ವನಮಹೋತ್ಸವ ಕಾರ್ಯಕ್ರಮವನ್ನು ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮವನ್ನು ನಮ್ಮ ಭಾಗದ ಶಾಸಕರಾದ ವಿನಯ್ ಕುಲಕರ್ಣಿ ಇವರ ಧರ್ಮಪತ್ನಿ ಶ್ರೀಮತಿ ಶಿವಲೀಲಾ ವಿನಯ್ ಕುಲಕರ್ಣಿ ಇವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷರಾಗಿ ಶಾಲೆಯ ಪ್ರಧಾನ ಗುರುಗಳಾದ ಐ ಎಂ ಪೀರಜಾದೆ ಹಾಗೂ ಮುಖ್ಯ ಅತಿಥಿಗಳಾಗಿ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಮಹಾಂತೇಶ್ ವೀರಾಪುರ್ ಹಾಗೂ ಕಾರ್ಯದರ್ಶಿಗಳಾದ ಡಾ!! ಉಮೇಶ್ ಹಳ್ಳಿಕೇರಿ ಹಾಗೂ ಡಾ!!ಪ್ರಕಾಶ್ ಪವಾಡ್ ಶೆಟ್ಟಿ ಉಪಸ್ಥಿತರಿದ್ದರು. ಶ್ರೀಮತಿ …
Read More »ಜನರ ಮನಸೆಳೆದ ಜವಾರಿ ಎತ್ತುಗಳು
ನವಲಗುಂದ : ಪಟ್ಟಣದ ಅಕ್ಕಿ ಓಣಿಯಲ್ಲಿ ಮಣ್ಣೆತ್ತಿನ ಅಮವಾಸ್ಯೆಯ ಮಾಸದ ಕೊನೆಯ ವಾರದ ಪ್ರಯುಕ್ತ ಗುರು ಹಿರಿಯರು, ಯುವಕರು ಸೇರಿ ಮಣ್ಣಿನಿಂದ ಜವಾರಿ ಎತ್ತಿನ ಹೋರಿಗಳನ್ನು ನಿರ್ಮಿಸಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಿರುತ್ತಾರೆ. ವಿವೇಕಾನಂದ ಯುವಕ ಮಂಡಳಿ ಅಕ್ಕಿ ಓಣಿಯ ಯುವಕರ ಕೈಯಲ್ಲಿ ಮೂಡಿಬಂದ ಎತ್ತುಗಳು ನೋಡುವರ ಕಣ್ಮನ ಸೆಳೆಯುತ್ತಿವೆ.
Read More »ವಿಶ್ವ ಹಿಂದು ಪರಿಷದ್ ಕರ್ನಾಟಕ ಉತ್ತರ ಧಾರವಾಡ ಜೈನ ಮುನಿಯ ಕೊಲೆ ಖಂಡನೆ
ಧಾರವಾಡ ಚಿಕ್ಕೋಡಿ ತಾಲೂಕಿನ ಹಿರೇಕೋಳಿಯ ಪೂಜ್ಯ ಜೈನ ಮುನಿಗಳಾದ ರಾಮಕುಮಾರ ನಂದಿ ಇವರನ್ನು ದುಷ್ಕರ್ಮಿಗಳು ಬರ್ಬರವಾಗಿ ಅಮಾನವೀಯವಾಗಿ ಹತ್ಯೆ ಮಾಡಿದ್ದಾರೆ. ಇದನ್ನು ವಿಶ್ವ ಹಿಂದು ಪರಿಷತ್ ತೀವ್ರವಾಗಿ ಖಂಡಿಸುತ್ತದೆ ಎಂದು ವಿಶ್ವ ಹಿಂದು ಪರಿಷತ್ ಕ್ಷೇತ್ರೀಯ. ಧಾರ್ಮಿಕ ವಿಭಾಗ ಪ್ರಚಾರದಕ ಬಸವರಾಜ ಜಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ತಪ್ಪಿಸ್ಥತರಿಗೆ ಕಠಿಣ ಶಿಕ್ಷೆ ನೀಡಬೇಕು. ಸರ್ಕಾರ ಸಾಧು-ಸಂತರಿಗೆ ಸೂಕ್ತ ರಕ್ಷಣೆ ಕೊಡಬೇಕು, ಸರ್ಕಾರ ಮುಂದೆ …
Read More »ಸಾಲಬಾಧೆ ತಾಳಲಾರದೇ ನೇಣು ಕುಣಿಕೆಗೆ ಕೊರಳೊಡ್ಡಿದ ರೈತ
ಧಾರವಾಡ: ಕೃಷಿ ಚಟುವಟಿಕೆಗಾಗಿ ಸಾಲ ಮಾಡಿ ಅದನ್ನು ತೀರಿಸಲಾಗದೇ ರೈತನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಬಳಿ ಇರುವ ಸೈಬನಕೊಪ್ಪ ಗ್ರಾಮದಲ್ಲಿ ನಡೆದಿದೆ. ಉಪ್ಪಿನ ಬೆಟಗೇರಿ ಗ್ರಾಮದ ಕಲ್ಲಪ್ಪ ಕುರಗುಂದ (55) ಎಂಬ ರೈತನೇ ಆತ್ಮಹತ್ಯೆ ಮಾಡಿಕೊಂಡವನು. ಕೃಷಿ ಚಟುವಟಿಕೆಗಾಗಿ ವಿವಿಧ ಸಂಘಗಳಲ್ಲಿ ಸಾಲ ಮಾಡಿಕೊಂಡಿದ್ದ. ಅಲ್ಲದೇ ತನಗಿದ್ದ ಜಮೀನನ್ನು 7 ಲಕ್ಷ ರೂಪಾಯಿಗೆ ಲೀಸ್ನಲ್ಲಿ ಹಾಕಿಕೊಂಡಿದ್ದ. ಮಳೆಯಾಗದ ಕಾರಣ ಕೃಷಿ …
Read More »ಚಲಿಸುತ್ತಿದ್ದ ಕಾರ್ ಟೈಯರ್ ಬ್ಲಾಸ್ಟ್
ಹುಬ್ಬಳ್ಳಿ ಯಿಂದ ಬೆಳಗಾವಿ ಕಡೆ ಹೋಗುತ್ತಿದ್ದ ಸ್ವಿಫ್ಟ್ ಕಾರೊಂದರ ಟೈಯರ್ ಬ್ಲಾಸ್ಟ್ ಆಗಿ ಅಪಘಾತಕ್ಕೆ ಒಳಗಾದ ಘಟನೆ ಹುಬ್ಬಳ್ಳಿಯ ನವನಗರದ ಆರ್.ಟಿ.ಓ ಬಳಿ ನಡೆದಿದೆ. ಚಲಿಸುತ್ತಿದ್ದ ಕಾರಿನ ಟೈಯರ್ ಏಕಾಏಕಿ ಬ್ಲಾಸ್ಟ್ ಆದ ಪರಿಣಾಮ, ಬಿ.ಆರ್.ಟಿಎಸ್ ಬ್ಯಾರಿಕೇಡ್ ಡಿಕ್ಕಿ ಹೊಡೆದು ಕಾರು ಜಖಂಗೊಂಡಿದೆ. ಕಾರಿನಲ್ಲಿ ಬೆಳಗಾವಿ ಮೂಲದ ವಕೀಲರೊಬ್ಬರು ಪ್ರಯಾಣಿಸುತಿದ್ದರೆನ್ನಲಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಉತ್ತರ ಸಂಚಾರಿ ಠಾಣೆಯ ಪೊಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Read More »ಗದಗನ ಹಳ್ಳಿಗುಡಿಯಲ್ಲಿ ಅಪಘಾತ
ತುರ್ತು ಸಹಾಯವಾಣಿಗೆ ಹಳ್ಳಿಗುಡಿ ಹತ್ತಿರ ಅಪಘಾತದ ಕುರಿತು ಕರೆ ಬಂದಿದ್ದು ERV ಕೂಡಲೇ ಸ್ಥಳಕ್ಕೆ ತೆರಳಿ ವಿಚಾರಿಸಿದಾಗ ಎರಡು ಕಾರುಗಳ ನಡುವೆ ಅಪಘಾತವಾಗಿದ್ದು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಸದರಿ ಪ್ರಕರಣ ಮುಂದಿನ ಕ್ರಮಕ್ಕಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಘಟನೆ ಸಂದರ್ಭದಲ್ಲಿ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಪ್ರಕರಣಕ್ಕೇ ಸಂಭದಿಸಿದಂತೆ ಗದಗ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
Read More »50 ಲಕ್ಷ ದೋಚಿದ ಕಳ್ಳರು, ಪಿಸ್ತೂಲ್ ತೋರಿಸಿ ಹಣ ಜೀವ ಬೆದರಿಕೆ
ಚಿತ್ರದುರ್ಗ: ಹೋಟೆಲ್ ಉದ್ಯಮಿಯೊಬ್ಬರ ಮಗ ಹಾಗೂ ಅಳಿಯನನ್ನು ಒತ್ತೆಯಾಳಾಗಿಟ್ಟುಕೊಂಡು ಪಿಸ್ತೂಲ್ ಮತ್ತು ಮಾರಕಾಸ್ತ್ರ ತೋರಿಸಿ 50 ಲಕ್ಷ ರೂ. ದೋಚಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಚಿತ್ರದುರ್ಗದ ಬ್ಯಾಂಕ್ ಕಾಲೋನಿಯ ಉದ್ಯಮಿ ನಜೀರ್ ಅಹಮ್ಮದ್ ಎಂಬವರ ಮನೆಗೆ ಮೂವರು ದರೋಡೆಕೋರರು ನುಗ್ಗಿದ್ದಾರೆ. ನಜೀರ್ ಅವರ ಮಗ ಸಮೀರ್ ಹಾಗೂ ಅಳಿಯ ಶಹನಾಜ್ ಅವರಿಗೆ ಪಿಸ್ತೂಲ್ ತೋರಿಸಿ ಒತ್ತೆಯಾಳಾಗಿಟ್ಟುಕೊಂಡಿದ್ದಾರೆ. ಬಳಿಕ 50 ಲಕ್ಷ ರೂ. ನಗದು, 120 ಗ್ರಾಂ ಚಿನ್ನ ಮತ್ತು ಮೊಬೈಲ್ಗಳನ್ನು …
Read More »ಸಿಎಂ ನಿಂಬಣ್ಣವರ್ ನಿಧನಕ್ಕೆ ಶಾಸಕ ಮಹೇಶ್ ತೆಂಗಿನಕಾಯಿ ಸಂತಾಪ
ಕಲಘಟಗಿ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಶ್ರೀ ಸಿಎಂ ನಿಂಬಣ್ಣವರ್ ಅವರನ ನಿಧನದ ಸುದ್ದಿ ಕೇಳಿ ತೀವ್ರ ಆಘಾತವಾಗಿದ್ದು ಸರಳ ಸಜ್ಜನಿಕೆ ವ್ಯಕ್ತಿತ್ವದ ಮಾಜಿ ಶಾಸಕರಾದ ಶ್ರೀ ಸಿಎಂ ನಿಂಬಣ್ಣವರ್ ರೈತ ಹೋರಾಟಗಾರರು ಇವರ ಸಾವಿನಿಂದ ಬಿಜೆಪಿಗೆ ತುಂಬಲಾರದ ನಷ್ಟವಾಗಿದ್ದು ಭಗವಂತನು ಮೃತರ ಆತ್ಮಕ್ಕೆ ಚಿರಶಾಂತಿಯನ್ನು ನೀಡಿ ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿಯನ್ನು ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ತಮ್ಮ ಶೋಕ ಸಂದೇಶದಲ್ಲಿ ಶಾಸಕರಾದ ಶ್ರೀ ಮಹೇಶ್ ತೆಂಗಿನಕಾಯಿಯವರು …
Read More »ಕಲಘಟಗಿ ಮಾಜಿ ಶಾಸಕ ಸಿ ಎಂ ನಿಂಬಣ್ಣವರ ನಿಧನ
ಕಲಘಟಗಿ: ಕಲಘಟಗಿ ಕ್ಷೇತ್ರದ ಮಾಜಿ ಶಾಸಕ, ಬಿಜೆಪಿ ಮುಖಂಡ ಸಿ.ಎಂ ನಿಂಬಣ್ಣವರ ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೆಲವು ದಿನಗಳ ಹಿಂದೆ ಹೃದಯ ಸಂಬಂಧಿಸಿದ ಚಿಕಿತ್ಸೆ ಪಡೆಯಲು ಬೆಂಗಳೂರಿಗೆ ತೆರಳಿದ್ದು ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Read More »ಅಮರನಾಥದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಯಾತ್ರಿಗಳ ವಿಚಾರ :ಸಚಿವ ಹೆಚ್ ಕೆ ಪಾಟೀಲ
ಗದಗ:ನಲ್ಲಿ ಕಾನೂನು ಮತ್ತು ಪ್ರವಾಸೋಧ್ಯಮ ಸಚಿವ ಹೆಚ್ ಕೆ ಪಾಟೀಲ ಸುದ್ದಿಗೋಷ್ಟಿ ಸಂಕಷ್ಟಕ್ಕೆ ಸಿಲುಕಿದವರ ರಕ್ಷಣೆಗೆ ಅಮರನಾಥ್ ಆಡಳಿತ ತುಂಬಾ ಸ್ಪಂದಿಸಿದೆ ನಿನ್ನೆಯ ದಿನ ಪಂಚತರಣಿ ಬೇಸ್ ಕ್ಯಾಂಪಿನಲ್ಲಿ ಅವ್ರನ್ನ ಸುರಕ್ಷಿತವಾಗಿ ಇಡಲಾಗಿತ್ತು ಯಾತ್ರಿಕರ ಕುಟುಂಬಸ್ಥರ ಮತ್ತು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿಯವರ ಜೊತಗೆ ಮಾತನಾಡಿದ್ದೆನೆ ಮುಖ್ಯಮಂತ್ರಿಗಳು ಹಿರಿಯ ಅಧಿಕಾರಿಗಳ ತಂಡ ರಚಿಸಿ ಧಾವಿಸಲು ಸೂಚಿಸಿದ್ದಾರೆ ಈಗಾಗಲೇ ಕೆಲ ಅಧಿಕಾರಿಗಳು ದೆಹಲಿ, ಶ್ರೀನಗರ ಸೇರಿ ವಿವಿಧೆಡೆ ಹೋಗಿದ್ದಾರೆ ಕರ್ನಾಟಕ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





