Breaking News

BigTv News

ಘೋರ ದುರಂತ.. ಓಮಿನಿ-ಬೈಕ್ ಮುಖಾಮುಖಿ ಡಿಕ್ಕಿಯಾಗಿ ತಾಯಿ-ಮಗ ಸ್ಥಳದಲ್ಲೇ ಸಾವು!

ತುಮಕೂರು ತಾಲೂಕಿನ ಹೊನ್ನುಡಿಕೆ ಸಮೀಪ ಓಮಿನಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ತಾಯಿ ಮತ್ತು ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಿ.ಎಸ್. ಪಾಳ್ಯ ಗ್ರಾಮದ ಕಮರ್ ಉನ್ನಿಸ್ (51) ಹಾಗೂ ಸೈಯದ್ ತಬ್ರೆಷ್ ಪಾಷಾ (27) ಮೃತರು. ಜಮೀನಿನ ಪೌತಿ ಖಾತೆ ಕೆಲಸಕ್ಕಾಗಿ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಓಮಿನಿ ಕಾರು ನಿಯಂತ್ರಣ ತಪ್ಪಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ನಜ್ಜುಗುಜ್ಜಾಗಿದ್ದು, ಇಬ್ಬರೂ …

Read More »

ಬೆಂಗಳೂರಿನ ಮೆಟ್ರೋ ನಿಲ್ದಾಣದ ಬಳಿ ಅನುಮಾನಾಸ್ಪದ ಘಟನೆ; ಸ್ಪ್ರೇ ಮಾಡಿ ಅನಾಮಿಕ ಪರಾರಿ!

ಬೆಂಗಳೂರು ಇಂದಿರಾನಗರ ಮೆಟ್ರೋ ನಿಲ್ದಾಣದ ಬಳಿ ಇಂದು ಸಂಜೆ ಅಪರಿಚಿತ ವ್ಯಕ್ತಿಯೊಬ್ಬ ನಿಗೂಢ ವಸ್ತುವನ್ನು ಸ್ಪ್ರೇ ಮಾಡಿ ಪರಾರಿಯಾಗಿದ್ದು, ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಸ್ಪ್ರೇ ಬಳಿಕ ತೀವ್ರ ವಾಸನೆ ಹರಡಿದ ಪರಿಣಾಮ ಹಲವರು ಮೂಗು ಮುಚ್ಚಿಕೊಂಡು ಸ್ಥಳದಿಂದ ದೂರ ಸರಿದಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಬಿಎಂಆರ್‌ಸಿಎಲ್ ಸುರಕ್ಷತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಯ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ. ಸ್ಪ್ರೇ ಮಾಡಿದ ವಸ್ತು ಏನು …

Read More »

ಯುವತಿಯನ್ನು ಮಚ್ಚಿನಿಂದ ಕೊಚ್ಚಿದ ಯುವಕ!

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಿ.ಸಿ.ರೋಡ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಲಾವಣ್ಯ (23) ಎಂಬ ಯುವತಿ ಮೇಲೆ ಯುವಕನೊಬ್ಬ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡ ಲಾವಣ್ಯ ಅವರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಹಲ್ಲೆಯ ದೃಶ್ಯ ಅಲ್ಲಿದ್ದವರಲ್ಲಿ ಆತಂಕ ಮೂಡಿಸಿದೆ. ಘಟನಾ ಸ್ಥಳಕ್ಕೆ ಎಸ್‌ಪಿ ಡಾ. ಅರುಣ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯ ಬಂಧನಕ್ಕಾಗಿ ವಿಶೇಷ ತಂಡ …

Read More »

ಬಿ.ಸಿ.ರೋಡ್‌: ತಲವಾರಿನಿಂದ ಹಲ್ಲೆ ನಡೆಸಿ ಯುವತಿ ಹತ್ಯೆ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಿ.ಸಿ.ರೋಡ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ಸಾರ್ವಜನಿಕರ ಎದುರೇ ಯುವತಿಯೊಬ್ಬಳನ್ನು ತಲವಾರಿನಿಂದ ಹಲ್ಲೆ ಮಾಡಿ ಹತ್ಯೆ ಮಾಡಿರುವ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಕಕ್ಯಪದವು ಸಮೀಪದ ಕೊಡಂಗೆಯ ನಿವಾಸಿ ಲಾವಣ್ಯ (25) ಮೃತ ಯುವತಿಯಾಗಿದ್ದು, ಕಲ್ಲಡ್ಕದ ಖಾಸಗಿ ಚಿಕಿತ್ಸಾಲಯದಲ್ಲಿ ಶುಶ್ರೂಷಕಿಯಾಗಿ ಕೆಲಸ ಮಾಡುತ್ತಿದ್ದರು. ಆರೋಪಿ ಚೇತನ್, ಮೃತಳ ದೂರದ ಸಂಬಂಧಿಯಾಗಿದ್ದು, ಏಕಪಕ್ಷೀಯ ಪ್ರೀತಿಯ ಹಿನ್ನೆಲೆಯಲ್ಲೇ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಕೆಲಸ ಮುಗಿಸಿ ಮನೆಗೆ ತೆರಳಲು …

Read More »

ಬಟ್ಟೆ ಎಳೆದಾಡಿ “ಬೇಬಿ ಡಾರ್ಲಿಂಗ್ ನನ್ನ ಇಷ್ಟಪಡ್ತೀಯಾ?, ವಿದ್ಯಾರ್ಥಿನಿಯರಿಗೆ ದಾವಣಗೆರೆ ಉಪನ್ಯಾಸಕನ ಕಾಟ!

ದಾವಣಗೆರೆ: ಜಿಲ್ಲೆಯ ಮಲೆಬೆನ್ನೂರಿನಲ್ಲಿ ಕಾಲೇಜಿನ ಉಪನ್ಯಾಸಕನೊಬ್ಬ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಆರೋಪಿ ಮಲ್ಲಿಕಾರ್ಜುನ ವಿರುದ್ಧ POCSO ಕಾಯ್ದೆಯಡಿ ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ದೂರಿನ ಪ್ರಕಾರ, ಉಪನ್ಯಾಸಕ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿ, ಅನುಚಿತವಾಗಿ ಸ್ಪರ್ಶಿಸುವುದು ಹಾಗೂ ಲೈಂಗಿಕ ಉದ್ದೇಶದ ಮಾತುಗಳ ಮೂಲಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಇತರ ವಿದ್ಯಾರ್ಥಿನಿಯರ ಮೇಲೆಯೂ ಇದೇ ರೀತಿಯ ವರ್ತನೆ ನಡೆಸಿದ್ದಾನೆ …

Read More »

ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆ : ನಾಯಿ ಬೆಲ್ಟ್ ನಿಂದ ಪತ್ನಿಯ ಕುತ್ತಿಗೆ ಬಿಗಿದು ಕೊಂದ ಬಳಿಕ ಪತಿ ಆತ್ಮಹತ್ಯೆ!

ಬೆಂಗಳೂರಿನಲ್ಲಿ ಬೆಚ್ಚಿ ಬಿಳಿಸುವಂತಹ ಘಟನೆ ನಡೆದಿದ್ದು ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ ಶರಣಾಗಿದ್ದಾನೆ 4 ತಿಂಗಳ ಗರ್ಭಿಣಿ ಸ್ವಪ್ನಾಳನ್ನು ಕೊಲೆಗೈದು ಪತಿ ಮನೋಜ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ನಾಯಿ ಬೆಲ್ಟನಿಂದ ಕುತ್ತಿಗೆ ಬಿಗಿದು ಸ್ವಪ್ನಳನ್ನು ಮನೋಜ್ ಕೊಲೆ ಮಾಡಿದ್ದಾನೆ. ಬಳಿಕ ಫ್ಯಾನಿಗೆ ನೇಣು ಹಾಕಿಕೊಂಡು ಪತಿ ಮನೋಕ್ ಸಹ ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳಕ್ಕೆ ದಕ್ಷಿಣ ವಿಭಾಗದ ಡಿಸಿಪಿ ವಂಶಿಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ …

Read More »

ಧಾರವಾಡದಲ್ಲಿ ಭೀಕರ ಅಗ್ನಿ ದುರಂತ – ಆಕಸ್ಮಿಕ ಬೆಂಕಿಗೆ ಕೊಟ್ಟಿಗೆ ಭಸ್ಮ, 12 ಜಾನುವಾರುಗಳು ಸಜೀವ ದಹನ!

ಧಾರವಾಡ ಜಿಲ್ಲೆಯ ಮುಮ್ಮಿಗಟ್ಟಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ಅವಘಡದಲ್ಲಿ ಎರಡು ಕೊಟ್ಟಿಗೆಗಳು ಹೊತ್ತಿ ಉರಿದು 12 ಜಾನುವಾರುಗಳು ಸಜೀವ ದಹನಗೊಂಡಿವೆ. ಅವಘಡದಲ್ಲಿ ರೈತರಾದ ಸಾಗರ ಅಸುಂಡಿ ಹಾಗೂ ಧರಣೇಂದ್ರ ಅಸುಂಡಿಗೆ ಸೇರಿದ ಆಕಳು, ಎಮ್ಮೆ ಮತ್ತು ಕರುಗಳು ಮೃತಪಟ್ಟಿದ್ದು, ನಾಲ್ಕು ಲೋಡ್‌ ಹುಲ್ಲು ಹಾಗೂ ಎರಡು ಕೊಟ್ಟಿಗೆಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಇದರಿಂದ ರೈತರಿಗೆ ಭಾರಿ ನಷ್ಟ ಉಂಟಾಗಿದೆ. ಸುದ್ದಿ ತಿಳಿದು ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ …

Read More »

ಮಂಗಳೂರು: ನಕಲಿ ನೋಟು ಮುದ್ರಣ ಜಾಲ ಪತ್ತೆ, 7 ಮಂದಿ ಬಂಧನ

ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯ ಅಂಡಿಂಜೆ ಗ್ರಾಮದಲ್ಲಿ ನಕಲಿ ₹500 ನೋಟುಗಳನ್ನು ತಯಾರಿಸುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿ ಏಳು ಮಂದಿಯನ್ನು ಬಂಧಿಸಿದ್ದಾರೆ. ಬಾಡಿಗೆ ಮನೆಯಲ್ಲಿ ನೋಟು ಮುದ್ರಿಸುತ್ತಿದ್ದ ಆರೋಪಿಗಳಿಂದ ನಕಲಿ ನೋಟುಗಳು, ಪ್ರಿಂಟರ್, ಕಂಪ್ಯೂಟರ್, ಕಟಿಂಗ್ ಬ್ಲೇಡ್, ಗಾಂಧೀಜಿ ಚಿತ್ರದ ಸೀಲ್ ಹಾಗೂ ಆರ್‌ಬಿಐ ಸೆಕ್ಯುರಿಟಿ ಥ್ರೆಡ್ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರಿಂದ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದು, ಈ ಜಾಲದ ಹಿಂದೆ ಇನ್ನೂ …

Read More »

ಈ ಒಂದು ಕಾರಣಕ್ಕೆ ಡಾಕ್ಟರ್ ಗಂಡನ ಜೀವ ತೆಗೆದಳಾ ಹೆಂಡ್ತಿ? ಕೊಂದಿದ್ದು ನಾನೇ ಎಂದ ಪ್ರಿಯಾಂಕಾ ಕೊಟ್ಟ ಕಾರಣ ಏನು?

ಧಾರವಾಡದಲ್ಲಿ ವೈದ್ಯ ಡಾ. ಕಿರಣ್ ಹೊನ್ನಣ್ಣನವರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಡಾ. ಪ್ರಿಯಾಂಕಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ತಾನೇ ಪತಿಯನ್ನು ಚಾಕುವಿನಿಂದ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರಿಗೂ ಇದು ಎರಡನೇ ಮದುವೆಯಾಗಿದ್ದು, ಸುಮಾರು 9 ವರ್ಷಗಳ ಹಿಂದೆ ಮದುವೆಯಾಗಿದ್ದರು. ಪ್ರಾಥಮಿಕ ತನಿಖೆಯ ಪ್ರಕಾರ, ಪತಿ ಬೇರೊಬ್ಬರೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ಅನುಮಾನದಿಂದ ದಂಪತಿ ನಡುವೆ ಆಗಾಗ ಜಗಳವಾಗುತ್ತಿತ್ತು ಎನ್ನಲಾಗಿದೆ. ಆಸ್ಪತ್ರೆಯಿಂದ ಮನೆಗೆ …

Read More »

ಹಾಡಹಗಲೇ ಖಾಸಗಿ ಬಸ್ ಕಂಡಕ್ಟರ್‌ಗಳ ಮಾರಾಮಾರಿ- ಪ್ರಯಾಣಿಕರ ಎದುರೇ ಕಬ್ಬಿಣದ ರಾಡ್‌ ಹಿಡಿದು ಹೊಡೆದಾಟ!

ಮಂಗಳೂರು ಸಮೀಪದ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳ ಟೈಮಿಂಗ್ ವಿಚಾರವಾಗಿ ಇಬ್ಬರು ಕಂಡಕ್ಟರ್‌ಗಳ ನಡುವೆ ಭೀಕರ ಮಾರಾಮಾರಿ ನಡೆದಿದೆ. ಮಂಗಳೂರು–ಉಪ್ಪಿನಂಗಡಿ ಮಾರ್ಗದಲ್ಲಿ ಸಂಚರಿಸುವ ‘ಅರಫಾ’ ಬಸ್‌ನ ಕಂಡಕ್ಟರ್ ನೌಶಾದ್ ಹಾಗೂ ‘ಲಕ್ಷ್ಮೀ’ ಬಸ್‌ನ ಕಂಡಕ್ಟರ್ ಖಲಂದರ್ (ಶಾಹೀದ್) ನಡುವೆ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದೆ. ಜಗಳ ತಾರಕಕ್ಕೇರುತ್ತಿದ್ದಂತೆ, ನೌಶಾದ್ ಕಬ್ಬಿಣದ ರಾಡ್ ಹಿಡಿದು ಬಸ್‌ನೊಳಗೆ ನುಗ್ಗಿ ಖಲಂದರ್ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ಖಲಂದರ್ ಕೂಡ …

Read More »