Breaking News

BigTv News

ಸಾಲ ವಸೂಲಾತಿ ನೆಪದಲ್ಲಿ ವಿದ್ಯಾರ್ಥಿನಿ ಅಪಹರಣಕ್ಕೆ ಯತ್ನ; ಆರೋಪಿಗಳ ವಿರುದ್ಧ FIR

ಚಿತ್ರದುರ್ಗ: ತಂದೆಯ ಸಾಲದ ವಿಚಾರ ಮುಂದಿಟ್ಟುಕೊಂಡು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯನ್ನು ಅಪಹರಿಸಲು ಯತ್ನಿಸಿದ ಆರೋಪ ಕೇಳಿಬಂದಿದೆ. ಹೊಳಲ್ಕೆರೆ ತಾಲೂಕಿನ ಘಟನೆಗೆ ಸಂಬಂಧಿಸಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಪವನ್ ಹಾಗೂ ಆಕಾಶ್ ಕಡೆಮನೆ ವಿರುದ್ಧ ಚಿತ್ರಹಳ್ಳಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಟ್ಯೂಷನ್ ಮುಗಿಸಿ ಮನೆಗೆ ಬರುತ್ತಿದ್ದ ವಿದ್ಯಾರ್ಥಿನಿಗೆ ‘ನಿನ್ನ ತಂದೆ ಮೃತಪಟ್ಟಿದ್ದಾರೆ’ ಎಂದು ಸುಳ್ಳು ಹೇಳಿ ಕರೆದೊಯ್ಯಲು ಆರೋಪಿಗಳು ಯತ್ನಿಸಿದ್ದಾರೆ ಎನ್ನಲಾಗಿದೆ. ಶಿಕ್ಷಕರಿಗೂ ಕರೆ ಮಾಡಿ ವಿದ್ಯಾರ್ಥಿನಿಯನ್ನು ಕಳುಹಿಸುವಂತೆ ಒತ್ತಡ ಹೇರಿದ್ದರೂ, ಅನುಮಾನಗೊಂಡ …

Read More »

ಒಂದೇ ರಾತ್ರಿ ಎಲ್ಲವೂ ಮುಗಿಯಿತು! 3 ವರ್ಷದ ದಾಂಪತ್ಯಕ್ಕೆ ದುರಂತ ಅಂತ್ಯ. ಶ್ರೀಲಂಕಾ ಟ್ರಿಪ್ ಕನಸು ಅಪೂರ್ಣ!

ಬೆಂಗಳೂರು: ರಾಜಗೋಪಾಲನಗರ ಠಾಣಾ ವ್ಯಾಪ್ತಿಯ ಹೆಗ್ಗನಹಳ್ಳಿಯಲ್ಲಿ ಕೌಟುಂಬಿಕ ಕಲಹ ದುರಂತ ಅಂತ್ಯ ಕಂಡಿದೆ. ಜಗಳದ ವೇಳೆ ಪತಿ ಪತ್ನಿಯ ಕಪಾಳಕ್ಕೆ ಹೊಡೆದಿದ್ದು, ಆಕೆ ಪ್ರಜ್ಞೆ ತಪ್ಪಿ ಬಿದ್ದ ಬಳಿಕ ಆತಂಕಗೊಂಡ ಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಂಪತಿ ಪದ್ಮಾವತಿ (29) ಹಾಗೂ ಸುಮಂತ್ (32) ಮೃತರು. ಬುಧವಾರ ರಾತ್ರಿ ಕೌಟುಂಬಿಕ ವಿಚಾರವಾಗಿ ಜಗಳ ನಡೆದಿದ್ದು, ಗಲಾಟೆ ವಿಕೋಪಕ್ಕೆ ತಿರುಗಿತ್ತು. ಘಟನೆಗೂ ಮುನ್ನ ಪದ್ಮಾವತಿ ತಾಯಿಗೆ ಸಂದೇಶ ಕಳುಹಿಸಿದ್ದರೆಂದು ತಿಳಿದುಬಂದಿದೆ. …

Read More »

ನಾದಿನಿ ಮೇಲೆ ಅತ್ಯಾಚಾರಕ್ಕೆ ಯತ್ನ, ಮರ್ಮಾಂಗಕ್ಕೆ ಒದ್ದು ಮಗು ಕೊಲೆ

ಮಡಿಕೇರಿ: ನಾದಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆ ವಿರೋಧಿಸಿದಾಗ ಸಿಟ್ಟಿನಿಂದ ನಾಲ್ಕು ವರ್ಷದ ಮಗುವನ್ನು ಹತ್ಯೆ ಮಾಡಿರುವ ಆರೋಪ ಕೊಡಗು ಜಿಲ್ಲೆಯ ವಿರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆ ಸಂಬಂಧ ಪ್ರತಾಪ್ (35) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆಲವು ತಿಂಗಳಿಂದ ಪ್ರತಾಪ್ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಬುಧವಾರ ಮತ್ತೆ ಕೃತ್ಯಕ್ಕೆ ಮುಂದಾದಾಗ ವಿರೋಧಿಸಿದ್ದಕ್ಕೆ ಕೋಪಗೊಂಡು ಮಗುವಿನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ಸಂತ್ರಸ್ತೆ ಪೊಲೀಸರಿಗೆ …

Read More »

ಬೀದರ್‌: ಎಟಿಎಂ ದರೋಡೆಕೋರರಿಗೆ 14 ದಿನ ಪೊಲೀಸ್‌ ಕಸ್ಟಡಿ

ಬೀದರ್‌: ನಗರದ ಎಸ್‌ಬಿಐ ಎಟಿಎಂ ದರೋಡೆ ಪ್ರಕರಣದಲ್ಲಿ ಬಂಧಿತರಾಗಿರುವ ಇಬ್ಬರು ದರೋಡೆಕೋರರಿಗೆ ಇಲ್ಲಿನ ಜಿಲ್ಲಾ ನ್ಯಾಯಾಲಯವು 14 ದಿನಗಳ ವರೆಗೆ ಪೊಲೀಸ್‌ ಕಸ್ಟಡಿಗೆ ನೀಡಿದೆ. ಬಂಧಿತ ಬಿಹಾರದ ವೈಶಾಲಿ ಜಿಲ್ಲೆಯ ಅಮನ್‌ಕುಮಾರ್‌ ಸಿಂಗ್‌ ಮತ್ತು ಅಲೋಕ್‌ ಕುಮಾರ್‌ ಎಂಬುವರನ್ನು ಬುಧವಾರ (ಆ.12) ಬಂಧಿಸಿದ್ದ ಬೀದರ್‌ ಜಿಲ್ಲಾ ಪೊಲೀಸರು, ಗುರುವಾರ (ಆ.13) ನಗರಕ್ಕೆ ಕರೆತಂದು, ರಾತ್ರಿ ಜಿಲ್ಲಾ ನ್ಯಾಯಾಲಯದ ಎದುರು ಹಾಜರುಪಡಿಸಿದರು. ನ್ಯಾಯಾಲಯವು ಇಬ್ಬರನ್ನೂ ಆ. 27ರ ವರೆಗೆ ಪೊಲೀಸ್‌ ಕಸ್ಟಡಿಗೆ …

Read More »

ಬಂಟ್ವಾಳ ಪೊಲೀಸರಿಂದ ನಿಷೇಧಿತ ಎಂ.ಡಿ.ಎಂ.ಎ ಸೇರಿದಂತೆ 4 ಲಕ್ಷ 90 ಸಾವಿರ ಮೌಲ್ಯದ ಸ್ವತ್ತುಗಳು ವಶಕ್ಕೆ!

ಬಂಟ್ವಾಳ ಗ್ರಾಮಾಂತರ ಪೊಲೀಸರ ಕಾರ್ಯಾಚರಣೆಯಲ್ಲಿ ನಿಷೇಧಿತ ಎಂಡಿಎಂಎ ಹಾಗೂ ಗಾಂಜಾ ಸೇರಿದಂತೆ ₹4.90 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆಗಸ್ಟ್ 12ರಂದು ಬಂಟ್ವಾಳ ಕಾವಳಪಡೂರು ಗ್ರಾಮದಲ್ಲಿ ದಾಳಿ ನಡೆಸಿದ ಪೊಲೀಸರು, ₹2.25 ಲಕ್ಷ ಮೌಲ್ಯದ 22.57 ಗ್ರಾಂ ಎಂಡಿಎಂಎ, 30.34 ಗ್ರಾಂ ಗಾಂಜಾ, ಡ್ರಗ್ಸ್ ಸಾಗಾಟಕ್ಕೆ ಬಳಸಿದ್ದ ಕಾರು ಹಾಗೂ 5 ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಶೀರ್ ಹುಸೇನ್ (37), ಮಹಮ್ಮದ್ ಜುನೈದ್ (38) ಹಾಗೂ …

Read More »

ಕೊಡಗಿನಲ್ಲಿ ಭೀಕರ ಕೊಲೆ : ಅನೈತಿಕ ಸಂಬಂಧಕ್ಕೆ ಒಪ್ಪದಿದ್ದಕ್ಕೆ ನಾದಿನಿಯ ಮಗನ ಬರ್ಬರ ಹತ್ಯೆ!

ಕೊಡಗು : ಅನೈತಿಕ ಸಂಬಂಧಕ್ಕೆ ಒಪ್ಪದಿದ್ದಕ್ಕೆ ನಾದಿನಿಯ ಮಗನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಬಾಲಕನ ತಾಯಿ ಸುಚಿತ್ರ ಮೇಲು ಮಾರಣಾಂತಿಕವಾಗಿ ಹಲ್ಲೆ ನಡೆದಿದೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಚಿಕ್ಕಪೇಟೆಯಲ್ಲಿ ಈ ಒಂದು ಭೀಕರ ಕೊಲೆ ನಡೆದಿದೆ. ಪ್ರತಾಪ್ (36) ಎಂಬಾತ 4 ವರ್ಷದ ಬಾಲಕ ಚರಣ್ ನನ್ನು ಕೊಲೆ ಮಾಡಿದ್ದಾನೆ. ಪತ್ನಿಯ ತಂಗಿ ಸುಚಿತ್ರ ಜೊತೆ ಅನೈತಿಕ ಸಂಬಂಧಕ್ಕೆ ಯತ್ನಿಸಿದ್ದಾನೆ. ಅದಕ್ಕೆ ಒಪ್ಪದಿದ್ದಾಗ ಸುಚಿತ್ರಾಳ ಪುತ್ರ ಚರಣ್ ನನ್ನು …

Read More »

ಬಸ್‌ನಲ್ಲಿ ಮಹಿಳೆ ಜತೆ ಅಸಭ್ಯ ವರ್ತನೆ ತೋರಿದ ವ್ಯಕ್ತಿಗೆ ಥಳಿತ

ಕೋಲಾರದಿಂದ ಬಂಗಾರಪೇಟೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಡಬಲ್ ಸೀಟ್‌ನಲ್ಲಿ ಕುಳಿತಿದ್ದ ಮಹಿಳೆ ಜತೆ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿ ಅಸಭ್ಯವಾಗಿ ವರ್ತಿಸಿದ್ದು, ಮಹಿಳೆ ಹಾಗೂ ಸಹ ಪ್ರಯಾಣಿಕರು ಧರ್ಮದೇಟು ನೀಡಿದ ಘಟನೆ ನಡೆದಿದೆ. ಮಹಿಳೆಯ ಕೈ ಮುಟ್ಟಿ, ಬಳಿಕ ಕೈಗೆ ಮುತ್ತು ನೀಡಿದ್ದಾನೆ. ಇದರಿಂದ ಆಕ್ರೋಶಗೊಂಡ ಮಹಿಳೆ ಥಳಿಸಿದ್ದಾರೆ. ಕೂಡಲೇ ಆಕೆಯ ನೆರವಿಗೆ ಬಂದ ಸಹ ಪ್ರಯಾಣಿಕರೂ ಸಹ ಗೂಸಾ ನೀಡಿದ್ದಾರೆ. ಥಳಿತಕ್ಕೊಳಗಾದ ವ್ಯಕ್ತಿ ಮಹಿಳೆಯ ಕಾಲು ಮುಟ್ಟಿ ಕ್ಷಮೆಯಾಚಿಸಿ ಬಸ್‌ನಿಂದ …

Read More »

ಸೀತಾರಾಮನ್ ಎಐ ವೀಡಿಯೊ ನೋಡಿ 22.87 ಲಕ್ಷ ರೂ. ಕಳೆದುಕೊಂಡ

ಹಾವೇರಿ: ಕೇಂದ್ರ ಹಣಕಾಸು ಸಚಿವೆ ನೀರ್ಮಲಾ ಸೀತಾರಾಮನ್ ಮತ್ತು ಪ್ರಿಯಾಂಕಾ ಗಾಂಧಿ ಅವರ ಚರ್ಚೆ ಕುರಿತ ಎಐ ವಿಡಿಯೋ ನೋಡಿದ ವ್ಯಕ್ತಿಯೊಬ್ಬ ಹೆಚ್ಚಿನ ಲಾಭಾಂಶ ಬರಲಿದೆ ಎಂದು ನಂಬಿ 22.87 ಲಕ್ಷ ರೂ. ಕಳೆದುಕೊಂಡ ಕುರಿತು ಇಲ್ಲಿಯ ಸೈಬರ್ ಕೆಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಥೇನ್ಸ್ ಎಂಬುವರು ಮೋಸ ಹೋಗಿರುವುದು. ಇವರು ಫೆಸ್ಬುಕ್ನಲ್ಲಿ ಕೇಂದ್ರ ಹಣಕಾಸು ಸಚಿವೆ ನೀರ್ಮಲಾ ಸೀತಾರಾಮ್ ಮತ್ತು ಪ್ರಿಯಾಂಕಾ ಗಾಂಧಿ ಅವರ ಚರ್ಚೆಯಲ್ಲಿ 22 …

Read More »

ಕೊಲೆ ಪ್ರಕರಣದಲ್ಲಿ ಶವ ಹೊರತೆಗೆಯಲು ಸಮಾಧಿ ಅಗೆತ – ಕೋಳಿ ಬಲಿ ಕೊಡಲು ಮುಂದಾದ ಆಡಳಿತ!

ಬೆಳಗಾವಿ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪತಿಯನ್ನು ಹತ್ಯೆ ಮಾಡಿ ಜಮೀನಿನಲ್ಲಿ ಹೂತು ಹಾಕಿದ್ದ ಪ್ರಕರಣದ ತನಿಖೆ ವೇಳೆ, ಶವ ಹೊರತೆಗೆಯುವ ಮುನ್ನ ಕೋಳಿ ಬಲಿ ನೀಡಲು ಮುಂದಾದ ಘಟನೆ ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದಲ್ಲಿ ನಡೆದಿದೆ. ರಾಘು ಗಾವಡೆ (40) ಅವರನ್ನು ಹತ್ಯೆ ಮಾಡಿ ಅವರದೇ ಜಮೀನಿನಲ್ಲಿ ಹೂತು ಹಾಕಲಾಗಿತ್ತು ಎನ್ನಲಾಗಿದ್ದು, ಪೊಲೀಸರು ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ಹಾಗೂ ವೈಜ್ಞಾನಿಕ ಸಾಕ್ಷ್ಯ ಸಂಗ್ರಹಕ್ಕೆ ಸಿದ್ಧತೆ ನಡೆಸಿದ್ದರು. ಈ ವೇಳೆ …

Read More »

ಸರ್ಕಾರಿ ಜಾಗಕ್ಕಾಗಿ ಗಲಾಟೆ – ಮಹಿಳೆಯರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು!

ದೊಡ್ಡಬಳ್ಳಾಪುರ: ಸರ್ಕಾರಿ ಖಾಲಿ ಜಾಗದ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಭೀಕರ ಗಲಾಟೆ ನಡೆದಿದ್ದು, ಮಹಿಳೆಯರ ಮೇಲೆ ಮಚ್ಚು ಹಾಗೂ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಮಾಕಳಿದುರ್ಗದಲ್ಲಿ ನಡೆದಿದೆ. ಮುನಿಲಕ್ಷ್ಮಮ್ಮ ಅವರ ಮನೆಯ ಪಕ್ಕದ ಸರ್ಕಾರಿ ಜಾಗ ತಮ್ಮದೆಂದು ಕುಮಾರ್ ಮತ್ತು ಸುರೇಶ್ ವಾದಿಸಿದ್ದು, ಈ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಮನೆಯಲ್ಲಿದ್ದ ಮಹಿಳೆಯರಾದ ಮುನಿರತ್ನಮ್ಮ ಹಾಗೂ ವರಲಕ್ಷ್ಮಿ ಮೇಲೆ ಆರೋಪಿಗಳು ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ. …

Read More »