ಹುಬ್ಬಳ್ಳಿ : ಅವಳಿ ನಗರದ ಜನರ ಬಹುದಿನಗಳ ಕನಸು ನನಸಾಗುವ ದಿನ ಹತ್ತಿರವಾಗಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯಿಂದ ದೆಹಲಿಗೆ ನೇರ ವಿಮಾನ ಸೇವೆ ಆರಂಭಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಹಿತಿ ಹಂಚಿಕೊಂಡಿದ್ದಾರೆ. ಇಂಡಿಗೋ ಏರ್ ಲೈನ್ಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಹುಬ್ಬಳ್ಳಿಯಿಂದ ದೆಹಲಿಗೆ ನಿತ್ಯ ನೇರ ವಿಮಾನ ಸೇವೆ ಪ್ರಾರಂಭಿಸುವಂತೆ ಕೆಲವು ದಿನಗಳ ಹಿಂದೆ ಕೋರಿಕೊಳ್ಳಲಾಗಿತ್ತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಅವರು ಇದೇ ನವೆಂಬರ್ 14, 2022ರಿಂದ …
Read More »ಹುಬ್ಬಳ್ಳಿ ಯಲ್ಲಿ ಖೋಟಾ ನೋಟಿನ ಹಾವಳಿ: ಮೂವರನ್ನು ಬಂಧನ
ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಇಷ್ಟು ದಿನ ಬಂದ್ ಆಗಿದ್ದ ಖೋಟಾ ನೋಟ್ ಚಲಾವಣೆ ಮತ್ತೇ ಮುನ್ನೆಲೆಗೆ ಬಂದಿದೆ. ಪ್ರಖ್ಯಾತಿ ಮತ್ತು ಕುಖ್ಯಾತಿಗಳನ್ನು ಶ್ರೇಣೀಕೃತ ಹಂತದಲ್ಲಿ ಸರಿದೂಗಿಸಿಕೊಂಡು ಹೋಗುತ್ತಿರುವ ಹುಬ್ಬಳ್ಳಿಯಲ್ಲಿ ಖೋಟಾ ನೋಟಿನ ಹಾವಳಿ ಮತ್ತೇ ಸದ್ದು ಮಾಡುತ್ತಿದೆ. ಹುಬ್ಬಳ್ಳಿಯ ಚನ್ನಮ್ಮ ಬಸ್ ನಿಲ್ದಾಣದ ಬಳಿ ಖೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ ಮೂವರನ್ನು ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಶಿವಾನಂದ ಕಾರಜೋಳ, ವಿಜಯಪುರದ ಅಡವಿ …
Read More »ಸೇತುವೆ ಮೇಲೆ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿ ರಕ್ಷಣೆ
ಕಲಘಟಗಿ: ತಾಲೂಕಿನ ಗಂಜಿಗಟ್ಟಿ ಗ್ರಾಮದ ಹಿರೆಕೆರೆ ತುಂಬಿ ನೀರು ಅಪಾಯದ ಮಟ್ಟ ಮಿರಿ ಸೇತುವೆ ಮೇಲೆ ಉಬ್ಬು ಹಾರಿ ಹೋಗುತ್ತಿದ್ದು ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ತೆರಳಲು ಹರಸಾಹಸ ಮಾಡುತ್ತಿದ್ದಾರೆ. ಇಂದು ಮುಂಜಾನೆ ಸೇತುವೆ ಮೇಲೆ ವ್ಯಕ್ತಿಯೋರ್ವ ದಾಟುವಾಗ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದು ಕೂಡಲೆ ಸ್ಥಳದಲ್ಲಿದ್ದ ಗ್ರಾಮಸ್ಥರು ಆತನನ್ನು ರಕ್ಷಣೆ ಮಾಡಿದ್ದಾರೆ. ಇನ್ನು ವ್ಯಕ್ತಿ ರಕ್ಷಣೆ ಸಂದರ್ಭದಲ್ಲಿ ಹಗ್ಗ ದೊರಕದ ಹಿನ್ನೆಯಲ್ಲಿ ಅಲ್ಲಿಯ ಮಹಿಳೆಯರು ತಮ್ಮ ಸೀರೆ ನೀಡಿ ವ್ಯಕ್ತಿ ಪ್ರಾಣ …
Read More »ಧಾರವಾಡದಲ್ಲಿ ಕುಸಿದುಬಿದ್ದ ಮನೆ: ತಪ್ಪಿದ ದುರಂತ
ಧಾರವಾಡ: ಕಳೆದ ಎರಡು ದಿನಗಳಿಂದ ಧಾರಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಧಾರವಾಡ ಜನ್ನತಗರದಲ್ಲಿ ನಿನ್ನೆ ಮನೆಯೊಂದು ಕುಸಿದು ಬಿದ್ದಿದ್ದು, ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.ಜನ್ನತನಗರ 8ನೇ ಕ್ರಾಸ್ನಲ್ಲಿರುವ ಕಲಾಲ ಎಂಬುವವರಿಗೆ ಸೇರಿದ ಮನೆಯೇ ರಾತ್ರಿ ಕುಸಿದು ಬಿದ್ದಿದೆ. ನಾಲ್ಕು ಜನ ಮನೆಯ ಸದಸ್ಯರು ಮಲಗಿದ್ದ ವೇಳೆಯೇ ಮನೆ ಕುಸಿದು ಬಿದ್ದಿದೆ. ಮೊದಲಿಗೆ ಮನೆಯ ಗೋಡೆಯಿಂದ ಮಣ್ಣು ಕುಸಿದ ಸಪ್ಪಳ ಕೇಳಿದ ಮನೆಯ ಸದಸ್ಯರು ಕೂಡಲೇ ಎದ್ದು ಹೊರಗಡೆ ಓಡಿ ಬಂದು ತಮ್ಮ ಪ್ರಾಣ …
Read More »ಶೀಲ ಶಂಕಿಸಿ ಪತ್ನಿಯನ್ನೇ ಕೊಲೆಗೈದು ಕೊನೆಗೆ ತಾನೂ ನೇಣು ಬಿಗಿದುಕೊಂಡ ಪತಿ
ಧಾರವಾಡ: ತನ್ನ ಪತ್ನಿಯ ಶೀಲ ಶಂಕಿಸಿದ ಪತಿರಾಯನೊಬ್ಬ ಆಕೆಯನ್ನು ಕೊಲೆ ಮಾಡಿ ಕೊನೆಗೆ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದಲ್ಲಿ ನಡೆದಿದೆ. ಶ್ರೀದೇವಿ ರಾಮಾಪುರ ಎಂಬುವವಳೇ ಪತಿಯಿಂದ ಕೊಲೆಯಾದವಳು. ರಾಜು ರಾಮಾಪುರ ಎಂಬಾತನೇ ನೇಣು ಹಾಕಿಕೊಂಡು ಕೊನೆಗೆ ಆತ್ಮಹತ್ಯೆ ಮಾಡಿಕೊಂಡವನು. ಪತ್ನಿಯ ಮೇಲೆ ಸಂಶಯಪಡುತ್ತಿದ್ದ ರಾಜು, ಆಕೆಯನ್ನು ಹೊಲದಲ್ಲೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಆನಂತರ ತಾನೂ ಹೊಲದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ …
Read More »ಕರ್ತವ್ಯಯಲ್ಲಿದ್ದ ಯೋಧ ಹೃದಯಾಘಾತದಿಂದ ಹುತಾತ್ಮ
ಮಡಿಕೇರಿ: ರಾಜ್ಯದಲ್ಲಿ ಅತಿಹೆಚ್ಚು ಸೇನೆಗೆ ಯೋಧರನ್ನು ಕೊಟ್ಟ ಜಿಲ್ಲೆ ಕೊಡಗು. ಈ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ತಾಕೇರಿ ಮೂಲದ ಯೋಧರೊಬ್ಬರು ಸೇನೆಯಲ್ಲಿ ಕರ್ತವ್ಯದಲ್ಲಿದ್ದರು. ಈ ವೇಳೆ ಹೃದಯಾಘಾತದಿಂದ ಹುತಾತ್ಮರಾಗಿದ್ದಾರೆ. ಯೋಧ ಮಹೇಶ್ ಎಂಬುವವರು ಉತ್ತರಾಖಂಡ್ ನ ಜೋಷಿಮತ್ತ್ ಎಂಬಲ್ಲಿ JCO ಆಗಿ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ತಿಂಗಳಷ್ಟೇ ರಜೆಯಲ್ಲಿ ಊರಿಗೆ ಬಂದು ಹೋಗಿದ್ದರು. ಇನ್ನು 4 ವರ್ಷದಲ್ಲಿ ನಿವೃತ್ತಿ ಹೊಂದಲಿದ್ದರು. ದುರಾದೃಷ್ಟವಶಾತ್ ಪತ್ನಿ, ಇಬ್ಬರು ಪುಟ್ಟ ಮಕ್ಕಳನ್ನ ಅಗಲಿದ್ದಾರೆ. …
Read More »ಅಭಿಮಾನಿಗಳಿಗೆ ಉಡುಗೊರೆ ನೀಡಿದ ಅಮಿತಾಭ್ ಬಚ್ಚನ್
ಆ ಹೊತ್ತಿಗೆ ಅಮಿತಾಭ್ ಬಚ್ಚನ್ ಮನೆಯಿಂದ ಹೊರಬರಬಹುದು ಎಂದು ಅಭಿಮಾನಿಗಳ್ಯಾರೂ ನಿರೀಕ್ಷಿಸಿರಲಿಲ್ಲ. ಆದರೂ, ಮಂಗಳವಾರ ಅವರ 80ನೇ ಹುಟ್ಟುಹಬ್ಬವಾದ್ದ ರಿಂದ, ಸೋಮವಾರ ಮಧ್ಯರಾತ್ರಿ ಅವರ ಮನೆ ಮುಂದೆ ಹೋಗಿ, ಹ್ಯಾಪಿ ಬರ್ತ್ಡೇ ಹಾಡಬೇಕು ಎಂದು ಜನ ಪ್ಲ್ಯಾನ್ ಮಾಡಿಕೊಂಡಿದ್ದರು. ಅದರಂತೆ ಮುಂಬೈನ ಬಚ್ಚನ್ ಅವರ ಜಲ್ಸಾ ಮನೆಯ ಎದುರು ಸೇರಿದ್ದರು. 12 ಗಂಟೆಗೆ ಹ್ಯಾಪಿ ಬರ್ತ್ಡೇ ಎನ್ನುವಷ್ಟರಲ್ಲೇ, ಅಮಿತಾಭ್ ಪ್ರತ್ಯಕ್ಷರಾದರು. ಮಗಳು ಶ್ವೇತಾ ನಂದಾ ಜತೆಗೆ ಮನೆಯಿಂದ ಹೊರಬಂದು, ನೆರೆದಿದ್ದ …
Read More »ಸಾಲಭಾದೆಯಿಂದ ನದಿಗೆ ಹಾರಿ ಆತ್ಮಹತ್ಯೆ
ಚಾಮರಾಜನಗರ: ಯುವಕನೋರ್ವ ಸಾಲಭಾದೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕಲ್ಕಟ್ಟೆ ಡ್ಯಾಂ ಬಳಿ ನಡೆದಿದೆ. 24 ವರ್ಷದ ಸಚಿನ್ (24) ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಈತ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದನು. ಸಾಲದ ಸುಳಿಗೆ ಸಿಲುಕಿ ಮಾನಸಿಕ ಒತ್ತಡ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಇನ್ನು, ಈ ಮೃತ ಯುವಕ ಸಚೀನ್, ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮೂವರು ಸ್ನೇಹಿತರಿಗೆ ಮೆಸೇಜ್ ಮಾಡಿ, …
Read More »ತಲೆಗೆ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾದ ಬಿಜೆಪಿ ಮುಖಂಡ
ಮಹಾರಾಷ್ಟ್ರ: ಬಿಜೆಪಿ ಮುಖಂಡರೊಬ್ಬರು ಲೈಸೆನ್ಸ್ ಹೊಂದಿದ ತಮ್ಮ ರಿವಾಲ್ವರ್ ನಿಂದ ತಲೆಗೆ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿರುವ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ಭಗೀರಥ ಬಯಾನಿ ಸಾವನ್ನಪ್ಪಿದವರಾಗಿದ್ದಾರೆ. ಬೀಡ್ ಜಿಲ್ಲಾ ಬಿಜೆಪಿ ಘಟಕದ ಮುಖ್ಯಸ್ಥರಾಗಿದ್ದ ಭಗೀರಥ ಬಯಾನಿ, ಮೀರಾ ನಗರ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ಕೊಠಡಿ ಬಾಗಿಲು ಹಾಕಿಕೊಂಡು ತಲೆಗೆ ಗುಂಡು ಹಾರಿಸಿಕೊಂಡಿದ್ದಾರೆ. ಗುಂಡಿನ ಶಬ್ದ ಕೇಳಿಸಿಕೊಂಡ ಕುಟುಂಬಸ್ಥರು ಕೂಡಲೇ ಬಾಗಿಲು ಹೊಡೆದು ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರಾದರೂ ಅಷ್ಟರಲ್ಲಾಗಲೇ …
Read More »ರಾಜ್ಯಾದ್ಯಂತ ಇನ್ನೂ 2 ದಿನ ಭಾರೀ ಮಳೆ
ಬೆಂಗಳೂರು : ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯಾದ್ಯಂತ ಇನ್ನೂ 2 ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಒಳನಾಡಿನ ಜಿಲ್ಲೆಗಳಾದ ಹಾಸನ, ಚಿಕ್ಕಮಗಳೂರು, ದಾವಣಗೆರೆ, ಬಳ್ಳಾರಿ, ಗದಗ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಯಲ್ಲಿ 6.5 ಸೆಂ.ಮೀ.ನಿಂದ 11.ಸೆಂ.ಮೀ ತನಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





