Breaking News

BigTv News

ಹೆಡ್ ಬುಷ್ ಚಿತ್ರದ ವಿರುದ್ಧ ಪ್ರಕರಣ ದಾಖಲು

ಚಿತ್ರದುರ್ಗ :ಅಕ್ಟೋಬರ್​ 21ರಂದು ಈ ಚಿತ್ರ ಬಿಡುಗಡೆ ಆಯಿತು. ಜನರಿಂದ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದೆ. ಅದರ ಜೊತೆಗೆ ವಿವಾದವೂ ಹುಟ್ಟಿಕೊಂಡಿದೆ. ಈ ಸಿನಿಮಾದಲ್ಲಿ ಡಾಲಿ ಧನಂಜಯ್​  ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಡಾನ್​ ಜಯರಾಜ್​ ಪಾತ್ರದಲ್ಲಿ ಧನಂಜಯ್​ ಮಿಂಚಿದ್ದಾರೆ. ಆದರೆ ವೀರಗಾಸೆ ಕಲಾವಿದರ ಮೇಲೆ ಹಲ್ಲೆ ಮಾಡುವಂತಹ ದೃಶ್ಯಗಳು ಈ ಚಿತ್ರದಲ್ಲಿ ಇವೆ ಎಂಬ ಕಾರಣಕ್ಕೆ ಕೆಲವರು ಈ ಸಿನಿಮಾ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ಕುರಿತಂತೆ ವಿಶ್ವ …

Read More »

ಮೀನುಗಳನ್ನು ಹೊತ್ತು ಹೊರಟ್ಟಿದ ವಾಹನ ಪಲ್ಟಿ : ರಸ್ತೆ ತುಂಬ ಮೀನಗಳ ಅನಾವರಣ

ಉಡುಪಿ: ರಸ್ತೆ ಮೇಲೆ ವಾಹನಗಳು ಸಾಗುವಾಗ ದನ-ಕರುಗಳು, ನಾಯಿಗಳು ಕಂಡುಬರುವುದು ಸಾಮಾನ್ಯ. ಆದರೆ ಇಲ್ಲೊಂದು ಕಡೆ ಇಂದು ಮೀನಿನ ರಾಶಿಯೇ ಕಂಡುಬಂದಿದೆ. ಮಾರ್ಗ ಮಧ್ಯೆ ಮೀನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಪ್ರಕರಣವೊಂದು ವರದಿಯಾಗಿದೆ. ಉಡುಪಿ ಜಿಲ್ಲೆಯ ಕಾಪುವಿನ ಉಚ್ಚಿಲ ಮೂಳೂರು ಸಲಪಿ ಮಸೀದಿ ಬಳಿ ಹೀಗೊಂದು ದೃಶ್ಯ ಕಂಡುಬಂದಿದೆ. ಮಂಗಳೂರಿನಿಂದ ಉಡುಪಿ ಕಡೆಗೆ ಮೀನುಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಮಗುಚಿಬಿದ್ದ ಪರಿಣಾಮವಾಗಿ ಅದರಲ್ಲಿದ್ದ ಟ್ರೇಗಳಲ್ಲಿ ಬಿದ್ದು, ಮೀನುಗಳು ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾಗಿವೆ. ಉಚ್ಚಿಲ …

Read More »

60 ವರ್ಷದಿಂದ ಸ್ನಾನವೇ ಮಾಡದೇವಿರುವ ವ್ಯಕ್ತಿ ನಿಧನ

ಇರಾನ್‌ :  ಪ್ರಜೆಯಾಗಿರುವ ಅಮೌ ಹಾಜಿ 60 ವರ್ಷದಿಂದ ಸ್ನಾನವೇ ಮಾಡಿರಲಿಲ್ಲ. ಸ್ನಾನ ಮಾಡದೇ ಇರುವುದರಿಂದಲೇ ನಾನು ಇಷ್ಟು ವರ್ಷ ಜೀವಿಸಿದ್ದೇನೆ ಎಂದು ನಂಬಿದ್ದರು. ಇರಾನ್‌ ನ ಬರಪೀಡಿತ ಪ್ರದೇಶದ ಸಮೀಪವಿರುವ ಡೆಜಾಘ್‌ ಗ್ರಾಮದ ಸಣ್ಣ ಕೋಣೆಯಲ್ಲಿ ವಾಸವಾಗಿದ್ದ ಅಮೌ ಹಾಜಿ, ಹೊದ್ದುಕೊಳ್ಳಲು ಒಂದು ಬೆಡ್‌ ಶೀಟ್‌ ಮಾತ್ರ ಹೊಂದಿದ್ದರು. 60 ವರ್ಷದಿಂದ ಸ್ನಾನ ಮಾಡದೇ ಸೋಪು ಕೂಡ ಬಳಸದೇ ಜೀವಿಸಿದ್ದ ಅವರು, ಇತ್ತೀಚೆಗಷ್ಟೇ ಮೊದಲ ಬಾರಿ ಸ್ನಾನ ಮಾಡಿದ್ದರು. …

Read More »

ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ 7 ವರ್ಷದ ಬಾಲಕ ಬಲಿ

ಬೆಳಗಾವಿ: ಏಳು ವರ್ಷದ ಬಾಲಕ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಲಿಯಾಗಿರುವ ಘಟನೆ ಖಾನಾಪುರ ತಾಲೂಕಿನ ಕಾಮಸಿನಕೊಪ್ಪ ಗ್ರಾಮದಲ್ಲಿ ನಡೆದಿದೆ. ಬಸಪ್ಪ ಕೊಲಕಾರ್ ಮೃತಪಟ್ಟಿರುವ ಬಾಲಕ. ಮೃತ ಬಾಲಕನು ಬೆಳಿಗ್ಗೆ ಮನೆ ಹೊರಗಡೆ ಶೌಚಾಲಯಕ್ಕೆ ಹೋಗಿದ್ದ ಸಂದರ್ಭದಲ್ಲಿ ಮರಕ್ಕೆ ಮುಟ್ಟಿದ್ದರಿಂದ ಈ ಅವಘಡ ಸಂಭವಿಸಿದೆ. ಇನ್ನು ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮನಕರಗುವಂತಿದೆ. ಇನ್ನು ಗ್ರಾಮಸ್ಥರು, ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಈ ದುರ್ಘಟನೆ ಸಂಭವಿಸಿದೆ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ. ಹೆಸ್ಕಾಂ ಅಧಿಕಾರಿಗಳು ವಿದ್ಯುತ್ …

Read More »

ಮಲೆ ಮಹದೇಶ್ವರ ಬೆಟ್ಟದಲ್ಲಿ ಬಸ್ಸೊಂದು ಹಳ್ಳಕ್ಕೆ ಉರುಳಿ ಬಿದ್ದು 25 ಜನ ಗಾಯ

ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮುಗಿಸಿ ವಾಪಸ್ ಆಗುತ್ತಿದ್ದ ಕೆಎಸ್ ಆರ್ ಟಿಸಿ ಬಸ್ಸೊಂದು ಹಳ್ಳಕ್ಕೆ ಉರುಳಿ ಬಿದ್ದು 25 ಜನ ಗಾಯಗೊಂಡಿರುವ ಘಟನೆ ತಾಳಬಿಟ್ಟ ಸಮೀಪ ನಡೆದಿದೆ. ಮಹದೇಶ್ವರ ಬೆಟ್ಟದಿಂದ ಹೊರಟ ಬಸ್ಸು ತಾಳಬೆಟ್ಟ ಸಮೀಪ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿ ಬಿದ್ದಿದೆ. ಘಟನೆಯಿಂದ 25 ಜನ ಗಾಯಗೊಂಡಿದ್ದು ಎಲ್ಲರನ್ನೂ ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. …

Read More »

ಅ.27, 28 ರಂದು ಜಾತ್ಯತೀತ ಜನತಾದಳದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ

ಬೆಂಗಳೂರು: ಜಾತ್ಯತೀತ ಜನತಾದಳದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಎರಡು ದಿನಗಳ ಕಾಲ (ಅ.27-28) ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆಯುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು. ಇಂದಿಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ಕಾರ್ಯಕಾರಿಣಿ ಸಭೆಯಲ್ಲಿ ಕರ್ನಾಟಕವೂ ಸೇರಿ 13 ರಾಜ್ಯಗಳಿಂದ ಪದಾಧಿಕಾರಿಗಳು, ಕಾರ್ಯಕಾರಿಣಿ ಸದಸ್ಯರು ಭಾಗಿಯಾಗಲಿದ್ದಾರೆ ಎಂದರು. ಈ ಕಾರ್ಯಕಾರಣಿ ಸಭೆಯಲ್ಲಿ ರಾಷ್ಟ್ರದ ರಾಜ್ಯದ ರಾಜಕೀಯ ಬೆಳವಣಿಗೆ, ಆರ್ಥಿಕ ವಿಚಾರಗಳು, ಕೋಮು ಸಂಘರ್ಷದ ವಿಷಯಗಳ …

Read More »

ನ. 11 ರಂದು KIAB ಬಳಿ ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ

ಬೆಂಗಳೂರು: ನ. 11 ರಂದು KIAB ಬಳಿ ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ ನಡೆಯಲಿದ್ದು, ಇಂದು ಬೆಳಗ್ಗೆ 11 ಗಂಟೆಗೆ ಪ್ರಧಾನಿ ಮೋದಿ ಅವರು ಕಾರ್ಯಕ್ರಮದ ಕುರಿತಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿಯವರು ಕಾರ್ಯಕ್ರಮದ ಕುರಿತಾಗಿ ಚರ್ಚೆ ನಡೆಸುವರು. ನ. 11ರಂದು ಇತರೆ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತಾಗಿ ಪ್ರಧಾನಿ ಚರ್ಚೆ ನಡೆಸಲಿದ್ದಾರೆ. ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸುವವರು. …

Read More »

ಕೃಷ್ಣ ಶಿಲೆಯಲ್ಲಿ ಪವರ್ ಸ್ಟಾರ್ ಪ್ರತಿಮೆ ನಿರ್ಮಾಣ

ಬಳ್ಳಾರಿ: ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅಕಾಲಿಕ ಮರಣ ಅಭಿಮಾನಿಗಳಿಗೆ ಇನ್ನೂ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಅವರು ಮೃತಪಟ್ಟು ವರ್ಷ ಕಳೆಯುತ್ತಾ ಬಂದಿದೆ. ಅಪ್ಪು ಕಣ್ಮರೆಯಾದರು ಪುನೀತ್​ ರಾಜಕುಮಾರ್​ ಇನ್ನೂ ಅಭಿಮಾನಿಗಳ ಮನಸ್ಸಿನಿಂದ ಮಾಸಿಲ್ಲ. ಅಪ್ಪು ಇನ್ನಿಲ್ಲವಾದರೂ ತಮ್ಮ ನೆಚ್ಚಿನ ನಟ ಹಾಕಿಕೊಟ್ಟ ಮಾರ್ಗದಲ್ಲಿ ಅಭಿಮಾನಿಗಳು ನಡೆಯುತ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಮ್ಮೊಂದಿಗೆ ಇಲ್ಲದಿದ್ದರೂ ಕೂಡ ಅವರು ಮಾಡಿರುವ ಸಮಾಜಮುಖಿ ಕೆಲಸಗಳು ಎಂದಿಗೂ ಜೀವಂತವಾಗಿದೆ. ಅಪ್ಪು ಮರೆಯಾದ ಬಳಿಕ ಗಣಿ …

Read More »

ಅ. 28ರಂದು ಕೋಟಿ ಕಂಠ ಗಾಯನ ಕಾರ್ಯಕ್ರಮ

ಬೆಂಗಳೂರು:ನವೆಂಬರ್ 1 ಕನ್ನಡ ರಾಜ್ಯೋತ್ಸವ ನಿಮಿತ್ತ, ಅಕ್ಟೋಬರ್ 28ರಂದು ಕೋಟಿ ಕಂಠ ಗಾಯನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ. ಕ್ಯೂಆರ್ ಕೋಡ್ ಮೂಲಕ 1.10 ಕೋಟಿ ಜನ ನೋಂದಣಿ ಮಾಡಿಕೊಂಡಿದ್ದು, ನನ್ನ ನಾಡು ನನ್ನ ಹಾಡು ಘೋಷಣೆಯೊಂದಿಗೆ ಗಾಯನ ನಡೆಯಲಿದೆ ಎಂದರು. ರಾಜ್ಯ ಸರ್ಕಾರದಿಂದ ಅಕ್ಟೋಬರ್ 28, 2022ರಂದು ನನ್ನ ನಾಡು, ನನ್ನ ಹಾಡು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ …

Read More »

ಗಂಗಾಧರ ದೊಡ್ಡವಾಡ ಅವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

BIG TV NEWS Subscribe like share

Read More »