ಚಿತ್ರದುರ್ಗ: ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶಾಸಕರಾದ, ಗೂಳಿಹಟ್ಟಿ ಡಿ.ಶೇಖರ್ ಹಾಗೂ ಎಂ.ಚಂದ್ರಪ್ಪ ಅವರಿಗೆ ಬಂದಿರುವ ಬೆದರಿಕೆ ಕರೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಚಿತ್ರದುರ್ಗ ಎಸ್ ಪಿ ಕೆ.ಪರಶುರಾಮ್ ಹೇಳಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್ಪಿ) ಆಯಪ್ ಮೂಲಕ ಚಿತ್ರದುರ್ಗ ಪೊಲೀಸರಿಗೆ ಸಂದೇಶ ಬಂದಿದೆ. ಭೋವಿ ಸಮುದಾಯಕ್ಕೆ ಸೇರಿದ ಹಲವು …
Read More »ಸಿದ್ದರಾಮೋತ್ಸವ ಕಾಂಗ್ರೆಸ್ನವರಿಗಾಗಿಯೇ ಮಾಡಿಕೊಳ್ಳುತ್ತಿರುವ ಉತ್ಸವ : ಹಾಲಪ್ಪ ಆಚಾರ್
ಗದಗ: ‘ಕಾಂಗ್ರೆಸ್ ಪಕ್ಷಲ್ಲೇ ಒಳಜಗಳವಿದ್ದು, ನಾಯಕರು ಅಧಿಕಾರಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ಹಾಗಾಗಿ, ಸಿದ್ದರಾಮೋತ್ಸವ ಎಂಬುದು ಕಾಂಗ್ರೆಸ್ನವರು ಕಾಂಗ್ರೆಸ್ನವರಿಗಾಗಿಯೇ ಮಾಡಿಕೊಳ್ಳುತ್ತಿರುವ ಉತ್ಸವ ಅಷ್ಟೇ’ ಎಂದು ಸಚಿವ ಹಾಲಪ್ಪ ಆಚಾರ್ ಲೇವಡಿ ಮಾಡಿದರು. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ‘ಭಾರತೀಯ ಜನತಾ ಪಾರ್ಟಿ ಕಾಂಗ್ರೆಸ್ಗೆ ಭಯ ಬೀಳುವ ಪ್ರಶ್ನೆಯೇ ಇಲ್ಲ. ರಾಜಕೀಯವಾಗಿ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಸಂಪೂರ್ಣ ಕಳೆದುಕೊಂಡಿದೆ. ಅದನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಕೇರಳದಿಂದ ಆಂಧ್ರದವರೆಗೆ ಬೇಕಾದರೂ ಪಾದಯಾತ್ರೆ …
Read More »ಹಿರಿಯ ಕಲಾವಿದರಿಗೆ ಬಣ್ಣ ಹಚ್ಚಿದ ಕೇಶವಣ್ಣ ನಿಧನ
ರಾಜ್ಕುಮಾರ್ , ಅಂಬರೀಷ್, ರಜನಿಕಾಂತ್, ಪುನೀತ್ ರಾಜ್ಕುಮಾರ್, ಅನಂತ್ ನಾಗ್, ಶಿವರಾಜ್ಕುಮಾರ್ ಮೊದಲಾದ ಸ್ಟಾರ್ಗಳಿಗೆ ಅವರು ಮೇಕಪ್ ಮಾಡಿದ್ದರು. ಅವರ ನಿಧನಕ್ಕೆ ಸ್ಯಾಂಡಲ್ವುಡ್ನ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ. ಕೇಶವಣ್ಣ ಅವರಿಗೆ ತೀವ್ರ ಅನಾರೋಗ್ಯ ಕಾಡಿತ್ತು. ಕಳೆದ ಎರಡು ದಿನಗಳಿಂದ ಅವರು ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೇಶವಣ್ಣ ಅವರು ಮೈಸೂರಲ್ಲಿ ಇಂದು (ಜುಲೈ 15) ಮಧ್ಯಾಹ್ನ 1:40ಕ್ಕೆ ಕೊನೆಯುಸಿರೆಳೆದಿದ್ದಾರೆ. ಜುಲೈ 16ರಂದು ಮೈಸೂರಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. …
Read More »ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಡ್ರೀಮ್ ಪ್ರಾಜೆಕ್ಟ್ ‘ಗಂಧದಗುಡಿ’ ಬಿಡುಗಡೆಗೆ ದಿನಾಂಕ ಫಿಕ್ಸ್…!
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಡ್ರೀಮ್ ಪ್ರಾಜೆಕ್ಟ್ ‘ಗಂಧದಗುಡಿ’ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಅಕ್ಟೋಬರ್ 28 ರಂದು ‘ಗಂಧದಗುಡಿ’ ಸಾಕ್ಷ್ಯ ಚಿತ್ರ ಬಿಡುಗಡೆಯಾಗಲಿದೆ. ನಟ ಪುನೀತ್ ರಾಜಕುಮಾರ್ ಪುಣ್ಯ ಸ್ಮರಣೆಗೆ ಒಂದು ದಿನ ಮೊದಲು ‘ಗಂಧದಗುಡಿ’ ಸಾಕ್ಷ್ಯಚಿತ್ರ ಬಿಡುಗಡೆ ಮಾಡಲಾಗುವುದು. 2021 ಅಕ್ಟೋಬರ್ 29 ರಂದು ಪುನೀತ್ ವಿಧಿವಶರಾಗಿದ್ದರು. ಪುನೀತ್ ರಾಜಕುಮಾರ್ ಅವರ ಕೊನೆಯ ಪ್ರೀತಿಯ ಕಾಣಿಕೆ ಗಂಧದ ಗುಡಿ ಸಾಕ್ಷ್ಯಚಿತ್ರ ಬಿಡುಗಡೆಯ ಬಗ್ಗೆ ಅಶ್ವಿನಿ ಪುನೀತ್ ರಾಜಕುಮಾರ್ ಮಾಹಿತಿ …
Read More »ಬಾರದ ಪರಿಹಾರ ಜಪ್ತಿ ಆಯ್ತು ಐರಾವತ : ಪರಿಹಾರ ಕೊಡದಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿತಾ ಸಂಸ್ಥೆ
ಹುಬ್ಬಳ್ಳಿ : ಸಾರಿಗೆ ಸಂಸ್ಥೆ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕನೋರ್ವ ಅಪಘಾತದಲ್ಲಿ ಮೃತಪಟ್ಟರೂ ನೀಡಬೇಕಾದ ಪರಿಹಾರ ನೀಡದ ಹಿನ್ನೆಲೆಯಲ್ಲಿ ನ್ಯಾಯಾಲಯದ ವಾರೆಂಟ್ ಅನ್ವಯ ಕೋರ್ಟ್ ಸಿಬ್ಬಂದಿ ಐರಾವತ ಬನ್ನೊಂದನ್ನು ಜಪ್ತಿ ಮಾಡಿ ಹುಬ್ಬಳ್ಳಿ ಕೋರ್ಟ್ ಎದುರು ತಂದು ನಿಲ್ಲಿಸಿದ್ದಾರೆ . 2019 ರಲ್ಲಿ ಸಂಭವಿಸಿದ ನವಲಗುಂದ ಹುಬ್ಬಳ್ಳಿ ಅಪಘಾತದಲ್ಲಿ ದೇವಪ್ಪ ಕುಲಕರ್ಣಿ ಎಂಬವರು ಮೃತಪಟ್ಟಿದ್ದರು . ಮೃತ ಚಾಲಕನ ತಾಯಿ ಶಾಂತವ್ವ ಕರವೀರಪ್ಪ ಕುಲಕರ್ಣಿ ಇವರು ನಗರದ ಎರಡನೇ ಹಿರಿಯ …
Read More »ಅಧಿಕಾರಿಗಳು ಡೊಂಟ್ ಕೇರ್ : ಗ್ರಾಮಸ್ಥರಿಂದಲೇ ಗ್ರಾಮ ಸುಧಾರಣೆ
ಹುಬ್ಬಳ್ಳಿ: ಒಂದು ಗ್ರಾಮ ಅಭಿವೃದ್ಧಿ ಆಗಬೇಕಾದರೇ ಜನಪ್ರತಿನಿಧಿಗಳು, ಅಧಿಕಾರಿಗಳೇ ಬೇಕಂತಿಲ್ಲ, ಜನರೇ ಮನಸ್ಸು ಮಾಡಿದರೇ ತಮ್ಮ ಗ್ರಾಮವನ್ನು ತಾವೇ ಸುಧಾರಿಸಿಕೊಳ್ಳಬಹುದು ಎಂಬುದನ್ನು ಈ ಗ್ರಾಮಸ್ಥರು ಸಾಬೀತುಪಡಿಸುತ್ತಿದ್ದಾರೆ. ನಿರಂತರ ಸುರಿಯುತ್ತಿರುವ ಮಳೇ… ಎಲ್ಲಿ ನೋಡಿದ್ರೂ ಕೇಸರು, ಆ ಕೇಸರಿನಲ್ಲೇ ಶಾಲೆಗೇ ಹೋಗುತ್ತಿರುವ ಮಕ್ಕಳು ಇಂತಹ ಮನುಕಲಕುವ ದೃಶ್ಯಕ್ಕೆ ಸಾಕ್ಷಿಯಾಗಿದ್ದು ಹುಬ್ಬಳ್ಳಿ ತಾಲೂಕಿನ ಕೊಟಗೊಂಡಹುಣಸಿ ಗ್ರಾಮ. ಗ್ರಾಮದ ನಡುಓಣಿಯ ರಸ್ತೆ ಸುಮಾರು ವರ್ಷಗಳಿಂದ ಹದಗೆಟ್ಟಿದ್ದು ಜನರು ಆ ರಸ್ತೆಯಲ್ಲಿಯೇ ಓಡಾಡುತ್ತಿದ್ದಾರೆ. ಆದರೆ ಶಾಸಕರು …
Read More »ವಿದ್ಯುತ್ ಪ್ರವಹಿಸಿ ಲೈನ್ಮ್ಯಾನ್ ಸ್ಥಳದಲ್ಲೇ ಸಾವು
ಮೂಡಲಗಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ತಿಗಡಿ ಗ್ರಾಮದಲ್ಲಿ ಗುರುವಾರ ವಿದ್ಯುತ್ ಟ್ರಾನ್ಸ್ಫಾರ್ಮರ್ ದುರಸ್ತಿ ಮಾಡುವ ಸಂದರ್ಭದಲ್ಲಿಯೇ ವಿದ್ಯುತ್ ಪ್ರವಹಿಸಿ ಲೈನ್ಮ್ಯಾನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹೆಸ್ಕಾಂನ ತಿಗಡಿ ಶಾಖೆಯ ಸಿಬ್ಬಂದಿ ನಿಂಗಪ್ಪ ಕರಿಗೌಡರ (38) ಮೃತಪಟ್ಟವರು. ವಿದ್ಯುತ್ ಕಂಬಗಳ ಮೇಲೆ ಹತ್ತಿ ದುರಸ್ತಿ ಮಾಡುವ ಸಂದರ್ಭದಲ್ಲಿಯೇ ಪ್ರೇಷಣ ತಂತಿಗಳಲ್ಲಿ ವಿದ್ಯುತ್ ಪ್ರವಹಿಸಿತು. ನೋಡನೋಡುತ್ತಿದ್ದಂತೆಯೇ ನಿಂಗಪ್ಪ ಅವರ ಪ್ರಾಣ ಪಕ್ಷಿ ಹಾರಿಹೋತು. ವಿದ್ಯುತ್ ತಂತಿಯ ಮೇಲೆಯೇ ಅವರ ಶವ ಕೆಲಕಾಲ ನೇತಾಡಿತು. ಬೆಂಕಿ …
Read More »ಅಂತ್ಯ ಸಂಸ್ಕಾರ ಯೋಜನೆ ರದ್ದು
ಬಡತನ ರೇಖೆಗಿಂತ ಕೆಳಗಿರುವವರು ಮೃತಪಟ್ಟಾಗ ಅಂತ್ಯಸಂಸ್ಕಾರಕ್ಕೆಂದು 5 ಸಾವಿರ ನೀಡಲಾಗ್ತಿದ್ದ ಅಂತ್ಯ ಸಂಸ್ಕಾರ ಯೋಜನೆಯನ್ನ ರದ್ದುಗೊಳಿಸಿದೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸಧ್ಯ ಈ ಕುರಿತು ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ, ಯೋಜನೆಯ ಅನುಷ್ಠಾನಕ್ಕೆ ಯಾವುದೇ ಅನುದಾನ ಲಭ್ಯವಿಲ್ಲದೇ ಕಾರಣ ಈ ಯೋಜನೆಯನ್ನ ರದ್ದುಗೊಳಿಸಿದೆ. ಈ ಅಂತ್ಯಸಂಸ್ಕಾರ ಯೋಜನೆಯಡಿ 2021ರ ಆಗಸ್ಟ್ ಅಂತ್ಯಕ್ಕೆ ರಾಜ್ಯದ ಜಿಲ್ಲೆಗಳಲ್ಲಿ ಸ್ವೀಕೃತಗೊಂಡ ಅರ್ಜಿಗಳಿಗೆ ಮಾತ್ರ ಸೌಲಭ್ಯ ವಿತರಿಸಲು ಆರ್ಥಿಕ ಇಲಾಖೆ ಸೂಚನೆ ನೀಡಿದೆ. ಅದ್ರಂತೆ …
Read More »ದೆಹಲಿಯ ಕನ್ನಾಟ್ ಪ್ಲೇಸ್ ಪ್ರದೇಶದ ರೆಸ್ಟೋರೆಂಟ್ ಗೆ ಬೆಂಕಿ
ನವದೆಹಲಿ: ಕೇಂದ್ರ ದೆಹಲಿಯ ಕನ್ನಾಟ್ ಪ್ಲೇಸ್ ಪ್ರದೇಶದ ರೆಸ್ಟೋರೆಂಟ್ನಲ್ಲಿ ಶುಕ್ರವಾರ ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿಶಾಮಕ ಅಧಿಕಾರಿಗಳ ಪ್ರಕಾರ, ಕನ್ನಾಟ್ ಪ್ಲೇಸ್ನ ಹೊರ ವಲಯದಲ್ಲಿರುವ ಹೈ ಫೈ ರೆಸ್ಟೋರೆಂಟ್ನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಬೆಳಿಗ್ಗೆ 5.32 ಕ್ಕೆ ಮಾಹಿತಿ ಬಂದಿತು. ಆರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಬೆಳಿಗ್ಗೆ 6.35 ರ ಸುಮಾರಿಗೆ ಬೆಂಕಿಯನ್ನು ಹತೋಟಿಗೆ ತರಲಾಯಿತು, ಇದುವರೆಗೆ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಅವರು …
Read More »ಸಿದ್ದರಾಮಯ್ಯ ಅಮೃತ ಮಹೋತ್ಸವ ಆಚರಿಸಿಕೊಂಡು ಇನ್ನೂ 25 ವರ್ಷ ಚೆನ್ನಾಗಿರಲಿ
ರಾಯಚೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಉತ್ಸವ ವಿಚಾರದ ಕುರಿತು ಸಚಿವ ವಿ.ಸೋಮಣ್ಣ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯ ಅವರಿಗೆ 75 ವರ್ಷವಾಗಿದೆ. ಸಿದ್ದರಾಮಯ್ಯ ಎಂದೂ ಆಚರಣೆ ಮಾಡಿಕೊಂಡಿರಲಿಲ್ಲ. ಈಗ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಅಮೃತ ಮಹೋತ್ಸವ ಆಚರಿಸಿಕೊಂಡು ಇನ್ನೂ 25 ವರ್ಷ ಚೆನ್ನಾಗಿರಲಿ ಎಂದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಬ್ಬರ ಉತ್ಸವವನ್ನೂ ನಾವು ನೋಡುತ್ತಿರುತ್ತೇವೆ. ನಮಗೆ ಲಾಭ-ನಷ್ಟ ಮುಖ್ಯವಲ್ಲ. ಅಧಿಕಾರ ಯಾವತ್ತೂ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





