ಬೆಂಗಳೂರು: ಮೇಲ್ಸೇತುವೆ ಮೇಲೆ ಕಾರು ನಿಲ್ಲಿಸಿಕೊಂಡು ಪಟಾಕಿ ಸಿಡಿಸಿ ಜನುಮ ದಿನ ಆಚರಿಸಿಕೊಂಡ ಗುತ್ತಿಗೆದಾರನ ವಿರುದ್ಧ ವಿಜಯನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುತ್ತಿಗೆದಾರ ರಾಘವೇಂದ್ರ ಎಂಬುವರು ವೆಸ್ಟ್ ಆಫ್ ಕಾರ್ಡ್ ರಸ್ತೆಯ ಶಿವನಹಳ್ಳಿ ಮೇಲ್ಸೇತುವೆ ಮೇಲೆ ಜುಲೈ 15ರಂದು ಕಾರು ನಿಲ್ಲಿಸಿಕೊಂಡು ಪಟಾಕಿ ಸಿಡಿಸಿ, ಜನುಮ ದಿನ ಆಚರಿಸಿಕೊಂಡ ವಿಡಿಯೊವನ್ನು ತಮ್ಮ ಇನ್ಸ್ಟ್ರಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದರು. ಇದನ್ನು ಗಮನಿಸಿದ ವ್ಯಕ್ತಿಯೊಬ್ಬರು ವಿಡಿಯೊ ಸಮೇತ ಎಕ್ಸ್ನಲ್ಲಿ ಪೋಸ್ಟ್ …
Read More »ವರದಕ್ಷಿಣೆ ಕಿರುಕುಳದಿಂದ ಮನನೊಂದು ಪತ್ನಿ ಆತ್ಮಹತ್ಯೆ: ಪತಿ ಬಂಧನ
ಬೆಂಗಳೂರು: ವರದಕ್ಷಿಣೆ ಕಿರುಕುಳ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪರಪ್ಪನ ಅಗ್ರಹಾರ ಪೊಲೀಸರು ಮಹಿಳೆಯ ಪತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ರಾಯಸಂದ್ರದಲ್ಲಿ 20 ವರ್ಷದ ಸಾನಿಕ ಗೌಡ ಅವರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಮಗಳ ಸಾವಿಗೆ ಪತಿಯೇ ಕಾರಣ ಎಂದು ಆರೋಪಿಸಿರುವ ಸಾನಿಕ ಅವರ ತಂದೆ, ವರದಕ್ಷಿಣೆ ಕಿರುಕುಳ ಮತ್ತು ಮತ್ತೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಕಾರಣ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರು ನೀಡಿದ್ದರು. …
Read More »ಅತ್ಯಾಚಾರ ಪ್ರಕರಣ- ಪೋಕ್ಸೋ ಕಾಯ್ದೆಯಡಿ ಯುವಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ
ಮಂಗಳೂರು: ಅಪ್ರಾಪ್ತ ಬಾಲಕಿಯ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ ಪೋಕ್ಸೊ ಪ್ರಕರಣದಲ್ಲಿ 20 ವರ್ಷದ ಯುವಕನಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ (FTSC-2) 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ. ಆರೋಪಿಯನ್ನು ಕುಂಜತ್ತಬೈಲ್ನ ಸೋನು ಮ್ಯಾಕ್ಲೀನ್ ನೊರೊನ್ಹಾ ಎಂದು ಗುರುತಿಸಲಾಗಿದೆ. ಪ್ರಾಸಿಕ್ಯೂಷನ್ ಪ್ರಕಾರ, ಆರೋಪಿ ಪ್ರೀತಿಯ ಹೆಸರಿನಲ್ಲಿ ಬಾಲಕಿಯನ್ನು ನಂಬಿಸಿ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ಆಕೆಯ ಖಾಸಗಿ …
Read More »ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ, ಬೆದರಿಕೆ ಕೇಸಲ್ಲಿ ಯುವಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ
ಮಂಗಳೂರಿನಲ್ಲಿ ಅಪ್ರಾಪ್ತ ಬಾಲಕಿಯನ್ನು ಪ್ರೀತಿಯ ಹೆಸರಿನಲ್ಲಿ ನಂಬಿಸಿ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣದಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ. ಕುಂಜತ್ತಬೈಲ್ ನಿವಾಸಿ ಸೋನು ಮ್ಯಾಕ್ಲಿನ್ ನೊರೊನ್ಹ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಆಕೆಯ ನಗ್ನ ಚಿತ್ರಗಳನ್ನು ವೈರಲ್ ಮಾಡುವುದಾಗಿ ಹಾಗೂ ಕುಟುಂಬಸ್ಥರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಆರೋಪ ಸಾಬೀತಾಗಿದೆ. ಪ್ರಕರಣದ …
Read More »ಡ್ರಗ್ಸ್ ಸಾಗಾಣಿಕೆಗೆ ಹೊಸ ತಂತ್ರ – ಮುಟ್ಟಿನ ಕಪ್ಗಳಲ್ಲಿ ಎಂಡಿಎಂಎ ಕಳ್ಳಸಾಗಣೆ: ಬೆಂಗಳೂರಿನಿಂದ ಕೇರಳಕ್ಕೆ ‘ಡ್ರಗ್ಸ್’ ತರುತ್ತಿದ್ದ ಲಿವ್-ಇನ್ ಪಾರ್ಟ್ನರ್ ಅರೆಸ್ಟ್
ಬೆಂಗಳೂರುದಿಂದ ಎಂಡಿಎಂಎ ಡ್ರಗ್ಸ್ ಅನ್ನು ಮುಟ್ಟಿನ ಕಪ್ ಹಾಗೂ ಒಳ ಉಡುಪುಗಳಲ್ಲಿ ಮರೆಮಾಚಿ ಕೇರಳಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ ಲಿವ್-ಇನ್ ದಂಪತಿಯನ್ನು ಎರ್ನಾಕುಲಂ ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಗಳಿಂದ 94.032 ಗ್ರಾಂ ಎಂಡಿಎಂಎ, ₹17,770 ನಗದು ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಮೊಹಮ್ಮದ್ ಶಫಿ ಮತ್ತು ಸರಿತಾ ಡ್ರಗ್ಸ್ಗೆ ಅಜಿನೊಮೊಟೊ ಬೆರೆಸಿ ಎರ್ನಾಕುಲಂ ಹಾಗೂ ಆಲಪ್ಪುಳದ ನೈಟ್ಕ್ಲಬ್ಗಳು ಮತ್ತು ಪಾರ್ಟಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ತಪಾಸಣೆಯಿಂದ ತಪ್ಪಿಸಿಕೊಳ್ಳಲು …
Read More »ಹೆಂಡ್ತಿ ಮೇಲೆ ಅನುಮಾನ, ಉರುಳಿಸಿದ ಇಬ್ಬರ ಹೆಣ! 5 ವರ್ಷದ ಸಂಸಾರ, ಎರಡೇ ಏಟಿಗೆ ಖತಂ!
ಬಳ್ಳಾರಿ ಜಿಲ್ಲೆಯ ಅಂದ್ರಾಳು ಪ್ರದೇಶದಲ್ಲಿ ಪತ್ನಿಯ ಮೇಲೆ ಅನುಮಾನಗೊಂಡ ಪತಿಯೊಬ್ಬ, ಮಲಗಿದ್ದ ಪತ್ನಿ ರಾಜೇಶ್ವರಿ ಹಾಗೂ ಏಳು ತಿಂಗಳ ಮಗುವನ್ನು ಸುತ್ತಿಗೆಯಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಆರೋಪಿ ಹೊನ್ನೂರಸ್ವಾಮಿ ಮತ್ತು ರಾಜೇಶ್ವರಿ ಐದು ವರ್ಷಗಳ ಹಿಂದೆ ವಿವಾಹವಾಗಿದ್ದು, ಕೆಲ ದಿನಗಳಿಂದ ಪತ್ನಿಯ ನಡತೆಯ ಬಗ್ಗೆ ಅನುಮಾನಪಟ್ಟು ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂದು ತಿಳಿದುಬಂದಿದೆ. ಘಟನೆಯ ಬಳಿಕ ಆರೋಪಿ ಬಳ್ಳಾರಿ ಎಪಿಎಂಸಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. …
Read More »ರಾಜ್ಯದಲ್ಲೊಂದು ಆಘಾತಕಾರಿ ಘಟನೆ: ಶಾಲೆಗೆ ಮೊಬೈಲ್ ತರಬೇಡವೆಂದ HM ಕಾರಿನ ಮೇಲೆ ಕಲ್ಲು ಎತ್ತಿಹಾಕಲು ವಿದ್ಯಾರ್ಥಿ ಯತ್ನ!
ರಾಯಚೂರು ತಾಲೂಕಿನ ಪಂಚಮುಖಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲೆಗೆ ಮೊಬೈಲ್ ತರದಂತೆ ಬುದ್ಧಿವಾದ ಹೇಳಿದ ಮುಖ್ಯ ಶಿಕ್ಷಕಿ ಶಶಿಕಲಾ ಅವರ ಮೇಲೆ ವಿದ್ಯಾರ್ಥಿಯೊಬ್ಬ ಕಲ್ಲು ಹಿಡಿದು ದಾಳಿಗೆ ಮುಂದಾದ ಘಟನೆ ನಡೆದಿದೆ. ಮಾತಿನ ಚಕಮಕಿ ಬಳಿಕ ವಿದ್ಯಾರ್ಥಿ ಕಾರಿನತ್ತ ಕಲ್ಲು ಎಸೆಯಲು ಮುಂದಾಗಿದ್ದು, ಶಾಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಳಿಕ ಸ್ಥಳೀಯರು ಹಾಗೂ ಪೊಲೀಸರ ಸಮ್ಮುಖದಲ್ಲಿ ಪಂಚಾಯಿತಿ ನಡೆಸಿ ರಾಜಿ-ಸಂಧಾನದ ಮೂಲಕ ಪ್ರಕರಣ …
Read More »ಕುಂದಾಪುರದಲ್ಲಿ ಗುಂಡಿಕ್ಕಿ ರಿಯಲ್ ಎಸ್ಟೇಟ್ ಉದ್ಯಮಿಯ ಹತ್ಯೆ
ಉಡುಪಿ ಜಿಲ್ಲೆಯ ಕುಂದಾಪುರ ಪಟ್ಟಣದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಐವನ್ ರಿಚರ್ಡ್ ಮಸ್ಕರೇನಸ್ (45) ಅವರನ್ನು ಗುರುವಾರ ಮುಂಜಾನೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅವರು ಮಹಿಳೆಯೊಬ್ಬರೊಂದಿಗೆ ಕಾರಿನಲ್ಲಿ ಚರ್ಚ್ಗೆ ತೆರಳುತ್ತಿದ್ದ ವೇಳೆ ಹೋಲಿ ರೋಸರಿ ಚರ್ಚ್ ಸಮೀಪ ದುಷ್ಕರ್ಮಿ ಗುಂಡು ಹಾರಿಸಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗುಂಡಿನ ದಾಳಿ ನಡೆಸಿದ ಆರೋಪಿ ಕಾರಿನಲ್ಲಿ ಪರಾರಿಯಾಗಿದ್ದಾನೆ. ಕುಂದಾಪುರ ಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ …
Read More »ಜೆಪ್ಟೊ ಸಿಬ್ಬಂದಿಯಿಂದ ಕಿರುಕುಳ: ಒಬ್ಬಂಟಿ ಮಹಿಳೆ ಕಂಡು ಮನೆಯೊಳಗೆ ನುಗ್ಗಲು ಪ್ರಯತ್ನಿಸಿದ ಡೆಲಿವರಿ ಬಾಯ್
ನವದೆಹಲಿ: ಜೆಪ್ಟೊ ಡೆಲಿವರಿ ಏಜೆಂಟ್ ವಿರುದ್ಧ ಮಹಿಳೆಯೊಬ್ಬರು ಕಿರುಕುಳದ ಆರೋಪ ಮಾಡಿದ್ದು, ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆರ್ಡರ್ ತಲುಪಿಸಿದ ಬಳಿಕ ಏಜೆಂಟ್ ಕುಡಿಯಲು ನೀರು ಕೇಳಿದ್ದು, ನೀರಿನ ಬಾಟಲಿ ನೀಡಿದರೂ ಮನೆ ಒಳಗೆ ಬರಲು ಪದೇಪದೆ ಪ್ರಯತ್ನಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಮಹಿಳೆ ಹೊರಗಡೆ ಕಾಯುವಂತೆ ಹೇಳಿದರೂ ಆತ ಕೇಳದೆ ಮನೆಯೊಳಗೆ ಬರಲು ಮುಂದಾಗಿದ್ದಾನೆ. ಇದರಿಂದ ಭಯಗೊಂಡ ಅವರು ಗೇಟ್ ಹಾಗೂ ಮುಖ್ಯ ಬಾಗಿಲು ಮುಚ್ಚಲು ಯತ್ನಿಸಿದಾಗ, …
Read More »ದೆಹಲಿ ದಂಗೆ ವೇಳೆ ಐಬಿ ಅಧಿಕಾರಿಯ ಭೀಕರ ಹತ್ಯೆ, ಆಪ್ ನಾಯಕನಿಗೆ ಜೀವಾವಧಿ ಶಿಕ್ಷೆ!
ನವದೆಹಲಿ: 2020ರ ದೆಹಲಿ ಕೋಮು ಗಲಭೆ ವೇಳೆ ಗುಪ್ತಚರ ಇಲಾಖೆ (ಐಬಿ) ಅಧಿಕಾರಿ ಅಂಕಿತ್ ಶರ್ಮ ಅವರನ್ನು ಕ್ರೂರವಾಗಿ ಹತ್ಯೆ ಮಾಡಿದ ಪ್ರಕರಣದಲ್ಲಿ, ಆಮ್ ಆದ್ಮಿ ಪಕ್ಷದ ಮಾಜಿ ಕೌನ್ಸಿಲರ್ ತಾರ್ ಹುಸೇನ್ ಅವರಿಗೆ ದೆಹಲಿಯ ಕರಕರ್ದೂಮಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ ಶಿಕ್ಷೆ ಪ್ರಕಟಿಸಿದ ವೇಳೆ ನ್ಯಾಯಾಲಯವು, ಈ ಕೊಲೆ ಅತ್ಯಂತ ಅಮಾನವೀಯ ಮತ್ತು ಕ್ರೂರ ರೀತಿಯಲ್ಲಿ ನಡೆದಿದ್ದು, ಹತ್ಯೆಯ ನಂತರವೂ ಮೃತದೇಹವನ್ನು ಚರಂಡಿಗೆ ಎಸೆದು ಅಪರಾಧಿಗಳು ದ್ವೇಷವನ್ನು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





