Breaking News

BigTv News

ಬೆಂಗಳೂರಲ್ಲಿ ಭಯಾನಕ ಮರ್ಡರ್; ವ್ಯಕ್ತಿಯನ್ನು ಕೊಂದು ತಲೆ ಕತ್ತರಿಸಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಎಸೆದ ಹಂತಕರು..!

ಬೆಂಗಳೂರು: ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಕೊಡತಿ ಗೇಟ್ ಸಮೀಪ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದು, ತಲೆ ಕತ್ತರಿಸಿ ಸಮೀಪದ ಕ್ರಿಕೆಟ್ ಮೈದಾನದಲ್ಲಿ ಎಸೆದಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ. ಘಟನೆ ಸ್ಥಳಕ್ಕೆ ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತನ ಗುರುತು ಇನ್ನೂ ಪತ್ತೆಯಾಗಿಲ್ಲ. ಸದ್ಯ ಸ್ಥಳದಲ್ಲಿ ತಲೆ ಮಾತ್ರ ಪತ್ತೆಯಾಗಿದ್ದು, ಉಳಿದ ದೇಹದ ಭಾಗಕ್ಕಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಕೊಲೆಗೆ ನಿಖರ ಕಾರಣ …

Read More »

ಮರಣ ಮೃದಂಗ ಬಾರಿಸುತ್ತಿದೆ ಕಪ್ಪು ಸಮುದ್ರ: ಹಡಗಿನಲ್ಲೇ ಉಸಿರು ಬಿಗಿಹಿಡಿದು ಕುಳಿತ 13 ಭಾರತೀಯರು!

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ನಡುವೆ ಕಪ್ಪು ಸಮುದ್ರದ ಚೋರ್ನೊಮೊರ್ಸ್ಕ್ ಬಂದರಿನ ಬಳಿ ನಿಂತಿರುವ ಹಡಗಿನಲ್ಲಿ 13 ಭಾರತೀಯ ನಾವಿಕರು ಸಿಲುಕಿಕೊಂಡಿದ್ದು, ಅವರ ಸುರಕ್ಷತೆ ಕುರಿತು ಆತಂಕ ಹೆಚ್ಚಾಗಿದೆ. ಹಡಗಿನ ಸಮೀಪದಲ್ಲೇ ನಿರಂತರ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಭಾರತೀಯ ನಾವಿಕರ ಒಕ್ಕೂಟ (FSUI) ನಾವಿಕರನ್ನು ತಕ್ಷಣ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲು ಕೇಂದ್ರ ಸರ್ಕಾರ ಹಾಗೂ ಹಡಗು ಮಾಲೀಕ ಸಂಸ್ಥೆಗೆ ಮನವಿ ಮಾಡಿದೆ. …

Read More »

ಕಳ್ಳತನ ಮಾಡ್ಬೇಕಂತ ಮನ್ಸಿಗೆ ಅನಿಸ್ತು ಮಾಡಿದೆ’: ಯೂಟ್ಯೂಬ್‌ ನೋಡಿ 11 ಮೊಬೈಲ್‌, 9 ಲ್ಯಾಪ್‌ಟಾಪ್‌, 2 ಟ್ಯಾಬ್‌ ಕದ್ದಿದ್ದವ ಅರೆಸ್ಟ್!

ಬೆಂಗಳೂರು (ಜು.29): ಯೂಟ್ಯೂಬ್‌ನಲ್ಲಿ ಕಳ್ಳತನದ ವಿಡಿಯೋಗಳನ್ನು ನೋಡಿ ಮೊಬೈಲ್ ಅಂಗಡಿಗಳಿಗೆ ಕನ್ನ ಹಾಕುತ್ತಿದ್ದ ಬಿಸಿಎ ಪದವೀಧರನನ್ನು ಎಚ್‌ಎಸ್‌ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ತಿರುವಣ್ಣಾಮಲೈ ಮೂಲದ ಸತೀಯಾ ಅಲಿಯಾಸ್ ಸತ್ಯ ಎಂಬ ಆರೋಪಿ ಬಳಿ 11 ಮೊಬೈಲ್, 9 ಲ್ಯಾಪ್‌ಟಾಪ್ ಹಾಗೂ 2 ಟ್ಯಾಬ್ ಸೇರಿದಂತೆ ಸುಮಾರು ₹20 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಚ್‌ಎಸ್‌ಆರ್ ಲೇಔಟ್‌ನ ಮೊಬೈಲ್ ಅಂಗಡಿಯಲ್ಲಿ ನಡೆದ ಕಳ್ಳತನದ ತನಿಖೆ ವೇಳೆ ಪೊಲೀಸರು ತಾಂತ್ರಿಕ ಮಾಹಿತಿ …

Read More »

ಅಕ್ರಮ ಸಾಗಾಟ: 3.84 ಲಕ್ಷ ರೂ. ಮೌಲ್ಯದ ಅನ್ನಭಾಗ್ಯದ ಅಕ್ಕಿ ವಶ

ಕೋಟ: ಲಾರಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಲಕ್ಷಾಂತರ ರೂ. ಮೌಲ್ಯದ ಅಕ್ಕಿಯನ್ನು ಅಧಿಕಾರಿಗಳು ಹಾಗೂ ಪೊಲೀಸರು ಜು.28ರಂದು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ. ಕುಮಟಾದ ನಾಡ ಮಸ್ಕಿರಿಯ ಶ್ರೀ ಗಣೇಶ್ ರೈಸ್ ಇಂಡಸ್ಟ್ರೀಸ್ ಮಾಲಕ ನಾಗರಾಜ್ ನಾಯ್ಕ್ ಅಕ್ಕಿಯನ್ನು ಲಾರಿಗೆ ಲೋಡ್ ಮಾಡಿ, ಕೇರಳ ರಾಜ್ಯದ ಕಾಸರಗೋಡಿನ ಶಾಜಿ ಟ್ರೆಡಿಂಗ್ ಕಂಪೆನಿಗೆ ಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಲಾರಿ ಮಾಲಕ ಗಿರೀಶ್ …

Read More »

ವಿದ್ಯಾರ್ಥಿಗಳ ವಿರುದ್ಧದ FIR ವಾಪಸ್ ಪಡೆಯದಿದ್ದರೆ ಮತ್ತೆ ದೇಶವ್ಯಾಪಿ ಹೋರಾಟ: ಕೇಂದ್ರ ಸರ್ಕಾರಕ್ಕೆ CJP ಖಡಕ್ ಎಚ್ಚರಿಕೆ!

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಹಾಗೂ ಸಂಘಟಕರ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ತಕ್ಷಣ ಹಿಂಪಡೆಯಬೇಕು ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಇಲ್ಲವಾದರೆ ದೇಶಾದ್ಯಂತ ಮತ್ತೆ ಬೃಹತ್ ಪ್ರತಿಭಟನೆ ಆರಂಭಿಸುವುದಾಗಿ ಎಚ್ಚರಿಕೆ ನೀಡಿದೆ. ಕೇಂದ್ರ ಸಚಿವರೊಂದಿಗೆ ನಡೆದ ಸಭೆಯಲ್ಲಿ ಎಫ್‌ಐಆರ್ ಹಿಂಪಡೆಯುವ ಭರವಸೆ ನೀಡಲಾಗಿತ್ತು. ಆದರೆ ಹಲವು ರಾಜ್ಯಗಳಲ್ಲಿ ಇನ್ನೂ ವಿದ್ಯಾರ್ಥಿಗಳ ಬಂಧನ ಮತ್ತು ಕಿರುಕುಳ ಮುಂದುವರಿದಿದೆ …

Read More »

ಕಾರ್ಮಿಕರ ಮಾತಿನ ಚಕಮಕಿ ಕೊಲೆಯಲ್ಲಿ ಅಂತ್ಯ, ಆರೋಪಿ ವಶಕ್ಕೆ

ಚಿಕ್ಕಮಗಳೂರು(ಕಳಸ): ಕಾಫಿ ತೋಟದ ಲೇಬರ್ ಲೈನ್‌ನಲ್ಲಿ ವಾಸಿಸುತ್ತಿದ್ದ ಕಾರ್ಮಿಕರ ನಡುವೆ ಪ್ರಾರಂಭವಾದ ಮಾತಿನ ಚಕಮಕಿ ತೀವ್ರ ಸ್ವರೂಪ ಪಡೆದುಕೊಂಡು, ಕೊನೆಗೆ ಭೀಕರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜು.28ರ ಮಂಗಳವಾರ ಕಳಸ ತಾಲೂಕಿನ ಹಾರ್ಮಕ್ಕಿ ಸಮೀಪದ ಖಾಸಗಿ ಕಾಫಿ ಎಸ್ಟೇಟ್‌ನಲ್ಲಿ ನಡೆದಿದೆ.ಹಾವೇರಿ ಮೂಲದ ಭೀಮ (42) ಎಂಬವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು. ಅದೇ ವೇಳೆ, ರೊಚ್ಚಿಗೆದ್ದ ಆರೋಪಿ ಮತ್ತೊಬ್ಬ ಕಾರ್ಮಿಕನ ಮೇಲೆಯೂ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾನೆ ಎನ್ನಲಾಗಿದೆ. ಗಂಭೀರ ಗಾಯಗೊಂಡ …

Read More »

ಲವರ್ ಜೊತೆ ಮಾತನಾಡಲು ಅಡ್ಡಿ ; ಅಳುತ್ತಿದ್ದ 3 ವರ್ಷದ ಮಗನನ್ನೇ ಕೊಂದ ಪಾಪಿ ತಾಯಿ.!

ಉತ್ತರ ಪ್ರದೇಶದ ಮಥುರಾದಲ್ಲಿ ಮೂರು ವರ್ಷದ ಮಗುವನ್ನು ಕತ್ತು ಹಿಸುಕಿ ಕೊಂದ ಆರೋಪದಡಿ 32 ವರ್ಷದ ಮಹಿಳೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪ್ರಿಯಕರನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಮಗು ನಿರಂತರವಾಗಿ ಅಳುತ್ತಿದ್ದ ಕಾರಣ ಈ ಕೃತ್ಯ ಎಸಗಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ. ಆರಂಭದಲ್ಲಿ ಮಗುವಿನ ಸಾವು ಅಸ್ವಸ್ಥತೆಯಿಂದಾಗಿದೆ ಎಂದು ಕುಟುಂಬ ಭಾವಿಸಿ ಅಂತ್ಯಸಂಸ್ಕಾರ ನೆರವೇರಿಸಿತ್ತು. ಬಳಿಕ ಮಹಿಳೆ ಮತ್ತೊಬ್ಬ ವ್ಯಕ್ತಿಯೊಂದಿಗೆ ಫೋನ್‌ನಲ್ಲಿ ಮಗುವಿನ ಸಾವಿನ ಬಗ್ಗೆ ಮಾತನಾಡಿದ್ದನ್ನು ಪತಿ …

Read More »

ಮೀಸಲಾತಿ‌ ಕುರಿತು ಅವಹೇಳನ ಆರೋಪ: ಪಬ್ಲಿಕ್ ಟಿವಿಯ ಅರುಣ್ ಬಡಿಗೇರ್ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು

ಮೈಸೂರು: ಪಬ್ಲಿಕ್ ಟಿವಿಯ ಕಾರ್ಯಕ್ರಮದಲ್ಲಿ ಮೀಸಲಾತಿ ಹಾಗೂ ಅದರ ಫಲಾನುಭವಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಲಾಗಿದೆ ಎಂದು ಆರೋಪಿಸಿ, ನಿರೂಪಕ ಅರುಣ್ ಬಡಿಗೇರ್ ಹಾಗೂ ವಾಹಿನಿಯ ಆಡಳಿತ ಮಂಡಳಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಲಾಗಿದೆ. ಜುಲೈ 25ರಂದು ಪ್ರಸಾರವಾದ ಬಿಗ್ ಬುಲೆಟಿನ್ ಕಾರ್ಯಕ್ರಮದಲ್ಲಿ ಮೀಸಲಾತಿ ವ್ಯವಸ್ಥೆ, ಶಿಕ್ಷಕರು, ವೈದ್ಯರು ಹಾಗೂ ಇಂಜಿನಿಯರ್‌ಗಳ ಗುಣಮಟ್ಟದ ಕುರಿತು ನೀಡಿದ ಹೇಳಿಕೆಗಳು ಸಮಾಜದಲ್ಲಿ ಪೂರ್ವಾಗ್ರಹ ಮತ್ತು …

Read More »

ಹಾವೇರಿಯಲ್ಲಿ ಬೆಚ್ಚಿಬೀಳಿಸೋ ಘಟನೆ ; ಚಾಕೊಲೇಟ್, ಚಿಪ್ಸ್ ಆಸೆ ತೋರಿಸಿ ಮಕ್ಕಳ ಕಿಡ್ನ್ಯಾಪ್ ಗೆ ಯತ್ನ..!

ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ಅಪರಿಚಿತರು ಮಕ್ಕಳಿಗೆ ಚಾಕೊಲೇಟ್, ಚಿಪ್ಸ್ ಸೇರಿದಂತೆ ತಿನಿಸುಗಳ ಆಸೆ ತೋರಿಸಿ ತಮ್ಮೊಂದಿಗೆ ಕರೆದುಕೊಂಡು ಹೋಗಲು ಯತ್ನಿಸಿರುವ ಘಟನೆಗಳು ಆತಂಕ ಮೂಡಿಸಿವೆ. ವೈಭವಲಕ್ಷ್ಮಿ ಬಡಾವಣೆ ಹಾಗೂ ಛತ್ರ ರಸ್ತೆ ಸಮೀಪ ನಡೆದ ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೈಕ್‌ನಲ್ಲಿ ಬಂದ ಅಪರಿಚಿತರು ಮಕ್ಕಳನ್ನು ಮಾತಿಗೆ ಸೆಳೆದು ತಿನಿಸು ನೀಡಲು ಯತ್ನಿಸಿದ್ದು, ಮಕ್ಕಳು ಸಮಯಪ್ರಜ್ಞೆಯಿಂದ ಮನೆಗೆ ಓಡಿ ಹೋಗಿ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಸಂಭವಿಸಬಹುದಾದ ಅನಾಹುತ …

Read More »

ಕೌಟುಂಬಿಕ ಕಲಹದ ಹೆಸರಿನಲ್ಲಿ ಖಾಕಿ ದೌರ್ಜನ್ಯ: ರೌಡಿಗಳ ಜೊತೆ ಮನಗೆ ನುಗ್ಗಿ ರಾಬರಿ ನಡೆಸಿದ್ರಾ ವರ್ತೂರು ಪೊಲೀಸರು..!

ಬೆಂಗಳೂರು ವರ್ತೂರು ಪೊಲೀಸ್ ಠಾಣೆಯ ಸಿಬ್ಬಂದಿ ವಿರುದ್ಧ ಕೌಟುಂಬಿಕ ಕಲಹದ ಪ್ರಕರಣದ ನೆಪದಲ್ಲಿ ಮನೆಗೆ ನುಗ್ಗಿ ಚಿನ್ನಾಭರಣ, ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಉಮೇರಾ ಜಾಫರ್ ಅವರು ನಗರ ಪೊಲೀಸ್ ಆಯುಕ್ತರು ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ದೂರಿನ ಪ್ರಕಾರ, ಪಿಎಸ್‌ಐ ಹಾಗೂ ಪೊಲೀಸ್ ಸಿಬ್ಬಂದಿ, ಮಹಿಳೆಯ ಕುಟುಂಬದ ಸದಸ್ಯರೊಂದಿಗೆ ಜುನೈದ್ ಅಹಮದ್ ಅವರ ಮನೆಗೆ …

Read More »