Breaking News

ಸಾಲಬಾಧೆ ತಾಳಲಾರದೇ ನೇಣು ಕುಣಿಕೆಗೆ ಕೊರಳೊಡ್ಡಿದ ರೈತ

ಧಾರವಾಡ: ಕೃಷಿ ಚಟುವಟಿಕೆಗಾಗಿ ಸಾಲ ಮಾಡಿ ಅದನ್ನು ತೀರಿಸಲಾಗದೇ ರೈತನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಬಳಿ ಇರುವ ಸೈಬನಕೊಪ್ಪ ಗ್ರಾಮದಲ್ಲಿ ನಡೆದಿದೆ.

ಉಪ್ಪಿನ ಬೆಟಗೇರಿ ಗ್ರಾಮದ ಕಲ್ಲಪ್ಪ ಕುರಗುಂದ (55) ಎಂಬ ರೈತನೇ ಆತ್ಮಹತ್ಯೆ ಮಾಡಿಕೊಂಡವನು.

ಕೃಷಿ ಚಟುವಟಿಕೆಗಾಗಿ ವಿವಿಧ ಸಂಘಗಳಲ್ಲಿ ಸಾಲ ಮಾಡಿಕೊಂಡಿದ್ದ. ಅಲ್ಲದೇ ತನಗಿದ್ದ ಜಮೀನನ್ನು 7 ಲಕ್ಷ ರೂಪಾಯಿಗೆ ಲೀಸ್‌ನಲ್ಲಿ ಹಾಕಿಕೊಂಡಿದ್ದ. ಮಳೆಯಾಗದ ಕಾರಣ ಕೃಷಿ ಸಾಲ ತೀರಿಸಲಾಗದೇ ಹಾಗೂ ಲೀಸ್‌ನಲ್ಲಿದ್ದ ಹೊಲವನ್ನು ಬಿಡಿಸಿಕೊಳ್ಳಲಾಗದೇ ಕಲ್ಲಪ್ಪ ನೇಣಿಗೆ ಶರಣಾಗಿದ್ದಾನೆ.

ಘಟನಾ ಸ್ಥಳಕ್ಕೆ ಗರಗ ಠಾಣೆ ಪೊಲೀಸರು ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ.

Share News

About BigTv News

Check Also

ಹುಬ್ಬಳ್ಳಿ–ಧಾರವಾಡದಲ್ಲಿ ಟ್ರಾಫಿಕ್ ಅರಾಜಕತೆ! ಅಪ್ರಾಪ್ತರ ಕೈಗೆ ಬೈಕ್, ರಸ್ತೆಯಲ್ಲಿ ಜೀವದ ಜೊತೆ ಚೆಲ್ಲಾಟ!

👆News Audio ಹೆಲ್ಮೆಟ್ ಇಲ್ಲ, ನಂಬರ್ ಪ್ಲೇಟ್ ಇಲ್ಲ… ಟ್ರಾಫಿಕ್ ಪೊಲೀಸರ ಕಣ್ಣೆದುರೇ ನಿಯಮಗಳ ಉಲ್ಲಂಘನೆ! ಸಾರ್ವಜನಿಕರ ಜೀವಕ್ಕೆ ಹೊಣೆ …

Leave a Reply

Your email address will not be published. Required fields are marked *