Breaking News

BigTv News

ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 10 ಲಕ್ಷ ಮೌಲ್ಯದ ಮರದ ದಿಮ್ಮಿಗಳ ಸಮೇತ ವಾಹನ ವಶ; ಆರೋಪಿ ಬಂಧನ

ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ವಾಹನವನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ. ಸಕಲೇಶಪುರದಿಂದ ಮಂಗಳೂರಿಗೆ ಯಾವುದೇ ದಾಖಲೆಗಳಿಲ್ಲದೆ ಮರ ಸಾಗಿಸುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿಯ ಮಠ ಪ್ರದೇಶದಲ್ಲಿ ವಾಹನವನ್ನು ತಡೆದು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಮೂಲದ ರೋಹಿತ್ ಎಸ್.ಎಲ್. ಅವರನ್ನು ಬಂಧಿಸಲಾಗಿದೆ. ವಶಪಡಿಸಿಕೊಂಡ ವಾಹನ ಹಾಗೂ ಮರದ ದಿಮ್ಮಿಗಳ ಒಟ್ಟು ಮೌಲ್ಯ ಸುಮಾರು ₹10 ಲಕ್ಷ ಎಂದು ಅಂದಾಜಿಸಲಾಗಿದ್ದು, …

Read More »

ಬೀದರ್‌: ನಾಲ್ವರು ಕಳ್ಳರ ಬಂಧನ, ₹2.75 ಲಕ್ಷ ಮೌಲ್ಯದ 55 ಸಿಲಿಂಡರ್‌ ಜಪ್ತಿ

ಬೀದರ್ ಜಿಲ್ಲೆಯ ಭಾಲ್ಕಿ ಗ್ರಾಮೀಣ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ನಾಲ್ವರು ಸಿಲಿಂಡರ್‌ ಕಳ್ಳರನ್ನು ಬಂಧಿಸಿ, ಅವರಿಂದ ₹2.75 ಲಕ್ಷ ಮೌಲ್ಯದ 55 ಗ್ಯಾಸ್‌ ಸಿಲಿಂಡರ್‌ ಹಾಗೂ ಕೃತ್ಯಕ್ಕೆ ಬಳಸಿದ್ದ ₹7 ಲಕ್ಷ ಮೌಲ್ಯದ ಕಾರನ್ನು ಜಪ್ತಿ ಮಾಡಿದ್ದಾರೆ. ಬಂಧಿತರು ಭಾಲ್ಕಿ ಹಾಗೂ ಸುತ್ತಮುತ್ತಲಿನ ಸರ್ಕಾರಿ ಶಾಲೆಗಳ ಅಡುಗೆ ಕೋಣೆಗಳ ಬೀಗ ಒಡೆದು ಸಿಲಿಂಡರ್‌ ಕಳವು ಮಾಡುತ್ತಿದ್ದರು. ಕಳವು ಮಾಡಿದ ಸಿಲಿಂಡರ್‌ಗಳನ್ನು ಮಹಾರಾಷ್ಟ್ರದಲ್ಲಿ ಮಾರಾಟ ಮಾಡಲು ಯೋಜಿಸಿದ್ದ ವೇಳೆ ಬೀದರ್–ಉದಗೀರ್‌ ರಸ್ತೆಯ …

Read More »

ಮನೆ ಒಡತಿ ಸ್ನಾನ ಮಾಡುವ ದೃಶ್ಯ ಸೆರೆ: ಟೆಕಿ ಬಂಧನ

ಬೆಂಗಳೂರು ಬೇಗೂರುದಲ್ಲಿ ಮನೆ ಮಾಲಕಿ ಸ್ನಾನ ಮಾಡುತ್ತಿದ್ದ ದೃಶ್ಯವನ್ನು ಮೊಬೈಲ್‌ನಲ್ಲಿ ರಹಸ್ಯವಾಗಿ ಚಿತ್ರೀಕರಿಸಿದ ಆರೋಪದಡಿ ಸಾಫ್ಟ್‌ವೇರ್ ಉದ್ಯೋಗಿ ಮಂಜುನಾಥ್ (30)ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಕಳೆದ ಐದು ವರ್ಷಗಳಿಂದ ಸಂತ್ರಸ್ತೆಯ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದ ಎಂದು ತಿಳಿದುಬಂದಿದೆ. ಜುಲೈ 27ರಂದು ಮಹಿಳೆ ಸ್ನಾನ ಮಾಡುತ್ತಿದ್ದ ವೇಳೆ ಬಾತ್‌ರೂಮ್ ಕಿಟಕಿಯಲ್ಲಿ ಮೊಬೈಲ್ ಇಟ್ಟು ವಿಡಿಯೋ ಸೆರೆ ಹಿಡಿಯುತ್ತಿದ್ದಾಗ ಮಹಿಳೆ ಗಮನಿಸಿ ಕೂಗಿಕೊಂಡಿದ್ದಾರೆ. ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ …

Read More »

ನಾಲ್ವರು ಇಂಜನೀಯರಿಂಗ್​ ವಿದ್ಯಾರ್ಥಿಗಳ ಬಂಧನ

ಉಡುಪಿಯ ಮಣಿಪಾಲದಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳನ್ನು ಮಣಿಪಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆಗಸ್ಟ್ 2ರಂದು ರಾತ್ರಿ ಊಟ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಪವನಕುಮಾರ್ ಎಂಬ ಯುವಕನನ್ನು ಆರೋಪಿಗಳು ತಡೆದು ಮೆಟಲ್ ಪಂಚ್‌ನಿಂದ ಹಲ್ಲೆ ನಡೆಸಿ, ಕಾಲಿನಿಂದ ತುಳಿದು ಗಂಭೀರವಾಗಿ ಗಾಯಗೊಳಿಸಿದ್ದಾರೆ. ಹಲ್ಲೆ ತಡೆಯಲು ಬಂದ ಸಹೋದರ ಹಾಗೂ …

Read More »

ಚಿಕ್ಕಮಗಳೂರು: ಐವರು ಅಕ್ರಮ ಬಾಂಗ್ಲಾ ವಲಸಿಗರ ಬಂಧನ

ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕಿನ ಬಣಕಲ್ ಸಮೀಪದ ಕಾಫಿ ತೋಟದಲ್ಲಿ ನೆಲೆಸಿದ್ದ ಐವರು ಅಕ್ರಮ ಬಾಂಗ್ಲಾ ವಲಸಿಗರನ್ನು ಪೊಲೀಸರು ಬಂಧಿಸಿದ್ದಾರೆ.ಜಹಾಂಗೀರ್, ಫೈಸುದ್ದಿನ್, ನುಮನ್ ಬಶೀರ್, ಮಹಮದ್ ಹುಮೈನ್, ಮಹಮದ್ ಹಸೀಬುಲ್ ಬಂಧಿತರು. ಜಿಲ್ಲೆಯಲ್ಲಿ ಎಸ್ಟೇಟ್‌ಗಳು, ರೆಸಾರ್ಟ್‌ ಮತ್ತು ಹೋಂಸ್ಟೇಗಳು ಹೆಚ್ಚು ಇರುವುದರಿಂದ ಕೆಲಸಕ್ಕೆ ಬಂದವರ ದಾಖಲೆಗಳನ್ನು ಪೊಲೀಸರು ಎಲ್ಲೆಡೆ ಪರಿಶೀಲಿಸುತ್ತಿದ್ದಾರೆ. ಬಣಕಲ್ ಠಾಣೆ ವ್ಯಾಪ್ತಿಯ ತೋಟವೊಂದರಲ್ಲಿ ದಾಖಲೆ ಸಂಗ್ರಹಿಸುವ ವೇಳೆ ಅಕ್ರಮ ವಲಸಿಗರು ಪತ್ತೆಯಾಗಿದ್ದಾರೆ. ‘ಅವರನ್ನು ವಿಚಾರಣೆ ಮಾಡಿದಾಗ ಬಾಂಗ್ಲಾ ದೇಶದ …

Read More »

ಹುಟ್ಟುಹಬ್ಬದ ಪಾರ್ಟಿಗೆ ಕರೆದು ಯುವತಿಯನ್ನು ಹತ್ಯೆ ಮಾಡಿದರಾ ? ಮಂಡ್ಯ ಕಾರು ಅಪಘಾತದ ಹಿಂದೆ ಅತ್ಯಾಚಾರ ಯತ್ನದ ಶಂಕೆ !

ಮಂಡ್ಯದಲ್ಲಿ ಹುಟ್ಟುಹಬ್ಬದ ಆಚರಣೆಗೆ ಸ್ನೇಹಿತರೊಂದಿಗೆ ತೆರಳಿದ್ದ ಯುವತಿ ಕಾರು ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಆರಂಭದಲ್ಲಿ ರಸ್ತೆ ಅಪಘಾತ ಎಂದು ಹೇಳಲಾಗಿದ್ದರೂ, ಮೃತಳ ಕುಟುಂಬಸ್ಥರು ಇದು ಕೊಲೆ ಎಂದು ಆರೋಪಿಸಿ ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ. ಮೃತ ಯುವತಿ ನವೀನಾ ಸ್ನೇಹಿತರೊಂದಿಗೆ ಕಾರಿನಲ್ಲಿ ತೆರಳಿದ್ದ ವೇಳೆ ಅಪಘಾತ ಸಂಭವಿಸಿದ್ದು, ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಕಾರಿನಲ್ಲಿದ್ದ ಉಳಿದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕುಟುಂಬಸ್ಥರು, ಮಗಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ …

Read More »

ಮೈಸೂರು ಗ್ರಾಮದಲ್ಲಿ ಅಕ್ರಮ ಗಾಂಜಾ ಮಾರಾಟ ತಡೆದ ಮುಸ್ಲಿಂ ಯುವಕರು!

ಮೈಸೂರು: ಅಕ್ರಮ ಗಾಂಜಾ ಮಾರಾಟವನ್ನು ಮುಸ್ಲಿಂ ಯುವಕರು ತಡೆದಿರುವ ಘಟನೆ ಪಿರಿಯಾಪಟ್ಟಣ ತಾಲ್ಲೂಕಿನ ಪಂಚವಳ್ಳಿ ಗ್ರಾಮದ ಬಳಿ ನಡೆದಿದೆ.ಸುಮಾರು 1 ಕೆಜಿಯಷ್ಟು ಗಾಂಜಾವನ್ನು ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದರು. ಗ್ರಾಮದ ಅಕ್ಕಪಕ್ಕದ ಹಾಗೂ ಹಾಡಿಗಳಲ್ಲಿ ಗಾಂಜಾ ಸಂಗ್ರಹವಾಗುತ್ತಿತ್ತು. ಅಕ್ಕಪಕ್ಕದ ಗ್ರಾಮದ ಯುವಕರಿಗೆ ವ್ಯಕ್ತಿ ಗಾಂಜಾ ಮಾರಾಟ ಮಾಡುತ್ತಿದ್ದರು. ಗಾಂಜಾ ಮಾರಾಟಗಾರರನ್ನು ಮುಸ್ಲಿಂ ಯುವಕರು ತಡೆದಿದ್ದಾರೆ. ಸುಮಾರು 1 ಕೆಜಿ ಗಾಂಜಾವನ್ನು ಪೊಲೀಸರಿಗೆ ಗ್ರಾಮಸ್ಥರು ಒಪ್ಪಿಸಿದ್ದಾರೆ. ಯುವಕರು ಪ್ರಶ್ನಿಸುತ್ತಿದ್ದ ವೇಳೆ ಆರೋಪಿ ಸ್ಥಳದಿಂದ …

Read More »

ಬಸ್ ಹತ್ತಲು ಬಂದ ಭಿಕ್ಷುಕನಿಗೆ ಬೂಟ್ ಕಾಲಲ್ಲಿ ಒದ್ದ ಕಂಡಕ್ಟರ್ – ಬಿಎಂಟಿಸಿ ಸಿಬ್ಬಂದಿ ವರ್ತನೆಗೆ ಆಕ್ರೋಶ :

ಬೆಂಗಳೂರು : ಇಲ್ಲಿನ ನೆಲಮಂಗಲ ಟೋಲ್ ಬಳಿ ಬಿಎಂಟಿಸಿ ಬಸ್ ಸಿಬ್ಬಂದಿಯೊಬ್ಬರ ವರ್ತನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬಸ್ ಏರಲು ಯತ್ನಿಸಿದ್ದ ಭಿಕ್ಷುಕನನ್ನು ಕಂಡಕ್ಟರ್ ಕಾಲಿನಿಂದ ತಳ್ಳಿದ ಘಟನೆ ನಡೆದಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಘಟನೆಯ ವೇಳೆ ಭಿಕ್ಷುಕ ನೆಲಕ್ಕೆ ಬಿದ್ದರೂ ಸಿಬ್ಬಂದಿ ಯಾವುದೇ ಸ್ಪಂದನೆ ತೋರದೆ ಬಸ್‌ನೊಂದಿಗೆ ಸ್ಥಳದಿಂದ ತೆರಳಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಈ ದೃಶ್ಯವನ್ನು ಅಲ್ಲೆ ಸಾಗುತ್ತಿದ್ದ ಬೈಕ್ ಸವಾರ ತನ್ನ …

Read More »

ವಿನಯ್​ ಕುಲಕರ್ಣಿಗೆ ವಿಧಿಸಿದ್ದ ಶಿಕ್ಷೆ ಅಮಾನತು: ಶಾಸಕ ಸ್ಥಾನ ಮರುಸ್ಥಾಪಿಸಿ ವಿಧಾನಸಭೆ ಸಚಿವಾಲಯ ಆದೇಶ

ಯೋಗೇಶ್‌ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯಿಂದ ಶಾಸಕತ್ವ ಕಳೆದುಕೊಂಡಿದ್ದ ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನವನ್ನು ರಾಜ್ಯ ವಿಧಾನಸಭೆ ಸಚಿವಾಲಯ ಮರುಸ್ಥಾಪಿಸಿದೆ. ಕರ್ನಾಟಕ ಹೈಕೋರ್ಟ್ ಶಿಕ್ಷೆಗೆ ತಡೆ ನೀಡಿ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. 2016ರಲ್ಲಿ ನಡೆದ ಯೋಗೇಶ್‌ಗೌಡ ಕೊಲೆ ಪ್ರಕರಣದ ತನಿಖೆಯನ್ನು ಬಳಿಕ ಸಿಬಿಐಗೆ ವಹಿಸಲಾಗಿತ್ತು. ವಿಶೇಷ ನ್ಯಾಯಾಲಯ ವಿನಯ್ ಕುಲಕರ್ಣಿ ಸೇರಿದಂತೆ 17 ಮಂದಿಗೆ ಜೀವಾವಧಿ …

Read More »

ಗಂಗೊಳ್ಳಿ: ಕೋಳಿ ಅಂಕ- ಪೊಲೀಸ್ ದಾಳಿ: ಇಬ್ಬರ ಬಂಧನ

ಗಂಗೊಳ್ಳಿ: ನಾಡ ಗ್ರಾಮದ ಕೋಣ್ಕಿಯ ನಂದ್ರೋಳಿ ಮನೆಯ ಸಾರ್ವಜನಿಕ ಜಾಗದಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದ ಸ್ಥಳದ ಮೇಲೆ ಗಂಗೊಳ್ಳಿ ಪೊಲೀಸರು ದಾಳಿ ನಡೆಸಿ ಸೋಮವಾರ (ಆ.03)ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಕಂಬದಕೋಣೆ ಗ್ರಾಮ ಹಳಗೇರಿ ನಿವಾಸಿ ಸುಧಾಕರ (61) ಮತ್ತು ಕಿರಿಮಜೇಶ್ವರ ನಿವಾಸಿ ಸುರೇಶ (40) ಬಂಧಿತ ಆರೋಪಿಗಳು. ದಾಳಿ ವೇಳೆ ಉಳಿದವರು ಪರಾರಿಯಾಗಿದ್ದಾರೆ. ಘಟನಾ ಸ್ಥಳದಿಂದ 10 ಕೋಳಿಗಳು, ಕೋಳಿಬಾಳು (ಕತ್ತಿ), 2350 ರೂ. ನಗದು ಹಾಗೂ 8 …

Read More »