Breaking News

BigTv News

ಚರಂಡಿ ನೀರು ಬಿಡುವ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ!

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ತೋಲಗಿ ಗ್ರಾಮದಲ್ಲಿ ಚರಂಡಿ ನೀರು ಬಿಡುವ ವಿಚಾರಕ್ಕೆ ನೆರೆಹೊರೆಯವರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಅಮೀರ್ ಮಕ್ತುಮ್ ಹುಸೇನ್ ಪಾಶ್ಘಾಪೂರ ಮೃತಪಟ್ಟಿದ್ದು, ಅಶೋಕ್ ರಾಮಪ್ಪ ಉಗರಕೋಡ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮಾತಿನ ಚಕಮಕಿ ವೇಳೆ ಆರೋಪಿ ಕಬ್ಬಿಣದ ಸಲಕಿಯಿಂದ ಅಮೀರ್ ಅವರ ಎದೆಗೆ ಚುಚ್ಚಿದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಅವರು ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಘಟನಾ ಸ್ಥಳಕ್ಕೆ ನಂದಗಡ ಪೊಲೀಸರು …

Read More »

ಬೆಂಗಳೂರು | ಆಭರಣ ಕಳ್ಳತನ: ಕೇರ್‌ಟೇಕರ್ ಬಂಧನ

ಬೆಂಗಳೂರು: ಮನೆಯಲ್ಲಿ ವೃದ್ಧ ದಂಪತಿ ನಿದ್ರಿಸುತ್ತಿದ್ದ ವೇಳೆ ಕೊರಳಿನಲ್ಲಿದ್ದ ಚಿನ್ನದ ಸರವನ್ನು ಕಳ್ಳತನ ಮಾಡಿಕೊಂಡು ಪರಾರಿ ಆಗಿದ್ದ ಕೇರ್‌ಟೇಕರ್‌ನನ್ನು ಪುಲಕೇಶಿನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ರಮಣಿ (48) ಬಂಧಿತ ಆರೋಪಿ. ಆರೋಪಿಯಿಂದ ₹2 ಲಕ್ಷ ಮೌಲ್ಯದ 17 ಗ್ರಾಂ ಆಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.ಪುಲಕೇಶಿನಗರ ಠಾಣಾ ವ್ಯಾಪ್ತಿಯ ಬಡಾವಣೆಯೊಂದರಲ್ಲಿ ವೃದ್ಧ ದಂಪತಿ ನೆಲಸಿದ್ದರು. ಅವರನ್ನು ನೋಡಿಕೊಳ್ಳಲು ರಮಣಿ ಅವರನ್ನು ನೇಮಿಸಲಾಗಿತ್ತು. ಜುಲೈ 17ರಂದು ವೃದ್ಧ ದಂಪತಿ …

Read More »

ದಾವಣಗೆರೆಯಲ್ಲಿ ಜಿಮ್ ಜಿಹಾದ್ ಕೇಸ್ ಗೆ ಟ್ವಿಸ್ಟ್: ಲವ್ ಜಿಹಾದ್ ಅಲ್ಲ, ಇದು ಬರೀ ಹಣಕ್ಕಾಗಿ ನಡೆದ ಆಟ ಎಂಬ ಸ್ಫೋಟಕ ಆರೋಪ ಮಾಡಿದ ಇಸ್ಮಾಯಿಲ್ ತಾಯಿ!

ದಾವಣಗೆರೆ: ‘ಪವರ್ ಫಿಟ್ನೆಸ್’ ಜಿಮ್ ಮಾಲೀಕ ಇಸ್ಮಾಯಿಲ್ ವಿರುದ್ಧದ ಆರೋಪಗಳಿಗೆ ಹೊಸ ತಿರುವು ಸಿಕ್ಕಿದ್ದು, ಆತನ ತಾಯಿ ಇಡೀ ಪ್ರಕರಣವು ಮಹಿಳೆ ಹಾಗೂ ಆಕೆಯ ಪತಿ ನಡೆಸಿದ ‘ಹನಿಟ್ರ್ಯಾಪ್’ ಎಂದು ಆರೋಪಿಸಿದ್ದಾರೆ. ಹಣಕ್ಕಾಗಿ ಮೊದಲು ₹4 ಲಕ್ಷ ಪಡೆದು, ಬಳಿಕ ₹15 ಲಕ್ಷಕ್ಕೆ ಬೇಡಿಕೆ ಇಟ್ಟು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಇಸ್ಮಾಯಿಲ್‌ಗೆ ಒಬ್ಬ ಮಹಿಳೆಯೊಂದಿಗೆ ಸಂಬಂಧ ಇದ್ದದ್ದು ನಿಜ, ಆದರೆ 12ಕ್ಕೂ ಹೆಚ್ಚು ಮಹಿಳೆಯರಿಗೆ ಮೋಸ ಮಾಡಿದ …

Read More »

₹120 ಕೋಟಿ ಮೌಲ್ಯದ ಆದಿಚುಂಚನಗಿರಿ ಮಠದ ಜಮೀನು ಕಬಳಿಕೆ: ಸ್ಮಶಾನದ ಸಮಾಧಿ ಹುಡುಕಿ ಸ್ಕೆಚ್ ಹಾಕಿದ್ದ11 ಮಂದಿ ಅರೆಸ್ಟ್!

ಬೆಂಗಳೂರು: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಸೇರಿದ ₹120 ಕೋಟಿ ಮೌಲ್ಯದ 6 ಎಕರೆ ಜಮೀನನ್ನು ನಕಲಿ ದಾಖಲೆಗಳ ಮೂಲಕ ಕಬಳಿಸಿದ ಪ್ರಕರಣವನ್ನು ಕೆಂಗೇರಿ ಪೊಲೀಸರು ಭೇದಿಸಿದ್ದಾರೆ. ಪ್ರಕರಣದಲ್ಲಿ 6 ಸರ್ಕಾರಿ ಅಧಿಕಾರಿಗಳು ಸೇರಿದಂತೆ ಒಟ್ಟು 11 ಆರೋಪಿಗಳನ್ನು ಬಂಧಿಸಿದ್ದು, ಪ್ರಮುಖ ಆರೋಪಿ ನರೇಶ್ ಗೌಡ ತಲೆಮರೆಸಿಕೊಂಡಿದ್ದಾನೆ. ಆರೋಪಿಗಳು ಸ್ಮಶಾನದಲ್ಲಿ ಮೂಲ ಜಮೀನಿನ ಮಾಲೀಕರ ಹೆಸರಿನ ಸಮಾಧಿ ಪತ್ತೆಹಚ್ಚಿ, ಅದನ್ನು ಆಧರಿಸಿ ನಕಲಿ ವಂಶವೃಕ್ಷ ಹಾಗೂ ಸಾಲಾವಳಿ ಪತ್ರಗಳನ್ನು ಸೃಷ್ಟಿಸಿದ್ದರು. …

Read More »

ಬಾಕಿ ಚಿಲ್ಲರೆ ಕೇಳಿದ್ದಕ್ಕೆ ಪ್ರಯಾಣಿಕನ ವಿರುದ್ಧವೇ ಜಗಳಕ್ಕಿಳಿದ ಬಸ್ ಕಂಡಕ್ಟರ್

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಕರೊಬ್ಬರು ತಮಗೆ ಬರಬೇಕಾದ ಬಾಕಿ ಚಿಲ್ಲರೆ ಹಣವನ್ನು ಕೇಳಿದ್ದಕ್ಕೆ ನಿರ್ವಾಹಕ (ಕಂಡಕ್ಟರ್) ಜಗಳ ತೆಗೆದು ಅಸಭ್ಯವಾಗಿ ವರ್ತಿಸಿದ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ಸಾರಿಗೆ ಸಿಬ್ಬಂದಿಯ ನಡವಳಿಕೆ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಚಿಲ್ಲರೆ ಹಣ ಕೇಳಿದ ಪ್ರಯಾಣಿಕನೊಂದಿಗೆ ಕಂಡಕ್ಟರ್ ವಾಗ್ವಾದ ನಡೆಸಿ, ಸಾರ್ವಜನಿಕರ ಎದುರೇ ದುರ್ವರ್ತನೆ ತೋರಿದ್ದಾನೆ. ಪ್ರಯಾಣಿಕರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕಾದ ಸಿಬ್ಬಂದಿಯ …

Read More »

ಚರಂಡಿಯಲ್ಲಿ ನೀರು ಹರಿಸುವ ವಿಚಾರಕ್ಕೆ ಪಿಕಾಸಿಯಿಂದ ವ್ಯಕ್ತಿಯ ಕೊಲೆ

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ತೊಲಗಿ ಗ್ರಾಮದಲ್ಲಿ ಮನೆಯ ಹಿಂಭಾಗದ ಚರಂಡಿ ಮೂಲಕ ನೀರು ಹರಿಸುವ ವಿಚಾರವಾಗಿ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಅಮೀರ್ ಹುಸೇನ್ ಪಾಚಾಪುರ್ (48) ಮೃತಪಟ್ಟಿದ್ದು, ಅಶೋಕ್ ರಾಮಾ ಉಗುರುಕೋಡ್ (28) ಎಂಬ ಆರೋಪಿಯನ್ನು ನಂದಗಡ ಪೊಲೀಸರು ಘಟನೆ ನಡೆದ ಒಂದು ಗಂಟೆಯೊಳಗೆ ವಶಕ್ಕೆ ಪಡೆದಿದ್ದಾರೆ. ಕಳೆದ ಕೆಲವು ದಿನಗಳಿಂದ ಇಬ್ಬರ ನಡುವೆ ಈ ವಿಚಾರವಾಗಿ ಭಿನ್ನಾಭಿಪ್ರಾಯವಿದ್ದು, ಮಂಗಳವಾರ ಬೆಳಗ್ಗೆ ನಡೆದ ಮಾತಿನ ಚಕಮಕಿ ವೇಳೆ …

Read More »

ಕೋಟ: ರಾ.ಹೆ. 66ರಲ್ಲಿ ಯುವಕ ಹುಚ್ಚಾಟ: ಪೊಲೀಸರ ಮೇಲೆ ಕತ್ತಿ ಬೀಸಿ ಹಲ್ಲೆಗೆ ಯತ್ನ

ಉಡುಪಿ ಜಿಲ್ಲೆಯ ಕೋಟ ಸಮೀಪ ರಾಷ್ಟ್ರೀಯ ಹೆದ್ದಾರಿ-66ರ ಮಧ್ಯೆ ಟೇಬಲ್ ಇಟ್ಟು, ಟಿವಿ ಹಾಗೂ ಸಂಗೀತ ವ್ಯವಸ್ಥೆ ಅಳವಡಿಸಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದಡಿ 25 ವರ್ಷದ ರಂಜಿತ್ ಸೋಮಯಾಜಿ ಎಂಬ ಯುವಕನನ್ನು ಕೋಟ ಪೊಲೀಸರು ಬಂಧಿಸಿದ್ದಾರೆ. ಸೋಮವಾರ ನಡೆದ ಈ ಘಟನೆಯಿಂದ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಉದ್ದನೆಯ ಕೂದಲು ಮತ್ತು ಗಡ್ಡ ಹೊಂದಿದ್ದ ಯುವಕನ ವಿಚಿತ್ರ ವರ್ತನೆ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ …

Read More »

ಪತ್ನಿಯ ಮುಗಿಸಲು ಮಚ್ಚು ಹಿಡಿದು ಅಟ್ಟಾಡಿಸಿದ ಪಿಎಸ್‌ಐ ಭೈರಪ್ಪ ಅರೆಸ್ಟ್

ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್ಐ ಭೈರಪ್ಪ ಅವರನ್ನು ಪತ್ನಿಯ ಕೊಲೆ ಯತ್ನ ಹಾಗೂ ವರದಕ್ಷಿಣೆ ಕಿರುಕುಳ ಆರೋಪದಡಿ ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಪತ್ನಿಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ್ದರೆಂಬ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಭೈರಪ್ಪ ಅವರು ಕಳೆದ ಕೆಲವು ಸಮಯದಿಂದ ಪತ್ನಿಗೆ ವರದಕ್ಷಿಣೆಗಾಗಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಕೌಟುಂಬಿಕ ಕಲಹ …

Read More »

ಕಲಬುರಗಿ: ಸೆಂಟ್ರಲ್ ‌ಜೈಲಿನಿಂದ‌ ಮೂವರು ಸಜಾ‌ ಕೈದಿಗಳು ಪರಾರಿ

ಕಲಬುರಗಿ ಕೇಂದ್ರ ಕಾರಾಗೃಹದಿಂದ ಮಂಗಳವಾರ ನಸುಕಿನ ವೇಳೆ ಮೂವರು ಸಜಾ ಕೈದಿಗಳು ಜೈಲಿನ ಕಾಂಪೌಂಡ್ ಹಾರಿ ಪರಾರಿಯಾಗಿದ್ದಾರೆ. ಈ ಘಟನೆ ಬೆಳಕಿಗೆ ಬಂದ ಬಳಿಕ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ. ಪರಾರಿಯಾದವರು ಬೀದರ್ ಜಿಲ್ಲೆಯ ಮಸ್ತಾನ್, ಸಂತೋಷ ಹಾಗೂ ಸಾಗರ ಎಂದು ಗುರುತಿಸಲಾಗಿದ್ದು, ಮೂವರೂ ಕೊಲೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು. ಅವರ ಪತ್ತೆಗಾಗಿ ಪೊಲೀಸರು ವ್ಯಾಪಕ ಶೋಧ ಕಾರ್ಯ ಆರಂಭಿಸಿದ್ದಾರೆ. ಸೋಮವಾರವೇ ಪೊಲೀಸ್ ಅಧಿಕಾರಿಗಳು ಜೈಲಿನ ಭದ್ರತಾ ವ್ಯವಸ್ಥೆ ಪರಿಶೀಲಿಸಿದ್ದರೂ, ಮರುದಿನವೇ …

Read More »

ಗಂಡನ ಸಾಲ ತೀರಿಸಲು ಒತ್ತಾಯ: ಮಗುವಿನ ಜತೆ ತಾಯಿ ಆತ್ಮಹತ್ಯೆ

ಬೆಳಗಾವಿ: ಇಲ್ಲಿನ ಪೀರನವಾಡಿಯಲ್ಲಿ ತನ್ನ ಮೂರು ವರ್ಷದ ಮಗನನ್ನು ಸೀರೆಯಿಂದ ನೇಣು ಬಿಗಿದು ಕೊಂದು ತಾಯಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ. ಪೀರನವಾಡಿ ಪಾಟೀಲ ಗಲ್ಲಿಯ ಪ್ರೇಮಾ ನಾಗೇಶ ತಳವಾರ(28) ಹಾಗೂ ಪವನ್‌(3) ಮೃತರು. ಬೆಳಗಾವಿ ತಾಲೂಕಿನ ಹುದಲಿ ಗ್ರಾಮದ ನಾಗೇಶ ತಳವಾರ ಜತೆಗೆ 6 ವರ್ಷಗಳ ಹಿಂದೆ ಪ್ರೇಮಾ ವಿವಾಹವಾಗಿತ್ತು. ಆರಂಭದಲ್ಲಿ ಕುಟುಂಬದವರೊಂದಿಗೆ ವಾಸವಾಗಿದ್ದರು. ಅನಂತರ ನಾಗೇಶ ಉದ್ಯಮಬಾಗದಲ್ಲಿರುವ ಕಾರ್ಖಾನೆಯಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸಕ್ಕೆ ಸೇರಿದ್ದ. ಹೀಗಾಗಿ …

Read More »