Breaking News

BigTv News

ವಿಮೆ ಆಸೆಗೆ ಸ್ವಂತ ಜ್ಯುವೆಲ್ಲರಿ ಶೋರೂಂನಲ್ಲೇ ಕಳ್ಳತನ ಮಾಡಿದ್ದ ಮಾಲೀಕ ಅರೆಸ್ಟ್: ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

ಬೆಳಗಾವಿಯಲ್ಲಿ ಇನ್ಶೂರೆನ್ಸ್ ಹಣ ಪಡೆದು ಸಾಲ ತೀರಿಸುವ ಉದ್ದೇಶದಿಂದ ಸ್ವಂತ ಚಿನ್ನದಂಗಡಿಯಲ್ಲೇ ಕಳ್ಳತನದ ನಾಟಕವಾಡಿದ್ದ ಜ್ಯುವೆಲ್ಲರಿ ಅಂಗಡಿ ಮಾಲೀಕ ಕೃಷ್ಣಾನಂದ ವೇರ್ಣೇಕರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅಂಗಡಿಯಲ್ಲಿ ಕಳ್ಳತನವಾಗಿದೆ ಎಂದು ಮಾಲೀಕನೇ ಖಡೇಬಜಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಆದರೆ ತನಿಖೆ ವೇಳೆ ಕಳ್ಳರು ನುಗ್ಗಿದ ಯಾವುದೇ ಕುರುಹುಗಳು ಸಿಗದ ಹಿನ್ನೆಲೆಯಲ್ಲಿ ಪೊಲೀಸರು ಸಿಸಿಟಿವಿ ಪರಿಶೀಲಿಸಿದ್ದು, ಮಾಲೀಕನೇ ಆಭರಣಗಳನ್ನು ರಹಸ್ಯವಾಗಿ ಹೊರಸಾಗಿಸಿರುವುದು ಬೆಳಕಿಗೆ ಬಂದಿದೆ. ಕಟ್ಟುನಿಟ್ಟಿನ ವಿಚಾರಣೆ ವೇಳೆ ಆರೋಪಿ …

Read More »

ನೇಪಾಳ, ಬಾಂಗ್ಲಾ ಥರಾ ಸಂಸತ್ ಭವನ ಧ್ವಂಸ ಮಾಡ್ತೀವಿ – ಸಿಜೆಪಿ ಪ್ರತಿಭಟನೆಯಲ್ಲಿ ದೇಶವಿರೋಧಿ ಘೋಷಣೆ!

ನವದೆಹಲಿದಲ್ಲಿ ನೀಟ್ ಸೇರಿದಂತೆ ವಿವಿಧ ಪರೀಕ್ಷೆಗಳಲ್ಲಿನ ಅಕ್ರಮಗಳನ್ನು ಖಂಡಿಸಿ ‘ಚಲೋ ಸಂಸತ್’ ಪ್ರತಿಭಟನಾ ರ‍್ಯಾಲಿ ನಡೆಸಲಾಯಿತು. ಪರೀಕ್ಷಾ ಅಕ್ರಮಗಳ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಜಂತರ್ ಮಂತರ್‌ನಿಂದ ಸಂಸತ್ ಭವನದತ್ತ ಮೆರವಣಿಗೆ ಸಾಗುತ್ತಿದ್ದ ವೇಳೆ ಪ್ರತಿಭಟನಾಕಾರರು ಸಂಸತ್ ಕಡೆಗೆ ನುಗ್ಗಲು ಯತ್ನಿಸಿದ್ದಾರೆ ಎನ್ನಲಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ದೆಹಲಿ ಪೊಲೀಸರು ಲಾಠಿ ಪ್ರಹಾರ ಹಾಗೂ ಅಶ್ರುವಾಯು ಪ್ರಯೋಗಿಸಿದ್ದು, ಘರ್ಷಣೆಯಲ್ಲಿ ಹಲವರಿಗೆ …

Read More »

ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ; ಅಪ್ರಾಪ್ತ ಬಾಲಕಿಗೆ ಮದ್ಯ ಕುಡಿಸಿ ರಾತ್ರಿಯಿಡೀ ಗ್ಯಾಂಗ್ ರೇಪ್.!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಆರೋಪ ಕೇಳಿಬಂದಿದೆ. ದೇವಸ್ಥಾನಕ್ಕೆ ಕರೆದುಕೊಂಡು ಹೋಗುವುದಾಗಿ ನಂಬಿಸಿ ಆಟೋದಲ್ಲಿ ಕರೆದೊಯ್ದ ಆರೋಪಿಗಳು, ಬಲವಂತವಾಗಿ ಮದ್ಯ ಕುಡಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ಸಂಬಂಧ ನವೀನ್, ವೆಂಕಟರಮಣ ಹಾಗೂ ರೇಣುಕಾ ಎಂಬ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆಯ ದೂರಿನ ಮೇರೆಗೆ ಬಿಎನ್‌ಎಸ್ ಹಾಗೂ ಪೋಕ್ಸೊ ಕಾಯ್ದೆಯಡಿ ಪ್ರಕರಣ …

Read More »

ಬಸ್​ ಸ್ಟ್ಯಾಂಡ್​ ಬಳಿ ಯುವತಿ ಕಿಡ್ನ್ಯಾಪ್ ಮಾಡಿ ಸಾಮೂಹಿಕ ಅತ್ಯಾಚಾರ, ಮೈಸೂರಿನಲ್ಲಿ ನೀಚ ಕೃತ್ಯ

ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ಪಶ್ಚಿಮ ಬಂಗಾಳ ಮೂಲದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಆರೋಪ ಕೇಳಿಬಂದಿದೆ. ಯುವತಿಯನ್ನು ಅಪಹರಿಸಿ ಚಾಮರಾಜನಗರ ಜಿಲ್ಲೆಯ ಲಾಡ್ಜ್‌ಗೆ ಕರೆದೊಯ್ದು ಕೃತ್ಯ ಎಸಗಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ಸಂಬಂಧ ಕಿರಣ್, ಕಿಶೋರ್ ಮತ್ತು ರಿಯಾನ್ ಎಂಬ ಮೂವರು ಆರೋಪಿಗಳನ್ನು ಪೊಲೀಸರು 24 ಗಂಟೆಯೊಳಗೆ ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಟಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ …

Read More »

ಬೆಳಗಾವಿಯಲ್ಲಿ ಗುಂಡಿನ ದಾಳಿ ಪ್ರಕರಣ: ಕಾರು ಚಾಲಕನ ಬಂಧನ

ಬೆಳಗಾವಿ: ಇಲ್ಲಿನ ಕ್ಯಾಂಪ್‌ ಪ್ರದೇಶದ ಯೂನಿಯನ್ ಜಿಮ್ಖಾನಾದಲ್ಲಿ ಮಂಗಳವಾರ ನಡೆದ ವ್ಯಕ್ತಿಯೊಬ್ಬರ ಮೇಲೆ ಗುಂಡಿನ ದಾಳಿ ಪ್ರಕರಣ ಸಂಬಂಧ, ಒಬ್ಬನನ್ನು ಕ್ಯಾಂಪ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಪುಣೆಯ ಕಾರು ಚಾಲಕ ರೋಹನ ಪೋಕಳೆ ಬಂಧಿತ. ‘ಯೂನಿಯನ್‌ ಜಿಮ್ಖಾನಾದಲ್ಲಿ ಸುರೇಶ ಜಾಲಗಾರ ಎಂಬಾತನ ಮೇಲೆ ಪ್ರಫುಲ್‌ ಪಾಟೀಲ ಮತ್ತಿತರರು ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ್ದರು. ಈ ಆರೋಪಿಗಳನ್ನು ಪುಣೆಯಿಂದ ಬೆಳಗಾವಿಗೆ ಕರೆತಂದು, ಪುಣೆಗೆ ಮರಳಿಬಿಟ್ಟ ಚಾಲಕ ರೋಹನ ಬಂಧಿಸಿದ್ದೇವೆ. ಪರಾರಿಯಾದ …

Read More »

ಕೊಡಲಿಯಿಂದ ಹೊಡೆದು ತಮ್ಮನ ಹತ್ಯೆ

ಮಂಗಳೂರು: ಮೊಬೈಲ್‌ನಲ್ಲಿ ಯುವತಿಯೊಂದಿಗೆ ಮಾತನಾಡಿದ್ದ ವಿಚಾರಕ್ಕೆ ಅಣ್ಣನೇ ತಮ್ಮನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಸುರತ್ಕಲ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟುವಿನಲ್ಲಿ ನಡೆದಿದೆ. ಮೃತನು ಮಲ್ಲಿಕಾರ್ಜುನ (20) ಆಗಿದ್ದು, ಆರೋಪಿ ಸೋಮನಾಥ (21)ನನ್ನು ಪೊಲೀಸರು ಬಂಧಿಸಿದ್ದಾರೆ. ಜುಲೈ 19ರ ರಾತ್ರಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೋಪಗೊಂಡ ಸೋಮನಾಥ ಕೊಡಲಿಯಿಂದ ತಲೆ ಹಾಗೂ ಮುಖಕ್ಕೆ ಹಲ್ಲೆ ನಡೆಸಿದ ಪರಿಣಾಮ ಮಲ್ಲಿಕಾರ್ಜುನ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಳಿಕ ಆರೋಪಿ ಪರಾರಿಯಾಗಿದ್ದ. ಪೊಲೀಸರು …

Read More »

ಫ್ರೆಂಡ್​ಶಿಪ್​ ಕ್ಲಬ್​ ಹೆಸರಲ್ಲಿ ಆನ್​ಲೈನ್​ ವಂಚನೆ

ಉಡುಪಿ: ಫ್ರೆಂಡ್​ಶಿಪ್​ ಕ್ಲಬ್​ ಸದಸ್ಯತ್ವ ಪಡೆಯುವ ಆಸೆಗೆ ಬಿದ್ದ ವೃದ್ಧರೊಬ್ಬರು ಸೈಬರ್​ ವಂಚಕರ ಜಾಲಕ್ಕೆ ಸಿಲುಕಿ ಬರೋಬ್ಬರಿ 5,11,882 ರೂ. ಕಳೆದುಕೊಂಡಿರುವ ಘಟನೆ ಕಡಿಯಾಳಿಯಲ್ಲಿ ನಡೆದಿದೆ. ಕಡಿಯಾಳಿ ನಿವಾಸಿ ಉಸ್ಮಾನ್​ ಸಾಹೇಬ್​ (66) ವಂಚನೆಗೊಳಗಾದವರು. ಇವರು ತಮ್ಮ ಎಸ್​ಬಿ ಖಾತೆಯಿಂದ ಜೂನ್​ 27 ರಿಂದ ಜುಲೈ 14ರ ಅವಧಿಯಲ್ಲಿ ಹಂತ ಹಂತವಾಗಿ ಹಣವನ್ನು ವರ್ಗಾಯಿಸಿದ್ದರು. ಜೂನ್​ 27 ರಂದು 29,000 ರೂ., ಜುಲೈ 9 ರಂದು ಒಂದೇ ದಿನ ಮೂರು …

Read More »

ಬೆಳ್ತಂಗಡಿ| ಬಾಲಕಿಯ ಅತ್ಯಾಚಾರ ಪ್ರಕರಣ: ಆರೋಪಿ ಶುಭರಾಜ್ ಬಂಧನ

ಬೆಳ್ತಂಗಡಿ: 16 ವರ್ಷದ ಕಾಲೇಜು ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಉಪ್ಪಿನಂಗಡಿ ನಿವಾಸಿ ಶುಭರಾಜ್ (28) ಅವರನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆದೊಯ್ದಾಗ ಆಕೆ ಗರ್ಭಿಣಿಯಾಗಿರುವುದು ತಿಳಿದುಬಂದಿದೆ. ಬಳಿಕ ತಾಯಿ ನೀಡಿದ ದೂರಿನ ಮೇರೆಗೆ ಜುಲೈ 18ರಂದು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಜುಲೈ 19ರಂದು ಲಾಯಿಲ ಗ್ರಾಮದ ಪುತ್ರಬೈಲಿನಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು, ಜುಲೈ 20ರಂದು ಮಂಗಳೂರು …

Read More »

ಬೆಳ್ತಂಗಡಿ| ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಯುವತಿಯಿಂದ ಉದ್ಯಮಿಗೆ 87 ಲಕ್ಷ ರೂ. ವಂಚನೆ; ಪ್ರಕರಣ ದಾಖಲು

ಬೆಳ್ತಂಗಡಿ: ಮ್ಯಾಟ್ರಿಮೋನಿ ವೆಬ್‌ಸೈಟ್ ಮೂಲಕ ಪರಿಚಯವಾಗಿ ಮದುವೆಯಾಗುವುದಾಗಿ ನಂಬಿಸಿ ಯುವತಿಯೊಬ್ಬಳು ಬೆಳ್ತಂಗಡಿಯ ಉದ್ಯಮಿಯಿಂದ ₹87.22 ಲಕ್ಷ ಪಡೆದು ವಂಚಿಸಿರುವ ಆರೋಪದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಯ್ಯೂರು ನಿವಾಸಿ ಉದ್ಯಮಿ ಅನನ್ಯ ಕೃಷ್ಣ (36) ಅವರಿಗೆ 2024ರ ಮೇ ತಿಂಗಳಲ್ಲಿ ಶಿವಮೊಗ್ಗ/ಬೆಂಗಳೂರು ಮೂಲದ ಅನಿಷಾ ಪಾಲನ್ನ (35) ಪರಿಚಯವಾಗಿತ್ತು. ಇನ್‌ಸ್ಟಾಗ್ರಾಂ ಹಾಗೂ ಮೊಬೈಲ್ ಮೂಲಕ ಇಬ್ಬರೂ ಸಂಪರ್ಕದಲ್ಲಿದ್ದು, ಮದುವೆ ಕುರಿತು ಮಾತುಕತೆ ನಡೆಸುತ್ತಿದ್ದರು. ಇದೇ ವೇಳೆ ವ್ಯವಹಾರದಲ್ಲಿ ಆರ್ಥಿಕ ಸಂಕಷ್ಟವಿದೆ …

Read More »

ಕಡಿಮೆ ಬಡ್ಡಿ ಸಾಲದ ಆಸೆಗೆ ಬಿದ್ದು ತಾಳಿ ಅಡವಿಟ್ಟ ಮಹಿಳೆಯರಿಗೆ ಮಕ್ಮಲ್ ಟೋಪಿ!

ವಿಜಯಪುರ: ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ನೂರಾರು ಗ್ರಾಮೀಣ ಮಹಿಳೆಯರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಸಾಲದ ಆಸೆಗೆ ₹50 ಸಾವಿರದಿಂದ ₹1 ಲಕ್ಷದವರೆಗೆ ಮುಂಗಡ ಹಣ ಪಾವತಿಸಿದ ಮಹಿಳೆಯರಲ್ಲಿ ಹಲವರು ತಮ್ಮ ಮಂಗಳಸೂತ್ರ (ತಾಳಿ) ಅಡವಿಟ್ಟು ಹಣ ತಂದಿದ್ದರೂ, ವಂಚಕರು ನಕಲಿ ರಸೀದಿ, ಬಿಲ್ ಹಾಗೂ ಬಾಂಡ್ ಪೇಪರ್‌ಗಳನ್ನು ನೀಡಿ ನಂಬಿಸಿ ಬಳಿಕ ಕಚೇರಿಗೆ ಬೀಗ ಹಾಕಿ ಪರಾರಿಯಾಗಿದ್ದಾರೆ. ಸಾರ್ವಜನಿಕರಿಂದ ಒಂದು ಕೋಟಿಗೂ ಅಧಿಕ …

Read More »