಪ್ರಚೋದನಕಾರಿ ಹೇಳಿಕೆಯನ್ನು ಯಾವ ಪಕ್ಷದ ವಿರುದ್ದವಾಗಿ ಮಾಡಿಲ್ಲ.ಅವರು ರಾಜ್ಯಪಾಲರಿಗೆ ದೂರನ್ನು ನೀಡಿದ್ದಾರೆ.ಈ ಕುರಿತಾಗಿ ನಾನು ಆ ಹೇಳಿಕೆ ನೀಡಲು ಕಾರಣವಾದ ಸಂಗತಿಗಳ ಬಗ್ಗೆ ತಿಳಿಸುತ್ತೇನೆ ಅಲ್ಲದೆ ಅದು ಸಂವಿಧಾನದ ವಿರುದ್ದ ಹೌದು ಅಲ್ಲವೋ ಎನ್ನುವುದನ್ನು ನಾನು ಮನವರಿಕೆ ಮಾಡಿಕೊಡುತ್ತೇನೆ ಎಂದು ತಿಳಿಸಿದರು. ಕುಮಾರಸ್ವಾಮಿ ಹೇಳುವಂತೆ …
Read More »ಹೆಸರು ಖರೀದಿ ಮಿತಿಗೊಳಿಸಿದ್ದಕ್ಕೆ ರೈತರ ಪ್ರತಿಭಟನೆ
ಹುಬ್ಬಳ್ಳಿಯಲ್ಲಿ ಕೇಂದ್ರ ಸರಕಾರ ಹೆಸರು ಖರೀದಿಗೆ ಪ್ರತಿ ಕ್ವೀಂಟಲ್ ಗೆ ರೂ.6975ಬೆಂಬಲ ಬೆಲೆ ನಿಗಧಿಗೊಳಿಸಿ ಹೆಸರು ನೊಂದಾಯಿಸಿಕೊಂಡು ಪ್ರತಿ ರೈತರಿಂದ 10 ಕ್ವೀಂಟಾಲ್ ಖರೀದಿಸುವುದಾಗಿ ಘೋಷಿಸಿತು. ಆದರೆ ಈಗ 4 ಕ್ವೀಂಟಾಲ್ ಖರೀದಿಸಲಾಗುವುದೆಂದು ಆದೇಶ ನೀಡಿರುವುದು ಅತ್ಯಂತ ಖಂಡನೀಯವೆಂದು ಮಹದಾಯಿ ಕಳಸಾ ಬಂಡೂರಿ ಹೋರಾಟ ಸಮನ್ವಯ ಸಮಿತಿ ಹೋರಾಟಗಾರರು ತಹಶಿಲ್ದಾರ ಕಚೇರಿ ಎದುರು ಪ್ರತಿಭಟನೆ ಮಾಡಿದ್ರು. ಕೇಂದ್ರ ಸರ್ಕಾರ ೨೩೨೨೫೦ ಕ್ವಿಂಟಾಲ್ ಖರೀದಿ ಮಾಡಲು ನಿಗಧಿಗೊಳಿಸಿದೆ. ಆದರೆ ಇದು ಹೆಸರು …
Read More »ಅಡುಗೆ ಸರಿಯಿಲ್ಲ ಎಂದಿದ್ದಕ್ಕೆ ನೊಂದ ಪತ್ನಿ ಆತ್ಮಹತ್ಯೆಗೆ ಶರಣು!.
ಬೆಂಗಳೂರು: ಅಡುಗೆ ಸರಿಯಾಗಿ ಮಾಡಿಲ್ಲ ಎಂದು ಪತಿ ಬೈದಿದ್ದಕ್ಕೆ ತೀವ್ರವಾಗಿ ನೊಂದ ಪತ್ನಿಯೊಬ್ಬಲು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದೇವರಜೀವನಹಳ್ಳಿ ಶಾಂಪುರದಲ್ಲಿ ನಡೆದಿದೆ. ಶಾಂಪುರ ನಿವಾಸಿ ಜಯಲಕ್ಷ್ಮೀ (41) ಆತ್ಮಹತ್ಯೆಗೆ ಶರಣಾದ ಮಹಿಳೆಯಲಾಗಿದ್ದಾರೆ. ಪತಿ ನಾಗರಾಜ್ ವಿರುದ್ಧ ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಜಯಲಕ್ಷ್ಮೀ ಹಾಗೂ ನಾಗರಾಜ್ ರಾಯಚೂರು ಮೂಲದವರಾಗಿದ್ದು, 2008ರಲ್ಲಿ ದಂಪತಿಗಳು ಬೆಂಗಳೂರಿಗೆ ಆಗಮಿಸಿದ್ದರು. ನಾಗರಾಜ್ ಹೆಗ್ಡೆ ನಗರದಲ್ಲಿ ಸಲೂನ್ ಶಾಪ್ ನಲ್ಲಿ ಕೆಲಸ …
Read More »ಬೆಂಗಳೂರು-ಮೈಸೂರು 6 ಪಥ ರಸ್ತೆ ಮತ್ತೆ ವಿಳಂಬ; ಅರಣ್ಯ ಇಲಾಖೆಯಿಂದ ಅಡ್ಡಿ.
ಬೆಂಗಳೂರು-ಮೈಸೂರು ನಡುವೆ ಕೇವಲ 90 ನಿಮಿಷಗಳಲ್ಲಿ ತಲುಪುವ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ 6 ಪಥದ ರಸ್ತೆ ಕಾಮಗಾರಿ ಮತ್ತೆ ವಿಳಂಬವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ದಿಲಿಪ್ ಬಿಲ್ಡ್ ಕಾನ್ ನಡುವೆ ಒಪ್ಪಂದವೇರ್ಪಟ್ಟು 5 ತಿಂಗಳುಗಳು ಕಳೆದಿದ್ದು, ಈಗಿರುವ ನಾಲ್ಕು ಪಥದ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯನ್ನು 6 ಪಥದ ರಸ್ತೆಯನ್ನಾಗಿ ಮಾಡುವ ಕೇಂದ್ರ ಸರ್ಕಾರದ ಯೋಜನೆ ಇದಾಗಿದೆ. ನಾಲ್ಕು ಸರ್ವಿಸ್ ಪಥದ ಹೊರತಾಗಿ ಈ 6 ಪಥದ ರಸ್ತೆಯಿರುತ್ತದೆ. …
Read More »ಪ್ರಧಾನಿ ಮೋದಿ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು- ಖರ್ಗ
ಬೆಂಗಳೂರು: ರಫೇಲ್ ವಿಮಾನ ಖರೀದಿ ಅವ್ಯವಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕೈವಾಡ ಇರೋದು ಗೊತ್ತಾಗಿದೆ. ಹೀಗಾಗಿ ಪ್ರಧಾನಿಯವರು ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದು ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಆಗ್ರಹಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಅವ್ಯವಹಾರ ನಡೆದಿದೆ. ಇದನ್ನ ಈಗ ಫ್ರಾನ್ಸ್ ಮಾಜಿ ಅಧ್ಯಕ್ಷರೂ ಕೂಡ ಹೇಳಿದ್ದಾರೆ. ಇದರ ಹೊಣೆ ಪ್ರಧಾನಿಯವರೇ ಹೊರಬೇಕು. ಪ್ರಧಾನಿ ಮೋದಿಯವರ ಕೈವಾಡ ಇರೋದು ಗೊತ್ತಾಗಿದೆ. …
Read More »ಗಿರ್ ಅಭಯಾರಣ್ಯದಲ್ಲಿ 11 ದಿನದಲ್ಲಿ 11 ಸಿಂಹಗಳ ಸಾವು: ತನಿಖೆಗೆ ಆದೇಶ.
ಜುನಾಗಡ್: ಕಳೆದ 11 ದಿನಗಳಲ್ಲಿ ಕನಿಷ್ಠ 11 ಸಿಂಹಗಳು ಗಿರ್ ಕಾಡಿನಲ್ಲಿ ಮೃತಪಟ್ಟಿವೆ,ಈಗ ರಾಜ್ಯ ಸರ್ಕಾರವು ತನಿಖೆಗೆ ಆದೇಶಿಸಿದೆ. ಪಿಸಿಸಿಎಫ್ ವನ್ಯಜೀವಿ ಎ.ಕೆ. ಸಕ್ಸೇನಾ ಅವರು ಗಿರ್ ಅರಣ್ಯಕ್ಕೆ ಧಾವಿಸಿ, ಹೆಚ್ಚಿನ ಸಾವುಗಳು ಅಂತಃಕಲಹದಿಂದಾಗಿ ಸಂಭವಿಸಿವೆ ಎಂದು ಹೇಳಿದ್ದಾರೆ. ಈಗ ಅರಣ್ಯದ ಪ್ರಮುಖ ಮುಖ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಯಿಂದ ತನಿಖೆಯನ್ನು ನಡೆಸಲಾಗುವುದು ಎಂದು ಸರ್ಕಾರ ತಿಳಿಸಿದೆ . ಆದಾಗ್ಯೂ, ಗಿರ್ ಅರಣ್ಯ ವೈಧ್ಯಾಧಿಕಾರಿ ಹಿತೆಶ್ ವಮ್ಜಾ ಅವರು “ಶ್ವಾಸಕೋಶದ ಸೋಂಕಿನಿಂದಾಗಿ …
Read More »ಡಾ.ಮನಮೋಹನ್ ಸಿಂಗ್ ಕಾಲಾವಧಿಯಲ್ಲಿ ಭಾರತ 271 ಮಿಲಿಯನ್ ಜನರನ್ನು ಬಡತನದಿಂದ ..
ನವದೆಹಲಿ: ಭಾರತವು ಮನಮೋಹನ್ ಸಿಂಗ್ ಸರ್ಕಾರದ ಕಾಲಾವಧಿಯಲ್ಲಿ ಎಲ್ಲ ರೀತಿಯ ಬಡತನವನ್ನು ಕಡಿಮೆ ಮಾಡಲು ಹಲವು ಪ್ರಯತ್ನಗಳನ್ನು ಮಾಡಿದೆ. ಆ ಹತ್ತು ವರ್ಷಗಳಲ್ಲಿ ಬಡತನ ದರವನ್ನು ಶೇ 55 ರಿಂದ ಶೇ 28 ಕ್ಕೆ ಇಳಿದಿದೆ ಎಂದು 2018 ಜಾಗತಿಕ ಬಹು ಆಯಾಮದ ಬಡತನ ಸೂಚ್ಯಂಕ (ಎಂಪಿಐ) ಇದನ್ನು ಬಹಿರಂಗಪಡಿಸಿದೆ. ಈ ವರದಿಯು ಪ್ರಮುಖವಾಗಿ 2005-06 ಮತ್ತು 2015-16ರ ನಡುವೆ ಕಾಲಾವಧಿಯಲ್ಲಿ ಸುಮಾರು 271 ಮಿಲಿಯನ್ ಜನರು ಭಾರತ ದೇಶದಲ್ಲಿ …
Read More »ರಫೇಲ್ ಹಣದ ಮೂಲಕ ಬಿಜೆಪಿ ಆಪರೇಶನ್ ಕಮಲಕ್ಕೆ ಮುಂದಾಗಿದೆ.- ಪಿ.ವಿ.ಮೋಹನ್
ಬೆಂಗಳೂರು: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಪಿ. ವಿ. ಮೋಹನ್ ಅವರು ಬಿಜೆಪಿ ವಿರುದ್ದ ಕಿಡಿ ಕಾರುತ್ತಾ” ಬಿಜೆಪಿ ರಫೆಲ್ ವ್ಯವಹಾರದಲ್ಲಿನ ಹಣವನ್ನು ಕರ್ನಾಟಕದಲ್ಲಿ ‘ಆಪರೇಷನ್ ಕಮಲದ’ ಮೂಲಕ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಳಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಆದ್ದರಿಂದ ಸಮ್ಮಿಶ್ರ ಸರ್ಕಾರ ಇದಕ್ಕಾಗಿ ವಿಶೇಷ ತನಿಖಾ ತಂಡವನ್ನು ರಚಿಸಿ ಇದನ್ನು ತನಿಖೆ ಒಳಪಡಿಸಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದರು.ಬೆಳಗಾವಿಯಲ್ಲಿ ಶುಕ್ರವಾರದಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





