Breaking News

ಪ್ರೇಮಿಯೊಂದಿಗೆ ಪರಾರಿಯಾಗಿದ್ದ ಮಗಳ ಮನೆಗೆ ಕರೆಸಿ ಕೊಂದ ತಂದೆ!!

ತನ್ನ ಪ್ರೀತಿಗೆ ಮನೆಯವರು ಒಪ್ಪುವುದಿಲ್ಲ ಎಂದು ಆಕೆ ಕೆಲ ವಾರಗಳ ಹಿಂದೆ ಪ್ರಿಯಕರನೊಂದಿಗೆ ದೆಹಲಿಗೆ ಪರಾರಿಯಾಗಿದ್ದಳು. ಈ ವಿಚಾರ ಟಾಡಾ ಗ್ರಾಮದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಬಳಿಕ ಮನೆಯವರು ಆಕೆಯ ಸ್ನೇಹಿತರ ನೆರವಿನಿಂದ ಸಾಕ್ಷಿಯನ್ನು ಸಂಪರ್ಕಿಸಿ ಆಕೆ ಮನೆಗೆ ಬರುವಂತೆ ಮನವಿ ಮಾಡಿದ್ದಾರೆ. ಆರಂಭದಲ್ಲಿ ಆಕೆ ಒಪ್ಪಿರಲಿಲ್ಲವಾದರೂ ಬಳಿಕ ಮನೆಯವರು ಮದುವೆಗೆ ಒಪ್ಪಿದ್ದಾರೆ ಎಂದು ಪುಸಲಾಯಿಸಿದ್ದಾರೆ. ಆಗ ಸಾಕ್ಷಿ ಮನೆಗೆ ಬರಲು ಒಪ್ಪಿದ್ದಾಳೆ.ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುವಾಗ ತಡರಾತ್ರಿ ಪೊಲೀಸರು ಮನೆಯ ಹಿಂದಿನ ಸ್ನಾನಗೃಹಕ್ಕೆ ಬೀಗ ಹಾಕಿರುವುದನ್ನು ನೋಡಿದಾಗ, ಅದನ್ನು ತೆರೆದಾಗ ಅದರೊಳಗೆ ಹುಡುಗಿಯ ಶವ ಪತ್ತೆಯಾಗಿದೆ. ಬಳಿಕ ಪೊಲೀಸರು ಮನೆಯವರನ್ನು ವಿಚಾರಣೆಗೊಳಪಡಿಸಿದಾಗ ತಂದೆ ಮುಖೇಶ್ ಸಿಂಗ್ ಹೇಳಿಕೆಯಲ್ಲಿ ಅನುಮಾನಗೊಂಡು ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಆರಂಭದಲ್ಲಿ ಮುಖೇಶ್ ಸಿಂಗ್ ಸಾಕ್ಷಿ ಪ್ರಿಯಕರನನ್ನು ಕೊಲ್ಲಲು ಯೋಜಿಸಿದ್ದ. ಅದಕ್ಕಾಗಿ ಆತನ ಗ್ರಾಮದಲ್ಲಿ ತಿರುಗಾಡಿದ್ದ. ಆದರೆ ಆತ ಗ್ರಾಮದಲ್ಲಿ ಇರಲಿಲ್ಲ. ಬಳಿಕ ಮಗಳ ಮನವೊಲಿಕೆಗೆ ಯತ್ನಿಸಿದ್ದಾನೆ. ಆದರೆ ಆಕೆ ಒಪ್ಪದಿದ್ದರಿಂದ ಆಕೆಯನ್ನು ಕೊಂದು ಮುಗಿಸಿದ್ದಾನೆ ಎನ್ನಲಾಗಿದೆ.

Share News

About BigTv News

Check Also

ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರ ದರೋಡೆ ಯತ್ನ: ಕಿಡಿಗೇಡಿ ಬಂಧನ

ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು …

Leave a Reply

Your email address will not be published. Required fields are marked *