Breaking News

BigTv News

ಬರ್ಬರ ಹತ್ಯೆ ಹೆಂಡ್ತಿಯ ಕುತ್ತಿಗೆ ಕಟ್

ವಿಜಯಪುರ: ಅನೈತಿಕ ಸಂಬಂಧದ ಸಂಶಯ ಹಿನ್ನೆಲೆ ಹೆಂಡತಿಯನ್ನು ಬರ್ಬರವಾಗಿಗಂಡನೋರ್ವ ಹತ್ಯೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬಸನಾಳ ಲಂಗೋಟಿ ತೋಟದ ವಸ್ತಿಯಲ್ಲಿ ನಡೆದಿದೆ. ಶಾಂತಾಬಾಯಿ ಲಂಗೋಟಿ ಹತ್ಯೆಯಾಗಿರುವ ದುರ್ದೈವಿ. ಇನ್ನು ಬಸಪ್ಪ ಲಂಗೋಟಿ ಹತ್ಯೆಗೈದಿರುವ ಪಾಪಿ ಗಂಡ, ಹೆಂಡತಿ ಶಾಂತಾಬಾಯಿ ಅನೈತಿಕ ಸಂಬಂಧದ ಸಂಶಯ ವ್ಯಕ್ತಪಡಿಸಿ, ಕುತ್ತಿಗೆ ಕಬ್ಬಿಣದ ರಾಡ್‌ನಿಂದ ಹೊಡೆದ ಕುತ್ತಿಗೆ ಕಟ್ ಮಾಡಿದ್ದಾನೆ. ಇದರಿಂದ ಹೆಂಡತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಈ ಕುರಿತು ಹೊರ್ತಿ ಪೊಲೀಸ ಠಾಣೆಯಲ್ಲಿ …

Read More »

₹1,000 ಕೋಟಿ ದಾಟಿದ ʼಶಕ್ತಿʼ ಟಿಕೆಟ್‌ ಮೌಲ್ಯ

ಬೆಂಗಳೂರು: ಕಾಂಗ್ರೆಸ್‌ ಗ್ಯಾರಂಟಿ ‘ಶಕ್ತಿ’ ಯೋಜನೆಯಡಿ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಮಹಿಳೆಯರು ಈವರೆಗೆ ಸಂಚರಿಸಿರುವ ಟಿಕೆಟ್‌ ಮೌಲ್ಯ ₹1,000 ಕೋಟಿ ದಾಟಿದೆ. ಜೊತೆಗೆ ಆರ್ಥಿಕ ಇಲಾಖೆಯು ಸಾರಿಗೆ ನಿಗಮಗಳು ನಷ್ಟಕ್ಕೆ ಸಿಲುಕದಂತೆ ತಡೆಯಲು ಪ್ರತಿ ತಿಂಗಳು ಮರು ಪಾವತಿಗೆ ಸಹಮತ ನೀಡಿದೆ. ಜೂನ್‌ 11ರಂದು ಶಕ್ತಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಅಲ್ಲಿಂದ ಆ.20ರವರೆಗೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ, ಕೆಕೆಆರ್‌ಟಿಸಿ ನಿಗಮಗಳ ಬಸ್‌ಗಳಲ್ಲಿ 78.21 ಕೋಟಿ ಜನರು ಪ್ರಯಾಣಿಸಿದ್ದು, ಅದರಲ್ಲಿ 43.03 …

Read More »

ಪ್ರಧಾನಿ ಮೋದಿಗೆ ರಾಖಿ ಕಟ್ಟಲು ಪಾಕ್‌ನಿಂದ ಬರ್ತಾರೆ ಸಹೋದರಿ!

ನವದೆಹಲಿ: ರಕ್ಷಾ ಬಂಧನ ಹಬ್ಬದಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಖಿ ಕಟ್ಟಲು ಪಾಕಿಸ್ತಾನದಿಂದ ಮಹಿಳೆಯೊಬ್ಬರು ದೆಹಲಿಗೆ ಆಗಮಿಸುತ್ತಿದ್ದಾರೆ. ಭಾರತ ಮೂಲದ ಮೋದಿ ಪಾಕಿಸ್ತಾನಿ ಸಹೋದರಿ ಕಮರ್ ಮೊಹ್ಸಿನ್ ಶೇಖ್ ರಾಖಿ ಹಬ್ಬ ಆಚರಿಸಲು ದೆಹಲಿಗೆ ಆಗಮಿಸಲಿದ್ದಾರೆ. ಪ್ರತಿವರ್ಷ ಪ್ರಧಾನಿ ಮೋದಿ ಅವರಿಗೆ ರಾಖಿ ಕಳುಹಿಸುತ್ತಿದ್ದರಂತೆ. ಆದರೆ ಕೋವಿಡ್ ಇದ್ದ ಕಾರಣ ಕಳೆದ 2 ವರ್ಷಗಳಿಂದ ಅವರು ಭಾರತಕ್ಕೆ ಆಗಮಿಸಿರಲಿಲ್ಲ. ಹೀಗಾಗಿ ಈ ಬಾರಿ ದೆಹಲಿಗೆ ಆಗಮಿಸಿ ಪ್ರಧಾನಿ ಮೋದಿ …

Read More »

ರಕ್ತದಲ್ಲಿ ಬರೆದುಕೊಡ್ತೀನಿ, ಬಿಜೆಪಿ ಬಿಡಲ್ಲ

ಕೊಪ್ಪಳ ಬಿಜೆಪಿ ತೊರೆಯುವದಾಗಿ ವದಂತಿ ಹಬ್ಬಿದ್ದು, ಪಕ್ಷ ತೊರೆಯುವ ಪ್ರಶ್ನೆಯೆ ಇಲ್ಲ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಸ್ಪಷ್ಟಪಡಿಸಿದ್ದಾರೆ.ಬೇಕಾದರೆ ರಕ್ತದಲ್ಲಿ ಬರೆದು ಕೊಡ್ತೀನಿ, ಪಕ್ಷ ಬಿಡಲ್ಲ ಎಂದಿದ್ದಾರೆ. ಈ ಬಾರಿಯೂ ಕೊಪ್ಪಳದಿಂದ ಲೋಕಸಭೆಗೆ ಸ್ಪರ್ಧೆ ಮಾಡುವದಾಗಿ ತಿಳಿಸಿದ ಅವರು, ಪಕ್ಷ ಟಿಕೇಟ್ ಕೊಡದೆ ಹೋದರು, ಪಕ್ಷ ಸೂಚಿಸಿದ ಅಭ್ಯರ್ಥಿ ಪರ ದುಡಿಯುವದಾಗಿ ಸಂಗಣ್ಣ ಕರಡಿ ತಿಳಿಸಿದ್ದಾರೆ

Read More »

ಹುಟ್ಟಿದ ಕೆಲವೇ ಕ್ಷಣಗಳಲ್ಲಿ ನಡೆದಾಡಿದ ನವಜಾತ ಶಿಶು..!

ನವಜಾತ ಮಗು ನರ್ಸ್ ಸಹಾಯದಿಂದ ಒಂದು ಕಾಲನ್ನು ಮೇಲಕ್ಕೆತ್ತಿ ನಂತರ ಮತ್ತೊಂದನ್ನು ಮೇಲೆತ್ತುತ್ತಾ ನಡೆದಾಡಿದಿದೆ. ಹೌದು ಹುಟ್ಟಿದ ಕೆಲವೇ ಕ್ಷಣಗಳಲ್ಲಿ ಮಗುವೊಂದು ನಡೆದಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಬ್ರೆಜಿಲ್‍ನ ನಿವಾಸಿಯಾದ ಅರ್ಲೆಟ್ ಅರೆಂಟಿಸ್ ಎಂಬವರು ಈ ವಿಡಿಯೋವನ್ನ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ. ಆದ್ರೆ ಈ ವಿಡಿಯೋದಲ್ಲಿ ಮಗು ನಡೆದಿರುವುದು ದೊಡ್ಡ ಪವಾಡವೇನಲ್ಲ ಎಂದು ಹೇಳಲಾಗಿದೆ. ರೋಚೆಸ್ಟರ್ ಮೆಡಿಕಲ್ ಸೆಂಟರ್ ವಿಶ್ವವಿದ್ಯಾಲಯದ ಪ್ರಕಾರ, ಈ ನಡಿಗೆ ಪವಾಡವೇನಲ್ಲ. …

Read More »

ಚಂದ್ರನ ಚಿತ್ರಗಳ ಸರಣಿಯನ್ನು ಹಂಚಿಕೊಂಡ ಚಂದ್ರಯಾನ-3 ನೌಕೆಯ ‘ವಿಕ್ರಮ್​’…..

ಬೆಂಗಳೂರು: ಭಾರತ ದೇಶ ಸೇರಿದಂತೆ ಪ್ರಪಂಚವೇ ತುದಿಗಾಲ ಮೇಲೆ ನಿಂತು ಕಾಯುತ್ತಿರುವ ಚಂದ್ರಯಾನ-3 ನೌಕೆಯ ‘ವಿಕ್ರಮ್​’ ಲ್ಯಾಂಡರ್ ​ಹಜಾರ್ಡ್ ಡಿಟೆಕ್ಷನ್ ಮತ್ತು ಅವಾಯಿಡೆನ್ಸ್ ಕ್ಯಾಮೆರಾದಿಂದ ಚಂದ್ರನ ದೂರದ ಪ್ರದೇಶದ ಚಿತ್ರಗಳನ್ನು ಸೆರೆಹಿಡಿದಿದೆ. ‘ವಿಕ್ರಮ್​’​ನಿಂದ ಇಸ್ರೋ ಸಂಸ್ಥೆಗೆ ಬಂದು ತಲುಪಿರುವ ಚಂದ್ರನ ಈ ಛಾಯಾಚಿತ್ರಗಳು ವಿಜ್ಞಾನಿಗಳನ್ನು ಬೆರಗುಗೊಳಿಸಿವೆ. ಚಂದ್ರನ ಪರಿಶೋಧನೆಯತ್ತ ಮಹತ್ವದ ದಾಪುಗಾಲು ಇರಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ವಿಕ್ರಮ್ ಲ್ಯಾಂಡರ್‌, ಗಮನಸೆಳೆಯುವಂತಹ ಹೊಸದಾಗಿ …

Read More »

ಭಾರತದ ಯುವ ಸ್ಟಾರ್​ ಬ್ಯಾಟರ್​ ನಿತೀಶ್​ ರಾಣ ಉತ್ತರ ಪ್ರದೇಶಕ್ಕಾಗಿ ದೇಶೀಯ ಕ್ರಿಕೆಟ್​ ಆಡುವುದಾಗಿ ಘೋಷಿಸಿಕೊಂಡಿದ್ದಾರೆ..

ನವದೆಹಲಿ: ಭಾರತದ ಯುವ ಸ್ಟಾರ್​ ಬ್ಯಾಟರ್​ ನಿತೀಶ್​ ರಾಣ ತಮ್ಮ ರಾಜ್ಯವನ್ನು ಬಿಟ್ಟು ಪಕ್ಕದ ಉತ್ತರ ಪ್ರದೇಶಕ್ಕಾಗಿ 2023 -24ರ ದೇಶೀಯ ಕ್ರಿಕೆಟ್​ ಆಡುವುದಾಗಿ ಘೋಷಿಸಿಕೊಂಡಿದ್ದಾರೆ. ಈ ವರ್ಷದ ಐಪಿಎಲ್​ನಲ್ಲಿ ಶ್ರೇಯಸ್​ ಅಯ್ಯರ್​ ಅವರ ಅನುಪಸ್ಥಿತಿಯಲ್ಲಿ ನಿತೀಶ್​ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡವನ್ನು ಮುನ್ನಡೆಸಿದ್ದರು. ಉತ್ತರ ಪ್ರದೇಶದ ತಂಡದಲ್ಲಿ ಕೆಕೆಆರ್​ನ ಸಹ ಆಟಗಾರ ಎಡಗೈ ಬ್ಯಾಟರ್​ ರಿಂಕು ಸಿಂಗ್​ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ವರ್ಷದಿಂದ ಉತ್ತರ ಪ್ರದೇಶದಲ್ಲಿ ಆರಂಭವಾಗುತ್ತಿರುವ ಯುಪಿಟಿ20 …

Read More »

ಬಾಲಿವುಡ್​ ಬೆಡಗಿ ಕತ್ರಿನಾ ಕೈಫ್​ ಟೈಗರ್​ 3 ಚಿತ್ರೀಕರಣದಲ್ಲಿ ಬ್ಯುಸಿ…

ಮುಂಬೈ: ಬಾಲಿವುಡ್​ ಬೆಡಗಿ ಕತ್ರಿನಾ ಕೈಫ್​ ಸದ್ಯ ತಮ್ಮ ಮುಂಬರುವ ಬಹು ನಿರೀಕ್ಷಿತ ಚಿತ್ರ ‘ಟೈಗರ್​ 3’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ನಟ ಸಲ್ಮಾನ್​ ಜೊತೆಗೆ ನಟಿಸುತ್ತಿರುವ ಈ ಚಿತ್ರ ಆ್ಯಕ್ಷನ್​ ಥ್ರಿಲ್ಲರ್​ ಆಗಿದ್ದು, ಈ ವರ್ಷ ಬಿಡುಗಡೆ ಆಗಲು ಸಜ್ಜಾಗಿದೆ. ಈ ಸಿನಿಮಾದ ಹಾಡಿನ ಶೂಟಿಂಗ್​ನಲ್ಲಿ ನಟಿ ಹೆಜ್ಜೆ ಹಾಕಿದ್ದು, ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಕೊರಿಯಾಗ್ರಾಫ್​ ಹೇಳಿಕೊಟ್ಟಂತೆ ನಟಿ ಕತ್ರಿನಾ ಕೈಫ್​ ಹೆಜ್ಜೆ ಹಾಕಲು …

Read More »

ಸರ್ಕಾರಿ ಅಧಿಕಾರಿಯೊಬ್ಬರು ತನ್ನ ಮೃತ ಸ್ನೇಹಿತನ ಅಪ್ರಾಪ್ತ ಪುತ್ರಿಯ ಮೇಲೆ ಅತ್ಯಾಚಾರ…..

ನವದೆಹಲಿ: ದೆಹಲಿ ಸರ್ಕಾರಿ ಅಧಿಕಾರಿಯೊಬ್ಬರು ತನ್ನ ಮೃತ ಸ್ನೇಹಿತನ ಅಪ್ರಾಪ್ತ ಪುತ್ರಿಯ ಮೇಲೆ ಹಲವು ತಿಂಗಳುಗಳ ಕಾಲ ಅತ್ಯಾಚಾರವೆಸಗಿರುವ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. 2020 ಮತ್ತು 2021ರ ನಡುವೆ ಅತ್ಯಾಚಾರದ ಪ್ರಕರಣ ನಡೆದಿದೆ ಎನ್ನಾಗಿದೆ. ಬುರಾರಿ ಪೊಲೀಸ್ ಠಾಣೆಯಲ್ಲಿ ಅಧಿಕಾರಿಯ ವಿರುದ್ಧ ಭಾರತೀಯ ದಂಡ ಸಂಹಿತೆ (IPC) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಅಡಿ ಅಧಿಕಾರಿಯ ವಿರುದ್ಧ ಆಗಸ್ಟ್ …

Read More »

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ತಮಿಳುನಾಡು ಮನವಿಯನ್ನು ಆಲಿಸಲು ಇಂದೇ ವಿಚಾರಣಾ ಪೀಠವನ್ನು ರಚಿಸುವುದಾಗಿ ಸುಪ್ರೀಂಕೋರ್ಟ್​ ಹೇಳಿಕೆ….

ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ತಮಿಳುನಾಡು ಮನವಿಯನ್ನು ಆಲಿಸಲು ಇಂದೇ ವಿಚಾರಣಾ ಪೀಠವನ್ನು ರಚಿಸುವುದಾಗಿ ಸುಪ್ರೀಂಕೋರ್ಟ್​ ಹೇಳಿದೆ. ಆಗಸ್ಟ್​ ತಿಂಗಳ ನದಿ ನೀರಿನ ಪಾಲನ್ನು ಬಿಡುಗಡೆ ಮಾಡುವಲ್ಲಿ ಕರ್ನಾಟಕ ವಿಳಂಬ ಮಾಡಿದ ಹಿನ್ನೆಲೆ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್​ ಮೆಟ್ಟಿಲೇರಿತ್ತು. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್​ ಅವರ ಪೀಠದ ಮುಂದೆ ತಮಿಳುನಾಡು ಪರ ವಾದ ಮಂಡಿಸಿದ ಮಾಜಿ ಅಟಾರ್ನಿ ಜನರಲ್​, ಹಿರಿಯ ವಕೀಲ ಮುಕುಲ್ ರೋಹಟಗಿ ಮತ್ತು ಹೆಚ್ಚುವರಿ …

Read More »