ಹಾವೇರಿ: ಜಿಲ್ಲೆಯ ಸವಣೂರು ತಾಲೂಕಿನ ಮಂಟಗಣಿ, ಕಳಸೂರು, ಹತ್ತಿಮತ್ತೂರು ಹಾಗೂ ಕಲ್ಲಕೋಟಿ ಗ್ರಾಮಗಳ ಸಂಪರ್ಕ ರಸ್ತೆಗಳ ಬಳಿ 9ಕ್ಕೂ ಹೆಚ್ಚು ಶ್ವಾನಗಳನ್ನು ಕೊಂದು ಅವುಗಳ ಮೇಲೆ ವಾಮಾಚಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಶ್ವಾನಗಳ ಬಾಯಿಯನ್ನು ದಾರದಿಂದ ಕಟ್ಟಿ, ಕೋಳಿಯ ರೆಕ್ಕೆ ಹಾಗೂ ಕುಂಕುಮ ಬಳಸಿ ಕೃತ್ಯ ಎಸಗಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಐದು ಹೆಣ್ಣು ಹಾಗೂ ನಾಲ್ಕು ಗಂಡು ಶ್ವಾನಗಳನ್ನು ಹತ್ಯೆ ಮಾಡಿರುವುದಾಗಿ ತಿಳಿದುಬಂದಿದ್ದು, ಜಮೀನಿಗೆ ತೆರಳಿದ್ದ ರೈತರು …
Read More »ಕೆಪಿಎಸ್ಸಿ ನೇಮಕಾತಿ ಅಕ್ರಮ: ಕಾರ್ಯದರ್ಶಿ ಜ್ಯೋತಿಗೆ ಸಿಐಡಿ ನೋಟಿಸ್ ಜಾರಿ!
ಬೆಂಗಳೂರು: ಕೆಪಿಎಸ್ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆಯನ್ನು ಸಿಐಡಿ ತೀವ್ರಗೊಳಿಸಿದ್ದು, ಕಾರ್ಯದರ್ಶಿ ಜ್ಯೋತಿ ಅವರಿಗೆ ನೋಟಿಸ್ ನೀಡಿ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದೆ. ವೈರಲ್ ಆದ ಭ್ರಷ್ಟಾಚಾರದ ಆಡಿಯೋ ಹಿನ್ನೆಲೆಯಲ್ಲಿ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಈ ನಡುವೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಎಬಿವಿಪಿ ಒತ್ತಾಯಿಸಿದ್ದು, ಆಗಸ್ಟ್ 4ರೊಳಗೆ ಕ್ರಮ ಕೈಗೊಳ್ಳದಿದ್ದರೆ ಆಗಸ್ಟ್ 5ರಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಇನ್ನೊಂದೆಡೆ, ಆಯ್ಕೆಯಾದ ಅಭ್ಯರ್ಥಿಗಳು …
Read More »ದುಷ್ಟಶಕ್ತಿ ನಿವಾರಣೆಗಾಗಿ ಪೂಜೆ, 2.5 ಕೋಟಿ ಕಳೆದುಕೊಂಡ ಮಹಿಳೆ! ಮನೆ ಮಾರಿದ ದುಡ್ಡು ತಗೊಂಡು ಬಾಬಾ ಎಸ್ಕೇಪ್!
ಬೆಂಗಳೂರು: ದುಷ್ಟಶಕ್ತಿ ನಿವಾರಣೆ ಹೆಸರಿನಲ್ಲಿ ಪೂಜೆ ಮಾಡುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ ₹2.5 ಕೋಟಿ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಹಣ ಹೂಡಿದರೆ ₹10 ಕೋಟಿ ನೀಡುವುದಾಗಿ ಆಮಿಷ ಒಡ್ಡಿ ವಂಚಕರು ಮೋಸ ಮಾಡಿದ್ದಾರೆ. ಬೈಕ್ ಅಪಘಾತದಲ್ಲಿ ಮಗ ಗಾಯಗೊಂಡಿದ್ದನ್ನು ದುಷ್ಟಶಕ್ತಿಯ ಪರಿಣಾಮ ಎಂದು ನಂಬಿಸಿದ ಆರೋಪಿಗಳು, ನಕಲಿ ಬಾಬಾ ಮೂಲಕ ಪೂಜೆ ಮಾಡಿಸಿ ಮೊದಲು ₹8 ಲಕ್ಷ ಪಡೆದು, ಬಳಿಕ ಮಹಿಳೆಯಿಂದ ₹2.5 ಕೋಟಿ ಹಣ ಪಡೆದಿದ್ದಾರೆ. ಹಣ …
Read More »ಕೈಯಲ್ಲಿ ಗನ್ ಹಿಡಿದು ರೀಲ್ಸ್ ಮಾಡಿದ ಯುವತಿ! ಠಾಣೆಗೆ ಕರೆಸಿ ಪೊಲೀಸರಿಂದ ಖಡಕ್ ವಾರ್ನಿಂಗ್
ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕೈಯಲ್ಲಿ ಗನ್ ಹಿಡಿದು ವಿಡಿಯೋ ವೈರಲ್ ಮಾಡಿದ ಯುವತಿ ಅಲಿಶಾ ಅನ್ಸಾರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಗನ್ ಪ್ರದರ್ಶನ ಹಾಗೂ ಬೈಕ್ ಸ್ಟಂಟ್ ವಿಡಿಯೋಗಳಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ ಆರೋಪದಡಿ ಕ್ರಮ ಕೈಗೊಳ್ಳಲಾಗಿದೆ. ಇನ್ಸ್ಟಾಗ್ರಾಂನಲ್ಲಿ ಗನ್ ಹಿಡಿದ ವಿಡಿಯೋ ಹಾಗೂ ನಕಾರಾತ್ಮಕ ಕಾಮೆಂಟ್ಗಳಿಗೆ ಪ್ರತಿಯಾಗಿ ಮತ್ತೊಂದು ಬೆದರಿಕೆ ರೀತಿಯ ವಿಡಿಯೋ ಪೋಸ್ಟ್ ಮಾಡಿದ್ದಳು. ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ನಲ್ಲಿ ಬೈಕ್ ಸ್ಟಂಟ್ ಮಾಡಿದ ವಿಡಿಯೋ ಕೂಡ ವೈರಲ್ …
Read More »ಬಸ್ ಅಡ್ಡಗಟ್ಟಿ ಕಂಡಕ್ಟರ್ ಮೇಲೆ ಭೀಕರ ಹಲ್ಲೆ, ಪ್ರಯಾಣಿಕನ ಮೇಲೂ ಕಿಡಿಗೇಡಿ ಅಟ್ಯಾಕ್!
ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಕಲ್ಲಹಳ್ಳಿ ಗ್ರಾಮದ ಬಳಿ ಕರ್ತವ್ಯನಿರತ ಎನ್ಡಬ್ಲ್ಯೂಕೆಆರ್ಟಿಸಿ (NWKRTC) ಬಸ್ ನಿರ್ವಾಹಕ ಮಲ್ಲು ಲಮಾಣಿ ಮೇಲೆ ಕಿಡಿಗೇಡಿಗಳ ಗುಂಪೊಂದು ಹಲ್ಲೆ ನಡೆಸಿದೆ. ಹಳೆಯ ವೈಷಮ್ಯವೇ ಘಟನೆಗೆ ಕಾರಣ ಎನ್ನಲಾಗಿದೆ. ಶುಕ್ರವಾರ ಆಟೋವನ್ನು ರಸ್ತೆ ಬದಿಗೆ ಸರಿಸಿದ ವಿಚಾರಕ್ಕೆ ಆಟೋ ಚಾಲಕ ಸಂತೋಷ ದೇವೂರ ನಿರ್ವಾಹಕರೊಂದಿಗೆ ವಾಗ್ವಾದ ನಡೆಸಿದ್ದ. ಬಳಿಕ ಶನಿವಾರ ಬಸ್ ಅಡ್ಡಗಟ್ಟಿ ಸಹಚರರೊಂದಿಗೆ ಬಸ್ ಒಳಗೆ ನುಗ್ಗಿ ನಿರ್ವಾಹಕರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಲ್ಲಿ …
Read More »ಮನೆ ಬಾಡಿಗೆ ವಿಚಾರಕ್ಕೆ ಮಾವ-ಅಳಿಯನ ನಡುವೆ ಗಲಾಟೆ, ಇಬ್ಬರೂ ಆಸ್ಪತ್ರೆಗೆ ದಾಖಲು, ಪರಸ್ಪರ ದೂರು
ಭಟ್ಕಳ: ಮನೆ ಬಾಡಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಮಾವ ಮತ್ತು ಅಳಿಯನ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ, ಪರಸ್ಪರ ಹಲ್ಲೆ ನಡೆಸಿಕೊಂಡು ಇಬ್ಬರೂ ಆಸ್ಪತ್ರೆ ಸೇರಿದ ಘಟನೆ ಆ.1ರ ಶನಿವಾರ ನಗರದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಮೊದಲ ದೂರಿನಲ್ಲಿ, ಆಜಾದ್ ನಗರದ ಶೇಡಕುಳಿಹೊಂಡ ಪ್ರದೇಶದ ನಿವಾಸಿ ಮಹಮ್ಮದ್ ಅಫಾನ್ ಇಸ್ಮಾಯಿಲ್ ಶೇಖ್ (34) ಅವರು ತಮ್ಮ ಮಾವ ಅಮೀರ್ …
Read More »ಕುಂದಾಪುರ ರಿಚರ್ಡ್ ಹತ್ಯೆ ಪ್ರಕರಣ : ಆರೋಪಿ ಡೆರಿಕ್ ಕ್ರಾಸ್ತಾ ಭಟ್ಕಳದಲ್ಲಿ ಬಂಧನ
ಕುಂದಾಪುರದಲ್ಲಿ ನಡೆದ ಗುಂಡಿನ ದಾಳಿ ಪ್ರಕರಣದ ಆರೋಪಿ ಡೆರಿಕ್ ಕ್ರಾಸ್ತಾನನ್ನು ಉಡುಪಿ ಜಿಲ್ಲಾ ಪೊಲೀಸರು ಭಟ್ಕಳದಲ್ಲಿ ಬಂಧಿಸಿದ್ದಾರೆ. ಆರೋಪಿಯ ಪತ್ತೆಗಾಗಿ ಮೂರು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿತ್ತು. ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಗುರುವಾರ ತಡರಾತ್ರಿ ಹಣಕಾಸು ಹಾಗೂ ಇತರ ವ್ಯವಹಾರಗಳ ವಿಚಾರವಾಗಿ ಉಂಟಾದ ಮನಸ್ತಾಪದ ಹಿನ್ನೆಲೆಯಲ್ಲಿ ಡೆರಿಕ್, ಐವನ್ ರಿಚರ್ಡ್ ಮಸ್ಕರೇನಸ್ ಅವರನ್ನು ಕುಂದಾಪುರದ ಚರ್ಚ್ ರಸ್ತೆಗೆ ಕರೆಸಿಕೊಂಡಿದ್ದಾನೆ. ಬಳಿಕ ಕಾರಿನಿಂದ ಇಳಿದ ಐವನ್ ಮೇಲೆ ಬಂದೂಕಿನಿಂದ …
Read More »ಪತ್ನಿಯನ್ನು ಕೊಂದು ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಪತಿ
ಹಾಸನ ಜಿಲ್ಲೆಯ ಕೆಸಗೋಡು ಗ್ರಾಮದಲ್ಲಿ ಪತ್ನಿಯನ್ನು ಕೊಲೆ ಮಾಡಿದ ಬಳಿಕ ಪತಿಯೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತರನ್ನು ಗಗನ (38) ಮತ್ತು ರಘು (41) ಎಂದು ಗುರುತಿಸಲಾಗಿದೆ. ದಂಪತಿಗೆ ಇಬ್ಬರು ಮಕ್ಕಳಿದ್ದು, ಚಿಕ್ಕಮಗಳೂರಿನಲ್ಲಿ ಬೇಕರಿ ನಡೆಸುತ್ತಿದ್ದರು. ಶುಕ್ರವಾರ ಕಾರಿನಲ್ಲಿ ತೆರಳುತ್ತಿದ್ದ ವೇಳೆ ರಘು ಪತ್ನಿಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ಸಂಬಂಧಿಕರಿಗೆ ವಿಡಿಯೊ ಕರೆ ಮಾಡಿ ಕೃತ್ಯದ ಬಗ್ಗೆ ತಿಳಿಸಿದ ಆತ, ಮೃತದೇಹವನ್ನು ಯಗಚಿ ನಾಲೆಗೆ …
Read More »32 ಕೋಟಿ ರೂ. ಹಿಂತಿರುಗಿಸಲು ಆಗಲ್ಲ! ಸಾಲ ಕೊಟ್ಟವನ ಹತ್ಯೆಗೆ ಮಾಸ್ಟರ್ಮೈಂಡ್ ರೂಪಿಸಿದ್ದ ಸಂಚು ಕಡೆಗೂ ಠುಸ್
32 ಕೋಟಿ ರೂ. ಸಾಲ ತೀರಿಸುವುದನ್ನು ತಪ್ಪಿಸಿಕೊಳ್ಳಲು ಉದ್ಯಮಿಯ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣವನ್ನು ಮಹಾರಾಷ್ಟ್ರ ಪೊಲೀಸರು ಭೇದಿಸಿ, ಮಾಸ್ಟರ್ಮೈಂಡ್ ಸೇರಿ ಏಳು ಮಂದಿಯನ್ನು ಬಂಧಿಸಿದ್ದಾರೆ. ವಸಾಯಿ ಮೂಲದ ಉದ್ಯಮಿ ಮೋಹನ್ ಸಿಂಗ್ ಪರ್ಮಾರ್ ಅವರನ್ನು ಗುರಿಯಾಗಿಸಿ ಈ ಸಂಚು ರೂಪಿಸಲಾಗಿತ್ತು. ಪ್ರಮುಖ ಆರೋಪಿ ಸಾಗರ್ ಗಿರೀಶ್ ಭಾನುಶಾಲಿ ಷೇರು ಮಾರುಕಟ್ಟೆಯಲ್ಲಿ ನಷ್ಟ ಅನುಭವಿಸಿ ಸಾಲದ ಸುಳಿಯಲ್ಲಿ ಸಿಲುಕಿದ್ದ. ಸಾಲದಿಂದ ತಪ್ಪಿಸಿಕೊಳ್ಳುವುದರ ಜೊತೆಗೆ ಕಂಪನಿಯ ಸಂಪೂರ್ಣ ನಿಯಂತ್ರಣ ಪಡೆಯುವ ಉದ್ದೇಶದಿಂದ …
Read More »ಪರಪ್ಪನ ಅಗ್ರಹಾರ ಜೈಲಿನಿಂದ ಮಾಜಿ ಸಚಿವ ‘ವಿನಯ್ ಕುಲಕರ್ಣಿ’ ಬಿಡುಗಡೆ
ಬೆಂಗಳೂರು: ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾದರು. ಜೈಲಿನ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಹೊರಬಂದ ವಿನಯ್ ಕುಲಕರ್ಣಿ ಯಾವುದೇ ಮಾಧ್ಯಮ ಪ್ರತಿಕ್ರಿಯೆ ನೀಡದೆ ತೆರಳಿದರು. ಜೈಲಿನ ಹೊರಗೆ ಸೇರಿದ್ದ ಬೆಂಬಲಿಗರು ಅವರಿಗೆ ಹೂಮಾಲೆ ಹಾಕಿ ಸ್ವಾಗತಿಸಿ ಅಭಿನಂದಿಸಿದರು. …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





