ಅವಳಿ ನಗರದ ನಟೋರಿಯಸ್ ರೌಡಿಗಳಿಗೆ ಮಾಡ್ತಾರಾ ಡ್ರಿಲ್…???
ರೌಡಿಗಳ ಪವರ್ ಸೆಂಟರ್ ಪತ್ತೆ ಹಚ್ಚಲು ಖಾಕಿ ಪಡೆ ಸಿದ್ದವಾಯ್ತಾ..???
ರೌಡಿ ತಿಮಿಂಗಿಲಗಳ ಸಾಮ್ರಾಜ್ಯದ ಅಂಧಪತನಕ್ಕೆ ನಾಂದಿ ಹಾಡ್ತಾರಾ ಕಮಿಷನರ್..!!!
ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸರು ಈಗ ಸಾಕಷ್ಟು ಆ್ಯಕ್ಟಿವ್ ಆಗಿ ಕಾನೂನು ಬಾಹಿರ ಕೃತ್ಯಗಳಿಗೆ ಬ್ರೇಕ್ ಹಾಕಲು ಮುಂದಾಗಿದ್ದಾರೆ. ಆದರೆ ಹುಬ್ಬಳ್ಳಿಯಲ್ಲಿನ ದೊಡ್ಡ ದೊಡ್ಡ ತಿಮಿಂಗಿಲ ಬಿಟ್ಟು ಪುಡಿ ರೌಡಿಗಳನ್ನು ಮಟ್ಟ ಹಾಕುತ್ತಿದ್ದಾರೆ. ಆದರೆ ದೊಡ್ಡ ದೊಡ್ಡ ರೌಡಿಗಳು ಮಾತ್ರ ನಿಶ್ಚಿಂತೆಯಿಂದ ಓಡಾಡಿಕೊಂಡಿದ್ದಾರೆ. ಈ ಬಗ್ಗೆ ಕೂಡ ಕಮೀಷನರೇಟ್ ಗಮನ ಹರಿಸಬೇಕಿದೆ.ಈಗಾಗಲೇ ದೊಡ್ಡ ದೊಡ್ಡ ತಿಮಿಂಗಿಲದಂತಿರುವ ರೌಡಿಶೀಟರ್ ಹಾಗೂ ರೌಡಿಗಳ ಹೆಸರನ್ನು ಪೊಲೀಸ್ ಠಾಣೆಯಲ್ಲಿ ಹೈಡ್ ಮಾಡಲಾಗಿದೆ. ಅಲ್ಲದೇ ಬಹುತೇಕ ಪ್ರಭಾವಿಗಳ ಪೋಟೋ ಕೂಡ ತೆಗೆದು ಹಾಕಲಾಗಿದೆ.

ಈ ಬಗ್ಗೆ ಕೂಡ ಪೊಲೀಸ್ ಕಮೀಷನರ್ ಗೆ ಮಾಹಿತಿ ನೀಡಲು ಕೂಡ ಕೆಲವು ಸಿಬ್ಬಂದಿ ಕೂಡ ಹಿಂದೇಟು ಹಾಕುತ್ತಿರುವುದು ನಿಜಕ್ಕೂ ವಿಪರ್ಯಾಸಕರ ಸಂಗತಿಯಾಗಿದೆ. ಅಲ್ಲದೇ ದೊಡ್ಡ ಹೆಬ್ಬಾವು ಬಿಟ್ಟು ಬಾಲು ಮೀನು ಬೆನ್ನಟ್ಟಿರುವುದು ಪೊಲೀಸ್ ಕಮೀಷನರೇಟ್ ಕಾರ್ಯವೈಖರಿ ಅಣಕಿಸುವಂತಿದೆ. ಅಲ್ಲದೇ ಅದೆಷ್ಟೋ ಜನ ಕಮೀಷನರ್ ಬಂದರೂ ನಾವು ಸೇಫ್ ಎಂದುಕೊಂಡಿದ್ದವರಿಗೆ ಎನ್.ಶಶಿಕುಮಾರ್ ಖಡಕ್ ಕಾರ್ಯಾಚರಣೆ ಮೂಲಕ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕು. ಇಲ್ಲವಾದರೇ

ದೊಡ್ಡ ದೊಡ್ಡ ತಿಮಿಂಗಿಲಗಳು ಡೈನೋಸಾರ್ ಗಳಾಗಿ ಬದಲಾಗುವುದು ಖಂಡಿತ.ಪೊಲೀಸ್ ಇಲಾಖೆ ಭಯವೇ ಇಲ್ಲದೇ ಸಿಬ್ಬಂದಿಯನ್ನು ಚೇಲಾಗಳಂತೆ ಇಟ್ಟುಕೊಂಡವರ ಹೆಡೆಮುರಿ ಕಟ್ಟಿ ಖಾಕಿ ರುಚಿ ತೋರಿಸಬೇಕಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

