Breaking News

ಮೋದಿಗೆ ಸ್ವಚ್ಛ ಭಾರತ್ ಒಂದು ಟೊಳ್ಳು ಘೋಷಣೆಯಷ್ಟೇ: ರಾಹುಲ್..

ದೆಹಲಿ: ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್​ಗಾಂಧಿ ವಾಗ್ದಾಳಿ ಮುಂದುವರಿಸಿದ್ದು, ಪ್ರಧಾನಿ ಮೋದಿಗೆ ಸ್ವಚ್ಛ ಭಾರತ್​ ಅನ್ನೋದು ಕೇವಲ ಒಂದು ಟೊಳ್ಳು ಘೋಷಣೆಯಷ್ಟೇ. ಅವ್ರು ಈಗಲೂ ಮ್ಯಾನ್​ಹೋಲ್​ಗಳಿಗೆ ಮನುಷ್ಯರನ್ನ ಇಳಿಸ್ತಿರೋ ಬಗ್ಗೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಅಂತ ಕಿಡಿಕಾರಿದ್ದಾರೆ.
ದೆಹಲಿಯ ದ್ವಾರಕಾ ದಬ್ರಿ ಏರಿಯಾದ ಕಟ್ಟಡದಲ್ಲಿ ಪೌರಕಾರ್ಮಿಕ ಅನಿಲ್​ ಮ್ಯಾನ್​ಹೋಲ್​ನಲ್ಲಿ ಕೆಲಸ ಮಾಡುವಾಗ ಸಾವನ್ನಪ್ಪಿದ ಕೇಸ್​ ಸುದ್ದಿಯಾಗಿತ್ತು. ಆದರೆ ನಮ್ಮ ಪ್ರಧಾನಿ ಸ್ವಚ್ಛಭಾರತ್​ ನ್ನ ಕೇವಲ ಘೋಷಣೆಯಾಗಿ ಅಷ್ಟೇ ಬಳಸುತ್ತಿದ್ದಾರೆ. ಮ್ಯಾನ್​ಹೋಲ್​, ಶೌಚಾಲಯ ಸ್ವಚ್ಛ ಮಾಡುವಾಗ ಪೌರಕಾರ್ಮಿಕರು ಸಾವನ್ನಪ್ಪುತ್ತಲೇ ಇದ್ದಾರೆ. ಆದ್ರೆ ಮೋದಿ ಅವರು ಇದನ್ನು ನೋಡಿಯೂ ಕುರುಡರಂತೆ ವರ್ತಿಸುತ್ತಿದ್ದಾರೆ ಅಂತಾ ವ್ಯಂಗ್ಯವಾಡಿದ್ದಾರೆ.
ಯುಪಿಎ ಸರ್ಕಾರ ಪ್ರಾಹಿಬಿಷನ್​ ಆಫ್​ ಎಂಪ್ಲಾಯ್​ಮೆಂಟ್​ ಆ್ಯಸ್​ ಮ್ಯಾನುಯಲ್​ ಸ್ಕೇವೆಂಜರ್ಸ್​ ಌಂಡ್​ ದೇರ್​ ರಿಹೆಬಿಲಿಯೇಷನ್​ ಬಿಲ್​ 2012 ಅಡಿ ಮ್ಯಾನ್​ಹೋಲ್​ನಲ್ಲಿ ಕೆಲಸ ಮಾಡುವುದನ್ನು ನಿಷೇಧಿಸಿತ್ತು. ಆದ್ರೆ ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವಲ್ಲಿ ಎನ್​ಡಿಎ ಸರ್ಕಾರ ಸಂಪೂರ್ಣ ವಿಫಲವಾಗಿದೆ ಅಂತಾ ಕಾಂಗ್ರೆಸ್​ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ನಿತಿನ್​ ರಾವತ್ ದೂರಿದ್ದಾರೆ. ಯುಪಿಎ ಸರ್ಕಾರ ಜಾರಿ ಮಾಡಿದ್ದ ಕಾಯಿದೆಗೆ ಬೆಂಬಲ ನೀಡದಿರೋದು ಕೂಡ ಇಂತಹ ಘಟನೆಗಳು ಮರುಕಳಿಸುತ್ತಿರೋದಕ್ಕೆ ಕಾರಣವಾಗಿದೆ. ಮ್ಯಾನ್​ಹೋಲ್​ಗಳಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬದ ಸದಸ್ಯರೋರ್ವರಿಗೆ ಸರ್ಕಾರಿ ಕೆಲಸ, 50ಲಕ್ಷ ರೂಪಾಯಿ ಪರಿಹಾರ, ರೋಗಕ್ಕೆ ತುತ್ತಾದವರಿಗೆ 25 ಲಕ್ಷ ರೂಪಾಯಿ ನೀಡಬೇಕು ಅಂತಾ ಒತ್ತಾಯಿಸಿದ್ದಾರೆ.
Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *