ಬೆಂಗಳೂರು: ನಿನ್ನೆ ಮಂಗಳವಾರ ರಾತ್ರಿ ನಿಧನರಾದ ಅರಣ್ಯ ಸಚಿವ ಉಮೇಶ ಕತ್ತಿಯವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯಾದ್ಯಂತ ಇಂದು ಶೋಕಾಚರಣೆ ಹಾಗೂ ಸರ್ಕಾರಿ ಕಚೇರಿಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಲು ಆದೇಶ ಹೊರಡಿಸಲಾಗಿದೆ. ಬೆಳಗಾವಿ ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ
Read More »ಐಪಿಎಲ್ ಮತ್ತು ದೇಶೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಸುರೇಶ್ ರೈನಾ
ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಐಪಿಎಲ್ ಮತ್ತು ದೇಶೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ‘ನಾನು ಕ್ರಿಕೆಟ್ನ ಎಲ್ಲಾ ಸ್ವರೂಪಗಳಿಂದ ನಿವೃತ್ತಿ ಘೋಷಿಸಲು ಬಯಸುತ್ತೇನೆ. BCCI, UP ಕ್ರಿಕೆಟ್, CSK ಮತ್ತು ನನ್ನ ಎಲ್ಲಾ ಅಭಿಮಾನಿಗಳ ಬೆಂಬಲಕ್ಕಾಗಿ ಧನ್ಯವಾದ ಹೇಳಲು ಬಯಸುತ್ತೇನೆ” ಎಂದು ಆಗಸ್ಟ್ 2020 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದ ರೈನಾ ಟ್ವಿಟ್ ಮಾಡಿದ್ದಾರೆ.
Read More »ಬೆಂಗಳೂರಿನಲ್ಲಿ ಇನ್ನೂ 3 ದಿನ ಸಾಧಾರಣ ಮಳೆಯಾಗುವ ನಿರೀಕ್ಷೆ
ಬೆಂಗಳೂರು : ಮಳೆಯ ಅಬ್ಬರ ಕೊಂಚ ಕಡಿಮೆಯಾಗಿದ್ದರೂ ಈ ಹಿಂದೆ ಸುರಿದ ಮಳೆಯ ಪರಿಣಾಮದಿಂದ ಆದ ಅನಾಹುತಗಳೇ ಇನ್ನೂ ಸರಿಯಾಗಿಲ್ಲ. ಬೆಂಗಳೂರಿನಲ್ಲಿ ಇನ್ನೂ 3 ದಿನ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಹಾಗೇ, ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮುಂದಿನ 3 ದಿನ ಭಾರೀ ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳು, ಉತ್ತರ ಒಳನಾಡಿನಲ್ಲಿ ಇಂದಿನಿಂದ (ಸೆ. 7) ಸೆ. 9ರವರೆಗೆ ಹಳದಿ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ರಾಜ್ಯದ …
Read More »ವಿರಾಟ್ ಕೊಹ್ಲಿ ಹೇಳಿಕೆಗೆ ಗರಂ ಆದ ಸುನಿಲ್ ಗವಾಸ್ಕರ್
ದುಬೈ: ತಾನು ಟೆಸ್ಟ್ ನಾಯಕತ್ವ ತ್ಯಜಿಸಿದಾಗ ಧೋನಿ ಮಾತ್ರ ನನಗೆ ಕರೆ ಮಾಡಿದ್ದರು. ಉಳಿದವರು ನನ್ನ ನಂಬರ್ ಇದ್ದರೂ ಕರೆ ಮಾಡಿರಲಿಲ್ಲ ಎಂದು ವಿರಾಟ್ ಕೊಹ್ಲಿ ನೀಡಿದ್ದ ಹೇಳಿಕೆ ಈಗ ಬಿಸಿಸಿಐ ಮತ್ತು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೆಂಗಣ್ಣಿಗೆ ಗುರಿಯಾಗಿದೆ. ಈ ಬಗ್ಗೆ ಬಿಸಿಸಿಐ ಅಧಿಕಾರಿಯೊಬ್ಬರು ಆಂಗ್ಲ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, ಕೊಹ್ಲಿ ನಾಯಕತ್ವ ತ್ಯಜಿಸಿದಾಗ ಬಿಸಿಸಿಐನ ಬಹುತೇಕ ಅಧಿಕಾರಿಗಳು ಸೋಷಿಯಲ್ ಮೀಡಿಯಾದಲ್ಲಿ ಸಂದೇಶ ನೀಡಿದ್ದರು. ಅವರ ಕಷ್ಟ ಕಾಲದಲ್ಲಿ …
Read More »ಪ್ರೌಢ ಶಾಲೆ ಸಹ ಶಿಕ್ಷಕರ ಅಕ್ರಮ ನೇಮಕ : 11 ಮಂದಿ ಸಿಐಡಿ ಅಧಿಕಾರಗಳ ಬಂಧನ
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸರ್ಕಾರಿ ಪ್ರೌಢ ಶಾಲೆಗಳ ಗ್ರೇಡ್ 2 ಸಹ ಶಿಕ್ಷಕರು ಮತ್ತು ಗ್ರೇಡ್-1ರ ದೈಹಿಕ ಶಿಕ್ಷಕರ ಅಕ್ರಮ ನೇಮಕಾತಿಗೆ ಸಂಬಂಧಿಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ತುಮಕೂರು ಮತ್ತು ವಿಜಯಪುರ ಜಿಲ್ಲೆಯಲ್ಲಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ 11 ಮಂದಿ ಶಾಲಾ ಶಿಕ್ಷಕರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬೋರನ ಕಣಿವೆ ಗ್ರಾಮದ ಶಾಲೆಯ ಶಮೀನಾಜ್ ಬಾನು (34), ಕುಣಿಗಲ್ ತಾಲೂಕಿನ ಕೊಡವತ್ತಿ ಗ್ರಾಮದ …
Read More »ಹುಕ್ಕೇರಿ ಕ್ಷೇತ್ರದ ಬಿಜೆಪಿ ಶಾಸಕ ಉಮೇಶ್ ಕತ್ತಿ ನಿಧನ
ಬೆಳಗಾವಿ : ಜಿಲ್ಲೆಯ ಹುಕ್ಕೇರಿ ಕ್ಷೇತ್ರದ ಬಿಜೆಪಿ ಶಾಸಕ ಉಮೇಶ್ ಕತ್ತಿ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಅರಣ್ಯ ಸಚಿವರು. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಮತ್ತು ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಹೇಳಿಕೆ ನೀಡಿ ಸದಾ ಸುದ್ದಿಯಲ್ಲಿ ಇರುತ್ತಾರೆ. 9 ಸಲ ಚುನಾವಣೆ ಎದುರಿಸಿ 8 ಬಾರಿ ಗೆದ್ದಿರುವ ಉಮೇಶ್ ಕತ್ತಿ ನಾಲ್ಕನೇ ಬಾರಿಗೆ ಸಚಿವರಾಗಿದ್ದಾರೆ. 1985ರಲ್ಲಿ ರಾಜಕೀಯಕ್ಕೆ ಬಂದ ಉಮೇಶ್ ಕತ್ತಿ, ಆರು ಪಕ್ಷಗಳನ್ನು ಬದಲಿಸಿದ್ದಾರೆ. …
Read More »ವರುಣನ ಆರ್ಭಟಕ್ಕೆ ಬಲಿಯಾದ ಇಬ್ಬರು ಪೋಲಿಸ್ ಪೆದೆ
ಗಜೇಂದ್ರಗಡ :ಬಂದೋಬಸ್ತ ಕರ್ತವ್ಯ ಮುಗಿಸಿಕೊಂಡು ಬರುವ ವೇಳೆ ಇಬ್ಬರು ಪೋಲಿಸ್ ಪೆದೆಗಳು ಸಾವನ್ನಪ್ಪಿದ ಘಟನೆ ಗಜೇಂದ್ರಗಡದಲ್ಲಿ ನಡೆದಿದೆ. ಮುಂಡರಗಿ ಪೊಲೀಸ್ ಠಾಣೆಯ ಖಾಕಿ ಪಡೆ ಎಂದು ಮಾಹಿತಿ ತಿಳಿದು ಬಂದಿದೆ. ರಾತ್ರಿ ಸುರಿದ ಮಳೆಗೆ ಹಳ್ಳವೊಂದು ದಾಟುವಾಗ ಹಳ್ಳದ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದು ದುರ್ವಿಧಿ ಇಂದು ಶವದ ರೂಪದಲ್ಲಿ ಪತ್ತೆಯಾಗಿದ್ದಾರೆ.
Read More »ವರುಣನ ಆರ್ಭಟಕ್ಕೆ ಬಲಿಯಾದ ಇಬ್ಬರು ಪೋಲಿಸ್ ಪೆದೆ
ಗಜೇಂದ್ರಗಡ :ಬಂದೋಬಸ್ತ ಕರ್ತವ್ಯ ಮುಗಿಸಿಕೊಂಡು ಬರುವ ವೇಳೆ ಇಬ್ಬರು ಪೋಲಿಸ್ ಪೆದೆಗಳು ಸಾವನ್ನಪ್ಪಿದ ಘಟನೆ ಗಜೇಂದ್ರಗಡದಲ್ಲಿ ನಡೆದಿದೆ. ಮುಂಡರಗಿ ಪೊಲೀಸ್ ಠಾಣೆಯ ಖಾಕಿ ಪಡೆ ಎಂದು ಮಾಹಿತಿ ತಿಳಿದು ಬಂದಿದೆ. ರಾತ್ರಿ ಸುರಿದ ಮಳೆಗೆ ಹಳ್ಳವೊಂದು ದಾಟುವಾಗ ಹಳ್ಳದ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದು ದುರ್ವಿಧಿ ಇಂದು ಶವದ ರೂಪದಲ್ಲಿ ಪತ್ತೆಯಾಗಿದ್ದಾರೆ.
Read More »ಪೊಲೀಸ ಪೇದೆಗಳಿಬ್ಬರು ಶವವಾಗಿ ಪತ್ತೆ…!
ಗಜೇಂದ್ರಗಡದಲ್ಲಿ ಬಂದೋಬಸ್ತ ಕರ್ತವ್ಯ ಮುಗಿಸಿಕೊಂಡು ಬರುವಾಗ ಮುಂಡರಗಿ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್ ಪೇದೆಗಳು ರಾತ್ರಿ ಸುರಿದ ಮಳೆಗೆ ಹಳ್ಳವೊಂದು ದಾಟುವಾಗ ಹಳ್ಳದ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದು ದುರ್ವಿಧಿ ಇಂದು ಶವದ ರೂಪದಲ್ಲಿ ಪತ್ತೆಯಾಗಿದ್ದಾರೆ.
Read More »ಬೆಣ್ಣೆಹಳ್ಳದ ನೀರಿನ ರಭಸಕ್ಕೆ ಕುಸಿದ ಬ್ರಿಡ್ಜ್: ಕೂದಳೆಲೆ ಅಂತರದಲ್ಲಿ ಪಾರಾದ ಮೂವರು ಯುವಕರು
ಹುಬ್ಬಳ್ಳಿ : ಬೆಣ್ಣೆಹಳ್ಳ ಪ್ರವಾದ ವೀಕ್ಷಿಸಲು ತೆರಳಿದ್ದ ಯುವಕರು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ನವಲಗುಂದ ತಾಲೂಕಿನ ಕನ್ನೂರ ಗ್ರಾಮದ ಬಳಿ ನಡೆದಿದೆ. ನಿನ್ನೆ ರಾತ್ರಿ ಧಾರಕಾರ ಸುರಿದ ಪರಿಣಾಮ ಬೆಣ್ಣೆ ಹಳ್ಳ ಉಕ್ಕಿ ಹರಿದಿದೆ. ಇದನ್ನು ನೋಡಲು ಮೂವರು ಯುವಕರು ಕನ್ನೂರು ಬ್ರಿಡ್ಜ ಮೇಲೆ ನಿಂತಿದ್ದರು. ಆದರೆ ನೋಡು ನೋಡುತ್ತಿದ್ದಂತೆ ಬ್ರಿಡ್ಜ ಕೊಚ್ಚಿ ಹೋಗಿದೆ. ಯುವಕರು ಬ್ರಿಡ್ಜ್ ಮೇಲೆ ಸಿಲುಕಿ ಕರಲ ಕಾಲ ಆತಂಕಗೊಂಡಿದ್ದರು. ಈ ಭಯಾನಕ ದೃಶ್ಯಗಳು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





