Breaking News

BigTv News

ಊರು, ಊಟದ ವಿಚಾರಕ್ಕೆ ಪತ್ನಿ ಕೊಲೆ: 7 ದಿನಗಳ ಕಾರ್ಯಾಚರಣೆ ನಂತರ ಬಿಹಾರ-ನೇಪಾಳ ಗಡಿಯಲ್ಲಿ ಹಂತಕ ಬಂಧನ, ಹೇಗಿತ್ತು ಗೊತ್ತಾ? ರೋಚಕ ಬೇಟೆ

ಬೆಂಗಳೂರು: ಗೇರುಪಾಳ್ಯದ ಬಾಡಿಗೆ ಮನೆಯಲ್ಲಿ ಬಿಹಾರ ಮೂಲದ ರೀಮಾ ಕುಮಾರಿ (24) ಹತ್ಯೆ ಪ್ರಕರಣದ ಆರೋಪಿ ಪತಿ ಧೀರಜ್ ಕುಮಾರ್‌ನನ್ನು ಕುಂಬಳಗೋಡು ಪೊಲೀಸರು ನೇಪಾಳ-ಬಿಹಾರ ಗಡಿ ಭಾಗದಲ್ಲಿ 7 ದಿನಗಳ ಕಾರ್ಯಾಚರಣೆ ಬಳಿಕ ಬಂಧಿಸಿದ್ದಾರೆ. ಜುಲೈ 29ರಂದು ಮನೆಯಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದಾಗ, ಬೆಡ್‌ಶೀಟ್‌ನಲ್ಲಿ ಸುತ್ತಿಟ್ಟಿದ್ದ ರೀಮಾ ಮೃತದೇಹ ಪತ್ತೆಯಾಗಿತ್ತು. ಬಳಿಕ ಆರೋಪಿ ಪತಿ ಪರಾರಿಯಾಗಿದ್ದ. ವಿಚಾರಣೆ ವೇಳೆ ಅಡುಗೆ ಹಾಗೂ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ …

Read More »

ಪತಿಯ ₹2 ಕೋಟಿ ಇನ್ಶೂರೆನ್ಸ್ ಪಾಲಿಸಿಗೆ ಸ್ಕೆಚ್: ಬಯಲಾಯ್ತು ಪತ್ನಿ ಹಾಗೂ ಪ್ರಿಯಕರನ ಸಂಚು, ಶವ ಹೊರತೆಗೆದು ತನಿಖೆ!

ಬೆಳಗಾವಿ: ₹2 ಕೋಟಿ ಜೀವವಿಮೆ ಹಣಕ್ಕಾಗಿ ಮಾಜಿ ಸೈನಿಕ ಸಂದೀಪ್ ಮಾಂಜರಿ (45) ಅವರನ್ನು ಪತ್ನಿ ಸುಮಾ ಮಾಂಜರಿ ಹಾಗೂ ಆಕೆಯ ಪ್ರಿಯಕರ ಪುಂಡಲೀಕ್ ದೊಂಬರ್ ಸೇರಿ ಕೊಲೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಸಂದೀಪ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಗ್ಲೂಕೋಸ್ ಡ್ರಿಪ್ಸ್ ಮೂಲಕ ವಿಷ ನೀಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಪ್ರಿಯಕರನ ಸೆಲ್ಫಿ ವಿಡಿಯೋ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಕುಟುಂಬದ …

Read More »

ತಂದೆಯ ತುರ್ತು ಚಿಕಿತ್ಸೆ ಎಂದು ಹೇಳಿ ಸ್ನೇಹಿತನಿಂದ ₹1.53 ಕೋಟಿ ಪಡೆದು ವಂಚನೆ

ಬೆಂಗಳೂರುದಲ್ಲಿ ತಂದೆಯ ತುರ್ತು ಚಿಕಿತ್ಸೆಗೆ ಹಣ ಬೇಕಿದೆ ಎಂದು ನಂಬಿಸಿ ಸ್ನೇಹಿತನಿಂದ ₹1.53 ಕೋಟಿ ಪಡೆದು ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಪೀಣ್ಯ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ನಾಗೇಶ್, ಶಶಿಧರ್ ಸೇರಿದಂತೆ ಮೂವರು ಆರೋಪಿಗಳು ಬಂಧಿತರಾಗಿದ್ದಾರೆ. ಸ್ನೇಹಿತನ ಮಾತು ನಂಬಿದ ಜಗದೀಶ್ ವಿವಿಧ ಮೂಲಗಳಿಂದ ಹಣ ಸಂಗ್ರಹಿಸಿ ನಾಗೇಶ್ ಖಾತೆಗೆ ವರ್ಗಾವಣೆ ಮಾಡಿದ್ದರು. ಬಳಿಕ ಚಿನ್ನಾಭರಣ ಬಿಡಿಸಿಕೊಡುವುದಾಗಿ ಹೇಳಿದ ಆರೋಪಿ ಪರಾರಿಯಾಗಿದ್ದ. ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಅಡಮಾನ ಇಟ್ಟಿದ್ದ ಚಿನ್ನ ನಾಗೇಶ್‌ಗೆ …

Read More »

ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ; ಪಿಡಿಓಗಳು ಜಸ್ಟ್ ಬಚಾವ್!

ಚಿಕ್ಕೋಡಿ : ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಗ್ರಾಮದ ಟೋಲ್ ಸಮೀಪ ಸಂಭವಿಸಿದೆ. ಇಬ್ಬರು ಪಿಡಿಓಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಂಚಿನಾಳ ಗ್ರಾಮದ ಪಿಡಿಓ ಶಿವಾನಂದ ವಾಸಣ್ಣವರ ಹಾಗೂ ಹತ್ತರಗಿ ಗ್ರಾಮದ ಪಿಡಿಓ ಆನಂದ ಹುಳೆಣ್ಣವರ ಬಚಾವ್ ಆಗಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿಗಳು ದೌಡಾಯಿಸಿದ್ದಾರೆ. ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Read More »

ಚಾಲಕನ ನಿರ್ಲಕ್ಷ್ಯದಿಂದ ಯುವತಿ ಗಂಭೀರ ಗಾಯ; ಚಿಕಿತ್ಸೆಗೆ 20 ಲಕ್ಷ ರುಪಾಯಿ ಆಗಿದ್ದರೂ ಕ್ಯಾರೇ ಎನ್ನದ ರ‍್ಯಾಪಿಡೋ ಸಂಸ್ಥೆ

ಬೆಂಗಳೂರುದಲ್ಲಿ ರ‍್ಯಾಪಿಡೋ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸಂಭವಿಸಿದ ಅಪಘಾತದಲ್ಲಿ 32 ವರ್ಷದ ಇಂಟೀರಿಯರ್ ಡಿಸೈನರ್ ಸಾನಿ ಕೃಷ್ಣ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೈಕ್‌ನಿಂದ ಬಿದ್ದ ಅವರ ಮೇಲೆ ಟ್ರ್ಯಾಕ್ಟರ್ ಹರಿದ ಪರಿಣಾಮ ಹಲವು ಪಕ್ಕೆಲುಬುಗಳು ಮುರಿದು, ಶ್ವಾಸಕೋಶ ಹಾಗೂ ಪಿತ್ತಜನಕಾಂಗಕ್ಕೆ ಗಾಯಗಳಾಗಿವೆ. ಅಪಘಾತದ ಬಳಿಕ ಸಾನಿ ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಇದುವರೆಗೆ ₹20 ಲಕ್ಷಕ್ಕೂ ಅಧಿಕ ಚಿಕಿತ್ಸಾ ವೆಚ್ಚವಾಗಿದೆ. ಆದರೆ ರ‍್ಯಾಪಿಡೋ ಯಾವುದೇ ಆರ್ಥಿಕ ನೆರವು ನೀಡಿಲ್ಲ ಎಂದು ಕುಟುಂಬ …

Read More »

ಸರಣಿ ದನ ಕಳ್ಳತನ ಪ್ರಕರಣ: ಸಿನಿಮೀಯ ಶೈಲಿಯಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು

ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಸರಣಿ ದನ ಕಳ್ಳತನ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಉಡುಪಿ ಮೂಲದ ಅಬ್ದುಲ್ ಮಜೀದ್ (35) ಎಂದು ಗುರುತಿಸಲಾಗಿದ್ದು, ಆತ ಟೈಗರ್ ಗ್ಯಾಂಗ್‌ನ ಸಕ್ರಿಯ ಸದಸ್ಯನಾಗಿದ್ದಾನೆ ಎನ್ನಲಾಗಿದೆ. ಜುಲೈ 30ರಂದು ಆರೋಪಿಯ ಮಾಹಿತಿ ಪಡೆದ ಪೊಲೀಸರು ಹೆಬ್ರಿಯಿಂದ ಕಾರನ್ನು ಬೆನ್ನಟ್ಟಿದ್ದರು. ಆಗುಂಬೆಯಿಂದ ರಿಪ್ಪನ್‌ಪೇಟೆಯವರೆಗೆ ವೇಗವಾಗಿ ಕಾರು ಚಲಾಯಿಸಿದ ಆರೋಪಿ, ಬ್ಯಾರಿಕೇಡ್ ಕಂಡು ಬೆನವಳ್ಳಿ ಸಮೀಪ ಕಾರು ಬಿಟ್ಟು ಅರಣ್ಯಕ್ಕೆ ಪರಾರಿಯಾಗಿದ್ದ. …

Read More »

ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆ: ಪಾನಮತ್ತ ಐಟಿ ಉದ್ಯೋಗಿ ಏರ್ ಗನ್ ನಿಂದ ಮನಸೋಇಚ್ಛೆ ಫೈರಿಂಗ್, ಅರೆಸ್ಟ್

ಬೆಂಗಳೂರಿನ ವೈಟ್‌ಫೀಲ್ಡ್ ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿ ಮದ್ಯದ ಅಮಲಿನಲ್ಲಿ ಸುಮಾರು 45 ನಿಮಿಷಗಳ ಕಾಲ ಏರ್‌ಗನ್‌ನಿಂದ ಫೈರಿಂಗ್ ನಡೆಸಿ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದ್ದ ಖಾಸಗಿ ಐಟಿ ಕಂಪನಿ ಉದ್ಯೋಗಿಯನ್ನು ಸೂರ್ಯನಗರ ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಲಕ್ನೋ ಮೂಲದ ಅನುರಾಗ್ ತಿವಾರಿ (40) ಕಳೆದ ಎಂಟು ತಿಂಗಳಿನಿಂದ ಬಂಡಾಪುರ ಸಮೀಪದ ‘ಸಿಪಾನಿ ಅಪಾರ್ಟ್‌ಮೆಂಟ್’ನಲ್ಲಿ ಬಾಡಿಗೆ ಫ್ಲಾಟ್‌ನಲ್ಲಿ ವಾಸವಾಗಿದ್ದ. ಬುಧವಾರ ರಾತ್ರಿ ಮದ್ಯ ಸೇವಿಸಿದ ಬಳಿಕ ಫೋನ್‌ನಲ್ಲಿ ಜೋರಾಗಿ ಮಾತನಾಡುತ್ತಿದ್ದ ಆತ, ನಂತರ …

Read More »

ಪತ್ನಿಯನ್ನು ಕೊಂದು ತೋಟದಲ್ಲಿ ಹೂತಿಟ್ಟು ಪತಿ ಆತ್ಮಹತ್ಯೆ

ಚಿಕ್ಕಮಗಳೂರು: ಅಕ್ರಮ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ಪತ್ನಿಯನ್ನು ಹತ್ಯೆಗೈದು ತನ್ನ ತೋಟದಲ್ಲೇ ರಹಸ್ಯವಾಗಿ ಹೂತಿಟ್ಟಿದ್ದ ಪ್ರಕರಣ ಐದು ದಿನಗಳ ಬಳಿಕ ಬೆಳಕಿಗೆ ಬಂದಿದೆ. ಪತ್ನಿಯನ್ನು ಕೊಲೆಗೈದ ಬಳಿಕ ಮೃತದೇಹವನ್ನು ಹೂತಿಟ್ಟು, ನಂತರ ಆರೋಪಿ ರಘು ಆತ್ಮಹತ್ಯೆ ಮಾಡಿಕೊಂಡಿರುವುದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ. ನಾಪತ್ತೆ ಪ್ರಕರಣದ ಮಾಹಿತಿ ಆಧರಿಸಿ ಬಸವನಹಳ್ಳಿ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ತೋಟದಲ್ಲಿ ಶೋಧ ನಡೆಸಿದ ವೇಳೆ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಸ್ಥಳದಲ್ಲೇ ಮಹಜರು ನಡೆಸಿ, …

Read More »

ಬೆಂಗಳೂರಿನಲ್ಲಿ ಜೋಡಿ ಸಾವು; ನೇಣು ಬಿಗಿದ ಸ್ಥಿತಿಯಲ್ಲಿ ನೇಪಾಳ ಮೂಲದ ಇಬ್ಬರು ಯುವತಿಯರ ಶವ ಪತ್ತೆ!

ಬೆಂಗಳೂರು: ನಗರದ ಯಲಹಂಕದಲ್ಲಿ ಒಂದೇ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ನೇಪಾಳ ಮೂಲದ ಇಬ್ಬರು ಯುವತಿಯರ ಶವ ಪತ್ತೆಯಾಗಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಮೃತರನ್ನು ಸಿರ್ಜನಾ (22) ಮತ್ತು ರಿತಾ (23) ಎಂದು ಗುರುತಿಸಲಾಗಿದ್ದು, ಇಬ್ಬರೂ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಎಫ್‌ಎಸ್‌ಎಲ್ ತಂಡವೂ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಯಲಹಂಕ ಪೊಲೀಸ್ …

Read More »

ಪ್ರವೀಣ್ ನೆಟ್ಟಾರು ಹತ್ಯೆ ಕೇಸ್ ; NIA ಯಿಂದ ಮೋಸ್ಟ್ ವಾಂಟೆಡ್ ಆರೋಪಿ ‘ಉಮರ್ ಫಾರೂಕ್’ ಅರೆಸ್ಟ್.!

ಮಂಗಳೂರು: ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಗೆ ಮಹತ್ವದ ಯಶಸ್ಸು ಸಿಕ್ಕಿದೆ. ಪ್ರಕರಣದ ಮೋಸ್ಟ್ ವಾಂಟೆಡ್ ಆರೋಪಿಯಾಗಿದ್ದ ಉಮರ್ ಫಾರೂಕ್‌ನನ್ನು ಕೇರಳದ ಕೊಚ್ಚಿಯಲ್ಲಿ ಬಂಧಿಸಲಾಗಿದೆ. ಉಮರ್ ಫಾರೂಕ್ ಹಲವು ತಿಂಗಳುಗಳಿಂದ ತಲೆಮರೆಸಿಕೊಂಡಿದ್ದ. ಆತನ ಬಂಧನಕ್ಕೆ ಎನ್‌ಐಎ ₹4 ಲಕ್ಷ ಬಹುಮಾನ ಘೋಷಿಸಿತ್ತು. ಈ ಬಂಧನದೊಂದಿಗೆ ಪ್ರಕರಣದಲ್ಲಿ ಇದುವರೆಗೆ ಬಂಧಿತರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಇನ್ನಿಬ್ಬರು ಆರೋಪಿಗಳಿಗಾಗಿ ಎನ್‌ಐಎ ಶೋಧ ಕಾರ್ಯ …

Read More »