Breaking News

BigTv News

ಖೋಟಾ ನೋಟು ದಂಧೆಯ ಪ್ರಮುಖ ಆರೋಪಿ ಪೊಲೀಸರ ವಶಕ್ಕೆ!

ತುಮಕೂರು ಜಿಲ್ಲೆಯ ಹುಳಿಯಾರಿನಲ್ಲಿ ನಕಲಿ ನೋಟುಗಳನ್ನು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಅಂತರ್ಜಿಲ್ಲಾ ಖೋಟಾ ನೋಟು ಜಾಲದ ಪ್ರಮುಖ ಆರೋಪಿ ರುದ್ರೇಶ್ (41)ನನ್ನು ಹುಳಿಯೂರು ಹಾಗೂ ಮಾದನಾಯಕನಹಳ್ಳಿ ಪೊಲೀಸರ ಜಂಟಿ ತಂಡ ಬಂಧಿಸಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗೊಂಡನಹಳ್ಳಿಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಹುಳಿಯಾರಿನ ಅಂಗಡಿಯೊಂದರಲ್ಲಿ ಸಿಗರೇಟ್ ಖರೀದಿಸಲು ₹500 ನಕಲಿ ನೋಟು ನೀಡಿದ್ದಾಗ ವ್ಯಾಪಾರಿಗೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರ ಆಧಾರದ ಮೇಲೆ …

Read More »

ಬೆಂಗಳೂರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ವಸತಿ ಶಾಲೆಯ, 6ನೇ ತರಗತಿ ವಿದ್ಯಾರ್ಥಿ ಸಾವು!

ಬೆಂಗಳೂರು : ಅನುಮಾನಾಸ್ಪದ ರೀತಿಯಲ್ಲಿ ವಸತಿ ಶಾಲೆಯ ವಿದ್ಯಾರ್ಥಿ ಸಾವನಪ್ಪಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಕಾಡಯರಪ್ಪನಹಳ್ಳಿಯ ವಸತಿ ಶಾಲೆಯಲ್ಲಿ ನಡೆದಿದೆ. ಸ್ಟ್ರಲಿಂಗ್ ಆಂಗ್ಲ ಮಾಧ್ಯಮದ ವಸತಿ ಶಾಲೆಯ ವಿದ್ಯಾರ್ಥಿ ಗುರುಕಿರಣ್ (12) ಎಂದು ತಿಳಿದುಬಂದಿದೆ.6ನೇ ತರಗತಿಯಲ್ಲಿ ಗುರುಕಿರಣ್ ವ್ಯಾಸಂಗ ಮಾಡುತ್ತಿದ್ದ. ಸುಬೇದಾರ್ ಪಾಳ್ಯದ ರಾಘವೇಂದ್ರ ಎಂಬುವವರ ಮಗ ಗುರುಕಿರಣ್ ವಿದ್ಯಾರ್ಥಿಗೆ ಅನಾರೋಗ್ಯ ಎಂದು ಆಸ್ಪತ್ರೆಗೆ ಕರೆತಂದಿದ್ದಾಗಿ ಹೇಳಿಕೆ ನೀಡಲಾಗಿತ್ತು. ಆಸ್ಪತ್ರೆಗೆ ಕರೆ ತಂದಿದ್ದಾಗಿ ವಸತಿ ಶಾಲೆ ಶಿಕ್ಷಕರು ಪೋಷಕರಿಗೆ …

Read More »

ಧಾರವಾಡದಲ್ಲಿ ಭೀಕರ ಮರ್ಡರ್ : ಹೆಲ್ಮೆಟ್ ನಿಂದ ಹೊಡೆದು ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿ!

ಧಾರವಾಡದಲ್ಲಿ ಭೀಕರವಾದ ಕೊಲೆಯಾಗಿದ್ದು, ಹೆಲ್ಮೆಟ್ನಿಂದ ಹೊಡೆದು ಪತಿಯಿಂದಲೇ ಪತ್ನಿಯ ಕೊಲೆಯಾಗಿದೆ. ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ತಾರಿಹಾಳದಲ್ಲಿ ಒಂದು ಕೊಲೆ ನಡೆದಿದೆ. ಪತ್ನಿ ನಾಗರತ್ನ ಹಳಿಮನಿ (19)ಯನ್ನು ಪತಿ ಶಿವರಾಜ್ ಕೊಲೆ ಮಾಡಿದ್ದಾನೆ. ಫೆಬ್ರುವರಿಲ್ಲಿ ಶಿವರಾಜ್ ಮತ್ತು ನಾಗರತ್ನ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನವಲಗುಂದ ತಾಲೂಕಿನ ಇಬ್ರಾಹಿಂಪುರ ಗ್ರಾಮದ ನಾಗರತ್ನ ಎಂದು ತಿಳಿದುಬಂದಿದೆ. ಇಂದು ಬೆಳಿಗ್ಗೆ ದಂಪತಿ ನಡುವೆ ಜಗಳ ಆಗಿತ್ತು ಜಗಳ ವಿಕೋಪಕ್ಕೆ ತಿರುಗಿ ಪತ್ನಿಯ ಮೇಲೇ ಹೆಲ್ಮೆಟ್ …

Read More »

ರೇಲ್ವೆ ಹಳಿಯ ಮೇಲೆ ಅಪಘಾತ – ತನ್ನ ಜೀವ ಬಲಿಕೊಟ್ಟು ಪತ್ನಿಯನ್ನು ರಕ್ಷಿಸಿದ ಪತಿ!

ಕೊಪ್ಪಳ ತಾಲೂಕಿನ ಹುಲಿಗಿ ತುಂಗಭದ್ರಾ ರೈಲ್ವೆ ಸೇತುವೆಯ ಮೇಲೆ ಪತ್ನಿಯನ್ನು ರಕ್ಷಿಸಲು ಹೋಗಿ ಪತಿ ಮೃತಪಟ್ಟ ಹೃದಯವಿದ್ರಾವಕ ಘಟನೆ ನಡೆದಿದೆ. ಹೊಸಪೇಟೆ ತಾಲೂಕಿನ ಚಿತವಾಡಗಿ ನಿವಾಸಿ ಜಗದೀಶ್ (35) ಮೃತರು. ಧಾರ್ಮಿಕ ಕಾರ್ಯಕ್ರಮಕ್ಕೆ ಬಂದಿದ್ದ ದಂಪತಿ ರೈಲ್ವೆ ಹಳಿಯ ಮೇಲೆ ನಡೆದುಕೊಂಡು ಸೇತುವೆ ದಾಟುತ್ತಿದ್ದ ವೇಳೆ ಅತಿ ವೇಗವಾಗಿ ರೈಲು ಇಂಜಿನ್ ಬಂದಿದೆ. ಅಪಾಯವನ್ನು ಗಮನಿಸಿದ ಜಗದೀಶ್ ತಮ್ಮ ಪತ್ನಿಯನ್ನು ಸುರಕ್ಷಿತ ಸ್ಥಳಕ್ಕೆ ತಳ್ಳಿ ರಕ್ಷಿಸಿದ್ದಾರೆ. ಆದರೆ ತಾವು ತಪ್ಪಿಸಿಕೊಳ್ಳುವಷ್ಟರಲ್ಲಿ …

Read More »

ಮೇವು ತರಲು ಹೋದ 70 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ, ಹತ್ಯೆ!

ಕೋಲಾರ ಜಿಲ್ಲೆಯ ವೇಮಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಚಾಕರಸನಹಳ್ಳಿ ಗ್ರಾಮದಲ್ಲಿ 70 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿ ಬಳಿಕ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಹಸುಗಳಿಗೆ ಮೇವು ತರಲು ಹೊಲಕ್ಕೆ ತೆರಳಿದ್ದ ವೇಳೆ ದುಷ್ಕರ್ಮಿ ಈ ಕೃತ್ಯ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವೃದ್ಧೆ ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹೊಲಕ್ಕೆ ತೆರಳಿ ಹುಡುಕಿದಾಗ ರಕ್ತದ ಮಡುವಿನಲ್ಲಿ ಮೃತದೇಹ ಪತ್ತೆಯಾಗಿದೆ. ಮಾಹಿತಿ ತಿಳಿದ ತಕ್ಷಣವೇ ಪೊಲೀಸರು, ಶ್ವಾನದಳ ಹಾಗೂ …

Read More »

ಕೇವಲ ಒಂದೇ ಒಂದು ತಲೆಗೂದಲಿನಿಂದ ಬಯಲಾಯ್ತು ಮರ್ಡರ್ ರಹಸ್ಯ – ಕೊಲೆಗಡುಕನಿಗೆ ಜೀವಾವಧಿ ಶಿಕ್ಷೆ

ತುಮುಕೂರಿನ ಅಮಾನಿಕೆರೆ ಫುಟ್‌ಪಾತ್‌ನಲ್ಲಿ 2021ರಲ್ಲಿ ನಡೆದ ಮಂಜುನಾಥ್ ಕೊಲೆ ಪ್ರಕರಣದಲ್ಲಿ, ಆರೋಪಿ ಶಿವಕುಮಾರ್ ಅಲಿಯಾಸ್ ಮಾಲಾಶ್ರೀಗೆ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ನ್ಯಾಯಾಧೀಶೆ ನರಸಮ್ಮ ಅವರು ಡಿಎನ್‌ಎ ಸಾಕ್ಷ್ಯದ ಆಧಾರದ ಮೇಲೆ ಈ ಮಹತ್ವದ ತೀರ್ಪು ನೀಡಿದ್ದಾರೆ. ಕೊಲೆ ನಡೆದ ವೇಳೆ ಮೃತ ಮಂಜುನಾಥ್ ಆರೋಪಿಯೊಂದಿಗೆ ಹೋರಾಡಿದ್ದರಿಂದ, ಆರೋಪಿಯ ತಲೆಯಿಂದ ಕಿತ್ತುಬಂದ ಒಂದು ತಲೆಗೂದಲು ಮೃತನ ಕೈಯಲ್ಲಿ ಸಿಲುಕಿತ್ತು. ಪೊಲೀಸರು ಆ ಕೂದಲನ್ನು …

Read More »

ನಡು ರಸ್ತೆಯಲ್ಲೇ ತಲೆಗೆ ಗುಂಡಿಟ್ಟುಕೊಂಡು ಪೊಲೀಸ್ ಆತ್ಮಹತ್ಯೆ!

ಕಲಬುರಗಿ ನಗರದ ಜಗತ್ ವೃತ್ತದಲ್ಲಿ ಕರ್ತವ್ಯದಲ್ಲಿದ್ದ ಸಿಎಆರ್ ಪೊಲೀಸ್ ಪೇದೆ ಶಿವಕುಮಾರ್ ಮಾವನೂರ್ (32) ಇಲಾಖೆಯಿಂದ ನೀಡಲಾಗಿದ್ದ ಸರ್ಕಾರಿ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸ್ ವಾಹನದೊಳಗೇ ಈ ಘಟನೆ ನಡೆದಿದ್ದು, ಗುಂಡಿನ ಸದ್ದು ಕೇಳಿ ಸ್ಥಳಕ್ಕೆ ಧಾವಿಸಿದ ಸಹೋದ್ಯೋಗಿಗಳು ಅಷ್ಟರಲ್ಲೇ ಅವರು ಮೃತಪಟ್ಟಿರುವುದನ್ನು ಕಂಡಿದ್ದಾರೆ. ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತರು, ಡಿಸಿಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಎಫ್‌ಎಸ್‌ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. …

Read More »

ಅಪ್ರಾಪ್ತ ವಿದ್ಯಾರ್ಥಿಗಳೊಂದಿಗೆ ಅನುಚಿತ ವರ್ತನೆ ಆರೋಪ: ಶಿಕ್ಷಕ ಅಮಾನತು!

ಹಾಸನ: ಅಪ್ರಾಪ್ತ ವಿದ್ಯಾರ್ಥಿಗಳೊಂದಿಗೆ ಶಿಕ್ಷಕ ಅನುಚಿತ ವರ್ತನೆ ಆರೋಪದ ಮೇಲೆ ಬಿಇಓ ಅವರು ಶಿಕ್ಷಕನನ್ನು ಅನಮಾತುಗೊಳಿಸಿ ಆದೇಶ ಹೊರಡಿಸಿದ ಪ್ರಕರಣ ನಡೆದಿದೆ.ಧನಂಜಯ್ ಅನಮಾತುಗೊಂಡ ಶಿಕ್ಷಕ. ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ, ಮುರುಂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಶಿಕ್ಷಕರಾಗಿರುವ ಧನಂಜಯ್ ವಿದ್ಯಾರ್ಥಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಹಾಗೂ ಶಿಕ್ಷಕನ ವರ್ತನೆಯಿಂದ ಬೇಸತ್ತು ಹನ್ನೆರಡು ವಿದ್ಯಾರ್ಥಿಗಳು ದೂರು ಪೆಟ್ಟಿಗೆಗೆ ಚೀಟಿ ಬೆರೆದು ಹಾಕಿದ್ದರು. …

Read More »

ಮದ್ದೂರು ಬಳಿ ಕಾರು ಅಡ್ಡಗಟ್ಟಿ ಕಬ್ಬಿಣದ ರಾಡಿನಿಂದ ಹಲ್ಲೆ: ಮೂವರ ಬಂಧನ

ಮೈಸೂರಿನಿಂದ ಬೆಂಗಳೂರಿಗೆ ಕಾರಿನಲ್ಲಿ ತೆರಳುತ್ತಿದ್ದ ಸಾಗರ್ ಹಾಗೂ ಅವರ ಕುಟುಂಬದ ಕಾರಿಗೆ ಮತ್ತೊಂದು ಕಾರು ಲಘುವಾಗಿ ಡಿಕ್ಕಿ ಹೊಡೆದಿದ್ದು, ಈ ವೇಳೆ ಎರಡೂ ಕಡೆಯವರ ನಡುವೆ ವಾಗ್ವಾದ ನಡೆದಿದೆ. ಬಳಿಕ ಆರೋಪಿಗಳು ಕಾರನ್ನು ಹಿಂಬಾಲಿಸಿ ಮದ್ದೂರಮ್ಮ ದೇವಸ್ಥಾನದ ಸಮೀಪದ ಮೇಲ್ಸೇತುವೆಯಲ್ಲಿ ಅಡ್ಡಗಟ್ಟಿದ್ದಾರೆ. ಆರೋಪಿಗಳು ಸಾಗರ್ ಮೇಲೆ ಕಬ್ಬಿಣದ ಜಾಕ್‌ ರಾಡ್‌ನಿಂದ ಹಲ್ಲೆ ನಡೆಸಿದ್ದು, ಬಿಡಿಸಲು ಬಂದ ಪತ್ನಿ, ತಾಯಿ ಹಾಗೂ ಕುಟುಂಬದ ಇತರ ಸದಸ್ಯರ ಮೇಲೂ ಹಲ್ಲೆ ಮಾಡಿದ್ದಾರೆ ಎಂದು …

Read More »

11 ಮಂದಿ ಡ್ರಗ್ಸ್ ಪೆಡ್ಲರ್‌ಗಳ ಬಂಧನ, 2.85 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ

ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 9 ಹೊರ ರಾಜ್ಯದವರು ಹಾಗೂ ಇಬ್ಬರು ಸ್ಥಳೀಯರು ಸೇರಿ 11 ಮಂದಿ ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಎಂಡಿಎಂಎ, ಹೈಡ್ರೋ ಗಾಂಜಾ ಹಾಗೂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಒಟ್ಟು 2.85 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳು ಜಪ್ತಿಯಾಗಿವೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಹೊರ ರಾಜ್ಯಗಳಿಂದ ಕಡಿಮೆ ಬೆಲೆಗೆ ಮಾದಕ ವಸ್ತುಗಳನ್ನು ತಂದು, ಪರಿಚಿತರ ಮೂಲಕ ಕಾಲೇಜು ವಿದ್ಯಾರ್ಥಿಗಳು ಹಾಗೂ …

Read More »