Breaking News

Shaikh BIG TV NEWS, Hubballi

2018-19ರಲ್ಲಿ ಭಾರತದ ಜಿಡಿಪಿ ದರ ಶೇ.8.2ಕ್ಕೆ ಏರಿಕೆ

ನವದೆಹಲಿ: 2018-19ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಭಾರತ ಆರ್ಥಿಕ ಬೆಳವಣಿಗೆ(ಜಿಡಿಪಿ) ದರ ಶೇ.8.2ಕ್ಕೆ ಏರಿಕೆಯಾಗಿದೆ ಎಂದು ಶುಕ್ರವಾರ ಅಧಿಕೃತ ದತ್ತಾಂಶಗಳಿಂದ ತಿಳಿದು ಬಂದಿದೆ. 2018-19ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ದರ 8.2ರಷ್ಟು ದಾಖಲಾಗಿದ್ದು, ಇದು ಕಳೆದ ವರ್ಷದ ನಾಲ್ಕನೆ ತ್ರೈಮಾಸಿಕದ ಜೆಡಿಪಿ ದರ ಶೇ.7.7ಕ್ಕಿಂತ ಹೆಚ್ಚು ಎಂದು ಕೇಂದ್ರ ಸಾಂಖ್ಯಿಕ ಕಚೇರಿ ತಿಳಿಸಿದೆ. ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರದ ಅವಧಿಯಲ್ಲಿ ಕೈಗೊಂಡ ಆರ್ಥಿಕ ಸುಧಾರಣೆಗಳ ನಂತರ ತೀವ್ರವಾಗಿ ಕುಸಿತಗೊಂಡಿದ್ದ …

Read More »

ಹೋರಾಟಗಾರರ ಪತ್ರ ‘ರಾಜೀವ್ ಗಾಂಧಿ-ತರಹದ’ ಘಟನೆ ಬಗ್ಗೆ ಮಾತನಾಡಿದೆ: ಪುಣೆ ಪೊಲೀಸರು

ಮುಂಬೈ: ಬಂಧಿತ ಐವರು ಹೋರಾಟಗಾರರು ನಿಷೇಧಿದ ನಕ್ಸಲ್ ಸಂಘಟನೆಗಳೊಂದಿಗೆ ನಂಟು ಹೊಂದಿರುವ ಬಗ್ಗೆ ಸ್ಪಷ್ಟ ಪುರಾವೆ ಸಿಕ್ಕ ನಂತರವೇ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಶುಕ್ರವಾರ ಮಹಾರಾಷ್ಟ್ರ ಪೊಲೀಸರು ಹೇಳಿದ್ದಾರೆ. ನಕ್ಸಲರೊಂದಿಗೆ ಅವರು ನಂಟು ಹೊಂದಿರುವುದು ಸ್ಪಷ್ಟವಾದ ನಂತರವೇ ನಾವು ವಿವಿಧ ನಗರಗಳಲ್ಲಿ ದಾಳಿ ನಡೆಸಿ ಕ್ರಮ ತೆಗೆದುಕೊಂಡಿದ್ದೇವ ಎಂದು ಮಹಾರಾಷ್ಟ್ರ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಪರಮ್ ಬಿರ್ ಸಿಂಗ್ ಅವರು ತಿಳಿಸಿದ್ದಾರೆ. ಹೋರಾಟಗಾರರ ಪತ್ರವೊಂದು ರಾಜೀವ್ ಗಾಂಧಿ …

Read More »

ಗಂಡಿನ ಮದುವೆ ವಯಸ್ಸನ್ನೂ 18ಕ್ಕಿಳಿಸಿ: ಕಾನೂನು ಆಯೋಗ ಶಿಫಾರಸು..

ನವದೆಹಲಿ: ಗಂಡು ಮತ್ತು ಹೆಣ್ಣಿಗೆ ಮದುವೆಯ ಕನಿಷ್ಠ ವಯಸ್ಸಿನ ವಿಚಾರದಲ್ಲಿ ಯಾವುದೇ ತಾರತಮ್ಯ ಇರಬಾರದು. ಗಂಡಿಗೆ ಮದುವೆಯ ಕನಿಷ್ಠ ವಯಸ್ಸನ್ನು ಈಗಿನ 21 ವರ್ಷದಿಂದ 18ಕ್ಕೆ ಇಳಿಸಬೇಕು ಎಂದು ಕಾನೂನು ಆಯೋಗ ಶಿಫಾರಸು ಮಾಡಿದೆ ಎಂದು ತಿಳಿದುಬಂದಿದೆ. ಏಕರೂಪ ನಾಗರಿಕ ಸಂಹಿತೆ ವಿಚಾರವಾಗಿ ನಡೆದ ಸಭೆಯಲ್ಲಿ ಈ ಬಗ್ಗೆ ಕಾನೂನು ಆಯೋಗ ಸಮಗ್ರ ಸಮಾಲೋಚನೆ ನಡೆಸಿದ್ದು,  ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದ ಪೂರ್ಣ ಪ್ರಮಾಣದ ವರದಿಯನ್ನು ಸಿದ್ಧಪಡಿಸುವ ಬದಲು ಕಾನೂನು …

Read More »

2021 ರಲ್ಲಿ ಹಿಂದುಳಿದ ಜಾತಿಗಳ ಗಣತಿಗೆ ಮುಂದಾದ ಸರ್ಕಾರ!

ನವದೆಹಲಿ: ಜನಗಣತಿ 2021 ಮೊದಲಬಾರಿಗೆ ಹಿಂದುಳಿದ ಜಾತಿಗಳ (ಒಬಿಸಿ) ಡೇಟಾವನ್ನು ಸಂಗ್ರಹಿಸುವುದಾಗಿ ಗೃಹ ಸಚಿವಾಲಯ ಶುಕ್ರವಾರ ಘೋಷಿಸಿದೆ. ಜನಗಣತಿ 2021ನ್ನು ನಡೆಸಿದ ನಂತರ  ಮೂರು ವರ್ಷಗಳಲ್ಲಿ ಅದನ್ನು ಅಂತಿಮಗೊಳಿಸಲಾಗುತ್ತದೆ ಎಂದು ಹೇಳಲಾಗಿದೆ. ಈ ಹಿಂದೆ ಏಳು ಮತ್ತು ಎಂಟು ವರ್ಷಗಳಲ್ಲಿ ಅಂತಿಮಗೊಳಿಸಲಾಗುತಿತ್ತು ಎಂದು ಗೃಹ ಸಚಿವಾಲಯದ ವಕ್ತಾರರು ಪಿಟಿಐಗೆ ತಿಳಿಸಿದ್ದಾರೆ. ಈ ಘೋಷಣೆ ಪ್ರಮುಖವಾಗಿ ಗೃಹ ಸಚಿವ ರಾಜನಾಥ್ ಸಿಂಗ್ ಅವರು 2021ರ ಜನಗಣತಿ ನೀಲ ನಕ್ಷೆ ಕುರಿತಾಗಿ ಚರ್ಚಿಸಿದ …

Read More »

ಸಾಲ ಮನ್ನಾ ಆದೇಶ ಪ್ರತಿ ನೀಡಲು ಆಗ್ರಹಿಸಿ ರೈತರ ಪ್ರತಿಭಟನೆ

ರೈತರ ಸಾಲಮನ್ನ ಆದೇಶದ ಪ್ರತಿ ವಿತರಿಸಬೇಕು. ಹಾಗೂ  ರೈತರ  ವಿವಿಧ ಬೇಡಿಕೆಗಳನ್ನು ಇಡೇರಿಸಬೇಕು ಎಂದು ಆಗ್ರಹಿಸಿ,  ರಾಜ್ಯ ಸರ್ಕಾರದ ವಿರುದ್ದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ಮುಖಂಡರು ಧಾರವಾಡದಲ್ಲಿ ಪ್ರತಿಭಟನೆ  ನಡೆಸಿದರು. ನಗರದ ಕಲಾಭನದಲ್ಲಿ ಸೇರಿದ ನೂರಾರು ರೈತರು ಜುಬ್ಲಿ ವೃತ್ತದಲ್ಲು ಪ್ರತಿಭಟನೆ ನಡಿಸಿ ಮೇರವಣೆಗೆ ಮೂಲಕ  ಕೋರ್ಟ್ ಸಕ್೯ಲ್ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ವರೆಗೆ  ಆಗಮಿಸಿ ಮನವಿ ಸಲ್ಲಿಸಲು ಕೃಷಿ ಅಧಿಕಾರಿಗಳು, ಹೆಸ್ಕಾಂ ಅಧಿಕಾರಿಗಳು …

Read More »

ಪ್ರಾರ್ಥನೆ ಫಲಿಸಲಿ.. ಕೇರಳ- ಕೊಡಗು ಮತ್ತೆ ತಲೆ ಎತ್ತಿ ನಿಲ್ಲಲಿ..

ಯಾವುದೇ ಧರ್ಮವಾದ್ರೂ ಅದರ ಉದ್ದೇಶ ಎಲ್ರ ಒಳೀತು ಬಯಸೋದೇ ಆಗಿರುತ್ತೆ. ಇತರರನ್ನ ದ್ವೇಷಿಸೋದು ಅಸಲಿಗೆ ಅದು  ಧರ್ಮ ಅಂತ ಹೇಳೋಕಾಗೋದಿಲ್ಲ. ಹೀಗೆ ಹೇಳೋಕೆ ಕಾರಣವೂ ಇದೆ. ಕೇರಳ-ಕೊಡಗು ಪ್ರಕೃತಿಯ ಮುನಿಸಿಗೆ ತುತ್ತಾಗಿವೆ. ಆದ್ರೇ, ಇದಾದ ಮೇಲೆ ಇಲ್ಲೊಂದಿಷ್ಟು ಮಂದಿ ನೆರೆಯಿಂದ ಬಳಲಿದವರ ಬದುಕು ಹಸನಾಗಲಿ ಅಂತ ಪ್ರಾರ್ಥಿಸ್ತಾನೆ ಇದಾರೆ. ಜತೆಗೆ ನೆರವು ಕೂಡ ನೀಡಿದಾರೆ. ಅಲ್ಲಾ ಅಲ್ಲಾ ನೀನೇ ಎಲ್ಲ ನಿನ್ನನು ಬಿಟ್ಟು ಗತಿಯಾರಿಲ್ಲ. ಒಳಿತು ಮಾಡೋ ಮನುಜ ನೀನ್ …

Read More »

ಜಸ್ಟ್ 20 ಸೆಕೆಂಡ್… ವಿಮಾನ ದುರಂತದಿಂದ ರಾಹುಲ್ ಗಾಂಧಿ ಸೇಫ್.

ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೆಹಲಿಯಿಂದ ಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದ ವಿಮಾನ 20 ಸೆಕೆಂಡ್ ತಡವಾಗಿದ್ದರೆ ಪತನಗೊಂಡು ಭಾರೀ ಅನಾಹುತವೇ ಸಂಭವಿಸುತ್ತಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ನಾಗರೀಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಬಹಿರಂಗಪಡಿಸಿದೆ. ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಏಪ್ರಿಲ್ 26ರಂದು ಬಾಡಿಗೆ ವಿಮಾನದಲ್ಲಿ ದೆಹಲಿಯಿಂದ ಹುಬ್ಬಳ್ಳಿಗೆ ಆಗಮಿಸಿದ್ದ ರಾಹುಲ್ ಗಾಂಧಿ ಅವರ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. 20 ಸೆಕೆಂಡ್ ತಡವಾಗಿದ್ದರೆ ರಾಹುಲ್ ವಿಮಾನ …

Read More »

ವಾರ್ಡ್‌ಗಳಲ್ಲಿನ ಕೆಲಸ ತಡವಾದರೆ ಆಯಾ ವಲಯದ ಜಂಟಿ ಆಯುಕ್ತರೇ ನೇರ ಹೊಣೆ.

ಬೆಂಗಳೂರು: ಪೀಣ್ಯಾ ದಾಸರಹಳ್ಳಿ ಬಿಬಿಎಂಪಿ ವಲಯಕ್ಕೆ ಶುಕ್ರವಾರ ದಿಢೀರ್ ಭೇಟಿ ನೀಡಿದ ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ಅವರು ಅಲ್ಲಿನ ಆಡಳಿತ ವೈಖರಿ, ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಆಡಳಿತ ವೈಖರಿ ಸುಗಮವಾಗಿ ಸಾಗಬೇಕೆಂಬ ಉದ್ದೇಶದಿಂದ ಎಂಟು ವಲಯ ಮಾಡಿದ್ದು, ಪ್ರತಿ ವಲಯಕ್ಕೂ ಜಂಟಿ ಆಯುಕ್ತರನ್ನು ನೇಮಕ ಮಾಡಲಾಗಿದೆ. ಈ ವಲಯದ ಸಂಪೂರ್ಣ ಜವಾಬ್ದಾರಿ ಇವರ ಮೇಲಿದೆ. ಇಲ್ಲಿಯ ಯಾವುದೇ ಕಾಮಗಾರಿ …

Read More »

ರಾಹುಲ್ ಗಾಂಧಿ ಕ್ಷೇತ್ರಕ್ಕೆ ಸ್ಮೃತಿ ಇರಾನಿ ನೆರವು!

ಅಮೇಠಿ: ರಾಹುಲ್ ಗಾಂಧಿ ಲೋಕಸಭಾ ಕ್ಷೇತ್ರವಾದ ಅಮೇಠಿಯಲ್ಲಿನ ಗ್ರಾಮಕ್ಕೆ ಈಗ ನೆರವು ನೀಡಲು ಕೇಂದ್ರ ಸಚಿವೆ ಸ್ಮೃತಿ ಇರಾನಿ ಮುಂದೆ ಬಂದಿದ್ದಾರೆ.   ಸುಮಾರು ಸರ್ಕಾರದ 200ಕ್ಕೂ ಅಧಿಕ ಡಿಜಿಟಲ್ ಇಂಡಿಯಾದ ಭಾಗವಾಗಿರುವ ಕಾರ್ಯಕ್ರಮಗಳನ್ನು ಪಿಂಡಾರಾ ಥಾಕೂರ್ ಗ್ರಾಮಕ್ಕೆ ಅಳವಡಿಸಲು ಮುಂದಾಗಿದ್ದಾರೆ ಎಂದು  ತಿಳಿದು ಬಂದಿದೆ. ಶನಿವಾರದಂದು ಡಿಜಿಟಲ್ ಅವತಾರ್ ಕಾರ್ಯಕ್ರಮದ ಮೂಲಕ ಈ ಎಲ್ಲ ಸೇವೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚಿಗೆ ಸ್ಮೃತಿ ಇರಾನಿ ಅಮೇತಿ ಕ್ಷೇತ್ರಕ್ಕೆ ನಿರಂತರವಾಗಿ …

Read More »

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಗೆ ಸಮನ್ಸ್ ಜಾರಿ.

ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 28ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಅಮಿತ್ ಷಾ ಗೆ ಕೋರ್ಟ್ ಆದೇಶ ನೀಡಿದೆ.  ಕೋಲ್ಕತ್ತಾ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾಗೆ ಕೊಲ್ಕತ್ತಾ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.  ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಂಬಂಧಿ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಬಗ್ಗೆ ಆಗಸ್ಟ್ 11ರಂದು ನಡೆದ ರ್ಯಾಲಿಯಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 28ರಂದು ನ್ಯಾಯಾಲಯಕ್ಕೆ …

Read More »