ಬೆಂಗಳೂರುದಲ್ಲಿ ತಂದೆಯ ತುರ್ತು ಚಿಕಿತ್ಸೆಗೆ ಹಣ ಬೇಕಿದೆ ಎಂದು ನಂಬಿಸಿ ಸ್ನೇಹಿತನಿಂದ ₹1.53 ಕೋಟಿ ಪಡೆದು ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಪೀಣ್ಯ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ನಾಗೇಶ್, ಶಶಿಧರ್ ಸೇರಿದಂತೆ ಮೂವರು ಆರೋಪಿಗಳು ಬಂಧಿತರಾಗಿದ್ದಾರೆ. ಸ್ನೇಹಿತನ ಮಾತು ನಂಬಿದ ಜಗದೀಶ್ ವಿವಿಧ ಮೂಲಗಳಿಂದ ಹಣ ಸಂಗ್ರಹಿಸಿ ನಾಗೇಶ್ ಖಾತೆಗೆ ವರ್ಗಾವಣೆ ಮಾಡಿದ್ದರು. ಬಳಿಕ ಚಿನ್ನಾಭರಣ ಬಿಡಿಸಿಕೊಡುವುದಾಗಿ ಹೇಳಿದ ಆರೋಪಿ ಪರಾರಿಯಾಗಿದ್ದ. ಬ್ಯಾಂಕ್ನಲ್ಲಿ ವಿಚಾರಿಸಿದಾಗ ಅಡಮಾನ ಇಟ್ಟಿದ್ದ ಚಿನ್ನ ನಾಗೇಶ್ಗೆ ಸೇರಿದ್ದಲ್ಲ ಎಂಬುದು ಬೆಳಕಿಗೆ ಬಂದಿದ್ದು, ಜಗದೀಶ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

