Breaking News

ಹೆಸರು ಖರೀದಿ ಮಿತಿಗೊಳಿಸಿದ್ದಕ್ಕೆ ರೈತರ ಪ್ರತಿಭಟನೆ

ಹುಬ್ಬಳ್ಳಿಯಲ್ಲಿ
ಕೇಂದ್ರ ಸರಕಾರ ಹೆಸರು ಖರೀದಿಗೆ ಪ್ರತಿ ಕ್ವೀಂಟಲ್ ಗೆ ರೂ.6975ಬೆಂಬಲ ಬೆಲೆ ನಿಗಧಿಗೊಳಿಸಿ ಹೆಸರು ನೊಂದಾಯಿಸಿಕೊಂಡು ಪ್ರತಿ ರೈತರಿಂದ 10 ಕ್ವೀಂಟಾಲ್  ಖರೀದಿಸುವುದಾಗಿ ಘೋಷಿಸಿತು. ಆದರೆ ಈಗ 4 ಕ್ವೀಂಟಾಲ್ ಖರೀದಿಸಲಾಗುವುದೆಂದು ಆದೇಶ ನೀಡಿರುವುದು ಅತ್ಯಂತ ಖಂಡನೀಯವೆಂದು ಮಹದಾಯಿ ಕಳಸಾ ಬಂಡೂರಿ ಹೋರಾಟ ಸಮನ್ವಯ ಸಮಿತಿ ಹೋರಾಟಗಾರರು ತಹಶಿಲ್ದಾರ ಕಚೇರಿ ಎದುರು ಪ್ರತಿಭಟನೆ ಮಾಡಿದ್ರು. ಕೇಂದ್ರ ಸರ್ಕಾರ ೨೩೨೨೫೦ ಕ್ವಿಂಟಾಲ್ ಖರೀದಿ ಮಾಡಲು ನಿಗಧಿಗೊಳಿಸಿದೆ.  ಆದರೆ ಇದು ಹೆಸರು ಉತ್ಪಾದನೆಯ ಒಟ್ಟು ಉತ್ಪಾದನೆಯ ಶೇ.೨೦ ರಷ್ಟು ಆಗುವುದಿಲ್ಲ. ಇನ್ನೂಳಿದ ೮೦ ರಷ್ಟು ರೈತರು ಮತ್ತೆ ವ್ಯಾಪಾರಸ್ಥರನ್ನು ಅವಲಂಭಿಸಬೇಕಾಗಿದೆ, ರಾಜ್ಯ ಸರ್ಕಾರ ಈ ವಿಷಯದಲ್ಲಿ ಗಂಭೀರ ಚಿಂತನೆ ನಡೆಸುತ್ತಿಲ್ಲ, ರಾಜ್ಯದಲ್ಲಿ  ಉತ್ಪಾದನೆಯ ಹೆಸರಿನ ಪ್ರಮಾಣವನ್ನು ಸರಿಯಾಗಿ ಕೇಂದ್ರ ಸರ್ಕಾರಕ್ಕೆ ವರದಿ ಮಾಡದೇ ತಪ್ಪು ಎಸಗಿದೆ‌.ಮತ್ತೆ ಸರ್ಕಾರ ಪುನಃ ಪ್ರಸ್ತಾವನೆಯನ್ನು ಕಳುಹಿಸಿ ರಾಜ್ಯದ ರೈತರಿಗೆ ಆಗುತ್ತಿರುವ ಅನ್ಯಾಯ ವನ್ನು ಸರಿಪಡಿಸಬೇಕೆಂದು ಆಗ್ರಹಿಸಿದರು.
ಈ ವೇಳೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಗಳನ್ನು ಕೂಗ್ಗಿ ತಮ್ಮ ಆಕ್ರೋಶ ಹೊರ ಹಾಕಿ, ತಹಶಿಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.ಪ್ರತಿಭಟನೆಯಲ್ಲಿ  ಅಮೃತ ಇಜಾರೆ, ಮಹೇಶ ಮತ್ತಾರ,ಶಿವಣ್ಣ ಹುಬ್ಬಳ್ಳಿ, ಅಪ್ಪಣ್ಣ ಶಿರೂರ, ಪರಶುರಾಮ ಕಾಳೆ, ಸುರೇಶ್ ಗೋಕಾಕ.! 
ಅಮೃತ ಈಜಾರೆ.ಕಳಸಾ ಬಂಡೂರಿ ಹೋರಾಟಗಾರ…
Share News

About Shaikh BIG TV NEWS, Hubballi

Check Also

ಹುಬ್ಬಳ್ಳಿ–ಧಾರವಾಡದಲ್ಲಿ ಟ್ರಾಫಿಕ್ ಅರಾಜಕತೆ! ಅಪ್ರಾಪ್ತರ ಕೈಗೆ ಬೈಕ್, ರಸ್ತೆಯಲ್ಲಿ ಜೀವದ ಜೊತೆ ಚೆಲ್ಲಾಟ!

👆News Audio ಹೆಲ್ಮೆಟ್ ಇಲ್ಲ, ನಂಬರ್ ಪ್ಲೇಟ್ ಇಲ್ಲ… ಟ್ರಾಫಿಕ್ ಪೊಲೀಸರ ಕಣ್ಣೆದುರೇ ನಿಯಮಗಳ ಉಲ್ಲಂಘನೆ! ಸಾರ್ವಜನಿಕರ ಜೀವಕ್ಕೆ ಹೊಣೆ …

Leave a Reply

Your email address will not be published. Required fields are marked *