Breaking News
Featured Video Play Icon

ಹುಬ್ಬಳ್ಳಿ ಯಲ್ಲೊಂದು ಘನಘೋರ ಘಟನೆ‌: ವಿವಾಹಿತ ಮಹಿಳೆ ಜೊತೆ ಮಾತಾಡಿದ್ದಕ್ಕೆ ಬೆತ್ತಲೆ ಮಾಡಿ ಹಲ್ಲೆ…

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲೊಂದು ಘನಘೋರ ಘಟನೆ‌ ನಡೆದಿದ್ದು, ವಿವಾಹಿತ ಮಹಿಳೆ ಜೊತೆ ಮಾತಾಡಿದ್ದಕ್ಕೆ ಬೆತ್ತಲೆ ಮಾಡಿ ಹಲ್ಲೆ ಮಾಡಿದ ಘಟನೆ ಕಸಬಾಪೇಟೆ ಪೊಲೀಸ್ ಠಾಣೆಯ ಪಕ್ಕದ ಟಿಪ್ಪು ನಗರದಲ್ಲಿ ನಡೆದಿದೆ.

ಹುಬ್ಬಳ್ಳಿಯ ಕಸಬಾ ಪೇಟೆ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿ ಘಟನೆ ನಡೆದಿದ್ದು, ನಿನ್ನೆ ಮಹಿಳೆ ಜೊತೆ ಫೋನ್ ನಲ್ಲಿ ಮಾತಾಡಿದ್ದ ಮುಜಾಫಿರ್ ನನ್ನು ಅಪಹರಣ ಮಾಡಿ ಬೆತ್ತಲೆಗೊಳಿಸಿ ಮಹಿಳೆಯ ಸಂಬಂಧಿಕರು ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿ ಸಿಕ್ಕ ಸಿಕ್ಕಲ್ಲಿ ಬ್ಲೇಡ್ ಹಾಕಿದ್ದಾರೆ. ಗಂಭೀರವಾಗಿ ಗಾಯಗೊಂಡ ಮುಜಾಫೀರ್ ಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಹತ್ತು ಹದಿ‌ನೈದು ಜನರಿಂದ ಹಲ್ಲೆ ಆರೋಪ ಕೇಳಿ ಬಂದಿದ್ದು ಮೊಹಮದ್, ಮಾಬುಲಿ, ಮಲೀಕ್, ಮೈನು ಶಗರಿ , ನದೀಮ್, ಸಮೀರ್ ಸೇರಿ ಹತ್ತು ಹದಿನೈದು ಜನರು ಹಲ್ಲೆ‌ ನಡೆಸಿದ್ದಾರೆ. ಕಸಬಾಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ನಡೆದಿದೆ.

Share News

About Shaikh BigTv

Check Also

ಹೋಟೆಲ್ ಬಿಲ್ ಕೇಳಿದ್ದಕ್ಕೆ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ!

ದೊಡ್ಡಬಳ್ಳಾಪುರ: ಹೋಟೆಲ್‌ನಲ್ಲಿ ಬಿಲ್ ಕೇಳಿದ್ದಕ್ಕೆ ಮಾಲೀಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ …

Leave a Reply

Your email address will not be published. Required fields are marked *