ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ರ ವಾಹನ ನಿಲುಗಡೆ ಪ್ರದೇಶದಲ್ಲಿ ₹3 ಕೋಟಿ ಮೌಲ್ಯದ 3.078 ಕೆ.ಜಿ. ಹೈಡ್ರೋ ಗಾಂಜಾ ಮಾರಾಟಕ್ಕೆ ಯತ್ನಿಸಿದ ಆರೋಪಿಯನ್ನು ವಿಮಾನ ನಿಲ್ದಾಣ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಮುಂಬೈ ನಿವಾಸಿ ರಾಕೇಶ್ ಸತ್ಯಭೂಷಣ ಅಗರ್ವಾಲ್ (40) ಬಂಧಿತ. ಜುಲೈ 30ರಂದು ದೊರೆತ ಖಚಿತ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ತಪಾಸಣೆ ವೇಳೆ ಆತನ ಟ್ರಾಲಿ ಬ್ಯಾಗ್ನಲ್ಲಿದ್ದ ಕಪ್ಪು ಪ್ಲಾಸ್ಟಿಕ್ …
Read More »ಬೆಂಗಳೂರಿನಲ್ಲಿ ಮಾದಕ ವಸ್ತುಗಳ ಮಾರಾಟ ಜಾಲ ಪತ್ತೆ; 8 ಮಂದಿ ವಿದೇಶಿ ಡ್ರಗ್ಸ್ ಪೆಡ್ಲರ್, 39 ಮಂದಿ ಆರೋಪಿಗಳ ಬಂಧನ
ಬೆಂಗಳೂರು: ನಗರದಲ್ಲಿ ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದ ಬೃಹತ್ ಜಾಲವನ್ನು ಸಿಸಿಬಿ ಹಾಗೂ ನಗರ ಪೊಲೀಸರು ಭೇದಿಸಿದ್ದು, 8 ವಿದೇಶಿ, 21 ಹೊರರಾಜ್ಯದವರು ಹಾಗೂ 10 ಸ್ಥಳೀಯರು ಸೇರಿ 39 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 28.07 ಕೋಟಿ ರೂ. ಮೌಲ್ಯದ 200 ಕೆಜಿಗೂ ಅಧಿಕ ಮಾದಕ ವಸ್ತು ಜಪ್ತಿ ಮಾಡಲಾಗಿದೆ. ಆರೋಪಿಗಳಿಂದ ಎಂಡಿಎಂಎ, ಕೋಕೇನ್, ಹೈಡ್ರೋ ಗಾಂಜಾ, ಗಾಂಜಾ, ಅಫೀಮು ಹಾಗೂ ಮಾರ್ಫಿನ್ ಸೇರಿದಂತೆ ವಿವಿಧ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. …
Read More »ಬೆಂಗಳೂರಿನಲ್ಲಿ ಖಾಕಿ ಬಿಗ್ ಬೇಟೆ: 55.8 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ, 39 ಡ್ರಗ್ ಪೆಡ್ಲರ್ಗಳ ಸೆರೆ!
ಬೆಂಗಳೂರು: ‘ಮಿಷನ್ RISE’ ಹಾಗೂ ‘ಬೇಡ ಬ್ರೋ’ ಅಭಿಯಾನದಡಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 55.8 ಕೋಟಿ ರೂ. ಮೌಲ್ಯದ 200 ಕೆಜಿಗೂ ಅಧಿಕ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಸಿಸಿಬಿ ಸೇರಿದಂತೆ 16 ಪೊಲೀಸ್ ಯೂನಿಟ್ಗಳ ಕಾರ್ಯಾಚರಣೆಯಲ್ಲಿ 8 ವಿದೇಶಿಯರು ಹಾಗೂ 21 ಅನ್ಯರಾಜ್ಯದವರು ಸೇರಿದಂತೆ 39 ಆರೋಪಿಗಳನ್ನು ಬಂಧಿಸಲಾಗಿದೆ. ಕಳೆದ 10 ದಿನಗಳಲ್ಲಿ ನಗರದ 16 ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ 21.6 ಕೆಜಿ ಎಂಡಿಎಂಎ, 184.6 …
Read More »ಬೆಂಗಳೂರಿನ ಪ್ರತಿಷ್ಟಿತ ಹೋಟೆಲ್ಗಳಲ್ಲಿ ಏನಿದು ಅಸಹ್ಯ? 45 ಕೆ.ಜಿ. ಕೊಳೆತ ಮಾಂಸ, ಅವಧಿ ಮೀರಿದ ಹಾಲು, ಗಬ್ಬು ನಾರುವ ತರಕಾರಿ ಪತ್ತೆ
ಬೆಂಗಳೂರು: ಆಹಾರ ಸುರಕ್ಷತಾ ಅಧಿಕಾರಿಗಳ ತಪಾಸಣೆಯಲ್ಲಿ ಕೊಳೆತ ಮಾಂಸ, ಅವಧಿ ಮೀರಿದ ಹಾಲು-ಮೊಸರು ಸೇರಿದಂತೆ ಅಸುರಕ್ಷಿತ ಆಹಾರ ಪತ್ತೆಯಾದ ಹಿನ್ನೆಲೆಯಲ್ಲಿ ಯುಬಿ ಸಿಟಿಯ ಸ್ಕೈಯೆ ಲೌಂಜ್ ಪಬ್ನ್ನು ಬಂದ್ ಮಾಡಲಾಗಿದೆ. ಪಬ್ನ ಅಡುಗೆಮನೆ ಅಸ್ವಚ್ಛವಾಗಿದ್ದು, 51 ಕೆ.ಜಿ. ಆಹಾರ ಹಾಗೂ 15 ಲೀಟರ್ ಬಳಸಿದ ಅಡುಗೆ ಎಣ್ಣೆಯನ್ನು ವಿಲೇವಾರಿ ಮಾಡಲಾಗಿದೆ. ನಗರದ ಹಲವು ಹೋಟೆಲ್ಗಳು ಮತ್ತು ಆಹಾರ ಮಳಿಗೆಗಳ ಮೇಲೂ ದಾಳಿ ನಡೆಸಿದ ಅಧಿಕಾರಿಗಳು ಒಟ್ಟು 132 ಕೆ.ಜಿ. ಆಹಾರ …
Read More »ತೊಕ್ಕೊಟ್ಟು ಬಾರ್ನಲ್ಲಿ ತಲವಾರು ಹಿಡಿದು ಗಲಾಟೆ; ಕುಖ್ಯಾತ ರೌಡಿಶೀಟರ್ ಸೇರಿ ಇಬ್ಬರ ಬಂಧನ
ಉಳ್ಳಾಲ: ತೊಕ್ಕೊಟ್ಟಿನ ವಿನಮ್ರ ಬಾರ್ಗೆ ತಲವಾರು ಬೀಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಬಾರ್ ಬಂದ್ ಮಾಡುವಂತೆ ಬೆದರಿಕೆ ಹಾಕಿದ ಆರೋಪದ ಮೇಲೆ ಕುಖ್ಯಾತ ರೌಡಿಶೀಟರ್ ಸೇರಿದಂತೆ ಇಬ್ಬರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮೊಹಮ್ಮದ್ ಶಾಕಿರ್ (31) ಹಾಗೂ ಅಶ್ಫಾಕ್ (28) ಎಂದು ಗುರುತಿಸಲಾಗಿದೆ. ಭಾನುವಾರ ರಾತ್ರಿ ಶಾಕಿರ್ ತಲವಾರು ಹಿಡಿದು ಬಾರ್ಗೆ ನುಗ್ಗಿ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಈ ವೇಳೆ ಬಾರ್ನಲ್ಲಿದ್ದ ಗ್ರಾಹಕರು ಭಯಭೀತರಾಗಿ ಓಡಿಹೋಗಿದ್ದು, ಘಟನೆ …
Read More »ಮಡಿಕೇರಿಯ ಸ್ಟೋನ್ ಹಿಲ್ನಲ್ಲಿ ಭಾರಿ ಭೂಕುಸಿತ – ಪೊಲೀಸ್ ವಸತಿಗೃಹಗಳತ್ತ ಕೊಚ್ಚಿಬಂತು ನೂರಾರು ಟನ್ ಕಸ!
ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿ ನಗರದ ಸ್ಟೋನ್ ಹಿಲ್ ಬೆಟ್ಟದಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, ಬೆಟ್ಟದ ಮೇಲಿದ್ದ ನೂರಾರು ಟನ್ ಕಸ ಹಾಗೂ ಮಣ್ಣು ಕೆಳಭಾಗಕ್ಕೆ ಕುಸಿದುಬಂದಿದೆ. ಬೆಟ್ಟದ ಮೇಲೆ ವರ್ಷಗಳಿಂದ ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಿರುವುದೇ ಘಟನೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಬೆಟ್ಟದ ಕೆಳಭಾಗದಲ್ಲಿರುವ ಪೊಲೀಸ್ ವಸತಿ ಗೃಹಗಳತ್ತ ಕಸ-ಮಣ್ಣಿನ ರಾಶಿ ಹರಿದುಬಂದಿದ್ದು, ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. ತಕ್ಷಣ ಕಸ ತೆರವುಗೊಳಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿದ್ದರೆ ಅನಾಹುತ …
Read More »ರಾಜ್ಯದಲ್ಲಿ ಘೋರ ಕೃತ್ಯ : ಆರೈಕೆ ಮಾಡಲಾಗದೇ 50 ದಿನದ ಹಸುಗೂಸಿನ ಹತ್ಯೆ : ಹೆತ್ತ ತಾಯಿ ಸೇರಿ ನಾಲ್ವರು ಅರೆಸ್ಟ್!
ಬೀದರ್: 50 ದಿನದ ಹಸುಗೂಸನ್ನು ಆರೈಕೆ ಮಾಡಲು ಸಾಧ್ಯವಾಗದೆ ಹೆತ್ತ ತಾಯಿಯೇ ಕುಟುಂಬದವರೊಂದಿಗೆ ಸೇರಿ ಕೊಲೆ ಮಾಡಿ ಬಾವಿಗೆ ಎಸೆದಿರುವ ಅಮಾನವೀಯ ಘಟನೆ ಔರಾದ್ ತಾಲೂಕಿನ ವಡಗಾಂವ್ (ದೇ) ಗ್ರಾಮದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ ವಾಣಿಶ್ರೀ, ತಂದೆ ಬಸವರಾಜ್, ತಾಯಿ ರತ್ನಮಾ ಹಾಗೂ ಸಹೋದರ ಸಂತೋಷ್ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ವಾಣಿಶ್ರೀ ಹೆರಿಗೆಗಾಗಿ ತವರು ಮನೆಗೆ ಬಂದಿದ್ದ ವೇಳೆ 50 ದಿನದ ಓಂಕಾರ ಎಂಬ ಗಂಡು ಮಗುವನ್ನು …
Read More »ಗಂಡನನ್ನು ಕೊಂದು ಜಮೀನಿನಲ್ಲಿ ಹೂತು ಹಾಕಿದ ಪತ್ನಿ : 6 ತಿಂಗಳ ಬಳಿಕ ಪತ್ನಿ, ಪ್ರಿಯಕರ ಅರೆಸ್ಟ್!
ಚಿಕ್ಕೋಡಿ ತಾಲೂಕಿನ ಖಡಕಲಾಟ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನೇ ಹತ್ಯೆಗೈದು, ಆತ ಬೇರೆ ಜಿಲ್ಲೆಗೆ ಕುರಿ ಕಾಯಲು ತೆರಳಿದ್ದಾನೆ ಎಂದು ಕಟ್ಟುಕಥೆ ಕಟ್ಟಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಖಡಕಲಾಟ ಗ್ರಾಮದ ಕುರಿಗಾಹಿ ರಾಘು ಗಾವಡೆ (40) ಕೊಲೆಯಾದವರು. ರಾಘು ಅವರ ಪತ್ನಿ ಬಂಗಾರಿ, ಪತಿಯ ಸಹೋದರ ಸಂಬಂಧಿ ರಾಮಾ ರಾಣ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಈ ವಿಚಾರ ತಿಳಿದು ರಾಘು ವಿರೋಧಿಸಿದ್ದರಿಂದ, ಇಬ್ಬರೂ …
Read More »ಉದ್ಯಮಿಗೆ 18.41 ಕೋಟಿ ರೂ. ವಂಚನೆ; ಪ್ರಕರಣ ದಾಖಲು
ಬೆಂಗಳೂರು: ಸಹಕಾರ ಬ್ಯಾಂಕ್ ವ್ಯವಸ್ಥಾಪಕ ಹಾಗೂ ಸಹಚರರು ಉದ್ಯಮಿಗೆ ₹18.41 ಕೋಟಿ ವಂಚಿಸಿರುವ ಆರೋಪ ಕೇಳಿಬಂದಿದ್ದು, ಸಿಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬನಶಂಕರಿಯ ಸಹಕಾರ ಬ್ಯಾಂಕ್ನಲ್ಲಿ ಉದ್ಯಮಿ ನವೀನ್ 7 ಚಾಲ್ತಿ ಖಾತೆ ಹೊಂದಿದ್ದರು. ವ್ಯವಸ್ಥಾಪಕ ವಿ. ಕೃಷ್ಣಮೂರ್ತಿ ಅವರು TOD ಸಾಲ ನೀಡುವುದಾಗಿ ಹೇಳಿ, ತಾವು ಸೂಚಿಸಿದ ಖಾತೆಗಳಿಗೆ ಹಣ ವರ್ಗಾಯಿಸುವಂತೆ ತಿಳಿಸಿದ್ದರು ಎನ್ನಲಾಗಿದೆ. ಆಸ್ತಿ ದಾಖಲೆಗಳನ್ನು ಅಡಮಾನ ಇರಿಸಿಕೊಂಡು ಬಡ್ಡಿ ಕಟ್ಟಿಸಿಕೊಂಡರೂ ಸಾಲದ ಹಣ ಬಳಸಲು ಅವಕಾಶ …
Read More »ಯುವತಿಗೆ ಜೀವಬೆದರಿಕೆ: ಕಾನೂನು ಕ್ರಮಕ್ಕೆ ಕರವೇ ಆಗ್ರಹ
ಉಡುಪಿ, ಆ.9: ಅಪಘಾತಕ್ಕೀಡಾದ ವ್ಯಕ್ತಿಯೊಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ ವೇಳೆ ನಡೆದ ಅನ್ಯಾಯ ಮತ್ತು ನಿರ್ಲಕ್ಷ್ಯದ ವಿರುದ್ಧ ಧ್ವನಿ ಎತ್ತಿದ್ದ ಯುವತಿಗೆ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಈ ಕುರಿತು ಕರವೇ ಕಾರ್ಯಕರ್ತರು ಉಡುಪಿ ನಗರ ಠಾಣೆಗೆ ಭೇಟಿ ನೀಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಅಕ್ಷಿತಾ ಪೂಜಾರಿ ಸಮಾಜಮುಖಿ ಕಳಕಳಿಯಿಂದ ಅನ್ಯಾಯವನ್ನು ಪ್ರಶ್ನಿಸಿದ ಬಳಿಕ ಬೆದರಿಕೆ ಕರೆಗಳು ಬಂದಿವೆ ಎನ್ನಲಾಗಿದೆ. ಅವರ ಬೆಂಬಲವಾಗಿ ಕರವೇ ಜಿಲ್ಲಾಧ್ಯಕ್ಷ ಅ.ರಾ. ಪ್ರಭಾಕರ್ ಪೂಜಾರಿ ನೇತೃತ್ವದಲ್ಲಿ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





