Breaking News

Shaikh BIG TV NEWS, Hubballi

ಮೋದಿಗೆ ಸ್ವಚ್ಛ ಭಾರತ್ ಒಂದು ಟೊಳ್ಳು ಘೋಷಣೆಯಷ್ಟೇ: ರಾಹುಲ್..

ದೆಹಲಿ: ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್​ಗಾಂಧಿ ವಾಗ್ದಾಳಿ ಮುಂದುವರಿಸಿದ್ದು, ಪ್ರಧಾನಿ ಮೋದಿಗೆ ಸ್ವಚ್ಛ ಭಾರತ್​ ಅನ್ನೋದು ಕೇವಲ ಒಂದು ಟೊಳ್ಳು ಘೋಷಣೆಯಷ್ಟೇ. ಅವ್ರು ಈಗಲೂ ಮ್ಯಾನ್​ಹೋಲ್​ಗಳಿಗೆ ಮನುಷ್ಯರನ್ನ ಇಳಿಸ್ತಿರೋ ಬಗ್ಗೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಅಂತ ಕಿಡಿಕಾರಿದ್ದಾರೆ. ದೆಹಲಿಯ ದ್ವಾರಕಾ ದಬ್ರಿ ಏರಿಯಾದ ಕಟ್ಟಡದಲ್ಲಿ ಪೌರಕಾರ್ಮಿಕ ಅನಿಲ್​ ಮ್ಯಾನ್​ಹೋಲ್​ನಲ್ಲಿ ಕೆಲಸ ಮಾಡುವಾಗ ಸಾವನ್ನಪ್ಪಿದ ಕೇಸ್​ ಸುದ್ದಿಯಾಗಿತ್ತು. ಆದರೆ ನಮ್ಮ ಪ್ರಧಾನಿ ಸ್ವಚ್ಛಭಾರತ್​ ನ್ನ ಕೇವಲ ಘೋಷಣೆಯಾಗಿ ಅಷ್ಟೇ ಬಳಸುತ್ತಿದ್ದಾರೆ. …

Read More »

ಮೈತ್ರಿ‌ ಸರ್ಕಾರ ಐದು ವರ್ಷ ಫಿಕ್ಸ್, ಶಾಸಕರ್ಯಾರೂ ಬಿಜೆಪಿಗೆ ಹೋಗಲ್ಲ- ಸಚಿವ ಜಮೀರ್ ಅಚಲ ವಿಶ್ವಾಸ

ಹುಬ್ಬಳ್ಳಿಯಲ್ಲಿ  ಮೈತ್ರಿ ಸರ್ಕಾರದಲ್ಲಿ ಯಾವುದೇ ಭಿನ್ನಮತವಿಲ್ಲ. ಯಾವ ಶಾಸಕರು ಬಿಜೆಪಿಗೆ ಹೋಗಲ್ಲ ಎಂದು ಸಚಿವ ಜಮೀರ್ ಅಹ್ಮದ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು,  ಐದು ವರ್ಷಗಳ ಕಾಲ ಮೈತ್ರಿ ಸರ್ಕಾರ ಮುಂದುವರೆಯಲಿದೆ. ಯಾವ ಶಾಸಕರಲ್ಲೂ ಅಸಮಾಧಾನ ಇಲ್ಲ. ಮೈತ್ರಿ ಸರ್ಕಾರ ರಚನೆಯಾದಾಗಿನಿಂದಲೂ ಸರ್ಕಾರ ಬೀಳಿಸುವ ಪ್ರಯತ್ನ ನಡೆಯುತ್ತಿದೆ ಎಂದರು. ಬಿಜೆಪಿಯವರು ಸರ್ಕಾರ ರಚನೆಯ ಹಗಲು ಕನಸು ಕಾಣುತ್ತಿದ್ದಾರೆ. ಆದ್ರೆ ಅವರಿಗೆ ಫಲ ಸಿಗುವುದಿಲ್ಲ. ಮೈತ್ರಿ ಸರ್ಕಾರ ಯಾವುದೇ ಕಾರಣಕ್ಕೂ …

Read More »

ರೈಲುಗಳಲ್ಲಿ ಶೀಘ್ರದಲ್ಲಿಯೇ ರದ್ದಾಗಲಿದೆ ಈ ಸೌಲಭ್ಯ! ಅದೇನು ಗೊತ್ತೇ?

ನವದೆಹಲಿ: ರೈಲ್ವೆ ನಿಲ್ದಾಣ ತಲುಪಿದ ನಂತರ ರಿಸರ್ವೇಶನ್ ಚಾರ್ಟ್ ನೋಡುವ ಅಭ್ಯಾಸ ನಿಮಗೇನಾದರೂ ಇದ್ದಲ್ಲಿ ಅದನ್ನು ಇಂದಿನಿಂದಲೇ ಬದಲಾಯಿಸಿಕೊಳ್ಳಿ! ಏಕೆಂದರೆ ಭಾರತೀಯ ರೈಲ್ವೆ ಇಲಾಖೆಯು ರೈಲುಗಾಡಿಗಳ ಮೇಲೆ ರಿಸರ್ವೇಶನ್ ಚಾರ್ಟ್ ಹಾಕುವುದನ್ನು ನಿಲ್ಲಿಸಲು ನಿರ್ಧಾರ ಕೈಗೊಂಡಿದೆ.  ಈ ನೂತನ ನಿಯಮದ ಪ್ರಕಾರ, ದೇಶದ ಯಾವುದೇ ರೈಲು ನಿಲ್ದಾಣಗಳಲ್ಲಿ ರೈಲುಗಳ ಮೇಲೆ ರಿಸರ್ವೇಶನ್ ಚಾರ್ಟ್ ಹಾಕದಂತೆ ಎಲ್ಲಾ ನಿಲ್ದಾಣಗಳಿಗೆ ರೈಲ್ವೆ ಇಲಾಖೆ ಆದೇಶ ನೀಡಿದೆ. ಈ ಆದೇಶ ಎಲ್ಲಾ ರೈಲ್ವೆ ವಲಯಗಳಲ್ಲಿ …

Read More »

ಮೊಬೈಲ್ ಅತಿಹೆಚ್ಚು ಬಳಸಿದೆ ಈ ಆರೋಗ್ಯ ಸಮಸ್ಯೆ ಖಚಿತ!

ನವದೆಹಲಿಯ AIIMS ಮತ್ತು ICMR ಜಂಟಿಯಾಗಿ ಮೊಬೈಲ್ ಪೋನ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ನೂತನ ಸಂಶೋಧನೆಯೊಂದನ್ನು ಆರಂಭಿಸಿದೆ.  ನವದೆಹಲಿ: ಮೊಬೈಲ್ ಫೋನ್ಗಳನ್ನು ಅತಿ ಹೆಚ್ಚು ಬಳಸುವುದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಈ ಬಗ್ಗೆ ಸಾಕಷ್ಟು ಸಂಶೋಧನಾ ವರದಿಗಳು ಸಾಬೀತುಪಡಿಸಿವೆ. ಆದರೆ, ICMR ನಡೆಸಿರುವ ನೂತನ ಅಧ್ಯಯನ ವರದಿ ನಿಮಗೆ ನಿಜಕ್ಕೂ ಆತಂಕ ಮೂಡಿಸಲಿದೆ.  ಹೌದು, ನವದೆಹಲಿಯ AIIMS ಮತ್ತು ICMR ಜಂಟಿಯಾಗಿ ಮೊಬೈಲ್ ಪೋನ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ …

Read More »

ಚಿನ್ನದ ಅಂಬಾರಿ ಒಡೆತನದ ಬಗ್ಗೆ ಯದುವೀರ್ ನೀಡಿದ ಶಾಕಿಂಗ್ ಏನು ಗೊತ್ತಾ?

ಮೈಸೂರು: ಅರಮನೆಯ ಅಂಬಾರಿ ನಮ್ಮ ವೈಯಕ್ತಿಕ ಆಸ್ತಿ. ಹಿಂದೆಯೂ ಅದು ನಮ್ಮ ಆಸ್ತಿಯೇ ಆಗಿತ್ತು. ಈಗಲೂ ನಮ್ಮದೆ, ಮುಂದೆಯೂ ಅದು ನಮ್ಮ ಆಸ್ತಿಯೇ ಆಗಿರುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಇತ್ತೀಚೆಗಷ್ಟೇ ರಾಜವಂಶಸ್ಥೆ ಡಾ.ಪ್ರಮೋದಾದೇವಿ ಒಡೆಯರ್‌ ಮಾಧ್ಯಮಗಳಿಗೆ ತಿಳಿಸಿದ್ದರು.  ರಾಜವಂಶಸ್ಥೆ ಡಾ.ಪ್ರಮೋದಾದೇವಿ ಒಡೆಯರ್‌ ಅವರ ಈ ಹೇಳಿಕೆ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ನನಗೆ ಅದರ ಬಗ್ಗೆ ಹೆಚ್ಚಾಗಿ ಮಾಹಿತಿ ಇಲ್ಲ. …

Read More »

ಭದ್ರತಾ ಸಾಮಗ್ರಿಗಳ ಮೇಕ್ ಇನ್ ಇಂಡಿಯಾಗೆ 9 ಸಾವಿರ ಕೋಟಿ..!

ನವದೆಹಲಿ: ಭಾರತೀಯ ಭದ್ರತಾ ಪಡೆಗಳಿಗೆ 9,100 ಕೋಟಿ ರೂಪಾಯಿ ವೆಚ್ಚದಲ್ಲಿ ರಕ್ಷಣಾ ಸಾಮಾಗ್ರಿಗಳನ್ನು ಸಿದ್ಧಪಡಿಸಲು ಕೇಂದ್ರ ರಕ್ಷಣಾ ಸಚಿವೆ ನಿರ್ಮಾಲ ಸೀತಾರಾಮನ್​ ನೇತೃತ್ವದ ಡಿಫೆನ್ಸ್​ ಅಕ್ಯುಸಿಶನ್​ ಕೌನ್ಸಿಲ್​ (ಡಿಎಸಿ) ಅನುಮೋದನೆ ನೀಡಿದೆ. ರಕ್ಷಣಾ ಸಾಮಾಗ್ರಿಗಳನ್ನು ಸ್ಥಳೀಯವಾಗಿ ಸಂಗ್ರಹಿಸಲು ಮತ್ತು ಸಿದ್ಧಪಡಿಸಲು ಹೆಚ್ಚಿನ ಒತ್ತು ನೀಡಲಾಗಿದೆ. ಭಾರತ್​ ಡೈನಮಿಕ್ ಲಿಮಿಟೆಡ್​ ಅಡಿಯಲ್ಲಿ ​ಎರಡು ‘ಆಕಾಶ ಮಿಸೈಲ್​ ಸಿಸ್ಟಮ್​’ಗಳನ್ನು ಕೊಂಡುಕೊಳ್ಳಲು ತಿಳಿಸಿದೆ. ಆಕಾಶ ಮಿಸೈಲ್​ ಸಿಸ್ಟಮ್​ ಅಪ್​ಗ್ರೇಡ್​ ವರ್ಷನ್​ ಆಗಿದ್ದು ಹೊಸ ಅನ್ವೇಷಕ …

Read More »

ಹರಿಯಾಣ ಗ್ಯಾಂಗ್​ ರೇಪ್​, ಸರ್ಕಾರಕ್ಕೆ ಕಪ್ಪು ಚುಕ್ಕೆ..

ಹರಿಯಾಣದ ರಾವರಿ ಎನ್ನುವ ಪ್ರದೇಶದಲ್ಲಿ ಸಿಬಿಎಸ್​​ಸಿ ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್​ ರೇಪ್ ಪ್ರಕರಣ ಸಿಎಂ ಮನೋಹರ್​ ಲಾಲ್​ ಖಟ್ಟರ್ ಸರ್ಕಾರಕ್ಕೆ ಒಂದು ದೊಡ್ಡ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ಆ ದಿನದಂದು ಮಹೆಂದ್ರಘಡ್​​ನಲ್ಲಿರುವ ಶಿಕ್ಷಣ ಸಚಿವ ರಾಮ್​ ಬಿಲಾಸ್​ ಶರ್ಮ ತಾಯಿ ವಿಧಿವಶರಾಗಿದ್ದರು. ಈ ವೇಳೆ ಸಂತಾಪ ಸೂಚಿಸಲು ಬರುತ್ತಿದ್ದ ವಿವಿಐಪಿಗಳಿಗೆ ಭದ್ರತೆಯನ್ನು ನೀಡಲು ಸ್ಥಳೀಯ ಪೊಲೀಸರು ತೆರಳಿದ್ದರು. ಇದರಿಂದ ಅತ್ಯಾಚಾರಿಗಳು ತಪ್ಪಿಸಿಕೊಳ್ಳಲು ಅನುಕೂಲವಾಯಿತು ಎಂದು ಸರ್ಕಾರ ಕಾರಣ ನೀಡಿದೆ. …

Read More »

ಆಪರೇಶನ್ ಕಮಲದ ಭೀತಿ; ದೆಹಲಿಯತ್ತ ದೌಡಾಯಿಸಲಿರುವ ಕಾಂಗ್ರೆಸ್ ನಾಯಕರು..

ಬೆಂಗಳೂರು: ಆಪರೇಶನ್ ಕಮಲದ ಭೀತಿ ಒಂದೆಡೆಯಾದರೆ, ಇನ್ನೊಂದೆಡೆ ಪಕ್ಷದೊಳಗಿನ ಭಿನ್ನಮತ ಕಾಂಗ್ರೆಸ್ ಪಕ್ಷವನ್ನು ಎಡಬಿಡದಂತೆ ಕಾಡುತ್ತಿದೆ. ರಾಜ್ಯ ಕಾಂಗ್ರೆಸ್ ನೊಳಗಿನ ಆಂತರಿಕ ಭಿನ್ನಮತ ಶಮನಕ್ಕೆ ಇದೀಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯೇ ಮಧ್ಯಪ್ರವೇಶಿಸಬೇಕಾದ ಅನಿವಾರ್ಯತೆ ಎದುರಾಗಿದ್ದು, ಕಾಂಗ್ರೆಸ್ ನಾಯಕರು ದೆಹಲಿಯತ್ತ ದೌಡಾಯಿಸಲಿದ್ದಾರೆ. ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಾ. ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ದೆಹಲಿಗೆ …

Read More »

ಬಂಡಾಯ ಶಮನಕ್ಕಾಗಿ ಸ್ವತಃ ಅಖಾಡಕ್ಕಿಳಿದರು ಸಿಎಂ

ಬೆಂಗಳೂರು: ನಿರಂತರ ರಾಜಕೀಯ ಬೆಳವಣಿಗೆಯ ನಡುವೆಯೂ ಸಿದ್ದರಾಮಯ್ಯ ಅವರ ಶ್ರಿರಕ್ಷೆಯಲ್ಲಿ ನಮ್ಮ ಸರ್ಕಾರ ಐದು ವರ್ಷ ಪೂರೈಸಲಿದೆ ಎಂದು ಮೌನವಾಗಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಇದೀಗ ಅಖಾಡಕ್ಕಿಳಿದಿದ್ದಾರೆ. ನಿನ್ನೆಯಷ್ಟೇ ಸಚಿವ ರಮೇಶ್ ಜಾರಕಿಹೊಳಿ ಅವರೊಂದಿಗೆ ಮಾಜಿ ಸಿಎಂ ಸಿದ್ದರಾಮಯ್ಯ ನಡೆಸಿದ ಸಂಧಾನ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಜಾರಕಿಹೊಳಿ ಸಹೋದರರನ್ನು ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್​ನಲ್ಲಿ ಭೇಟಿಯಾಗಿ, ಮಾತುಕತೆ ನಡೆಸಿದ್ದಾರೆ. ಸ್ವತಃ ಮುಖ್ಯಮಂತ್ರಿಗಳೇ ಅಖಾಡಕ್ಕಿಳಿದಿರುವುದು ರಾಜ್ಯ ರಾಜಕೀಯದಲ್ಲಿ …

Read More »

ಡಿಸಿ ಕಚೇರಿ ಮುಂದೆ ಸ್ನಾನ ಮಾಡಿ ಪ್ರತಿಭಟಿಸಿದ ದಲಿತ ವಿದ್ಯಾರ್ಥಿಗಳು..

ಧಾರವಾಡ:  ರಾಜ್ಯ ಸರ್ಕಾರದ ಸುತ್ತೋಲೆಯಿಂದ ವಸತಿ ಶಾಲೆಗಳ ಪ್ರವೇಶ ಬಯಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಕ್ಕಳಿಗೆ ಅನ್ಯಾಯವಾಗುತ್ತಿದೆ ಮತ್ತು ಮಕ್ಕಳು ಅತಂತ್ರ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಆರೋಪಿಸಿ ಜನಜಾಗೃತಿ ಸಂಘದ ವತಿಯಿಂದ ನೂರಾರು ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿದ ನೂರಾರು ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಸ್ನಾನ ಮಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ದ …

Read More »