ಮಂಡ್ಯ: ಜಿಲ್ಲೆಯಲ್ಲಿ ಒಣಗುತ್ತಿರುವಬೆಳೆಗಳನ್ನು ಉಳಿಸಲುಗೊರೂರು ಜಲಾಶಯದಿಂದ ನೀರು ಹರಿಸಿ ಸಂಕಷ್ಠದಲ್ಲಿರುವ ರೈತರನ್ನು ಕಾಪಾಡಬೇಕು ಎಂದು ಮಾಜಿಶಾಸಕ ಕೆ.ಬಿ.ಚಂದ್ರಶೇಖರ್ ಒತ್ತಾಯಿಸಿದ್ದಾರೆ.ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಂದ್ರಶೇಖರ್ ಕೃಷ್ಣರಾಜಸಾಗರ ಅಣೆಕಟ್ಟೆಯಿಂದ ನೀರನ್ನು ಹರಿಸಿದ ಮಾದರಿಯಲ್ಲಿಯೇ ಗೊರೂರು ಜಲಾಶಯದಿಂದ ನೀರನ್ನು ಹರಿಸಿ ರೈತರಿಗೆ ನೆರವಾಗಬೇಕು ಎಂದು ಆಗ್ರಹಿಸಿದರು.ಮಾಜಿಶಾಸಕ ಕೆ.ಬಿ.ಚಂದ್ರಶೇಖರ್ ಕೆ.ಆರ್.ಪೇಟೆ ಪಟ್ಟಣದ ಪುರಸಭೆಯ ಕುಡಿಯುವ ನೀರಿನ ಯೋಜನೆ ಹಾಗೂ ಒಳಚರಂಡಿ ಯೋಜನೆ ಸಂಪೂರ್ಣಗೊಳ್ಳಲು 50ಕೋಟಿ ರೂ ವಿಶೇಷವಾದ ಅನುದಾನ ಬಿಡುಗಡೆ ಮಾಡಿದ್ದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಕಾಂಗ್ರೆಸ್ ಸರ್ಕಾರ ಕೆಯುಐಡಿಎಫ್ ಸಿ ಅಧ್ಯಕ್ಷರಾಗಿದ್ದ ಮತ್ತಿಘಟ್ಟ ಕೃಷ್ಣಮೂರ್ತಿ ಅವರ ಮನವಿಯ ಮೇರೆಗೆ ಕಾಮಗಾರಿ ಮಂಜೂರು ಮಾಡಿಅನುದಾನವನ್ನೂ ಬಿಡುಗಡೆ ಮಾಡಿಕೊಟ್ಟಿತಾದರೂ ಶಾಸಕ ನಾರಾಯಣಗೌಡರ ಬೇಜವಾಬ್ದಾರಿಯಿಂದಾಗಿ ಕಾಮಗಾರಿಯು ಸಂಪೂರ್ಣಗೊಳ್ಳಲು ನಿಧಾನವಾಗಿದೆ.ಕೃಷ್ಣರಾಜಪೇಟೆ ತಾಲ್ಲೂಕಿನ ಜನರ ಮರ್ಯಾಧೆಯನ್ನು ಹರಾಜು ಹಾಕಿರುವ ಶಾಸಕ ನಾರಾಯಣಗೌಡರನ್ನು ತಾಲ್ಲೂಕಿನ ಜನರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿಕ್ಕೇರಿ ಸುರೇಶ್, ಕೆ.ಆರ್.ರವೀಂದ್ರಬಾಬು, ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





