Breaking News

BigTv News

ರಾಜ್ಯದ ಹಲವಾರು ಲೇಖಕರು, ಸಾಹಿತಿಗಳು ಹಾಗೂ ಹೋರಾಟಗಾರರಿಗೆ ಬೆದರಿಕೆ ಪತ್ರ…

ಬೆಂಗಳೂರು: ರಾಜ್ಯದ ಹಲವಾರು ಲೇಖಕರು, ಸಾಹಿತಿಗಳು ಹಾಗೂ ಹೋರಾಟಗಾರರಿಗೆ ಬೆದರಿಕೆ ಪತ್ರಗಳು ಬರುತ್ತಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ತಮ್ಮನ್ನು ಭೇಟಿ ಮಾಡಿದ ಹಿರಿಯ ಸಾಹಿತಿಗಳು, ಲೇಖಕರು ಮತ್ತು ಹೋರಾಟಗಾರರ ನಿಯೋಗಕ್ಕೆ ಈ ಭರವಸೆ ಕೊಟ್ಟಿದ್ದಾರೆ. ಹಿರಿಯ ಸಾಹಿತಿ ಡಾ.ಕೆ. ಮರುಳಸಿದ್ದಪ್ಪ ಅವರು ಮಾತನಾಡಿ, ಹಲವಾರು ಸಾಹಿತಿಗಳಿಗೆ ಕಳೆದ ಒಂದು ವರ್ಷಕ್ಕೂ ಹೆಚ್ಚು ಅವಧಿಯಿಂದ ನಿರಂತರವಾಗಿ ಜೀವ ಬೆದರಿಕೆ ಪತ್ರಗಳು ಬರುತ್ತಿವೆ. ಸಾಹಿತಿಗಳು …

Read More »

ಚಂದ್ರಯಾನ 3 ಯಶಸ್ಸಿನಲ್ಲಿ ಬೆಳಗಾವಿ ಕೂಡ ಪ್ರಮುಖ ಪಾತ್ರ….

ಬೆಳಗಾವಿ: ಚಂದ್ರಯಾನ 3 ಯಶಸ್ಸಿನಲ್ಲಿ ಬೆಳಗಾವಿ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದು, ಸರ್ವೋ ಕಂಟ್ರೋಲ್ಸ್ ಏರೋಸ್ಪೇಸ್ ಆಂಡ್ ಟೆಕ್ನಾಲಜಿ ಕಂಪನಿಯು ವಿಕ್ರಮ್​ ಲ್ಯಾಂಡರ್​ಗೆ ಬಿಡಿಭಾಗಗಳನ್ನು ಪೂರೈಕೆ ಮಾಡುವ ಮೂಲಕ ಜಿಲ್ಲೆಯ ಕೀರ್ತಿಯನ್ನು ಚಂದ್ರಲೋಕಕ್ಕೂ ಹರಡುವಂತೆ ಮಾಡಿದೆ. ಇಡೀ ವಿಶ್ವವೇ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ವಿಕ್ರಮ್​ ಲ್ಯಾಂಡರ್ ಸುರಕ್ಷಿತವಾಗಿ ಚಂದ್ರನ ಅಂಗಳಕ್ಕೆ ಇಳಿಯುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹೊಸ ಮೈಲಿಗಲ್ಲು ನಿರ್ಮಿಸಿದೆ. ಇನ್ನು ಚಂದ್ರಯಾನ …

Read More »

ಬೈಕ್​ನಲ್ಲಿ ಬಂದ ಯುವಕನೋರ್ವ ಯುವತಿಯೋರ್ವಳನ್ನು ಚೂರಿಯಿಂದ ಇರಿದು ಕೊಲೆ…

ಮಂಗಳೂರು: ಬೈಕ್​ನಲ್ಲಿ ಬಂದ ಯುವಕನೋರ್ವ ಯುವತಿಯೋರ್ವಳನ್ನು ಚೂರಿಯಿಂದ ಇರಿದು ಕೊಲೆಗೈದಿರುವ ಘಟನೆ ಪುತ್ತೂರು ಮಹಿಳಾ ಪೊಲೀಸ್ ಠಾಣಾ ಬಳಿ ಇಂದು ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಗೌರಿ (18) ಕೊಲೆಗೀಡಾದ ಯುವತಿ. ಕೃತ್ಯ ಎಸಗಿದ ಆರೋಪಿ ಯುವಕನನ್ನು ಪೊಲೀಸರು ಬಂಧಿಸಿದ್ದು, ಈತನನ್ನು ಪದ್ಮರಾಜ್​ ಎಂದು ಗುರುತಿಸಲಾಗಿದೆ. ಗೌರಿ ಪುತ್ತೂರಿನ ಬಟ್ಟೆ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ಪದ್ಮರಾಜ್​ ಮತ್ತು ಗೌರಿ ಪರಿಚಯದವರಾಗಿದ್ದರು. ಅಲ್ಲದೇ ಈ …

Read More »

ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ಮದುವೆ ಸಂಭ್ರಮ….

ಕೊಡಗು: ಕನ್ನಡ ಚಿತ್ರರಂಗದಲ್ಲಿ ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ಮದುವೆ ಸಂಭ್ರಮ ಮನೆ ಮಾಡಿದೆ. ಪ್ರೀತಿಸಿ, ಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳ ಸಾಲಿಗೆ ಹೊಸದಾಗಿ ಹರ್ಷಿಕಾ ಭುವನ್ ಸೇರಿದ್ದಾರೆ. ಹೌದು, ಇಂದು ಕೊಡವ ಪದ್ಧತಿಯಂತೆ ಶಾಸ್ತ್ರೋಕ್ತವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಗುರುಹಿರಿಯರ, ಕುಟುಂಬಸ್ಥರ, ಆಪ್ತರ ಸಮ್ಮುಖದಲ್ಲಿ ವಿವಾಹ ಶಾಸ್ತ್ರಗಳು ನೆರವೇರಿತು. ಕೊಡಗಿನ ವಿರಾಜ್ ಪೇಟೆಯಲ್ಲಿ ಅಮ್ಮತಿ ಕೊಡವ ಸಮಾಜದಲ್ಲಿ ಮದುವೆ ಜರುಗಿದೆ. ಕೊಡವ …

Read More »

ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ರಾಶಿ ಹಾಕಿರುವವರ ಮೇಲೆ ಮಹಾನಗರ ಪಾಲಿಕೆ ದಂಡ….

ಮಂಗಳೂರು(ದಕ್ಷಿಣ ಕನ್ನಡ): ನಗರದ ಮಣ್ಣಗುಡ್ಡ ಪ್ರದೇಶದಲ್ಲಿ ಫುಟ್​​​ ಪಾತ್​ನಲ್ಲಿ ಕಟ್ಟಡ ತ್ಯಾಜ್ಯವನ್ನು ಎಸೆದ ಪ್ರಕರಣದಲ್ಲಿ ಮಂಗಳೂರು ಮಹಾನಗರ ಪಾಲಿಕೆ ದಂಡ ವಿಧಿಸಿದೆ. ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ರಾಶಿ ಹಾಕಿರುವವರ ಮೇಲೆ ಘನತ್ಯಾಜ್ಯ ನಿರ್ವಹಣೆ ಉಪವಿಧಿ ಉಲ್ಲಂಘನೆ ಪ್ರಕರಣದಡಿ 4,000 ರೂ.ಗಳ ದಂಡ ವಿಧಿಸಿ, ಮೊತ್ತ ವಸೂಲಿ ಮಾಡಿದೆ. ಪ್ರಶಾಂತ್ ಶೇಟ್ ಎಂಬವರಿಂದ ಕಟ್ಟಡ ತ್ಯಾಜ್ಯವನ್ನು ಫುಟ್ ಪಾತ್​ನಲ್ಲಿ ಹಾಕಿದ ಕಾರಣ ಸ್ವಚ್ಛತಾ ದರ ಎಂದು ಮಂಗಳೂರು ಮಹಾನಗರ ಪಾಲಿಕೆ ರೂ. …

Read More »

ನ್ಯಾಯಾಲಯದ ನ್ಯಾಯಾಧೀಶರಾದ ಉಂಡಿ ಮಂಜುಳ ಶಿವಪ್ಪ ಅವರು ಗ್ರಾಮದಿಂದ ಹೊರಗಡೆ ಇರಿಸಲಾಗಿದ್ದ ಶಿಶು ಮತ್ತು ಬಾಣಂತಿಯನ್ನು ರಕ್ಷಣೆ…

ತುಮಕೂರು: ಮೂಢನಂಬಿಕೆ ಪಾಲಿಸಲು ಬಾಣಂತಿ ಹಾಗೂ ಶಿಶುವನ್ನು ಊರಿನಿಂದ ಹೊರಗಿಟ್ಟಾಗ ಜಿಲ್ಲೆಯ ಗೊಲ್ಲರಹಟ್ಟಿ ಸಮೀಪ ಮಗು ಮೃತಪಟ್ಟು ಬಾಣಂತಿ ನರಳಾಡಿದ ಘಟನೆ ಮಾಸುವ ಮುನ್ನವೇ ಮತ್ತೊಂದು ಇದೇ ರೀತಿಯ ಪ್ರಕರಣ ಬೆಳಕಿಗೆ ಬಂದಿದೆ. ಮತ್ತೊಬ್ಬ ಬಾಣಂತಿಯನ್ನು ಗ್ರಾಮದಿಂದ ಹೊರಗಿಡಲಾಗಿದ್ದು, ನ್ಯಾಯಾಧೀಶರು ಮಧ್ಯಪ್ರವೇಶಿಸಿ ಮೌಢ್ಯಾಚರಣೆಗೆ ತಡೆಯೊಡ್ಡಿದ ಘಟನೆ ಗುಬ್ಬಿ ತಾಲೂಕಿನ ವರದೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ನಡೆದಿದೆ. ಬಾಣಂತಿಯನ್ನು ಹೊರಗಿಟ್ಟಿರುವ ಬಗ್ಗೆ ಬುಧವಾರ ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಗುಬ್ಬಿ ನ್ಯಾಯಾಲಯದ …

Read More »

ಮೀಸಲು ಅರಣ್ಯದೊಳಗೆ ಪರವಾನಗಿ ಪಡೆದ ಬಂದೂಕಿನಿಂದ ಕಡವೆ ಬೇಟೆ…

ಬೆಳ್ತಂಗಡಿ (ದಕ್ಷಿಣ ಕನ್ನಡ) : ಮೀಸಲು ಅರಣ್ಯದೊಳಗೆ ಪರವಾನಗಿ ಪಡೆದ ಬಂದೂಕಿನಿಂದ ಕಡವೆ ಬೇಟೆಯಾಡಿ ಸಾಗಿಸುವ ವೇಳೆ ಉಪ್ಪಿನಂಗಡಿ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದು, ಒಬ್ಬ ಆರೋಪಿ ಪರಾರಿಯಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ದಡಂತಮಲೆ ಮೀಸಲು ಅರಣ್ಯದಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಸಂಕೇಶ ನಿವಾಸಿ ಜಾರಪ್ಪ ಗೌಡರ ಮಗ ಎಸ್.ಜೆ ಸಂದೇಶ್(37), ಮಣಿಯೆರು ನಿವಾಸಿ ಸುಬ್ಬಣ್ಣ …

Read More »

ಹುಬ್ಬಳ್ಳಿಯ ನಗರದ ಮಾರುಕಟ್ಟೆಯಲ್ಲಿ ವ್ಯಾಪಾರ ಜೋರು……

ನಾಳೆ ವರಮಾಲಕ್ಷ್ಮಿ ಹಬ್ಬ ಹಿನ್ನೆಲೆ ಹುಬ್ಬಳ್ಳಿಯ ನಗರದ ಮಾರುಕಟ್ಟೆಯಲ್ಲಿ ವ್ಯಾಪಾರ ಜೋರಾಗಿದೆ. ಜನ ಮಾರುಕಟ್ಟೆಯಲ್ಲಿ ಖರೀದಿಯಲ್ಲಿ ಮುಗಿಬಿದ್ದಿದ್ದಾರೆ. ಹೂವು, ಹಣ್ಣು ಬಾಳೆ ದಿಂಡು ಖರೀದಿ ಜೋರಾಗಿದೆ. ಶ್ರಾವಣ ಮಾಸದಲ್ಲಿ ದೊಡ್ಡ ಹಬ್ಬವೆಂದ್ರೆ ಅದು ವರಮಹಾಲಕ್ಷ್ಮಿ ಹಬ್ಬ. ಎಲ್ಲವೂ ದುಬಾರಿಯಾದರೂ ಖರೀದಿ ಜೋರಾಗಿದೆ, ಇನ್ನೂ ಕೆಲವರು ತಮ್ಮ ಅವಶ್ಯಕತೆಗೆ ತಕ್ಕಂತೆ ಖರೀದಿಸ್ಥಿದಾರೆ. ವ್ಯಾಪಾರಿಗಳಂತು ಭರ್ಜರಿ ವ್ಯಾಪಾರ ಮಾಡ್ತಿದಾರೆ. ಈ ಸಲವು ಸಂಭ್ರಮದ ವರಮಹಾಲಕ್ಷ್ಮಿ ಹಬ್ಬಕ್ಕೆ ಸಿದ್ದರಾಗಿದ್ದಾರೆ..

Read More »

ನಾಳೆ ವರಮಹಾಲಕ್ಷ್ಮಿ ಹಬ್ಬ: ಭರ್ಜರಿ ವ್ಯಾಪಾರ

ಗದಗ: ನಾಳೆ ವರಮಹಾಲಕ್ಷ್ಮಿ ಹಬ್ಬ ಹಿನ್ನೆಲೆ ಗದಗ ನಗರದ ಮಾರುಕಟ್ಟೆಯಲ್ಲಿ ಜನರಿಂದ ತುಂಬಿ ತುಳುಕ್ಕುತ್ತಿದೆ. ಬಾಳೇಹಣ್ಣು, ಹೂವಿನ ದರ ಗಗನಕ್ಕೇರಿದೆ. ದುಬಾರಿಯಾದ್ರೂ ಪರವಾಗಿಲ್ಲ‌ ಹಬ್ಬ ಆಚರಣೆ ಮಾಡಲೇಬೇಕಲ್ಲ, ಅಂತಿರೋ ಜನರಿಂದ ಹೂ, ಹಣ್ಣು, ಬಾಳೆ ದಿಂಡು ಖರೀದಿಗೆ ಮುಗಿಬಿದ್ದಿದ್ದಾರೆ. ಇನ್ನೂ ಕೆಲವರು ಅವಶ್ಯಕತೆಗೆ ತಕ್ಕಷ್ಟೇ ಖರೀದಿ ಮಾಡ್ತಿದ್ದಾರೆ. ಭರ್ಜರಿ ವ್ಯಾಪಾರ ಮಾಡ್ತಿರೋ ವ್ಯಾಪಾರಿಗಳು ಫುಲ್‌ ಖುಷಿಯಾಗಿದ್ದಾರೆ. ಆ ಮೂಲಕ ಸಂಭ್ರಮದ ವರಮಹಾಲಕ್ಷ್ಮಿ‌ ಹಬ್ಬ ಆಚರಣೆಗೆ ಸಿಧ್ಧರಾಗಿದ್ದಾರೆ.

Read More »

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ಅವಳಿ ನಗರದ ಶಾಲಾ ಕಾಲೇಜುಗಳಿಗೆ ಭೇಟಿ…

ಹುಬ್ಬಳ್ಳಿ: ಏಕಾಏಕಿಯಾಗಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ಅವಳಿ ನಗರದ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿದ್ದಾರೆ. ಅಷ್ಟಕ್ಕೂ ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ್ದು …. ಡೈಲಿ ಕೆಲಸದ ನಡುವೆ, ಸ್ವಲ್ಪ ಟೈಂ ಮಾಡಕೊಂಡ ನಮ್ಮ ಹುಬ್ಬಳ್ಳಿ- ಧಾರವಾಡ ಪೊಲೀಸರು, ಕಮಿಷನರೇಟ್ ಘಟಕದ ವ್ಯಾಪ್ತಿಯಲ್ಲಿ ಬರುವ, ಶಾಲೆ ಕಾಲೇಜುಗಳಿಗೆ ಆಯಾ ಠಾಣೆಯ ಇನ್ಸ್‌ಪೆಕ್ಟರ್ ನೇತೃತ್ವದ ತಂಡಗಳು ಭೇಟಿ ನೀಡಿ ವಿದ್ಯಾರ್ಥಿಗಳಿಗೆ ‘ಸೈಬರ್ ಅಪರಾಧ, ಸಾಮಾಜಿಕ ಜಾಲತಾಣ ಸುರಕ್ಷತೆ, ಡ್ರಗ್ಸ್ ವ್ಯಸನ …

Read More »