Breaking News

BigTv News

ಎರಡು ಪ್ರತ್ಯೇಕ ಗುಂಡಿನ ಕಾಳಗದಲ್ಲಿ ನಾಲ್ವರು ಭಯೋತ್ಪಾದಕರ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯಲ್ಲಿ ಬುಧವಾರ ಭದ್ರತಾ ಪಡೆ ಮತ್ತು ಉಗ್ರರ ನಡುವೆ ನಡೆದ ಎರಡು ಪ್ರತ್ಯೇಕ ಗುಂಡಿನ ಕಾಳಗದಲ್ಲಿ ನಾಲ್ವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶೋಪಿಯಾನ್‌ನ ದ್ರಾಚ್‌ ಪ್ರದೇಶದಲ್ಲಿ ಜೈಷ್-ಎ-ಮೊಹಮ್ಮದ್ ಸಂಘಟನೆಯ ಮೂವರು ಉಗ್ರರು ಮತ್ತು ದಕ್ಷಿಣ ಕಾಶ್ಮೀರದ ಮೂಲ್‌ ಪ್ರದೇಶದಲ್ಲಿ ಲಷ್ಕರ್‌ ಎ ತಯಬಾ ಸಂಘಟನೆಯ ಒಬ್ಬ ಉಗ್ರನನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ‘ದ್ರಾಚ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ …

Read More »

ಆಸ್ತಿ ವಿಚಾರಕ್ಕೆ ಸ್ವಂತ ತಮ್ಮನಿಗೆ ಚಾಕು ಇರಿದು ಅಣ್ಣ ಪರಾರಿ

ಹುಬ್ಬಳ್ಳಿ: ಆಸ್ತಿ ಮತ್ತು ಬಂಗಾರದ ವಿಚಾರವಾಗಿ ಸ್ವಂತ ತಮ್ಮನಿಗೆ ಚಾಕು ಇರಿದು ಅಣ್ಣ ಪರಾರಿಯಾಗಿರುವಂತಹ ಘಟನೆ ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ನಡೆದಿದೆ. ಸಂಜಯ್ ಬಾಕಳೆ ಎಂಬುವವನಿಂದ ಸಾಗರ್ ಬಾಕಳೆ ಎಂಬುವವನಿಗೆ ಚಾಕು ಇರಿಯಲಾಗಿದೆ. ಸಂಜಯ್ ಹಾಗೂ ಸಾಗರ್ ಹುಬ್ಬಳ್ಳಿಯ ಕೇಶ್ವಾಪುರ ನಿವಾಸಿಗಳು. ಹಬ್ಬದ ಹಿನ್ನಲೆ ಪೂಜೆಗೆ ಬಂಗಾರ ಕೇಳಿದ್ದಕ್ಕೆ ಚಾಕು ಇರಿಯಲಾಗಿದೆ ಎನ್ನಲಾಗುತ್ತಿದೆ. ಜೊತೆಗೆ ಅಣ್ಣ ತಮ್ಮರ ನಡುವೆ ಆಸ್ತಿ ವಿಚಾರವಾಗಿ ಹಲವಾರು ವರ್ಷಗಳಿಂದ ಕುಟುಂಬದಲ್ಲಿ ಕಲಹವಿತ್ತು. ಅಣ್ಣ ಸಂಜಯ್ ಹಾಗೂ …

Read More »

ಸೌರವ್ ಗಂಗೂಲಿ ಪತ್ನಿಗೆ ಅನಾರೋಗ್ಯ ಆಸ್ಪತ್ರೆಗೆ ದಾಖಲು

ಕೋಲ್ಕೊತ್ತಾ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪತ್ನಿ ಡೋನಾ ಅನಾರೋಗ್ಯಕ್ಕೀಡಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಗೂಲಿ ಪತ್ನಿ ಡೋನಾ ಚಿಕನ್ ಗುನ್ಯಾ ಜ್ವರದಿಂದ ಬಳಲುತ್ತಿದ್ದ, ತೀವ್ರ ಜ್ವರ, ಮೈ-ಕೈ ನೋವಿಗೊಳಗಾಗಿದ್ದಾರೆ. ಹೀಗಾಗಿ ಅವರನ್ನು ಕೋಲ್ಕೊತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಅವರ ಆರೋಗ್ಯದ ಬಗ್ಗೆ ವೈದ್ಯರು ತೀವ್ರ ನಿಗಾ ವಹಿಸಿದ್ದಾರೆ

Read More »

ಚಾಮುಂಡಿ ಬೆಟ್ಟದಲ್ಲಿ ಸ್ಥಳೀಯ ವರ್ತಕರೊಂದಿಗೆ ಸಂವಾದ ಮಾಡಿದ ಸಿಎಂ

ಮೈಸೂರು :  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಂಬೂ ಸವಾರಿಗೆ ಚಾಲನೆ ನೀಡಲು ಮೈಸೂರಿನಲ್ಲಿದ್ದಾರೆ.  ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದರು. ವಿಜಯದಶಮಿಯ ಪ್ರಯುಕ್ತ ಬಸವರಾಜ ಬೊಮ್ಮಾಯಿ ಮೈಸೂರಿ‌ನ ಚಾಮುಂಡಿ ಬೆಟ್ಟದಲ್ಲಿ  ಉತ್ಸವಮೂರ್ತಿಗೆ ಪೂಜೆ ಸಲ್ಲಿಸಿದರು. ಬಳಿಕ ಸ್ಥಳೀಯ ವರ್ತಕರೊಂದಿಗೆ ಸಂವಾದ ನಡೆಸಿದರು. ಚಾಮುಂಡಿ ಬೆಟ್ಟದ ಹೊರಗೆ ಹಣ್ಣುಕಾಯಿ ವ್ಯಾಪಾರಿಗಳ ಕುಶುಲೋಪರಿ ವಿಚಾರಿಸಿದ ಮುಖ್ಯಮಂತ್ರಿಗಳು, ಹಬ್ಬದ ಶುಭಾಶಯಗಳನ್ನು ವಿನಿಮಯಮಾಡಿಕೊಂಡರು.

Read More »

ಚೀತಾ ಹೆಲಿಕ್ಯಾಪ್ಟರ್ ಪತನ : ಪೈಲೆಟ್ ಸಾವು

ನವದೆಹಲಿ : ಭಾರತೀಯ ವಾಯುಸೇನೆಯ ಚೀತಾ ಹೆಲಿಕ್ಯಾಪ್ಟರ್ ಇಂದು ಅರುಣಾಚಲ ಪ್ರದೇಶದ ತಾವಂಗ್ ಜಿಲ್ಲೆಯಲ್ಲಿ ಚೀನಾ ಜೊತೆಗಿನ ಗಡಿ ಸಮೀಪ ಪತನಗೊಂಡಿದ್ದು ಹೆಲಿಕ್ಯಾಪ್ಟರ್ ನ ಪೈಲೆಟ್ ಮೃತಪಟ್ಟಿದ್ದಾರೆ. ಫಾರ್ವರ್ಡ್ ಪ್ರದೇಶದಲ್ಲಿ ನಿಯಮಿತ ಹಾರಾಟ ನಡೆಸುತ್ತಿರುವ ವೇಳೆ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಹೆಲಿಕ್ಯಾಪ್ಟರ್ ಪತನಕ್ಕೆ ಕಾರಣ ತಕ್ಷಣಕ್ಕೆ ತಿಳಿದು ಬಂದಿಲ್ಲ ಎಂದು ರಕ್ಷಣಾ ಇಲಾಖೆಯ ವಕ್ತಾರ ಕರ್ನಲ್ ಎ ಎಸ್ ವಾಲಿಯ ಹೇಳಿದ್ದಾರೆ. ಹೆಲಿಕ್ಯಾಪ್ಟರ್ …

Read More »

ರಸ್ತೆ ಡಿವೈಡರ್ ಗೆ ಕಾರ್ ಡಿಕ್ಕಿ : ಶಾಸಕ ಅರವಿಂದ ಬೆಲ್ಲದ ಅವರ ಚಿಕ್ಕಪ್ಪ ಸಾವು

ಧಾರವಾಡ:  ಎಸ್.ಪಿ. ಕಚೇರಿ ಎದುರು ನಡೆದ ಅಪಘಾತದಲ್ಲಿ ಶಾಸಕ ಅರವಿಂದ ಬೆಲ್ಲದ ಅವರ ಚಿಕ್ಕಪ್ಪ ಶಿವಣ್ಣ ಬೆಲ್ಲದ(82) ಸಾವನ್ನಪ್ಪಿದ್ದಾರೆ. ರಸ್ತೆ ಡಿವೈಡರ್ ಗೆ ಕಾರ್ ಡಿಕ್ಕಿಯಾಗಿ ಶಿವಣ್ಣ ಬೆಲ್ಲದ ಮೃತಪಟ್ಟಿದ್ದಾರೆ. ತಡರಾತ್ರಿ ಧಾರವಾಡದ ಎಸ್ಪಿ ಕಚೇರಿ ಎದುರು ಅಪಘಾತ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಶಿವಣ್ಣ ಬೆಲ್ಲದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶಿವಣ್ಣ ಬೆಲ್ಲದ ಮೃತಪಟ್ಟಿದ್ದಾರೆನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Read More »

ಇಂದಿನಿಂದ 3 ದಿನಗಳ ಕಾಲ ಭಾರೀ ಮಳೆ‌ ಸಾಧ್ಯತೆ

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ 8 ಜಿಲ್ಲೆಗಳಲ್ಲಿ ಇಂದಿನಿಂದ 3 ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ರಾಜ್ಯದ ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ, ಹಾಸನ, ಕೊಡಗು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಇಂದು ಹಳದಿ ಅಲರ್ಟ್​ ಘೋಷಿಸಲಾಗಿದೆ. ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಇಂದಿನಿಂದ ಅ. 8ರವರೆಗೆ ಭಾರೀ ಮಳೆಯಾಗಲಿದೆ. ಆದರೆ, ಉತ್ತರ ಕರ್ನಾಟಕದ ಪ್ರದೇಶಗಳಲ್ಲಿ ಮಳೆ ಕಡಿಮೆಯಾಗಲಿದೆ. ಬೆಂಗಳೂರಿನ …

Read More »

ಟೂರಿಸ್ಟ್ ಬಸ್ಸು ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ: 9 ಮಂದಿ ಸಾವು

ಪಾಲಕ್ಕಾಡ್(ಕೇರಳ): ಪಾಲಕ್ಕಾಡ್‌ನ ವಡಕ್ಕೆಂಚೇರಿ ಬಳಿಯ ಮಂಗಳಂ ಎಂಬಲ್ಲಿ ಬುಧವಾರ ರಾತ್ರಿ ಶಾಲಾ ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಟೂರಿಸ್ಟ್ ಬಸ್ಸೊಂದು ಕೆಎಸ್‌ಆರ್‌ಟಿಸಿ ಬಸ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಒಂಬತ್ತು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಟೂರಿಸ್ಟ್ ಬಸ್‌ನಲ್ಲಿ ಒಟ್ಟು 42 ವಿದ್ಯಾರ್ಥಿಗಳಿದ್ದರು ಮತ್ತು ಕೆಎಸ್‌ಆ​ರ್​ಟಿಸಿ ಬಸ್​ನಲ್ಲಿ 49 ಜನ ಪ್ರಯಾಣಿಕರಿದ್ದರು ಎನ್ನಲಾಗಿದ್ದು, ಘಟನೆಯಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. ಮೃತರನ್ನು ಶಾಲಾ ಶಿಕ್ಷಕಿ ವಿಷ್ಣು ವಿಕೆ ಮತ್ತು ವಿದ್ಯಾರ್ಥಿಗಳಾದ ಅಂಜನಾ ಅಜಿತ್, ಇಮ್ಯಾನುಯೆಲ್ …

Read More »

ದಸರಾ ಹಬ್ಬಕ್ಕೆ ಹೊರಟವರು ಶವವಾಗಿ ಪತ್ತೆ

ಬೆಳಗಾವಿ : ದಸರಾ ಹಬ್ಬಕ್ಕೆಂದು ಊರಿಗೆ ಹಿಂತಿರುತ್ತಿದ್ದಾಗ ಬೈಕ್​ ಟೈರ್ ಪಂಕ್ಚರ್ ಆಗಿ ಬೈಕ್​ ಅಪಘಾತಕ್ಕೀಡಾಗಿದ್ದು, ಮಹಿಳೆ ಮತ್ತು ಬಾಲಕಿ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ನಿಪ್ಪಾಣಿ ತಾಲೂಕಿನ ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕುರ್ಲಿ ಗ್ರಾಮದ ಬಳಿ ನಡೆದಿದೆ. ಜಿಲ್ಲೆಯ ಸವದತ್ತಿ ತಾಲೂಕಿನ‌ ಮುಗುಳಿಹಾಳ ಗ್ರಾಮದ ಲಕ್ಷ್ಮೀ ಕೊಪ್ಪದ (25) ಹಾಗೂ ಭಾಗ್ಯಶ್ರೀ ವಕಮಿ (13)‌ ಅಪಘಾತದಲ್ಲಿ ಮೃತಪಟ್ಟಿದ್ದು, ರಾಮದರ್ಗು ತಾಲೂಕಿನ ಕಟಕೋಳ ಗ್ರಾಮದ ಹಣಮಂತ …

Read More »

ನೇಣು ಬಿಗ್ಗಿದು ಕೊಂಡ ವ್ಯಕ್ತಿ ಆತ್ಮಹತ್ಯೆ

ಉಡುಪಿ: ನಾಡಿನೆಲ್ಲೆಡೆ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ. ದೇವಸ್ಥಾನಗಳಲ್ಲಿ, ಕೆಲವೊಂದು ಸ್ಥಳಗಳಲ್ಲಿ ವಿಶೇಷವಾದ ಕುಣಿತ, ಸಾಂಸ್ಕೃತಿಕ ಕಾರ್ಯಕ್ರಮ, ವಿಶೇಷ ಪೂಜೆ ನಡೆಯುತ್ತಲೇ ಇರುತ್ತದೆ.ಮೃತರನ್ನು ಪುಟಾರ್ಡೊ (41) ಎಂದು ಗುರುತಿಸಲಾಗಿದೆ. ಅವರು ನಾಲ್ಕು ವರ್ಷಗಳಿಂದ ವಿದೇಶದಲ್ಲಿದ್ದು, ಕೊರೋನ ಸಮಯದಲ್ಲಿ ಊರಿಗೆ ಹಿಂದಿರುಗಿದ್ದರು. ಆರು ವರ್ಷಗಳ ಹಿಂದೆ ಕಟ್ಟಿದ ಮನೆಯ ಸಾಲವನ್ನು ತೀರಿಸಲಾಗದ ಚಿಂತೆಯಲ್ಲಿ ಅವರು ಸೋಮವಾರ ರಾತ್ರಿ 7.30ರಿಂದ ಮಂಗಳವಾರ ಬೆಳಗ್ಗೆ 10 ಗಂಟೆ ನಡುವಿನ ಅವಧಿಯಲ್ಲಿ ನೇಣು ಬಿಗಿದು …

Read More »