ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮುಗಿಸಿ ವಾಪಸ್ ಆಗುತ್ತಿದ್ದ ಕೆಎಸ್ ಆರ್ ಟಿಸಿ ಬಸ್ಸೊಂದು ಹಳ್ಳಕ್ಕೆ ಉರುಳಿ ಬಿದ್ದು 25 ಜನ ಗಾಯಗೊಂಡಿರುವ ಘಟನೆ ತಾಳಬಿಟ್ಟ ಸಮೀಪ ನಡೆದಿದೆ.
ಮಹದೇಶ್ವರ ಬೆಟ್ಟದಿಂದ ಹೊರಟ ಬಸ್ಸು ತಾಳಬೆಟ್ಟ ಸಮೀಪ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿ ಬಿದ್ದಿದೆ. ಘಟನೆಯಿಂದ 25 ಜನ ಗಾಯಗೊಂಡಿದ್ದು ಎಲ್ಲರನ್ನೂ ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯಿಂದ ಬಸ್ಸಿನ ಚಾಲಕ ಚಂದ್ರಶೇಖರ್ ನಿರ್ವಾಹಕ ಪ್ರಕಾಶ್ ಕಾವೇರಿಪುರದ ನಂಜಮ್ಮ ಮತ್ತು ಹೊನ್ನೂರು ಗ್ರಾಮದ ರಾಮಚಂದ್ರ ಎಂಬುವರಿಗೆ ಹೆಚ್ಚಿನ ಪ್ರಮಾಣದಲ್ಲಿ ಪೆಟ್ಟಾಗಿದ್ದು ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

